ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಹೆಚ್ಚುತ್ತಿರುವ ಮಾಲಿನ್ಯ ತಗ್ಗಿಸಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

Recommended Video

Mahindra Scorpio Classic Launched | Price At Rs 11.99 Lakh | Scorpio Classic Vs Scorpio N In Kannada

ವೈಯಕ್ತಿಕ ಬಳಕೆಯ ವಾಹನಗಳನ್ನು ಮಾತ್ರವಲ್ಲದೆ ಸಾರ್ವಜನಿಕ ಬಳಕೆ ವಾಹನಗಳನ್ನು ಸಹ ಎಲೆಕ್ಟ್ರಿಕ್ ಮಾದರಿಗಳತ್ತ ಬದಲಾಯಿಸುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ವಿಶೇಷ ಆದ್ಯತೆ ನೀಡುತ್ತಿರುವ ದೆಹಲಿ ಸರ್ಕಾರವು ಹೊಸದಾಗಿ 97 ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡಿದ್ದು, ನಗರ ಸಾರಿಗೆಯಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದೆ. ದೆಹಲಿಯಲ್ಲಿ ಈಗಾಗಲೇ 150 ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿದ್ದು, ಇದೀಗ ಹೊಸದಾಗಿ 97 ಇವಿ ಬಸ್‌ಗಳೊಂದಿಗೆ ಒಟ್ಟು 249 ಇವಿ ಬಸ್‌ಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಿವೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಈ ವರ್ಷದ ಆರಂಭದಲ್ಲಿ 150 ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡಿದ್ದ ದೆಹಲಿ ಸರ್ಕಾರವು ಫೇಮ್ 2 ಯೋಜನೆ ಅಡಿ ಇದೀಗ ಮತ್ತೆ 97 ಎಲೆಕ್ಟ್ರಿಕ್ ಬಸ್‌ಗಳ ಸೇವೆಗೆ ಚಾಲನೆ ನೀಡಿದ್ದು, ಈ ವರ್ಷಾಂತ್ಯಕ್ಕೆ ದೆಹಲಿಯಲ್ಲಿ ಇವಿ ಬಸ್‌ಗಳ ಸಂಖ್ಯೆ 300ಕ್ಕೆ ಏರಿಕೆಯಾಗುವ ನೀರಿಕ್ಷೆಯಿದೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಫೇಮ್ 2 ಯೋಜನೆಯಡಿ ದೆಹಲಿಗೆ ಸುಮಾರು 2 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲಾಗಿದ್ದು, ಖರೀದಿ ಮಾಡಲಾಗಿರುವ ಇವಿ ಬಸ್‌ಗಳನ್ನು ವಿವಿಧ ವಾಹನ ಕಂಪನಿಗಳು ಹಂತ-ಹಂತವಾಗಿ ವಿತರಣೆ ಮಾಡುತ್ತಿವೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿ ವಿವಿಧ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ಬಸ್‌ಗಳಿಗೆ ಬೇಡಿಕೆ ಸಲ್ಲಿಸಿರುವುದರಿಂದ ವಿತರಣೆಯಲ್ಲಿ ವಿಳಂಬವಾಗುತ್ತಿದ್ದು, ಫೇಮ್ 2 ಯೋಜನೆಯಲ್ಲದೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳಿಗಾಗಿ ಮಾಲಿನ್ಯ ಮುಕ್ತ ರಾಷ್ಟ್ರ ಅಭಿಯಾನದಡಿ ಇವಿ ಬಸ್ ಒದಗಿಸುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಸಿಇಎಸ್ಎಲ್ ಟೆಂಡರ್‌ನಲ್ಲಿ ಟಾಟಾ ಮೋಟಾರ್ಸ್ ಸೇರಿದಂತೆ ಪ್ರಮುಖ ವಾಹನ ಕಂಪನಿಗಳು ದೇಶದ ಪ್ರಮುಖ ನಗರಗಳ ನಗರಸಾರಿಗೆ ಸಂಸ್ಥೆಗಳಿಗೆ 50 ಸಾವಿರ ಎಲೆಕ್ಟ್ರಿಕ್ ಬಸ್ ಒದಗಿಸುವ ಟೆಂಡರ್ ಪಡೆದುಕೊಂಡಿವೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಟೆಂಡರ್‌ನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಬಿಎಂಟಿಸಿ ಸಾರಿಗೆ ಸಂಸ್ಥೆಗೆ ಇತ್ತೀಚೆಗೆ 921 ಎಲೆಕ್ಟ್ರಿಕ್ ಬಸ್ ಒದಗಿಸುವ ಟೆಂಡರ್ ಪಡೆದುಕೊಂಡಿದ್ದು, ಹೊಸ ಯೋಜನೆಯಡಿ ಟಾಟಾ ಮೋಟಾರ್ಸ್ ಕಂಪನಿಯು 921 ಸ್ಟಾರ್ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಿದೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಟೆಂಡರ್‌ನಲ್ಲಿ ದೆಹಲಿ ಸಾರಿಗೆ ಸಂಸ್ಥೆಗಾಗಿ 1500 ಎಲೆಕ್ಟ್ರಿಕ್ ಬಸ್‌ಗಳನ್ನು ಮತ್ತು 1,180 ಎಲೆಕ್ಟ್ರಿಕ್ ಬಸ್‌ಗಳನ್ನು ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಗೆ ಒದಗಿಸುವ ಟೆಂಡರ್ ಪಡೆದುಕೊಂಡಿದೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಈ ಮೂಲಕ ಕಳೆದ ಒಂದು ತಿಂಗಳ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಒಟ್ಟು 3,600 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸುವ ಯೋಜನೆಯ ಟೆಂಡರ್ ತನ್ನದಾಗಿಸಿಕೊಂಡಿದ್ದು, ಟೆಂಡರ್ ಅನ್ವಯ ಕಂಪನಿಯು 12 ಮೀಟರ್ ಉದ್ದಳತೆಯ ಸ್ಟಾರ್ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಿದೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಎಲೆಕ್ಟ್ರಿಕ್ ಬಸ್ ಮಾದರಿಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಬೃಹತ್ ಯೋಜನೆ ರೂಪಿಸಿದ್ದು, ವಿವಿಧ ರಾಜ್ಯಗಳಿಗಾಗಿ ಬರೋಬ್ಬರಿ 50 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಹೊಸ ಯೋಜನೆ ಅಡಿ ದೇಶಾದ್ಯಂತ ಪ್ರಮುಖ ರಾಜ್ಯಗಳು ನಗರ ಸಾರಿಗೆ ವಿಭಾಗದಲ್ಲಿ ಇವಿ ಬಸ್‌ಗಳನ್ನು ವೇಗವಾಗಿ ಅವಡಿಸಿಕೊಳ್ಳಲು ಸಹಕಾರಿಯಾಗಲಿದ್ದು, 2030 ರ ವೇಳೆಗೆ ಒಟ್ಟು 50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ (ಇ-ಬಸ್‌ಗಳು) ನಿಯೋಜನೆಗೊಳಿಸಲು ಬೃಹತ್ ಯೋಜನೆಯನ್ನು ರೂಪಿಸುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ದೇಶಾದ್ಯಂತ ಪ್ರಮುಖ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಕಡಿತಗೊಳಿಸಲು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಬದಲಾಗಿ ಇವಿ ಮಾದರಿಗಳನ್ನು ಹಂತ-ಹಂತವಾಗಿ ಅಳವಡಿಸಿಕೊಳ್ಳುತ್ತಿದ್ದು, ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ಸಂಸ್ಥೆಯು ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ ಇಂಡಿಯಾ (WRI ಇಂಡಿಯಾ) ಜೊತೆಗೂಡಿ ಇವಿ ಬಸ್‌ಗಳನ್ನು ಅಳವಡಿಸುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಗ್ರ್ಯಾಂಡ್ ಚಾಲೆಂಜ್‌ನ ಯಶಸ್ಸಿನ ನಂತರ CESL ಸಂಸ್ಥೆಯು ಭಾರತದ ಪ್ರಮುಖ 25 ರಾಜ್ಯಗಳಲ್ಲಿ 2030ರ ವೇಳೆಗೆ 50,000 ಎಲೆಕ್ಟ್ರಿಕ್ ಬಸ್‌ಗಳ (ಇ-ಬಸ್‌ಗಳು) ನಿಯೋಜನೆಯನ್ನು ಮಾಡುವ ಗುರಿಹೊಂದಿದ್ದು, ಇದಕ್ಕಾಗಿ ಸುಮಾರು ರೂ. 80 ಸಾವಿರ ಕೋಟಿ ವೆಚ್ಚ ತಗುಲುವುದಾಗಿ ಅಂದಾಜಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಹೆಚ್ಚುತ್ತಿರುವ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಮೊದಲು ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ವಿದ್ಯುತ್ ಮಾದರಿಗಳ ಬದಲಿಸುವ ಅವಶ್ಯಕತೆಯನ್ನು ಅರಿತಿರುವ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ಹೊಸ ಯೋಜನೆಯಡಿ 50 ಸಾವಿರ ಇವಿ ಬಸ್‌ಗಳನ್ನು ಅಳವಡಿಸಿಕೊಳ್ಳಲು ಶಿಫಾರಸ್ಸು ಮಾಡಿದೆ.

ರಾಷ್ಟ್ರ ರಾಜಧಾನಿಯಲ್ಲಿ 97 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಡೀಸೆಲ್ ಮತ್ತು ಸಿಎನ್‌ಜಿ ಬಸ್‌ಗಳಿಗಿಂತಲೂ ಕ್ರಮವಾಗಿ ಶೇಕಡಾ 27 ಮತ್ತು ಶೇಕಡಾ 23 ಅಗ್ಗವಾಗಿರುವ ಎಲೆಕ್ಟ್ರಿಕ್ ಬಸ್ ಮಾದರಿಗಳು ಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲಿದ್ದು, ಹಂತ-ಹಂತವಾಗಿ ಇವಿ ಬಸ್‌ಗಳ ಅಳವಡಿಕೆಯನ್ನು ಹೆಚ್ಚಿಸುವುದರಿಂದ ಮಾಲಿನ್ಯ ಪ್ರಮಾಣವು ತಗ್ಗುವ ವಿಶ್ವಾಸ ವ್ಯಕ್ತಪಡಿಸಲಾಗಿದೆ.

More from DriveSpark

Article Published On: Thursday, August 25, 2022, 11:20 [IST]
English summary
97 electric buses launches in delhi details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+