ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಸರಣಿಯಲ್ಲಿ ಹೊಸದಾಗಿ 5 ಸೀರಿಸ್ 50ಎಂ ಜಹ್ರೇ ಎಡಿಷನ್ ಬಿಡುಗಡೆಗೊಳಿಸಿದ್ದು, ಹೊಸ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 67.50 ಲಕ್ಷ ಬೆಲೆ ಹೊಂದಿದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮರ್ಸಿಡಿಸ್ ಬೆಂಝ್ ಕಂಪನಿಗೆ ಪೈಪೋಟಿಯಾಗಿ ಬಿಎಂಡಬ್ಲ್ಯು ಕಂಪನಿಯು ಪ್ರಮುಖ ಸರಣಿ ಕಾರುಗಳನ್ನು ಭಾರತದಲ್ಲೂ ಬಿಡುಗಡೆ ಮಾಡುತ್ತಿದ್ದು, ಕಂಪನಿಯು ಇದೀಗ 5 ಸೀರಿಸ್ 50ಎಂ ಜಹ್ರೇ ಎಡಿಷನ್ ಅನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಪರಿಚಯಿಸಿದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಹೊಸ ಕಾರಿನ ಬೆಲೆ ಘೋಷಣೆಯೊಂದಿಗೆ ಬಿಎಂಡಬ್ಲ್ಯು ಅಧಿಕೃತ ಪ್ರಕ್ರಿಯೆಗೂ ಚಾಲನೆ ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರಿನ ವಿತರಣೆ ಆರಂಭಗೊಳ್ಳುವುದಾಗಿ ಕಂಪನಿಯು ಮಾಹಿತಿ ಹಂಚಿಕೊಂಡಿದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಜಾಗತಿಕ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಕಂಪನಿಯು ತನ್ನ ಜನಪ್ರಿಯ ಸೆಡಾನ್ ಮಾದರಿಯಾದ 5 ಸೀರಿಸ್ 50ಎಂ ಹಲವಾರು ವಿಶೇಷ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, 5 ಸೀರಿಸ್ 50ಎಂ ಜಹ್ರೇ ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಕಂಪನಿಯು ತನ್ನ ಹೊಸ ಆವೃತ್ತಿಯನ್ನು ಇದೀಗ ಭಾರತದಲ್ಲೂ ಪರಿಚಯಿಸಿದ್ದು, ಹೊಸ ಕಾರು ಮರ್ಸಿಡಿಸ್ ಬೆಂಝ್ ನಿರ್ಮಾಣ ಪ್ರಮುಖ ಸೆಡಾನ್ ಮಾದರಿಗಳಿಗೆ ಇದು ಉತ್ತಮ ಪೈಪೋಟಿಯಾಗಿದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಹೊಸ ಜಹ್ರೇ ಆವೃತ್ತಿಯ ಟಾಪ್-ಆಫ್-ಲೈನ್‌ನಲ್ಲಿರುವ 5 ಸೀರಿಸ್ 530ಐ ಎಂ ಸ್ಪೋರ್ಟ್ ಟ್ರಿಮ್ ಅನ್ನು ಆಧರಿಸಿದ್ದು, ಎಂ ಸರಣಿಯಲ್ಲಿ ಕಂಪನಿಯು 50ನೇ ವರ್ಷದ ಸಂಭ್ರಮಾಚರಣೆಗಾಗಿ ಈ ಹೊಸ ಆವೃತ್ತಿಯನ್ನು ಮಾರಾಟ ಮಾಡುತ್ತಿದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಎಂ ಸೀರಿಸ್‌ನಲ್ಲಿ 50ನೇ ವರ್ಷದ ಸಂಭ್ರಮಾಚರಣೆಗಾಗಿ ಬಿಎಂಡಬ್ಲ್ಯು ಕಂಪನಿಯು ಇನ್ನು ಹತ್ತು ಹೊಸ ಮಾದರಿಗಳನ್ನು ಪರಿಚಯಿಸುವ ಸುಳಿವು ನೀಡಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಜಹ್ರೇ ಆವೃತ್ತಿಯು ಹಲವು ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡಿದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

5 ಸೀರಿಸ್ 50ಎಂ ಜಹ್ರೇ ಆವೃತ್ತಿಯಲ್ಲಿ ಕಂಪನಿಯು ಮುಂಭಾಗ, ಹಿಂಭಾಗ ಮತ್ತು ಚಕ್ರದ ಹಬ್ ಕ್ಯಾಪ್‌ಗಳಲ್ಲಿ ಕ್ಲಾಸಿಕ್ ಬಿಎಂಡಬ್ಲ್ಯು ಮೋಟಾರ್‌ಸ್ಪೋರ್ಟ್ ಲೋಗೋವನ್ನು ನೀಡಿದ್ದು, 50 ಇಯರ್ಸ್ ಆಫ್ ಎಂ' ಡೋರ್ ಪ್ರೊಜೆಕ್ಟರ್‌ಗಳನ್ನು ಸಹ ಒಳಗೊಂಡಿದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಇದರ ಹೊರತಾಗಿ ಹೊಸ ಕಾರಿನಲ್ಲಿ ಸಿಗ್ನೇಚರ್ ಕಿಡ್ನಿ ಗ್ರಿಲ್, ಮುಂಭಾಗದ ಬಂಪರ್ ವಿನ್ಯಾಸದಲ್ಲಿ ಸ್ಪೋರ್ಟಿ ಅಂಶಗಳು, ಡೋರ್ ಕ್ರೋಮ್ ಮತ್ತು ರಿಯಲ್ ವ್ಯೂ ಮಿರರ್, ಎಕ್ಸಾಸ್ಟ್‌ಗಳಲ್ಲಿ ಹೊಳಪು ನೀಡುವ ವಿಶೇಷ ಬಣ್ಣದ ವಿನ್ಯಾಸವನ್ನು ನೀಡಲಾಗಿದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಹಾಗೆಯೇ ಹೊಸ ಆವೃತ್ತಿಯಲ್ಲಿ ಕೆಂಪು ಬಣ್ಣದ M ಸ್ಪೋರ್ಟ್ ಬ್ರೇಕ್ ಕ್ಯಾಲಿಪರ್‌, ಜೆಟ್ ಬ್ಲ್ಯಾಕ್‌ನಲ್ಲಿ 18-ಇಂಚಿನ M ಅಲಾಯ್ ಚಕ್ರಗಳನ್ನು ನೀಡಲಾಗಿದ್ದು, ಹೊಸ ಕಾರಿನ ಒಟ್ಟು ನಾಲ್ಕು ಮೆಟಾಲಿಕ್ ಪೇಂಟ್ ಆಯ್ಕೆಗಳನ್ನು ನೀಡಲಾಗಿದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಗ್ರಾಹಕರು ಹೊಸ ಕಾರನ್ನು ಕಾರ್ಬನ್ ಬ್ಲಾಕ್, ಫೈಟೋನಿಕ್ ಬ್ಲೂ, ಆಲ್ಪೈನ್ ವೈಟ್ ಮತ್ತು ಬರ್ನಿನಾ ಗ್ರೇ ಅಂಬರ್ ಎಫೆಕ್ಟ್ ಬಣ್ಣಗಳ ಆಯ್ಕೆಯೊಂದಿಗೆ ಖರೀದಿಸಬಹುದಾಗಿದ್ದು, ಇದರಲ್ಲಿರುವ ಲೇಸರ್ ಹೆಡ್‌ಲೈಟ್‌ಗಳು 650 ಮೀಟರ್ ತನಕ ಬೆಳಕು ಹರಿಸುವ ಶಕ್ತಿ ಹೊಂದಿವೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಇದಲ್ಲದೆ ಆಂಟಿ-ಡ್ಯಾಝಲ್ ಹೈ-ಬೀಮ್ ವೈಶಿಷ್ಟ್ಯತೆಯು ಈ ಕಾರಿನಲ್ಲಿದ್ದು, ಇದರ ಒಳಾಂಗಣದ ಬಗೆಗೆ ಹೇಳುವುದಾದರೇ ಇದು ಕಾಂಟ್ರಾಸ್ಟ್ ಅಲಂಕಾರಿಕ ಹೊಲಿಗೆಯೊಂದಿಗೆ ಕಾಗ್ನ್ಯಾಕ್ ಬಣ್ಣದ ಥೀಮ್‌ನಲ್ಲಿ ಸೆನ್‌ಟೆಕ್ ಅಪ್ಹೋಲ್‌ಸ್ಟರಿಯನ್ನು ಪಡೆಯುತ್ತದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಸೀಟ್ ಬೆಲ್ಟ್‌ಗಳು ಸಹ ಎಂ ಡಿವಿಷನ್‌ನಲ್ಲಿರುವ ಲಿವರಿ ಮತ್ತು ಸ್ಟಿಚಿಂಗ್ ಅನ್ನು ಸಹ ಒಳಗೊಂಡಿರಲಿದ್ದು, ವಿಶಾಲವಾದ ಕ್ಯಾಬಿನ್ ಜೊತೆಗೆ 12.3-ಇಂಚಿನ ಡ್ರೈವರ್ ಡಿಸ್‌ಪ್ಲೇ, 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, 16-ಸ್ಪೀಕರ್, 464-ವ್ಯಾಟ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಮುಂಭಾಗದಲ್ಲಿ ಸ್ಪೋರ್ಟಿ ವಿನ್ಯಾಸದ ಆಸನಗಳನ್ನು ಹೊಂದಿದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಹೊಸ ಆವೃತ್ತಿಯನ್ನು ಮತ್ತಷ್ಟು ವಿಶೇಷವಾಗಿಸಲು 530ಐ ಎಂ ಸ್ಪೋರ್ಟ್‌ನಂತೆಯೇ ಹಲವು ಉಪಕರಣಗಳನ್ನು ಇದರಲ್ಲಿಯೂ ಹಂಚಿಕೊಳ್ಳಲಾಗಿದ್ದು, ಒಟ್ಟು ನಾಲ್ಕು ಹವಾಮಾನ ನಿಯಂತ್ರಣ ಸೌಲಭ್ಯವು ಈ ಕಾರಿನಲ್ಲಿದೆ.

ಬಿಎಂಡಬ್ಲ್ಯು 5 ಸೀರಿಸ್ 50ಎಂ ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

5 ಸೀರಿಸ್ 50ಎಂ ಜಹ್ರೇ ಆವೃತ್ತಿಯಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ 1,998 ಸಿಸಿ ಇನ್ಲೈನ್-ಫೋರ್, ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಿದ್ದು, ಇದು 8-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ 248 ಬಿಎಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದನೆ ಮಾಡಬಲ್ಲದು.

More from DriveSpark

Article Published On: Friday, July 22, 2022, 8:45 [IST]
English summary
Bmw 5 series 50m jahre sedan edition launched in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+