2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

ಇತ್ತೀಚೆಗೆ ಅನಾವರಣಗೊಂಡ 2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಭಾರೀ ಸದ್ದು ಮಾಡುತ್ತಿದೆ. ಕೇವಲ ಆರು ದಿನಗಳಲ್ಲಿ 13,000 ಬುಕಿಂಗ್‌ಗಳನ್ನು ಪಡೆದುಕೊಂಡಿದ್ದು, ಈ ಬುಕಿಂಗ್‌ಗಳಲ್ಲಿ ಸ್ಟ್ರಾಂಗ್ ಹೈಬ್ರಿಡ್ ಝೀಟಾ ಪ್ಲಸ್ ಮತ್ತು ಆಲ್ಫಾ ಪ್ಲಸ್ ಟ್ರಿಮ್‌ಗಳೇ ಶೇಕಡಾ 50 ಕ್ಕಿಂತ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿವೆ.

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

2022 ರ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಬುಕಿಂಗ್ ಅಧಿಕೃತವಾಗಿ ಜುಲೈ 16 ರಂದು ಪ್ರಾರಂಭವಾಯಿತು, ಕೆಲವು ನೆಕ್ಸಾ ಡೀಲರ್‌ಶಿಪ್‌ಗಳು ಅದಕ್ಕಿಂತ ಮುಂಚಿತವಾಗಿ ಬುಕಿಂಗ್ ಅನ್ನು ಪ್ರಾರಂಭಿಸಿದ್ದವು. 2022 ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಕಂಪನಿಯ ಮೊದಲ ಉತ್ಪನ್ನವಾಗಿದ್ದು, ಇದನ್ನು ಮಾರುತಿ ಸುಜುಕಿ ಮತ್ತು ಟೊಯೋಟಾ ಪಾಲುದಾರಿಕೆಯಲ್ಲಿ ನಿರ್ಮಿಸಲಾಗಿದೆ.

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

ಜಾಗತಿಕ C ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ, ಗ್ರ್ಯಾಂಡ್ ವಿಟಾರಾವು 1.5-ಲೀಟರ್ K-ಸರಣಿಯ ಮೈಲ್ಡ್ ಹೈಬ್ರಿಡ್ ಎಂಜಿನ್ ಮತ್ತು ಟೊಯೋಟಾ-ಮೂಲದ 1.5-ಲೀಟರ್ ಬಲವಾದ ಹೈಬ್ರಿಡ್ ಎಂಜಿನ್‌ನಿಂದ ಚಾಲಿತವಾಗಿದೆ. ಇದರಲ್ಲಿ ಎರಡನೆಯದು ಶೇ 54 ರಷ್ಟು ಬುಕಿಂಗ್‌ಗಳನ್ನು ಪಡೆದುಕೊಂಡಿದೆ.

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

ನೀವು ಹೊಸ ಗ್ರಾಂಡ್ ವಿಟಾರಾವನ್ನು ಖರೀದಿಸಲು ಬಯಸುತ್ತಿದ್ದರೆ, ಮೈಲ್ಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ರೂಪಾಂತರಗಳ ಖರೀದಿಯಲ್ಲಿ ಗೊಂದಲವಿದ್ದರೆ ಈ ಲೇಖನದಲ್ಲಿ ನಿಮ್ಮ ಸಂದೇಹಗಳಿಗೆ ಉತ್ತರ ಸಿಗಬಹುದು. ಹೊಸ ಗ್ರ್ಯಾಂಡ್ ವಿಟಾರಾ ಎರಡೂ ಆವೃತ್ತಿಗಳ ಬೆಲೆ, ಮೈಲೇಜ್, ಎಂಜಿನ್ ವಿಶೇಷತೆಗಳು ಮತ್ತು ಅದರ ಡ್ರೈವ್ ಸಿಸ್ಟಮ್‌ನಲ್ಲಿ ಯಾವೆಲ್ಲಾ ವ್ಯತ್ಯಾಸಗಳಿವೆ ಎಂದಬುದನ್ನು ಇಲ್ಲಿ ತಿಳಿದುಕೊಳ್ಳೋಣ.

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

2022 ಗ್ರಾಂಡ್ ವಿಟಾರಾ ಬೆಲೆ

ನೀವು ಹೊಸ ಗ್ರಾಂಡ್ ವಿಟಾರಾವನ್ನು 10 ಲಕ್ಷ ರೂ.ಗಿಂತ ಕಡಿಮೆ ಎಕ್ಸ್-ಶೋರೂಂ ಬೆಲೆಯಲ್ಲಿ ಹುಡುಕುತ್ತಿದ್ದರೆ, ನಿಮಗೊಂದು ಆಯ್ಕೆಯಿದೆ. ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬೇಸ್ ಸಿಗ್ಮಾ ಮೈಲ್ಡ್ ಹೈಬ್ರಿಡ್ ಟ್ರಿಮ್ ನಿಮಗೆ ಉತ್ತಮ ಆಯ್ಕೆಯಾಗಿದೆ. ನಿಮ್ಮ ಬಜೆಟ್ ಅನ್ನು ರೂ. 12 ಲಕ್ಷದವರೆಗೆ (ಎಕ್ಸ್ ಶೋರೂಂ) ವಿಸ್ತರಿಸಬಹುದಾದರೆ, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ ಹೈಬ್ರಿಡ್ ಡೆಲ್ಟಾ ಮತ್ತು ಝೀಟಾ ಮ್ಯಾನುವಲ್ ಟ್ರಿಮ್‌ಗಳನ್ನು ಖರೀದಿಸಬಹುದು.

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

ಎಕ್ಸ್-ಶೋರೂಂ ಬೆಲೆ 15 ಲಕ್ಷ ರೂ.ವರೆಗೆ ಖರ್ಚು ಮಾಡಿತ್ತೀವಿ ಅಂತಾದರೆ, AWD ಆಲ್ಫಾ ರೂಪಾಂತರವನ್ನು ಹೊರತುಪಡಿಸಿ, ಸ್ವಯಂಚಾಲಿತ ಆವೃತ್ತಿಗಳು ಸೇರಿದಂತೆ 2022 ಗ್ರಾಂಡ್ ವಿಟಾರಾ ನಾಲ್ಕು ರೂಪಾಂತರಗಳಲ್ಲಿ ಯಾವುದಾದರೂ ನಿಮಗೆ ಸಿಗುತ್ತದೆ.

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ AWD

ನೀವು ಈ ವಿಭಾಗದಲ್ಲಿ ವಿಶಿಷ್ಟವಾದದ್ದನ್ನು ಹುಡುಕುತ್ತಿದ್ದರೆ ಹಾಗೂ ಲಾಂಗ್ ಹೈವೇ ಡ್ರೈವ್, ಪರ್ವತ ರಸ್ತೆ, ಹಿಮ, ಜಲ್ಲಿಕಲ್ಲು ಅಥವಾ ಸೌಮ್ಯವಾದ ಆಫ್-ರೋಡ್‌ನಲ್ಲಿ ಪ್ರಯಾಣಿಸುತ್ತೇವೆ ಅಂತಾದರೆ ನೀವು ಗ್ರಾಂಡ್ ವಿಟಾರಾ AWD ಆವೃತ್ತಿಯನ್ನು ಖರೀದಿಸಬಹುದು. ಮಾರುತಿ ಸುಜುಕಿಯು ಇದನ್ನು ಮೈಲ್ಡ್ ಹೈಬ್ರಿಡ್ ಎಂಜಿನ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಏಕೈಕ ಆಲ್ಫಾ ಟ್ರಿಮ್‌ನಲ್ಲಿ ನೀಡುತ್ತಿದೆ, ಇದರ ಎಕ್ಸ್ ಶೋರೂಂ ಬೆಲೆ ರೂ. 15.50 ಲಕ್ಷವಿದೆ.

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

ಹೊಸ ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ತಂತ್ರಜ್ಞಾನ

ಕ್ಲೀನ್ ಮೊಬಿಲಿಟಿಗೆ ಆದ್ಯತೆ ನೀಡುವುದಾದರೆ, ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ರೂಪಾಂತರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಮಾರುತಿ ಸುಜುಕಿ ಟೊಯೋಟಾ ಮೂಲದ 1.5-ಲೀಟರ್ ಮೂರು-ಸಿಲಿಂಡರ್ ಅಟ್ಕಿನ್ಸನ್ ಸೈಕಲ್ ಎಂಜಿನ್ ಅನ್ನು ಹೊಂದಿದ್ದು, ಇದನ್ನು 177.6V ಲಿಥಿಯಂ-ಐಯಾನ್ ಬ್ಯಾಟರಿಗೆ ಜೋಡಿಸಲಾಗಿದೆ.

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

ಇದು 27.9 kmpl ಮೈಲೇಜ್ ನೀಡಲಿದ್ದು, ಸಂಪೂರ್ಣ ಟ್ಯಾಂಕ್‌ನಲ್ಲಿ 1,200 km ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹೈಬ್ರಿಡ್ ಸಿಸ್ಟಮ್ ಸ್ವಯಂ ಚಾರ್ಜಿಂಗ್ ಕಾರ್ಯವಿಧಾನವನ್ನು ಬಳಸುವುದರ ಜೊತೆಗೆ ಡ್ರೈವರ್‌ಗೆ ಶುದ್ಧ EV ಮೋಡ್ ಅನ್ನು ಬಳಸಲು ಸಹ ಅನುಮತಿಸುತ್ತದೆ.

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

ಆಂತರಿಕ ದಹನಕಾರಿ ಎಂಜಿನ್, ಬ್ಯಾಟರಿ ಪ್ಯಾಕ್‌ನೊಂದಿಗೆ ಸಂಯೋಜಿಸಲ್ಪಟ್ಟ 114 bhp ಮತ್ತು 122 Nm ಟಾರ್ಕ್ ಹೊರಹಾಕುತ್ತದೆ. ಇದನ್ನು e-CVT ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ. ಇದೇ ಘಟಕವನ್ನು ಟೊಯೋಟಾ ಹೈರಿಡರ್ಗೂ ಬಳಸಲಾಗಿದೆ.

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

ಗ್ರ್ಯಾಂಡ್ ವಿಟಾರಾ ವೈಶಿಷ್ಟ್ಯಗಳು

ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೆಂಟಿಲೇಟೆಡ್ ಸೀಟ್‌ಗಳು, ಸನ್‌ರೂಫ್, 6 ಏರ್‌ಬ್ಯಾಗ್‌ಗಳು, ಕನೆಕ್ಟ್ ಕಾರ್ ಟೆಕ್, 360-ಡಿಗ್ರಿ ಕ್ಯಾಮೆರಾ, ಫುಲ್ ಬೆಲ್‌ನಂತಹ ವೈಶಿಷ್ಟ್ಯಗಳನ್ನು ನೀವು ಎಸ್‌ಯುವಿಯಲ್ಲಿ ಬಯಸಿದರೆ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಆಲ್ಫಾ ಮತ್ತು ಆಲ್ಫಾ+ ಟ್ರಿಮ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲ್ಡ್ vs ಸ್ಟ್ರಾಂಗ್ ಹೈಬ್ರಿಡ್ ಯಾವುದು ಬೆಸ್ಟ್?

ಟಾಪ್-ಸ್ಪೆಕ್ ಗ್ರ್ಯಾಂಡ್ ವಿಟಾರಾ ಆಲ್ಫಾ + ಪ್ರಬಲ ಹೈಬ್ರಿಡ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ವೈರ್‌ಲೆಸ್ ಚಾರ್ಜಿಂಗ್, ಹೆಡ್-ಅಪ್ ಡಿಸ್ಪ್ಲೇ (HUD), ಪ್ಯಾಡಲ್ ಶಿಫ್ಟರ್‌ಗಳು (ಮೈಲ್ಡ್ ಹೈಬ್ರಿಡ್ ಎಟಿ ಮಾಡೆಲ್‌ಗಳು), ಕ್ರೂಸ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವನ್ನು ಒಳಗೊಂಡಿದೆ.

Most Read Articles

Kannada
English summary
2022 Maruti Suzuki Grand Vitara Mild vs Strong Hybrid Which is Best
Story first published: Monday, August 1, 2022, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X