ಭಾರತದಲ್ಲಿ ಬಿಎಂಡಬ್ಲ್ಯು ಹೊಸ ಎಕ್ಸ್4 50 ಜಹ್ರೇ ಎಂ ಎಡಿಷನ್ ಬಿಡುಗಡೆ
ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಸರಣಿಯಲ್ಲಿ ಹೊಸದಾಗಿ 50 ಜಹ್ರೇ ಎಂ ಎಡಿಷನ್ ಬಿಡುಗಡೆಗೊಳಿಸುತ್ತಿದ್ದು, ಇದೀಗ ಎಕ್ಸ್4 ಕೂಪೆ ಮಾದರಿಯಲ್ಲೂ ಹೊಸ ಎಡಿಷನ್ ಪರಿಚಯಿಸಲಾಗಿದೆ.

ಹೊಸ ಎಕ್ಸ್4 50 ಜಹ್ರೇ ಎಂ ಎಡಿಷನ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 72.90 ಲಕ್ಷ ಬೆಲೆ ಹೊಂದಿದ್ದು, ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಸುಮಾರು ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದೆ. ಎಕ್ಸ್4 50 ಜಹ್ರೇ ಎಂ ಎಡಿಷನ್ ಪ್ರಮುಖ ಎರಡು ವೆರಿಯೆಂಟ್ ಹೊಂದಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಸ್ಪೋರ್ಟಿಯಾದ ತಾಂತ್ರಿಕ ಅಂಶಗಳನ್ನು ಪಡೆದುದುಕೊಂಡಿದೆ.

ಬಿಎಂಡಬ್ಲ್ಯು ಕಂಪನಿಯು ಹೊಸ ಎಕ್ಸ್4 50 ಜಹ್ರೇ ಎಂ ಎಡಿಷನ್ ಅನ್ನು ಎರಡು ವೆರಿಯೆಂಟ್‌ಗಳಲ್ಲಿ ಪರಿಚಯಿಸಿದ್ದು, ಆರಂಭಿಕ ಮಾದರಿಯಾದ ಎಕ್ಸ್4 30ಐ ಎಂ ಸ್ಪೋರ್ಟ್ 50 ಜಹ್ರೇ ಎಂ ಎಡಿಷನ್ ಬೆಲೆ ರೂ. 72.90 ಲಕ್ಷವಾದರೆ ಎಕ್ಸ್4 30ಡಿ ಎಂ ಸ್ಪೋರ್ಟ್ 50 ಜಹ್ರೇ ಎಂ ಎಡಿಷನ್ ರೂ. 74.90 ಲಕ್ಷ ಬೆಲೆ ಹೊಂದಿದೆ.

ವಿಶೇಷ ಆವೃತ್ತಿಯಾಗಿರುವುದರಿಂದ 50 ಜಹ್ರೇ ಎಂ ಎಡಿಷನ್ ಅನ್ನು ಕೆಲವೇ ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಿದ್ದು, ಭಾರತದಲ್ಲಿ ಈಗಾಗಗೇ ಬಿಎಂಡಬ್ಲ್ಯ ಕಂಪನಿಯು ಸುಮಾರು 6 ಕಾರು ಮಾದರಿಗಳಲ್ಲಿ 50 ಜಹ್ರೇ ಎಂ ಎಡಿಷನ್ ಬಿಡುಗಡೆ ಮಾಡಿದೆ.

ಎಂ ಸೀರಿಸ್ ಕಾರುಗಳನ್ನು ಪರಿಚಯಿಸಿದ 50ನೇ ವರ್ಷದ ಸಂಭ್ರಮಾಚರಣೆಗಾಗಿ ಬಿಎಂಡಬ್ಲ್ಯು ಕಂಪನಿಯು ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಎಕ್ಸ್4 50 ಜಹ್ರೇ ಎಂ ಎಡಿಷನ್ ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್
ಎಕ್ಸ್4 50 ಜಹ್ರೇ ಎಂ ಎಡಿಷನ್‌ಗಳು ಕೆಲವೇ ಹೊಸ ಫೀಚರ್ಸ್ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ಎಂಜಿನ್ ಆಯ್ಕೆ ಹೊಂದಿದ್ದು, ವಿವಿಧ ರೂಪಾಂತರಗಳನ್ನು ಆಧರಿಸಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 3.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿವೆ.

2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 5,200 ಆರ್‌ಪಿಎಂನಲ್ಲಿ 248 ಬಿಎಚ್‌ಪಿ ಮತ್ತು 1,450 ಆರ್‌ಪಿಎಂನಲ್ಲಿ 350 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸಿದರೆ 3.0-ಲೀಟರ್ ಡೀಸೆಲ್ ಮಾದರಿಯು 4,000ಆರ್‌ಪಿಎಂನಲ್ಲಿ 261 ಬಿಎಚ್‌ಪಿ ಮತ್ತು 2,000ಆರ್‌ಪಿಎಂನಲ್ಲಿ 620 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ಎರಡೂ ಎಂಜಿನ್‌ಗಳಲ್ಲೂ ಗ್ರಾಹಕರ ಬೇಡಿಕೆಯೆಂತೆ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದ್ದು, ಇದು ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ಪೂರೈಸಲುವ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿ ಗುರುತಿಸಿಕೊಳ್ಳುತ್ತದೆ.

ಹೊಸ ಆವೃತ್ತಿಯಲ್ಲಿನ ಬದಲಾದ ವಿನ್ಯಾಸಗಳ ಕುರಿತು ಮಾತನಾಡುವುದಾದರೆ ಸಾಂಪ್ರದಾಯಿಕ ಕಿಡ್ನಿ ಗ್ರಿಲ್ ಕಪ್ಪು ಹೊಳುಪಿನಿಂದ ಕೂಡಿದ್ದು, M ಏರೋಡೈನಾಮಿಕ್ ಪ್ಯಾಕೇಜ್‌ನಲ್ಲಿ ಮತ್ತಷ್ಟು ಹೊಸ ಫೀಚರ್ಸ್ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಹೊಸ ಕಾರಿನ ಮುಂಭಾಗ ಮತ್ತು ಹಿಂಭಾಗದ ಏಪ್ರನ್ ಮತ್ತು ಸೈಡ್ ಸಿಲ್ ಕವರ್‌ಗಳನ್ನು ಸೇರಿಸಲಾಗಿದ್ದು, M ಹೈ ಗ್ಲೋಸ್ ಶ್ಯಾಡೋ ಲೈನ್ ಕೂಪ್-ಶೈಲಿಯ ಕಿಟಕಿಗಳ ಸುತ್ತಲೂ ಕಪ್ಪು ಚೌಕಟ್ಟು ರಚಿಸುವ ಮೂಲಕ ಸ್ಪೋರ್ಟಿ ಲುಕ್ ನೀಡುತ್ತದೆ.

ಸ್ಪೋರ್ಟಿ ಲುಕ್ ಹೊಂದಿರುವ ಕಪ್ಪು ಚೌಕಟ್ಟು ವಿಂಡೋ ಕವರ್‌ನಿಂದ ಸಾಗಿ ಗೈಡ್ ರೈಲ್, ಮಿಡ್ ಪಿಲ್ಲರ್, ಸೈಡ್-ವ್ಯೂ ಮಿರರ್ ತಳದವರೆಗೆ ವಿಸ್ತರಿಸುತ್ತದೆ. ಹಾಗೆಯೇ ಹಿಂಭಾಗದ ಬಂಪರ್ ನಲ್ಲೂ ಹೆಚ್ಚಿನ ಹೊಳಪಿನ ಕಪ್ಪು ಮತ್ತು ಲಂಬವಾಗಿ ಜೋಡಿಸಲಾದ ಪ್ರತಿಫಲಕಗಳನ್ನು ನೀಡಲಾಗಿದ್ದು, ಅಂವಿಲ್-ಶೈಲಿಯ ಬಂಪರ್ ಮತ್ತು ಟೈಲ್‌ಪೈಪ್ ಕಪ್ಪು ಬಣ್ಣದಿಂದ ಕೂಡಿವೆ.

ಇನ್ನುಳಿದಂತೆ ಹೊಸ ಆವೃತ್ತಿಯಲ್ಲಿ ಬ್ಲ್ಯಾಕ್ ಸಫೈರ್ ಅಥವಾ ಎಂ ಬ್ರೂಕ್ಲಿನ್ ಗ್ರೇ ಬಣ್ಣಗಳನ್ನು ಆಯ್ಕೆ ಮಾಡಬಹುದಾಗಿದ್ದು, 20-ಇಂಚಿನ ಮಿಶ್ರಲೋಹದ ಚಕ್ರಗಳು ಮತ್ತು ಎಂ ಸ್ಪೋರ್ಟ್ ಬ್ರೇಕ್ ಕ್ಯಾಲಿಪರ್‌ಗಳಿವೆ. ಹೊಸ ಆವೃತ್ತಿಯ ಒಳಭಾಗದಲ್ಲೂ ಹಲವಾರು ಬದಲಾವಣೆಗಳಿದ್ದು, ಕಪ್ಪು ಬಣ್ಣದ ಕ್ಯಾಬಿನ್‌ನೊಂದಿಗೆ ಬ್ಲ್ಯಾಕ್ ಡಿಕೋರ್ ಸ್ಟೀಚ್ ಹೊಂದಿದೆ.

ಜೊತೆಗೆ ಹೊಸ ಕಾರಿನಲ್ಲಿ ಪರ್ಲ್ ಕ್ರೋಮ್ ಹೈಲೈಟ್ ಟ್ರಿಮ್ ಫಿನಿಶರ್‌ನೊಂದಿಗೆ ಅಲ್ಯೂಮಿನಿಯಂ ರೋಂಬಿಕಲ್ ಡಾರ್ಕ್ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಹೆಡ್‌ಲೈನರ್ ಅನ್ನು ಗಾಲ್ವನಿಕ್ ಅಲಂಕಾರದೊಂದಿಗೆ ಆಂಥ್ರಾಸೈಟ್‌ನೊಂದಿಗೆ ದೊಡ್ಡದಾದ ವಿಹಂಗಮ ಛಾವಣಿಯನ್ನು ನೀಡಲಾಗದೆ.


Click it and Unblock the Notifications








