ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ಸ್ಕಾರ್ಪಿಯೋ N ಪ್ರಸ್ತುತ ಭಾರತದಲ್ಲಿ ಶೀಘ್ರವಾಗಿ ಮಾರಾಟವಾಗುವ SUV ಆಗಿದ್ದು ಮೊದಲ 25,000 ಬುಕಿಂಗ್‌ಗಳು ಒಂದು ನಿಮಿಷದಲ್ಲಿ ಮಾರಾಟವಾದರೆ, ಒಂದು ಗಂಟೆಯಲ್ಲಿ 1 ಲಕ್ಷ ಬುಕ್ಕಿಂಗ್ ದಾಖಲಾಗಿದೆ. ಆದರೆ ಈ ಸಂಪೂರ್ಣ 1 ಲಕ್ಷ ಬುಕ್ಕಿಂಗ್‌ಗಳ ವಿತರಣೆಯು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ವಿಶ್ವದಾದ್ಯಂತ ಸೆಮಿಕಂಡಕ್ಟರ್ ಚಿಪ್ ಕೊರತೆಯಿಂದಾಗಿ ವಾಹನ ತಯಾರಕರು ಬೇಡಿಕೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಂತಹ ವಾಹನ ತಯಾರಕರಲ್ಲಿ ಮಹೀಂದ್ರಾ ಕಂಪನಿ ಕೂಡ ಇದೆ. ಇದು ಪ್ರಸ್ತುತ XUV700 ಮತ್ತು ಸ್ಕಾರ್ಪಿಯೋ N ನಂತಹ ಬಹು ಬೇಡಿಕೆಯ ವಾಹನಗಳನ್ನು ಮಾರಾಟ ಮಾಡುತ್ತಿದೆ.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ಸದ್ಯ ಈ ವಾಹನಗಳ ಬೇಡಿಕೆ ತುಂಬಾ ಹೆಚ್ಚಾಗಿದ್ದು, ಬುಕಿಂಗ್‌ಗಳು ಗರಿಗೆದರಿವೆ. ಮತ್ತೊಂದೆಡೆ ಇವುಗಳಿಗಾಗಿ ಕಾಯುವ ಅವಧಿಯು ವಾರಗಳು, ತಿಂಗಳುಗಳಲ್ಲಿ ಅಲ್ಲ, ಇದೀಗ ಬರೋಬ್ಬರಿ 2 ವರ್ಷಗಳ ಸಮಯ ಹಿಡಿಯುತ್ತಿದೆ. ಕೊರೊನಾ ಬಳಿಕ ವಾಹನ ಉದ್ಯಮ ಚೇತರಿಸಿಕೊಳ್ಳುತ್ತಿದ್ದು, ಆಟೋ ವಲಯದಲ್ಲಿ ಧನಾತ್ಮಕ ಬೆಳವಣಿಗೆಗಳು ಕಂಡುಬಂದಿವೆ.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ಮಹೀಂದ್ರಾ ಕಾಯುವ ಅವಧಿ

ನಿರೀಕ್ಷಿತ ಖರೀದಿದಾರರು ಕಾಯುವ ಅವಧಿಯ ಬಗ್ಗೆ ಜಾಗರೂಕರಾಗಿದ್ದಾರೆ. ಅದರಲ್ಲೂ ಮಹೀಂದ್ರಾದ ವಿಷಯದಲ್ಲಿ ಅವರಿಗೆ ಹೆಚ್ಚಾಗಿ ತಿಳಿದಿರುತ್ತದೆ. ಅಂದರೆ ಅಪಾರ ಜನಪ್ರಿಯತೆ ಹೊಂದಿರುವ SUV ಗಳು ಅಗಾಧವಾದ ದೀರ್ಘ ಕಾಯುವ ಅವಧಿಯನ್ನು ಹೊಂದಿರುತ್ತವೆ ಎಂದು ಗ್ರಾಹಕರಿಗೂ ಗೊತ್ತು. ಆದರೆ ಕಂಪನಿಯು ಇದನ್ನು ಸುಧಾರಿಸುವುದರೊಂದಿಗೆ ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ವೇಗವಾಗಿ ತಲುಪಿಸಲು ಪ್ರಯತ್ನಿಸುತ್ತಿದೆ.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ಸ್ಕಾರ್ಪಿಯೋ ಕಾಯುವಿಕೆಯ ಬಗ್ಗೆ ಮಾತನಾಡುವುದಾದರೆ, ಮಹೀಂದ್ರಾ ಇತರ ಟ್ರಿಮ್‌ಗಳಿಗಿಂತ ಮೊದಲು Z8L ಟ್ರಿಮ್‌ನ ವಿತರಣೆಗಳಿಗೆ ಆದ್ಯತೆ ನೀಡಿದೆ. Z8L ಗ್ರಾಹಕರು ಇತರರಿಗಿಂತ ಮೊದಲು PDI ಆಹ್ವಾನವನ್ನು ಪಡೆದಿದ್ದು, ಅವರಿಗೆ ದೀಪಾವಳಿ ಸಮಯದಲ್ಲಿ ವಿತರಣೆಯ ಭರವಸೆ ನೀಡಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ಆದರೆ ಆನ್‌ಲೈನ್ ಬುಕಿಂಗ್‌ಗಳು ಪ್ರಾರಂಭವಾದ ನಂತರ ತಮ್ಮ ಸ್ಕಾರ್ಪಿಯೋ N ಅನ್ನು ಬುಕ್ ಮಾಡಿದವರೆಲ್ಲರೂ (ಅವರು ಯಾವ ಎಂಜಿನ್‌ಗಳನ್ನು ಆಯ್ಕೆ ಮಾಡಿಕೊಂಡರೂ) 85 ರಿಂದ 90 ವಾರಗಳವರೆಗೆ (12 ರಿಂದ 13 ತಿಂಗಳುಗಳು) ಕಾಯಬೇಕಾಗುತ್ತದೆ.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

85 ರಿಂದ 90 ವಾರಗಳು ಬಹಳಷ್ಟು ಧೀರ್ಘ ಸಮಯ ಎಂದು ನೀವು ಭಾವಿಸಿದರೆ, ಇತರ ಟ್ರಿಮ್‌ಗಳಿಗಾಗಿ ಕಾಯುವ ಅವಧಿಯು ನಿಮ್ಮನ್ನು ಇನ್ನಷ್ಟು ಆಶ್ಚರ್ಯಗೊಳಿಸಬಹುದು. ಮೂಲ Z2 ಟ್ರಿಮ್ ಹಾಗೂ Z4 ಟ್ರಿಮ್‌ಗಾಗಿ ಖರೀದಿದಾರರು 90 ರಿಂದ 95 ವಾರಗಳು ಮತ್ತು 95 ರಿಂದ 100 ವಾರಗಳವರೆಗೆ ಕಾಯಬೇಕಾಗುತ್ತದೆ.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ಸ್ಕಾರ್ಪಿಯೋಗಾಗಿ ಅಗ್ರಸ್ಥಾನದಲ್ಲಿರುವ Z6 ಮತ್ತು Z8 ಟ್ರಿಮ್‌ಗಳು 100 ರಿಂದ 105 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿವೆ. XUV700 ಮಾದರಿಗಳಿಗೆ ಹೋಲಿಸಿಕೊಂಡರೆ ಸ್ಕಾರ್ಪಿಯೋ N ಗಾಗಿ ಕಾಯುವ ಅವಧಿ ಕಡಿಮೆಯೆಂದೇ ಹೇಳಬಹುದು.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ಇತ್ತೀಚೆಗೆ Scorpio N ನ ಒಬ್ಬರು ಖರೀದಿದಾರರಿಗೆ ಸೆಪ್ಟೆಂಬರ್ 2024 ರಲ್ಲಿ ವಿತರಣಾ ದಿನಾಂಕವನ್ನು ತಿಳಿಸಲಾಗಿದೆ. ಇದು ಹೆಚ್ಚುಕಡಿಮೆ 2 ವರ್ಷಗಳ ಕಾಲ ಕಾಯುವಂತಾಗಿದೆ. ನೀವು ಸ್ಕಾರ್ಪಿಯೋ ಪ್ರೊಂಟೊ ಬಯಸಿದರೆ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ಒಮ್ಮೆ ನೋಡಬಹುದು.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ಇದನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದ್ದು, ಇದರ ಬಾನೆಟ್ ಅಡಿಯಲ್ಲಿ ಸ್ವಲ್ಪ ನವೀಕರಣಗಳನ್ನು ಮಾಡಿ ಹೊಸ ಅಲ್ಯೂಮಿನಿಯಂ ಬ್ಲಾಕ್, ಸ್ವಲ್ಪ ಹೆಚ್ಚು ಇಂಧನ ದಕ್ಷತೆ, ಸ್ವಲ್ಪ ಪರಿಷ್ಕರಿಸಿದ ನೋಟ, ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಬದಲಿಸುವ ಮಾದರಿಯದ್ದರಿಂದ ಸ್ವಲ್ಪ ಉತ್ತಮವಾಗಿ ನೀಡಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ಸ್ಕಾರ್ಪಿಯೋ ಕ್ಲಾಸಿಕ್ ಖರೀದಿದಾರರು ತಮ್ಮ ಹೊಸ ಖರೀದಿಗಾಗಿ ಕೇವಲ 6 ರಿಂದ 8 ವಾರಗಳವರೆಗೆ ಕಾಯಬೇಕಾಗುತ್ತದೆ. ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು 2 ಟ್ರಿಮ್‌ಗಳಲ್ಲಿ S ಮತ್ತು S11 ನಲ್ಲಿ ಕೇವಲ ಒಂದು ಪವರ್‌ಟ್ರೇನ್ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಎರಡೂ ಟ್ರಿಮ್‌ಗಳು ಒಂದೇ ಕಾಯುವ ಅವಧಿಯನ್ನು ಹೊಂದಿವೆ.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

Mahindra XUV700 ಕಾಯುವ ಅವಧಿ

XUV700 ನ ಟಾಪ್-ಸ್ಪೆಕ್ AXL ಟ್ರಿಮ್ 19 ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಆದರೆ ಈಗ ಅದು ಕಡಿಮೆಯಾಗಿದೆ. ಇತರ ಟ್ರಿಮ್‌ಗಳನ್ನು ಸಹ ಸ್ವಲ್ಪ ಸಡಿಲಗೊಳಿಸಲಾಗಿದ್ದು, ಕಾಯುವ ಅವಧಿಗಳನ್ನು ಕಡಿತಗೊಳಿಸಲಾಗಿದೆ. AX3 ಮತ್ತು AX5 ಜೊತೆಗೆ ಬೇಸ್ MX ಟ್ರಿಮ್ ಪೆಟ್ರೋಲ್ ಎಂಜಿನ್‌ಗಳೊಂದಿಗೆ 2-3 ತಿಂಗಳ ಕಾಯುವ ಅವಧಿಯನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ಡೀಸೆಲ್ ಎಂಜಿನ್ ಆಯ್ಕೆಗಾಗಿ ಆ ಅವಧಿಯನ್ನು 10 ತಿಂಗಳವರೆಗೆ ಹೆಚ್ಚಿಸಲಾಗಿದೆ. ಆದರೂ AX7 ಮತ್ತು AX7 L ಟ್ರಿಮ್‌ಗಳನ್ನು ಖರೀದಿಸುವವರು ಕ್ರಮವಾಗಿ 15 ಮತ್ತು 16 ತಿಂಗಳುಗಳವರೆಗೆ ಕಾಯಬೇಕು.

ಮಹೀಂದ್ರಾ ಸ್ಕಾರ್ಪಿಯೋ-N ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಖಂಡಿತ 2024ರ ವರೆಗೆ ಕಾಯಲೇಬೇಕು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಕಂಪನಿಯು ತನ್ನ ಎಲ್ಲೆಯನ್ನು ವಿಸ್ತರಿಸಲು ಭಾರತದಲ್ಲಿ ಅಧಿಕೃತ ಬಿಡುಗಡೆ ಬಳಿಕ ಇತ್ತೀಚೆಗೆ ಹೊಸ ಮಹೀಂದ್ರಾ ಸ್ಕಾರ್ಪಿಯೊ-N ಅನ್ನು ದಕ್ಷಿಣ ಆಫ್ರಿಕಾ ಮತ್ತು ನೇಪಾಳದಲ್ಲಿ ಅನಾವರಣಗೊಳಿಸಿದೆ. ಈ ಮೂಲಕ ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸುತ್ತಿದೆ.

Article Published On: Thursday, September 15, 2022, 13:23 [IST]
English summary
Booked mahindra scorpio n so of course we have to wait till 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+