ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿವೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ವಾಯು ಮಾಲಿನ್ಯದ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಇಂಧನ ಚಾಲಿತ ವಾಹನಗಳ ಬಳಕೆ ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಉತ್ಪಾದನಾ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸಿವೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ತೈಲ ಮಾರಾಟ ಸಂಸ್ಥೆಯಾಗಿರುವ ಭಾರತ್ ಪೆಟ್ರೋಲಿಯಂ ಕೂಡಾ ಇವಿ ಚಾರ್ಜಿಂಗ್ ನಿಲ್ದಾಣಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಹಂತ-ಹಂತವಾಗಿ 7 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಯೋಜನೆ ಸಿದ್ದಪಡಿಸಿದೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಮುಂದಿನ ಅಕ್ಟೋಬರ್ ವೇಳೆಗೆ ದೇಶದ ಪ್ರಮುಖ ಕಡೆಗಳಲ್ಲಿ ಒಂದು ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಗುರಿಹೊಂದಿರುವ ಭಾರತ್ ಪೆಟ್ರೋಲಿಯಂ ಕಂಪನಿಯು ಈಗಾಗಲೇ ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿಯೇ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆ ಚಾಲನೆ ನೀಡಿದೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಕಂಪನಿಯು ಇತ್ತೀಚೆಗೆ ಚೆನ್ನೈ-ತಿರುಚಿ-ಮಧುರೈನ ನಡುವಿನ 900 ಕಿಮೀ ಹೆದ್ದಾರಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಫಾಸ್ಟ್ ಚಾರ್ಜಿಂಗ್ ಕಾರಿಡಾರ್ ಪ್ರಾರಂಭಿಸಿದ್ದು, ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ CCS-2 ಮಾನದಂಡ ಹೊಂದಿರುವ ಡಿಸಿ ಫಾಸ್ಟ್-ಚಾರ್ಜರ್‌ಗಳನ್ನು ಅಳವಡಿಸಿದೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಚಾರ್ಜಿಂಗ್ ಸೌಲಭ್ಯದ ಕೊರತೆಯಿಂದಾಗಿ ನಗರ ಪ್ರದೇಶದಿಂದ ದೂರದ ಪ್ರದೇಶಗಳಿಗೆ ಪ್ರಯಾಣ ಬೆಳೆಸಲು ಹಿಂಜರಿಯುವ ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ಹೆದ್ದಾರಿಗಳಲ್ಲೂ ಚಾರ್ಜಿಂಗ್ ನಿಲ್ದಾಣ ಲಭ್ಯತೆಯು ಇವಿ ವಾಹನ ಬಳಕೆಯನ್ನು ಉತ್ತೇಜಿಸಲು ನೆರವಾಗಲಿದ್ದು, ಡಿಸಿ ಫಾಸ್ಟ್-ಚಾರ್ಜರ್‌ಗಳ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಟ್ಟದ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಇಂಧನ ಚಾಲಿತ ಬದಲಾಗಿ ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸಲು ಎಲ್ಲಾ ಮೂಲಭೂತ ಸೌಕರ್ಯ ಒದಗಿಸುವುವಲ್ಲಿ ಕಂಪನಿಯು ಬದ್ದವಾಗಿದೆ ಎಂದಿರುವ ಭಾರತ್ ಪೆಟ್ರೋಲಿಯಂ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೆದ್ದಾರಿಯಲ್ಲಿ ಇವಿ ವಾಹನಗಳ ಬಳಕೆಯ ಉತ್ತೇಜನಕ್ಕಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದ್ದು, ಇದರಿಂದ ಕೇವಲ ನಗರಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಇವಿ ವಾಹನಗಳ ಮೂಲಕ ದೂರದ ಪ್ರಯಾಣಕ್ಕೂ ಅನುಕೂಲಕರವಾಗಲಿದೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಇನ್ನು ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯೊಂದಿಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆ ಅಡಿ ಇದೀಗ ಮತ್ತೆ ಇವಿ ವಾಹನಗಳ ಖರೀದಿ ಮೇಲೆ ಪ್ರೋತ್ಸಾಹ ಧನ ಹೆಚ್ಚಿಸಿದೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಆದರೆ ಭಾರತದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಯನ್ನು ತಗ್ಗಿಸಲು ತುರ್ತಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಹೆಚ್ಚಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಫೇಮ್ 2 ಯೋಜನೆಗೆ ಕೆಲವು ತಿದ್ದುಪಡಿ ತರುವ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸಬ್ಸಡಿ ಪ್ರಮಾಣವನ್ನು ಚಾಲ್ತಿಯಲ್ಲಿರುವ ಪ್ರಮಾಣಕ್ಕಿಂತ ಶೇ.50 ರಷ್ಟು ಹೆಚ್ಚಳ ಮಾಡಿದೆ.

ಹೆದ್ದಾರಿಗಳಲ್ಲೂ ಇವಿ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆದ ಬಿಪಿಸಿಎಲ್

ಹೊಸ ತಿದ್ದುಪಡಿಯ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸಬ್ಸಿಡಿ ಪ್ರಮಾಣವನ್ನು ಬ್ಯಾಟರಿ ಪ್ಯಾಕ್ ಆಧರಿಸಿ ಪ್ರತಿ ಕಿಲೋವ್ಯಾಟ್‌ಗೆ ರೂ. 15 ಸಾವಿರ ಏರಿಕೆ ಮಾಡಲಾಗಿದ್ದು, ಹೊಸ ತಿದ್ದುಪಡಿಯ ನಂತರ ಪ್ರತಿ ಇವಿ ಸ್ಕೂಟರ್ ಖರೀದಿ ಮೇಲೆ ಗ್ರಾಹಕರು ರೂ. 5 ಸಾವಿರದಿಂದ ರೂ.30 ಸಾವಿರದಷ್ಟು ಉಳಿತಾಯ ಮಾಡಬಹುದಾಗಿದೆ.

Article Published On: Saturday, February 19, 2022, 11:29 [IST]
English summary
Bpcl launched fast charging ev corridor highway details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+