India
YouTube

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಇದೇ ತಿಂಗಳು 30ರಂದು ತನ್ನ ಹೊಸ ತಲೆಮಾರಿನ ವಿಟಾರಾ ಬ್ರೆಝಾ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಾದರಿಗಾಗಿ ಕಂಪನಿಯು ಇದೀಗ ಅಧಿಕೃತ ರೂ.11 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಹೊಸ ಮಾದರಿಯೊಂದಿಗೆ ಮಾರುತಿ ಸುಜುಕಿ ಕಂಪನಿಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ವೆನ್ಯೂ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಹೊಸ ವಿಟಾರಾ ಬ್ರೆಝಾ ಕಾರು ಮಾದರಿಯನ್ನು ಕಂಪನಿಯು ವಿನೂತನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಿದೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಪ್ರಸ್ತುತ ಮಾರುಕಟ್ಟೆಯಲ್ಲಿನ ಎಂಜಿನ್ ನವೀಕರಣದೊಂದಿಗೆ ಹೊಸ ಎಂಜಿನ್ ಆಯ್ಕೆಯನ್ನು ಸಹ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಹೊಸ ಎಂಜಿನ್ ಆಯ್ಕೆಯೊಂದಿಗೆ ನವೀಕರಿಸಲಾದ ವಿನ್ಯಾಸಗಳು ಮತ್ತು ಪ್ರೀಮಿಯಂ ಫೀಚರ್ಸ್ ಗ್ರಾಹಕರನ್ನು ಸೆಳೆಯಲಿವೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಬಿಎಸ್-6 ಎಮಿಷನ್ ಜಾರಿ ನಂತರ ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸಿರುವ ಮಾರುತಿ ಸುಜುಕಿಯು ಪ್ರಮುಖ ಕಾರುಗಳ ಮಾದರಿಗಳ ಮಾರಾಟದ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಸದ್ಯ ಗ್ರಾಹಕರ ಬೇಡಿಕೆಯೆಂತೆ ಹಲವಾರು ಕಾರು ಮಾದರಿಗಳ ಮಾರಾಟವನ್ನು ಹೊಂದಿರುವ ಮಾರುತಿ ಸುಜುಕಿಯು ಟಾಪ್ 10 ಕಾರುಗಳ ಮಾರಾಟ ಪಟ್ಟಿಯಲ್ಲಿ ಬರೋಬ್ಬರಿ 7 ಕಾರು ಮಾದರಿಗಳೊಂದಿಗೆ ಮುಂಚೂಣಿಯಲ್ಲಿದ್ದು, ಹೊಸ ವಿಟಾರಾ ಬ್ರೆಝಾ ಮಾದರಿಯು ಉತ್ತಮ ಬೇಡಿಕೆ ತಂಡುಕೊಡುವ ಸಾಧ್ಯತೆಗಳಿವೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಕಳೆದ 6 ವರ್ಷಗಳಿಂದ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಉತ್ತಮ ಸ್ಥಾನ ಕಾಯ್ದುಕೊಂಡಿರುವ ವಿಟಾರಾ ಬ್ರೆಝಾ ಮಾದರಿಯು ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಪ್ರಸ್ತುತ ಮಾರುಕಟ್ಟೆಯಲ್ಲಿ ವಿಟಾರಾ ಬ್ರೆಝಾ ಮಾದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್‌ ಆಯ್ಕೆ ನೀಡುತ್ತಿದ್ದು, ಇದು ಉತ್ತಮ ಇಂಧನ ದಕ್ಷತೆ ಹೊಂದಿದೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಹೊಸ ತಲೆಮಾರಿನ ಆವೃತ್ತಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ಮಾದರಿಯನ್ನು ಪರಿಚಯಿಸಲಾಗುತ್ತಿದ್ದು, ಸಿಎನ್‌ಜಿ ಆಯ್ಕೆ ಹೊಂದಿರುವ ಮೊದಲ ಎಸ್‌ಯುವಿ ಮಾದರಿಯಾಗಲಿದೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಹಾಗೆಯೇ ಹೊಸ ಕಾರಿನಲ್ಲಿ ನವೀಕರಣಗೊಳಿಸಲಾದ ಎಂಜಿನ್ ಉನ್ನತೀಕರಣ ಸೇರಿದಂತೆ ಬದಲಾದ ಮುಂಭಾಗದ ವಿನ್ಯಾಸದೊಂದಿಗೆ ಎಲೆಕ್ಟ್ರಿಕ್ ಸನ್‌ರೂಫ್, ಗರಿಷ್ಠ ಸುರಕ್ಷತೆಗಾಗಿ ಹೈ ಎಂಡ್ ಮಾದರಿಗಳಲ್ಲಿ 6 ಏರ್‌ಬ್ಯಾಗ್ ಜೋಡಣೆ ಹೊಂದಿರಲಿದ್ದು, ಹೊಸ ಕಾರು ಮಾರುತಿ ಸುಜುಕಿ ಕಂಪನಿಗೆ ಮತ್ತಷ್ಟು ಬೇಡಿಕೆ ತಂದುಕೊಡಲಿದೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಜೊತೆಗೆ ಹೊಸ ಕಾರಿನಲ್ಲಿ ಪ್ಯಾಡಲ್ ಶಿಫ್ಟರ್, ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ದೊಡ್ಡ ಟಚ್‌ಸ್ಕ್ರೀನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಹೊಸ ಮಾದರಿಯ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ ಹೊಂದಿರಲಿದೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಇದರಲ್ಲದೆ 2022ರ ವಿಟಾರಾ ಬ್ರೆಝಾ ಹೆಚ್ಚು ಸುಧಾರಿತ ಕನೆಕ್ಟಿವಿಟಿ ಕಾರು ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳ್ಳುತ್ತಿದ್ದು, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಡ್‌ಲೈಟ್ ಕಂಟ್ರೋಲ್‌ನಂತಹ ವೈಶಿಷ್ಟ್ಯತೆಗಳು ಪಡೆಯುವ ಸಾಧ್ಯತೆಗಳಿವೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಹೊಸ ವಿಟಾರಾ ಬ್ರೆಝಾದ ಒಳಭಾಗ ಮತ್ತು 2022 ಬಲೆನೊದ ಒಳಭಾಗದ ನಡುವೆ ಸಾಕಷ್ಟು ಹೋಲಿಕೆಗಳು ಕಂಡುಬರುವ ಸಾಧ್ಯತೆಯಿದ್ದು, ಹೊಸ ವಿಟಾರಾ ಬ್ರೆಝಾದಲ್ಲಿ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್, ಹಿಲ್ ಹೋಲ್ಡ್, ಕ್ರೂಸ್ ಕಂಟ್ರೋಲ್ ಮುಂತಾದ ವೈಶಿಷ್ಟ್ಯತೆಗಳೊಂದಿಗೆ 4 ಸ್ಟಾರ್ ಗ್ಲೋಬರ್ ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ಸ್ ಪಡೆದುಕೊಳ್ಳುವ ನೀರಿಕ್ಷೆಯಿದೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ವಿಟಾರಾ ಬ್ರೆಝಾ ಕಾರು ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.84 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 11.49 ಲಕ್ಷ ಬೆಲೆ ಪಡೆದುಕೊಂಡಿದ್ದು, ಹೊಸ ತಲೆಮಾರಿನ ಆವೃತ್ತಿಯು ಹಲವು ಹೊಸ ಬದಲಾವಣೆಗಳೊಂದಿಗೆ ತುಸು ದುಬಾರಿಯಾಗಿರಲಿದೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದ ನಂತರವೂ ವಿಟಾರಾ ಬ್ರೆಝಾ ಖರೀದಿದಾರರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ತಲೆಮಾರಿನ ಆವೃತ್ತಿಯು ಹೊಸ ಬದಲಾವಣೆಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

ನ್ಯೂ ಜನರೇಷನ್ ವಿಟಾರಾ ಬ್ರೆಝಾ ಕಾರು ಮಾದರಿಗಾಗಿ ಬುಕಿಂಗ್ ಆರಂಭಿದ ಮಾರುತಿ ಸುಜುಕಿ

ಮಾರುಕಟ್ಟೆಯಲ್ಲಿ ಸದ್ಯ ಬಹುತೇಕ ವಿಟಾರಾ ಬ್ರೆಝಾ ಶ್ರೇಣಿಯ ಸಮನಾಂತರ ಮಾದರಿಗಳು ಹೆಚ್ಚಿನ ಮಟ್ಟದ ಸುಧಾರಿತ ಹಾಗೂ ಅತ್ಯುತ್ತಮ ತಂತ್ರಜ್ಞಾನ ಅಳವಡಿಕೆಯೊಂದಿಗೆ ಬಿಡುಗಡೆಯಾಗಿದ್ದು, ಮಾರುತಿ ಸುಜುಕಿಯು ಸಹ ಹೊಸ ಮಾದರಿಯನ್ನು ಈ ಬಾರಿ ಸಾಕಷ್ಟು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡುವ ನೀರಿಕ್ಷೆಯಿದೆ.

Most Read Articles

Kannada
English summary
All new maruti suzuki vitara brezza bookings open details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X