ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾದ ಆಲ್ಟೊ ಕೆ10: ಬೆಲೆ, ಮೈಲೇಜ್ ವಿವರ...

ಮಾರುತಿ ಕಂಪನಿಯು ತನ್ನ ಆಲ್ಟೊ ಕೆ10 ಮಾದರಿಯನ್ನು ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆ ಮಾಡಿದೆ. ಇದನ್ನು ಒಂದು ರೂಪಾಂತರದಲ್ಲಿ ಮಾತ್ರ ನೀಡಲಾಗುತ್ತದೆ.

ನಾವು ಭಾರತದಲ್ಲಿ ಹೆಚ್ಚು ಇಂಧನ-ಸಮರ್ಥ ಕಾರುಗಳನ್ನು ನೋಡಿದಾಗ, ಸಿಎನ್‌ಜಿ-ಚಾಲಿತ ವಾಹನಗಳು ಅಗ್ರ 5 ಸ್ಥಾನಗಳನ್ನು ಪಡೆದುಕೊಳ್ಳುತ್ತವೆ. ಅದರಲ್ಲೂ ಟಾಪ್ 4 ಸ್ಥಾನಗಳನ್ನು ಮಾರುತಿ ಕಂಪನಿಯೇ ಪಡೆದುಕೊಂಡಿದೆ.

S-CNG ತಂತ್ರಜ್ಞಾನದೊಂದಿಗೆ ಮಾರುತಿ ಈಗಾಗಲೇ ಭಾರತದಲ್ಲಿ ಪ್ರಬಲ CNG ಪ್ಲೇಯರ್ ಆಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಇದೀಗ ಮಾರುತಿ ಈ ಜನಪ್ರಿಯ ಸಿಎನ್‌ಜಿ ತಂತ್ರಜ್ಞಾನವನ್ನು ಹೊಸದಾಗಿ ಬಿಡುಗಡೆಯಾದ ಆಲ್ಟೊ ಕೆ 10 ಗೂ ನೀಡಿದೆ. ಆಲ್ಟೊ 800 ಈಗಾಗಲೇ ಸಿಎನ್‌ಜಿ ಆಯ್ಕೆಯನ್ನು ಪಡೆದಿದೆ.

ಈಗ ಆಲ್ಟೋ ಕೆ 10 ಸಹ ಸಿಎನ್‌ಜಿ ಆಯ್ಕೆಯೊಂದಿಗೆ ಗ್ರಾಹಕರಿಗೆ ಲಭ್ಯವಿದೆ. ಸಿಎನ್‌ಜಿ-ಚಾಲಿತ ಎ-ಸೆಗ್‌ಮೆಂಟ್ ಹ್ಯಾಚ್‌ಬ್ಯಾಕ್‌ಗಳಿಗೆ ಬಂದಾಗ, ಮಾರುತಿ ಈಗಾಗಲೇ ಸೆಲೆರಿಯೊ, ವ್ಯಾಗನ್‌ಆರ್ ಮತ್ತು ಎಸ್-ಪ್ರೆಸ್ಸೊದಲ್ಲಿ ಇದೇ ರೀತಿಯ 1.0 ಕೆ 10 ಎಂಜಿನ್‌ನಿಂದ ನಡೆಸಲ್ಪಡುವ ಎಸ್-ಸಿಎನ್‌ಜಿ ತಂತ್ರಜ್ಞಾನವನ್ನು ನೀಡುತ್ತಿದೆ.

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾದ ಆಲ್ಟೊ ಕೆ10: ಬೆಲೆ, ಮೈಲೇಜ್ ವಿವರ...

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಶಶಾಂಕ್ ಶ್ರೀವಾಸ್ತವ ಮಾತನಾಡಿ, "ಆಲ್ಟೊ ಬ್ರ್ಯಾಂಡ್ ಗ್ರಾಹಕರ ಬದಲಾವಣೆಯ ಬಯಕೆಗಳಿಗೆ ಪ್ರತಿಕ್ರಿಯೆಯಾಗಿ ಮಾರುತಿ ಸುಜುಕಿ ಹೇಗೆ ವಿಕಸನಗೊಂಡಿದೆ ಎಂಬುದರ ಸಂಕೇತವಾಗಿದೆ.

ಆಲ್ಟೊ ಸತತವಾಗಿ 16 ವರ್ಷಗಳ ಕಾಲ ದೇಶದಲ್ಲಿ ಹೆಚ್ಚು ಮಾರಾಟವಾಗುವ ವಾಹನವಾಗಿ ಮುಂದುವರೆದಿದೆ. S-CNG ಮಾದರಿಯ ಬಿಡುಗಡೆಯು ಅದರ ಆಕರ್ಷಣೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ನಾವು ಮನಗಂಡಿದ್ದೇವೆ. ನಾವು ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು S-CNG ವಾಹನಗಳನ್ನು ಮಾರಾಟ ಮಾಡಿದ್ದೇವೆ ಎಂದರು.

ಜನಪ್ರಿಯ ಆಲ್ಟೊ K10 ಗೆ S-CNG ಸೇರ್ಪಡೆಯು ನಮ್ಮ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಮತ್ತಷ್ಟು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ನಮ್ಮ S-CNG ಶ್ರೇಣಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ, ಅಭಿವೃದ್ಧಿಪಡಿಸಲಾಗಿದೆ. ಭಾರತೀಯ ಡ್ರೈವಿಂಗ್ ಪರಿಸ್ಥಿತಿಗಳಿಗೆ ಸರಿಹೊಂದುವಂತೆ ನಮ್ಮ ಸೌಲಭ್ಯಗಳಲ್ಲಿ ತಯಾರಿಸಲಾಗುತ್ತದೆ ಎಂದರು.

ಆಲ್ಟೊ ಕೆ10 1.0 ಲೀಟರ್ ಕೆ10ಸಿ ಡ್ಯುಯಲ್ ಜೆಟ್ ಡ್ಯುಯಲ್ ವಿವಿಟಿ ಎಂಜಿನ್ ಮೂಲಕ 65 ಬಿಎಚ್‌ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಹೊರಹಾಕಬಲ್ಲದು. 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್ ಅನ್ನು ಸಹ ನೀಡಲಾಗುವುದು. ಆದಾಗ್ಯೂ, ಸಿಎನ್‌ಜಿಯಲ್ಲಿ ಚಲಿಸಿದಾಗ, ಈ ಎಂಜಿನ್ ಸುಮಾರು 55 ಬಿಎಚ್‌ಪಿ ಮತ್ತು 82 ಎನ್‌ಎಂ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

S-CNG ರೂಪಾಂತರವು ಕೇವಲ ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ಮಾತ್ರ ಪಡೆಯುತ್ತದೆ. 33.85 ಕಿ.ಮೀ/ಕೆ.ಜಿ ಮೈಲೇಜ್ ಅನ್ನು ಕಂಪನಿ ಕ್ಲೈಮ್ ಮಾಡಿದೆ. ಮಾರುತಿ ಆಲ್ಟೊ ಕೆ10 ಸಿಎನ್‌ಜಿ ರೂ. 5.94 ಎಕ್ಸ್‌ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Alto k10 launched in cng version price mileage details
Story first published: Saturday, November 19, 2022, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X