ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಎರಡನೇ ಎಲೆಕ್ಟ್ರಿಕ್ ಕಾರು ಮಾದರಿಯಾದ ಐ4 ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 69.90 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಭಾತರದಲ್ಲಿ ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಯ ನಂತರ ಬಿಎಂಡಬ್ಲ್ಯು ಕಂಪನಿಯು ಇದೀಗ ಐ4 ಸೆಡಾನ್ ಮಾದರಿಯನ್ನು ಪರಿಚಯಿಸಿದ್ದು, ಹೊಸ ಕಾರು ಮಾದರಿಯು ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸರಣಿಗಳಲ್ಲಿಯೇ ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಜೊತೆ ಹಲವಾರು ಐಷಾರಾಮಿ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಹೊಸ ಐ4 ಎಲೆಕ್ಟ್ರಿಕ್ ಮಾದರಿಯನ್ನು ಬಿಎಂಡಬ್ಲ್ಯು ಕಂಪನಿಯು ಸದ್ಯಕ್ಕೆ ಇ-ಡ್ರೈವ್40 ಸ್ಪೋರ್ಟ್ ಎನ್ನುವ ಒಂದೇ ವೆರಿಯೆಂಟ್‌ನಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸ್ಪೋರ್ಟಿ ವಿನ್ಯಾಸದೊಂದಿಗೆ ಡೈನಾಮಿಕ್ ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಹೊಸ ಕಾರು ಸದ್ಯ ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ಮಾದರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಹೊಸ ಕಾರು 83.9 kWh ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಜ್‌ಗೆ ಇಕೋ ಮೋಡ್‌ನಲ್ಲಿ ಇದು ಗರಿಷ್ಠ 590 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಹೈ ವೊಲ್ಟೆಜ್ ಲೀಥಿಯಂ ಬ್ಯಾಟರಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಹೆಚ್ಚಿನ ದಕ್ಷತೆ ಖಾತ್ರಿಪಡಿಸಿದ್ದು, ಕ್ಲಾರ್ ಆರ್ಕಿಟೆಕ್ಚರ್ ಹೊಂದಿರುವ ಹೊಸ ಕಾರು ಐಎಕ್ಸ್ ಮಾದರಿಯಂತೆ ಚಾರ್ಸಿ ಮೇಲೆಯೇ ಸ್ಲಿಕ್ ಆಗಿರುವ ಬ್ಯಾಟರಿ ಪ್ಯಾಕ್‌ಗಳನ್ನು ಜೋಡಣೆ ಮಾಡಲಾಗಿದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಹೊಸ ಕಾರಿನಲ್ಲಿ ಕಂಪನಿಯು 205kW ಚಾರ್ಜಿಂಗ್ ಸರ್ಪೊಟ್ ಸೌಲಭ್ಯವನ್ನು ಜೋಡಣೆ ಮಾಡಿದ್ದು, ಆರಂಭಿಕ ಹಂತದಲ್ಲಿ ಹೊಸ ಕಾರು ಖರೀದಿಸುವ ಗ್ರಾಹಕರಿಗಾಗಿ ಕಂಪನಿಯು 11kW ವಾಲ್ ಬಾಕ್ಸ್ ಚಾರ್ಜಿಂಗ್ ಸೌಲಭ್ಯವನ್ನು ಉಚಿತವಾಗಿ ಜೋಡಣೆ ಮಾಡುವುದಾಗಿ ಹೇಳಿಕೊಂಡಿದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

205kW ಚಾರ್ಜಿಂಗ್ ಸರ್ಪೊಟ್ ಹೊಂದಿರುವುದಿಂದ ಹೊಸ ಕಾರನ್ನು ಡಿಸಿ ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 10 ನಿಮಿಷ ಚಾರ್ಜ್ ಮಾಡಿದರೂ ಕನಿಷ್ಠ 164 ಕಿ.ಮೀ ಮೈಲೇಜ್ ನೀಡಲಿದ್ದು, 1kW ವಾಲ್ ಬಾಕ್ಸ್ ಮೂಲಕ ಚಾರ್ಜ್ ಮಾಡುವುದಾದರೆ ಸುಮಾರು 8 ರಿಂದ 10 ಗಂಟೆಗಳ ಸಮಯಾವಕಾಶ ತೆಗೆದುಕೊಳ್ಳುತ್ತದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಐ4 ಎಲೆಕ್ಟ್ರಿಕ್ ಮಾದರಿಯ ಹಿಂಬದಿಯಲ್ಲಿ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದ್ದು, ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಹೊಸ ಕಾರು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಜೋಡಿಸಾಗಿದೆ. ಹೊಸ ಕಾರು ಬಲಶಾಲಿ ಎಲೆಕ್ಟ್ರಿಕ್ ಮೋಟಾರ್ ಮೂಲಕ 5.7 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ತಲುಪಲಿದ್ದು, ಪ್ರತಿ ಗಂಟೆಗೆ ಗರಿಷ್ಠ 190 ಕಿ.ಮೀ ಟಾಪ್ ಸ್ಪೀಡ್ ನಿಗದಿಪಡಿಸಿದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಹೊಸ ಕಾರು ಹೊರಭಾಗದಿಂದ ನೋಡಿದಾಗ ಮೊದಲ ನೋಟದಲ್ಲಿ ಇಂಧನ ಆಧರಿತ ಕಾರು ಮಾದರಿಯಂತೆ ಕಂಡರೂ ಅದು ಸಾಕಷ್ಟು ಭಿನ್ನತೆ ಒಳಗೊಂಡಿದ್ದು, ಏರೋಡೈನಾಮಿಕ್ ವಿನ್ಯಾಸವು ಕಾರಿನ ಪರ್ಫಾಮೆನ್ಸ್ ಮತ್ತು ಬ್ಯಾಟರಿ ದಕ್ಷತೆಯನ್ನು ಸುಧಾರಿಸುತ್ತದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಐ4 ಮಾದರಿಯ ಮುಂಭಾಗದ ವಿನ್ಯಾಸವು ಸಾಕಷ್ಟು ಹೊಸತನದೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಸಾಂಪ್ರಾದಾಯಿಕ ಕಿಡ್ನಿ ಗ್ರಿಲ್ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡಿದೆ. ಹೊಸ ಕಾರಿನಲ್ಲಿ ಫ್ರಂಟ್ ಲಿಪ್ ಸ್ಪಾಯ್ಲರ್, ಹತ್ತು ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಆಕ್ಟಿವ್ ಏರ್ ಫ್ಲಾಪ್, 17 ಇಂಚಿನ ಏರೋಡೈನಾಮಿಕ್ ಆಪ್ಟಿಮೈಜ್ಡ್ ವ್ಹೀಲ್ ಮತ್ತು ಬ್ಲ್ಯೂ ಆಕ್ಸೆಂಟ್‌ಗಳು ಕಾರಿನ ಬಲಿಷ್ಠತೆ ಹೆಚ್ಚಿಸಿವೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಹೊಸ ಐ4 ಮಾದರಿಯು ಪ್ರೀಮಿಯಂ ಸೆಡಾನ್ ಮಾದರಿಗಳಂತೆ 4,783 ಎಂಎಂ ಉದ್ದ, 1,852 ಎಂಎಂ ಅಗಲ, 1,448 ಎಂಎಂ ಎತ್ತರ, 2,856 ಎಂಎಂ ವ್ಹೀಲ್ ಬೆಸ್ ಮತ್ತು 125 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಹೊಸ ಕಾರು ಸಾಮಾನ್ಯ ಕಾರು ಮಾದರಿಯಾದ 3 ಸೀರಿಸ್ ಸೆಡಾನ್ ಮಾದರಿಗಿಂತಲೂ 39 ಎಂಎಂ ಹೆಚ್ಚುವರಿ ಒಳಾಂಗಣ ವಿಸ್ತರಣೆಯೊಂದಿಗೆ ಆರಾಮದಾಯಕವಾದ ಆಸನ ಸೌಲಭ್ಯ ಹೊಂದಿದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಬಿಎಂಡಬ್ಲ್ಯು ಕಂಪನಿಯು ಹೊಸ ಕಾರಿನ ಒಳಾಂಗಣ ಸೌಲಭ್ಯಗಳಲ್ಲೂ ಸಾಕಷ್ಟು ಹೊಸತನಗಳನ್ನು ನೀಡಿದ್ದು, 4 ಸೀರಿಸ್ ಗ್ರ್ಯಾಸ್ ಕೂಪೆ ಮಾದರಿಯಲ್ಲಿರುವಂತೆ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಹೊಸ ಕಾರಿನಲ್ಲಿ ಟ್ವಿನ್ ಸ್ಕ್ರೀನ್ ಸೌಲಭ್ಯದೊಂದಿಗೆ 12.3 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 14.9 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಇದರೊಂದಿಗೆ ಹೊಸ ಕಾರಿನಲ್ಲಿ ಕಂಪನಿಯು ಯೂಸರ್ ಇಂಟರ್‌ಫೇಸ್ ಸೌಲಭ್ಯದೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ರಿಯರ್ ಏರ್ ಸಸ್ಷೆಂಷನ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ಎಲ್ಇಡಿ ಆ್ಯಂಬಿಯೆಂಟ್ ಲೈಟಿಂಗ್, ಸನ್‌ರೂಫ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಜೊತೆ ಕ್ಯಾಮೆರಾ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ.

ಪ್ರತಿ ಚಾರ್ಜ್‌ಗೆ 590 ಕಿ.ಮೀ ಮೈಲೇಜ್ ಪ್ರೇರಿತ ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ

ಹೊಸ ಕಾರಿನ ಮೂಲಕ ಬಿಎಂಡಬ್ಲ್ಯು ಕಾರು ಮಾದರಿಯು ಐಷಾರಾಮಿ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಲಿದ್ದು, ಹೊಸ ಕಾರು ಖರೀದಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿರುವ ಕಂಪನಿಯು ಮುಂಬರುವ ಜುಲೈನಿಂದ ವಿತರಣೆ ಆರಂಭಿಸಲಿದೆ.

Most Read Articles

Kannada
English summary
Bmw i4 launched in india at rs 69 90 lakhs details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X