ಡಿಸೆಂಬರ್‌ನಲ್ಲಿ ರೆನಾಲ್ಟ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ

ದೇಶೀಯ ಕಾರು ಕಂಪನಿಗಳ ಬಳಿಕ, ಇದೀಗ ಫ್ರೆಂಚ್ ವಾಹನ ತಯಾರಿಕ ಕಂಪನಿ ರೆನಾಲ್ಟ್ ತನ್ನ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಕಂಪನಿಯು ವರ್ಷಾಂತ್ಯದಲ್ಲಿ ತಮ್ಮ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಂಡು ಲಾಭ ಮಾಡಿಕೊಳ್ಳಲು ಹಲವು ಕೊಡುಗೆಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ.

'ರೆನಾಲ್ಟ್ ಇಂಡಿಯಾ' ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ತನ್ನ ಮೂರು ಕಾರುಗಳಾದ ರೆನಾಲ್ಟ್ ಕ್ವಿಡ್, ಟ್ರೈಬರ್ ಮತ್ತು ಕಿಗರ್‌ಗಳ ಮೇಲೆ ರಿಯಾಯಿತಿ ಕೊಡುಗೆಯನ್ನು ನೀಡುತ್ತಿದೆ. ಇದು 35,000 ರೂ.ನಿಂದ 50,000 ರೂ.ವರೆಗೆ ಇರಲಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ RELIVE ಸ್ಕ್ರ್ಯಾಪ್‌ಪೇಜ್ ಪ್ರೋಗ್ರಾಂ ಅಡಿ 10,000 ರೂ.ವರೆಗೆ ಪ್ರಯೋಜನವನ್ನು ಪಡೆಯಬಹುದಾಗಿದೆ. ಕಂಪನಿಯು ತನ್ನ ಗ್ರಾಹಕರಿಗೆ ಪರಿಚಯಿಸಿರುವ ಈ ವರ್ಷಾಂತ್ಯದ ಆಫರ್ ಕುರಿತಂತೆ ಇಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಡಿಸೆಂಬರ್‌ನಲ್ಲಿ ರೆನಾಲ್ಟ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ

ರೆನಾಲ್ಟ್ ಕ್ವಿಡ್ (35,000 ರೂ.ವರೆಗೆ ಆಫರ್):
ಭಾರತದ ಮಾರುಕಟ್ಟೆಯಲ್ಲಿ ಫ್ರೆಂಚ್ ವಾಹನ ತಯಾರಕ ಕಂಪನಿ ತಯಾರಿಸುವ ಎಂಟ್ರಿ ಲೆವೆಲ್ ಮಾದರಿ ರೆನಾಲ್ಟ್ ಕ್ವಿಡ್ ಆಗಿದೆ. ಇದೊಂದು ಆಕರ್ಷಕ ಎಸ್‌ಯುವಿ ಆಗಿದ್ದು. ಈ ಡಿಸೆಂಬರ್‌ ತಿಂಗಳಲ್ಲಿ ರೆನಾಲ್ಟ್ ಕ್ವಿಡ್ ಮಾದರಿಗೆ 35,000 ರೂ.ವರೆಗಿನ ಆಫರ್‌ ದೊರೆಯುತ್ತಿದೆ. ಇದರ ಜೊತೆಗೆ, ಸ್ಕ್ರ್ಯಾಪ್‌ಪೇಜ್ ಪ್ರೋಗ್ರಾಮ್ ಅಡಿಯಲ್ಲಿ ಎಕ್ಸ್‌ಚೇಂಜ್ ಪ್ರಯೋಜನವು ಸಹ ಲಭ್ಯವಿದ್ದು, ಹೆಚ್ಚುಯಾಗಿ 10,000 ರೂ.ವರೆಗೆ ಪ್ರಯೋಜನಗಳು ಲಭ್ಯವಾಗಲಿದೆ. ಈ ಕಾರಿನ ಆರಂಭಿಕ ಬೆಲೆ 4.64 ಲಕ್ಷ ರೂ. (ಎಕ್ಸ್ ಶೋ ರೂಂ, ಭಾರತ) ಇದೆ.

ರೆನಾಲ್ಟ್ ಕ್ವಿಡ್ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಬೇಸ್: 0.8-ಲೀಟರ್ ಎಂಜಿನ್ ಅನ್ನು ಹೊಂದಿದ್ದು 53.26bhp ಪವರ್ ಮತ್ತು72 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂದಿನ ಎಂಜಿನ್ ಆಯ್ಕೆ ಲಾರ್ಜರ್: ದೊಡ್ಡದಾದ 1.0-ಲೀಟರ್ ಎಂಜಿನ್ ಹೊಂದಿದ್ದು, 67.06bhp ಪವರ್ ಮತ್ತು 91Nm ಪೀಕ್ ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ರೆನಾಲ್ಟ್ ಕ್ವಿಡ್, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್ ಅನ್ನು ಒಳಗೊಂಡಿದೆ.

ರೆನಾಲ್ಟ್ ಟ್ರೈಬರ್ (50,000 ರೂ.ವರೆಗಿನ ಆಫರ್):
ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಬಜೆಟ್-ಸ್ನೇಹಿ 7-ಆಸನಗಳ ಎಂವಿಪಿ ಈ ರೆನಾಲ್ಟ್ ಟ್ರೈಬರ್ ಆಗಿದ್ದು, ಇದು 4-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ವರ್ಷಾಂತ್ಯದಲ್ಲಿ, ರೆನಾಲ್ಟ್ ಟ್ರೈಬರ್ ಮೇಲೆ 50,000 ರೂ.ವರೆಗೆ ಆಫರ್ ನೀಡಲಾಗುತ್ತಿದೆ. ಅಲ್ಲದೆ, ಈ ಮಾದರಿಯು 10,000 ರೂ.ವರೆಗಿನ ಹೆಚ್ಚುವರಿ ಪ್ರಯೋಜನವನ್ನು ನೀಡುವ RELIVE ಸ್ಕ್ರ್ಯಾಪ್‌ಪೇಜ್ ಪ್ರೋಗ್ರಾಂ ಅಡಿಯಲ್ಲಿ ಎಕ್ಸ್‌ಚೇಂಜ್ ಪ್ರಯೋಜನಕ್ಕೆ ಅರ್ಹವಾಗಿದೆ ಎಂದು ಹೇಳಬಹುದು.

ರೆನಾಲ್ಟ್ ಟ್ರೈಬರ್ ಎಂಜಿನ್ ಬಗ್ಗೆ ಮಾತನಾಡುವುದಾದರೆ, 1.0-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಈ ಕಾರು ಹೊಂದಿದ್ದು, 71.01bhp ಗರಿಷ್ಠ ಪವರ್ ಮತ್ತು 96Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ ಆಟೋಮೇಟೆಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ (AMT)ಗೆ ಜೋಡಣೆಯಾಗಿದೆ. ರೆನಾಲ್ಟ್ ಟ್ರೈಬರ್ ಕಾರುಗಳಿಗೆ ಆರಂಭಿಕ ಬೆಲೆಗಳು 5.91 ಲಕ್ಷ ರೂ.(ಎಕ್ಸ್ ಶೋ ರೂಂ, ಭಾರತ) ಇದೆ.

ರೆನಾಲ್ಟ್ ಕಿಗರ್ (35,000 ರೂ.ವರೆಗೆ ರಿಯಾಯಿತಿ):
ಈ ಕಾರು, ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ ರೀತಿಯಲ್ಲಿ ಹೆಚ್ಚಿನ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್‌ ವಿನ್ಯಾಸಗಳನ್ನು ಹೋಲುತ್ತದೆ. ಈ ಎಸ್‌ಯುವಿ ಎರಡು 1.0-ಲೀಟರ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಬೇಸ್: 1.0-ಲೀಟರ್ ನ್ಯಾಚುರಲ್-ಆಸ್ಪಿರೇಟೆಡ್ ಮಾದರಿಯು 71.05bhp ಪವರ್ ಮತ್ತು 96Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮತ್ತೊಂದೆಡೆ, ಲಾರ್ಜರ್: 1.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು 98.63bhp ಪವರ್ ಮತ್ತು 160Nm ಟಾರ್ಕ್ ಉತ್ಪಾದಿಸುತ್ತದೆ.

ಅಲ್ಲದೆ, ರೆನಾಲ್ಟ್ ಕಿಗರ್ ಆಟೋಮೆಟಿಕ್ ಹಾಗೂ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಈ ಎಸ್‌ಯುವಿ ಆಫರ್ ಬಗ್ಗೆ ಹೇಳುವುದಾದರೆ, 35,000 ವರೆಗಿನ ಆಫರ್ ಅನ್ನು ಹೊಸ ಕಾರು ಖರೀದಿಸುವ ಗ್ರಾಹಕರು ಪಡೆಯಬಹುದಾಗಿದೆ.10,000 ರೂ.ವರೆಗೆ ಕಾರ್ಪೊರೇಟ್ ರಿಯಾಯಿತಿ ಮಾತ್ರವಲ್ಲದೆ RELIVE ಸ್ಕ್ರ್ಯಾಪ್‌ಪೇಜ್ ಪ್ರೋಗ್ರಾಂ ಅಡಿ 10,000 ರೂ.ವರೆಗೆ ಪ್ರಯೋಜನವನ್ನು ಪಡೆಯಬಹುದಾಗಿದೆ. ರೆನಾಲ್ಟ್ ಕಿಗರ್ ಬೆಲೆಗಳು 5.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ, ಭಾರತ).

ರೆನಾಲ್ಟ್ ಈ ವರ್ಷಾಂತ್ಯದಲ್ಲಿ ತನ್ನ ಸಂಪೂರ್ಣ ಮಾದರಿಗಳನ್ನು ಮಾರಾಟ ಮಾಡಲು ಉತ್ತಮ ಆಫರ್ ಯೋಜನೆಯನ್ನು ರೂಪಿಸಿದೆ ಎಂದು ಹೇಳಬಹುದು. ಆದ್ದರಿಂದ, ನೀವು ರೆನಾಲ್ಟ್ ಕಾರನ್ನು ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ಕಂಪನಿಯು ನೀಡಿರುವ ಕೊಡುಗೆಯನ್ನು ಒಂದನ್ನು ಆಯ್ಕೆ ಮಾಡಿಕೊಳ್ಳಲು ಇದು ಒಳ್ಳೆಯ ಸಮಯವಾಗಿರುತ್ತದೆ. ಇದಷ್ಟೇ ಅಲ್ಲದೆ, ಹೋಂಡಾ ಕಂಪನಿ ಆಯ್ದ ಕಾರುಗಳ ಮಾದರಿ ಮೇಲೆ 72 ಸಾವಿರದವರೆಗೂ ರಿಯಾಯಿತಿ, ಮಹೀಂದ್ರಾ ಕಂಪನಿ 1 ಲಕ್ಷದವರೆಗೆ ಡಿಸ್ಕೌಂಟ್ ನೀಡಿದೆ.

Most Read Articles

Kannada
English summary
Announcing a huge offer on renault cars in december
Story first published: Tuesday, December 6, 2022, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X