ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವು ಕಳೆದ ಕೆಲ ತಿಂಗಳಿನಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ವಿವಿಧ ಕಂಪನಿಗಳು ಕಳೆದ ತಿಂಗಳು ಅಗಸ್ಟ್‌ನಲ್ಲಿ ಇವಿ ಕಾರುಗಳ ಮಾರಾಟದಲ್ಲಿ ಮುನ್ನಡೆ ಸಾಧಿಸಿವೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಇವಿ ಕಾರು ಮಾದರಿಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಅತ್ಯುತ್ತಮ ಮೈಲೇಜ್ ಮತ್ತು ಬೆಲೆ ವಿಚಾರವಾಗಿ ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಟಾಟಾ ಮೋಟಾರ್ಸ್ ಜೊತೆ ಇತರೆ ಇವಿ ಕಾರು ಉತ್ಪಾದನಾ ಕಂಪನಿಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅಗಸ್ಟ್ ತಿಂಗಳ ಮಾರಾಟ ವರದಿ ಇಲ್ಲಿದೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಟಾಟಾ ಮೋಟಾರ್ಸ್

ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ನೆಕ್ಸಾನ್ ಇವಿ ಮ್ಯಾಕ್ಸ್, ನೆಕ್ಸಾನ್ ಇವಿ, ಟಿಗೋರ್ ಇವಿ ಮತ್ತು ಎಕ್ಸ್‌ಪ್ರೆಸ್-ಟಿ ಇವಿ ಕಾರು ಮಾದರಿಗಳ ಮಾರಾಟದೊಂದಿಗೆ ಹೊಸ ದಾಖಲೆಗಳಿಗೆ ಕಾರಣವಾಗಿದೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಅಗಸ್ಟ್ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 2,747 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ಟಾಟಾ ಇವಿ ಕಾರು ಮಾರಾಟವು ಕಳೆದ ವರ್ಷದ ಅಗಸ್ಟ್ ಅವಧಿಯಲ್ಲಿನ ಇವಿ ಕಾರು ಮಾರಾಟಕ್ಕಿಂತ ಇದೀಗ ಶೇ.377 ರಷ್ಟು ಹೆಚ್ಚು ಬೆಳವಣಿಗೆ ಸಾಧಿಸಿದೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಎಂಜಿ ಮೋಟಾರ್

ಭಾರತದಲ್ಲಿ ಎಂಜಿ ಮೋಟಾರ್ ಕೇವಲ ಜೆಡ್ಎಸ್ ಎಲೆಕ್ಟ್ರಿಕ್ ಕಾರನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಕಂಪನಿಯು ಕಳೆದ ತಿಂಗಳು 311 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷದ ಅಗಸ್ಟ್ ಅವಧಿಗಿಂತ ಶೇ. 17.51 ರಷ್ಟು ಕಡಿಮೆಯಾಗಿದ್ದು, ಶೀಘ್ರದಲ್ಲಿಯೇ ಕಂಪನಿಯು ಜೆಡ್ಎಸ್ ಬೆಸ್ ವೆರಿಯೆಂಟ್ ವಿತರಣೆ ಆರಂಭದೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಹ್ಯುಂಡೈ

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹುಂಡೈ ಮೋಟಾರ್ ಇಂಡಿಯಾ ಕಂಪನಿಯು ಕೋನಾ ಇವಿ ಕಾರಿನ ಮೂಲಕ ಮೂರನೇ ಸ್ಥಾನದಲ್ಲಿದ್ದು, ಕಂಪನಿಯು ಕಳೆದ ತಿಂಗಳು 69 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 12 ಯುನಿಟ್‌ ಮಾತ್ರ ಮಾರಾಟ ಮಾಡಿದ್ದ ಕಂಪನಿಯು ಈ ವರ್ಷ ಶೇ. 475 ರಷ್ಟು ಹೆಚ್ಚಳ ದಾಖಲಿಸಿದೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಬಿವೈಡಿ

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಬಿವೈಡಿ ಇಂಡಿಯಾ ಕಂಪನಿಯು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದು, ಕಳೆದ ತಿಂಗಳು ಕಂಪನಿಯು 44 ಯುನಿಟ್ ಇ6 ಕಾರುಗಳನ್ನು ಮಾರಾಟ ಮಾಡಿದೆ. ಬಿವೈಡಿ ಹೊಸ ಕಾರು ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಅತ್ಯಧಿಕ ಮೈಲೇಜ್ ರೇಂಜ್ ಫೀಚರ್ಸ್ ಹೊಂದಿದ್ದು, ಹೊಸ ಕಾರು ಮೊದಲ ಹಂತದಲ್ಲಿದ್ದ 450 ಯುನಿಟ್ ಮಾರಾಟವು ಪೂರ್ಣಗೊಂಡಿದೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಮಹೀಂದ್ರಾ ಇ-ವೆರಿಟೊ

ಮಹೀಂದ್ರಾ ಕಂಪನಿಯು ಸದ್ಯ ಇ-ವೆರಿಟೊ ಮಾದರಿಯನ್ನು ವಾಣಿಜ್ಯ ಬಳಕೆದಾರರಿಗೆ ಮಾರಾಟ ಮಾಡುತ್ತಿದ್ದು, ಇ-ವೆರಿಟೊ ಮಾದರಿಯು ಕಳೆದು ತಿಂಗಳು 17 ಯುನಿಟ್ ಮಾರಾಟ ಮಾಡಿದೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಬಿಎಂಡಬ್ಲ್ಯು

ಐಷಾರಾಮಿ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಬಿಎಂಡಬ್ಲ್ಯು ಕಂಪನಿಯು ಅಗ್ರಸ್ಥಾನದಲ್ಲಿದ್ದು, ಕಂಪನಿಯು ಕಳೆದ ತಿಂಗಳು 22 ಯುನಿಟ್ ವಿತರಿಸಿದೆ. ಭಾರತದಲ್ಲಿ ಸದ್ಯ ಐಎಕ್ಸ್ ಮತ್ತು ಐ4 ಇವಿ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಎರಡು ಮಾದರಿಗಳು ದುಬಾರಿಯಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಆಡಿ ಇಂಡಿಯಾ

ಭಾರತದಲ್ಲಿ ಇ-ಟ್ರಾನ್ ಎಲೆಕ್ಟ್ರಿಕ್ ಕಾರು ಮಾದರಿಯ ಮಾರಾಟದೊಂದಿಗೆ ಆಡಿ ಕಂಪನಿಯು ಕಳೆದ ತಿಂಗಳು ಉತ್ತಮ ಬೆಳವಣಿಗೆ ಸಾಧಿಸಿದ್ದು, ಕಂಪನಿಯು ಕಳೆದ ತಿಂಗಳು ಒಟ್ಟು 13 ಯುನಿಟ್ ಮಾರಾಟ ಮಾಡಿದೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಇನ್ನುಳಿದಂತೆ ಜಾಗ್ವಾರ್ ಲ್ಯಾಂಡ್ ರೋವರ್, ಪೋರ್ಷೆ, ಮರ್ಸಿಡಿಸ್-ಬೆಂಝ್ ಮತ್ತು ಇತರೆ ಕೆಲವು ಕಂಪನಿಗಳು ಇವಿ ಕಾರು ಮಾರಾಟ ಪಟ್ಟಿಯಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದ್ದು, ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನಗಳ ವಿಭಾಗದಲ್ಲಿ ಕಳೆದ ತಿಂಗಳು ಸುಮಾರು 3,200 ಯುನಿಟ್ ಮಾರಾಟಗೊಂಡಿವೆ. ಇದು ಕಳೆದ ವರ್ಷದ ಜೂನ್‌ನಲ್ಲಿ ಮಾರಾಟಗೊಂಡಿದ್ದ 800 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ಈ ವರ್ಷದ ಕಾರುಗಳ ಮಾರಾಟವು ಶೇ. 300 ರಷ್ಟು ಹೆಚ್ಚಳವಾಗಿದೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಇನ್ನು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ. ಕರ್ನಾಟಕದಲ್ಲೂ ಸಹ ಇವಿ ವಾಹನಗಳ ಅಳವಡಿಕೆಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿವೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ರಾಜ್ಯ ಸರ್ಕಾರದ ಸಬ್ಸಡಿ ಯೋಜನೆ ಜಾರಿ ನಂತರ ಇದುವರೆಗೆ ಕರ್ನಾಟಕದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ನೋಂದಣಿಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಪರಿಣಾಮ ಇವಿ ವಾಹನಗಳ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ.

ಅಗಸ್ಟ್‌ನಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು!

ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಮಾತ್ರವಲ್ಲದೆ ಹೊಸದಾಗಿ ಇವಿ ವಾಹನ ಉತ್ಪಾದನೆಗೆ ಪೂರಕವಾದ ಸ್ಟಾರ್ಟ್‌ಅಪ್ ಕಂಪನಿಗಳಿಗೂ ರಾಜ್ಯ ಸರ್ಕಾರವು ಹಲವಾರು ಸಬ್ಸಡಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಕರ್ನಾಟಕದಲ್ಲಿ ಇದೀಗ 45ಕ್ಕೂ ಹೆಚ್ಚು ಇವಿ ವಾಹನಗಳಿಗೆ ಸಂಬಂಧಿಸಿದ ಸ್ಟಾರ್ಟ್ಅಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

Most Read Articles

Kannada
English summary
August 2022 top 10 electric car sales tata nexon ev mg zs ev and more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X