Just In
- 17 min ago
ಭಾರತದಲ್ಲಿ ಬಹುನಿರೀಕ್ಷಿತ ಮಹೀಂದ್ರಾ ಥಾರ್ RWD ವಿತರಣೆ ಪ್ರಾರಂಭ: ಅದು ಕೈಗೆಟುಕುವ ಬೆಲೆಯಲ್ಲಿಯೇ..
- 41 min ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಡೀಸೆಲ್ ಕಾರು
- 1 hr ago
ರಾಜ್ಯದ ಈ ನಗರಗಳಲ್ಲಿ ಡಬ್ಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಸೇವೆ: KSRTC ತೀರ್ಮಾನ!
- 2 hrs ago
ಇನ್ನೋವಾ ಕ್ರಿಸ್ಟಾ ಡೀಸಲ್ ಸೇರಿದಂತೆ ಇದೆ ತಿಂಗಳು ಮಾರುಕಟ್ಟೆ ಪ್ರವೇಶಿಸಲಿವೆ 8 ಹೊಸ ಕಾರುಗಳು
Don't Miss!
- Technology
ಗೂಗಲ್ ಪಿಕ್ಸಲ್ 6a ಫೋನ್ಗೆ ಸಖತ್ ಡಿಸ್ಕೌಂಟ್; ಈ ಅವಕಾಶ ಮತ್ತೆ ಸಿಗಲ್ಲ!
- News
Budget 2023;ಇಂದಿನ ಕೇಂದ್ರ ಬಜೆಟ್ ಇಡೀ ದೇಶಕ್ಕೆ ಪೂರಕವಾದ ಬಜೆಟ್: ಆರಗ ಜ್ಞಾನೇಂದ್ರ
- Movies
ಅವರ ರೀತಿ ನನ್ನನ್ನು ಯಾರೂ ಹುರಿದುಂಬಿಸಲಿಲ್ಲ, ನನ್ನ ಕಬ್ಜ ಚಿತ್ರ ಅವರಿಗೆ ಅರ್ಪಣೆ ಎಂದ ಆರ್ ಚಂದ್ರು
- Finance
Budget 2023: "ಅಮೃತ ಕಾಲದ ಬಜೆಟ್", ಆಯವ್ಯಯ ಪಟ್ಟಿ ಮಂಡನೆ ಆರಂಭಿಸಿದ ವಿತ್ತ ಸಚಿವೆ
- Sports
BGT 2023: ಆಸ್ಟ್ರೇಲಿಯಾ ಕ್ರಿಕೆಟಿಗನಿಗೆ ವೀಸಾ ಸಮಸ್ಯೆ: ತವರಿನಲ್ಲಿಯೇ ಉಳಿದುಕೊಂಡ ಆಸಿಸ್ ಸ್ಟಾರ್
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಮ್ಮ ಬೆಂಗಳೂರಿನಲ್ಲಿ ಮೊದಲ ಎಲೆಕ್ಟ್ರಿಕ್ ಕಾರು ಮಾರಾಟ ಮಳಿಗೆ ಆರಂಭಿಸಿದ ಬಿವೈಡಿ
ಬಿವೈಡಿ ಇಂಡಿಯಾ ಕಂಪನಿಯು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ತನ್ನ ಅಧಿಕೃತ ಮಾರಾಟ ಮಳಿಗೆಗಗಳ ಆರಂಭಕ್ಕೆ ಚಾಲನೆ ನೀಡುತ್ತಿದ್ದು, ನಮ್ಮ ಬೆಂಗಳೂರಿನಲ್ಲಿ ಇದೀಗ ಮೊದಲ ಮಾರಾಟ ಮಳಿಗೆಯನ್ನು ಆರಂಭಿಸಿದೆ.

ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಬಿವೈಡಿ ಕಂಪನಿಯು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಅಧಿಕೃತ ಮಾರಾಟ ಮಳಿಗೆಗಳನ್ನು ಆರಂಭಿಸುತ್ತಿದೆ. ಈ ಹಿಂದೆ ಪ್ರಮುಖ ಕಾರು ಮಾರಾಟ ಸಂಸ್ಥೆಗಳೊಂದಿಗೆ ವಿತರಣೆ ಸೌಲಭ್ಯಕ್ಕೆ ಮಾತ್ರ ಒಪ್ಪಂದ ಮಾಡಿಕೊಂಡಿದ್ದ ಕಂಪನಿಯು ಇದೀಗ ಅಧಿಕೃತ ಮಾರಾಟ ಮಳಿಗೆಯ ಜೊತೆ ಗ್ರಾಹಕರ ಸೇವಾ ಕೇಂದ್ರಗಳನ್ನು ತೆರೆಯುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಪಿಪಿಎಸ್ ಮೋಟಾರ್ಸ್ ಜೊತೆಗೂಡಿ ಹೊಸ ಮಾರಾಟ ಮಳಿಗೆಯನ್ನು ಆರಂಭಿಸಿದ್ದು, ಪಿಪಿಎಸ್ ಮೋಟಾರ್ಸ್ ಜೊತೆಗೆ ದಕ್ಷಿಣ ಭಾರತದಲ್ಲಿ ಆರಂಭಿಸುವ ಎರಡನೇ ಮಾರಾಟ ಮಳಿಗೆ ಇದಾಗಿದೆ.

ಕಳೆದ ತಿಂಗಳು ವಿಜಯವಾಡದಲ್ಲಿ ಪಿಪಿಎಸ್ ಮೋಟಾರ್ಸ್ ಜೊತೆಗೆ ಹೊಸ ಮಾರಾಟ ಮಳಿಗೆ ಆರಂಭಿಸಿದ್ದ ಬಿವೈಡಿ ಕಂಪನಿಯು ಇದೀಗ ನಮ್ಮ ಬೆಂಗಳೂರಿನ ಯಲಹಂಕದಲ್ಲಿ ಅತಿದೊಡ್ಡ ಇವಿ ಕಾರು ಮಾರಾಟ ಮಳಿಗೆಯನ್ನು ಆರಂಭಿಸಿದೆ.

ಹೊಸ ಕಾರು ಮಾರಾಟ ಮಳಿಗೆಗಳಲ್ಲಿ ಮಾರಾಟ, ಮಾರಾಟ ನಂತರದ ಗ್ರಾಹಕರ ಸೇವೆಗಳು ಮತ್ತು ಚಾರ್ಜಿಂಗ್ ಸೌಲಭ್ಯವನನ್ನು ಹೊಂದಿದ್ದು, ಶೀಘ್ರದಲ್ಲಿಯೇ ಹೊಸ ಇ6 ಕಾರು ದೇಶದ ಪ್ರಮುಖ ನಗರಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಕಳೆದ ವರ್ಷದ ಮಧ್ಯಂತರದಲ್ಲಿ ಇವಿ ಕಾರು ಮಾರಾಟ ಆರಂಭಿಸಿದ್ದ ಸಂದರ್ಭದಲ್ಲಿ ಫ್ಲೀಟ್ ಆಪರೇಟರ್‌ಗಳು, ಹೋಟೆಲ್ ಉದ್ಯಮ ಸಂಸ್ಥೆಗಳು ಮತ್ತು ಇತರೆ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾತ್ರ ಹೊಸ ಇ6 ಕಾರು ಮಾದರಿಯನ್ನು ವಿತರಿಸಿದ್ದ ಬಿವೈಡಿ ಕಂಪನಿಯು ಇದೀಗ ವೈಯಕ್ತಿಕ ಕಾರ ಬಳಕೆದಾರರಿಗೂ ಹೊಸ ಕಾರು ಖರೀದಿಗೆ ಅವಕಾಶ ನೀಡಿದೆ.

ಸದ್ಯ ಮಾರುಕಟ್ಟೆಯಲ್ಲಿ ಬಿವೈಡಿ ಕಂಪನಿಯು ಇ6 ಎಂಪಿವಿ ಮಾದರಿಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲಿಯೇ ಕಂಪನಿಯು ಮತ್ತೇರಡು ಹೊಸ ಇವಿ ಕಾರು ಮಾದರಿಯನ್ನು ಪರಿಚಯಿಸುವ ಯೋಜನೆಯಲ್ಲಿದೆ.

ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಮಾದರಿಯಾಗಿರುವ ಇ6 ಇವಿ ಕಾರು 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, 71.6kWh 'ಬ್ಲೇಡ್' ಲಿಥಿಯಂ ಫೆರೋ ಫಾಸ್ಫೇಟ್ (LiFePO4) ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಹೊಸ ಕಾರಿನಲ್ಲಿ ಬ್ಲೇಡ್ ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿ ಪ್ಯಾಕ್ AC ಮತ್ತು DC ಫಾಸ್ಟ್ ಚಾರ್ಜಿಂಗ್ ಮಾನದಂಡಗಳನ್ನು ಬೆಂಬಲಿಸಲಿದ್ದು, WLTP ಮಾನದಂಡಗಳ ಪ್ರಕಾರ ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 415 ಕಿ.ಮೀ ನಿಂದ ಗರಿಷ್ಠ 520 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಹೊಸ ಕಾರಿನ ಮೈಲೇಜ್ ಪ್ರಮಾಣವು ಕಾರಿನಲ್ಲಿರುವ ವಿವಿಧ ಡ್ರೈವಿಂಗ್ ಮೋಡ್ ಆಧರಿಸಿ ನಿರ್ಧಾರವಾಗಲಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಹೊಸ ಕಾರಿನಲ್ಲಿರುವ ಎಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದಾಗ ಪೂರ್ತಿಯಾಗಿ ಚಾರ್ಜ್ ಆಗಲು ಗರಿಷ್ಠ 6 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಲಿದ್ದರೆ ಡಿಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದರೆ ಕೇವಲ 35 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಲಿದೆ.

ಇ6 ಕಾರಿನಲ್ಲಿರುವ ಕೋಬಾಲ್ಟ್-ಮುಕ್ತ LiFePO4 ಬ್ಯಾಟರಿ ಪ್ಯಾಕ್ ಹೆಚ್ಚು ಸುರಕ್ಷಿತವಾಗಿದ್ದು, ಸ್ಫೋಟ ಮುಕ್ತವಾಗಿರುವ ಈ ಬ್ಯಾಟರಿ ಹೆಚ್ಚು ವಿಶ್ವಾರ್ಹತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಮೇಲೆ ಅಭಿವೃದ್ದಿಗೊಂಡಿದೆ.

ಅತ್ಯುತ್ತಮ-ಇನ್-ಕ್ಲಾಸ್ ವೈಶಿಷ್ಟ್ಯಗಳೊಂದಿಗೆ ಉತ್ತಮವಾದ ಚಾಲನಾ ಅನುಭವವನ್ನು ಒದಗಿಸುವ ಹೊಸ ಕಾರು 4,695 ಎಂಎಂ ಉದ್ದ, 1,810 ಎಂಎಂ ಅಗಲ ಮತ್ತು 1,670 ಎಂಎಂ ಎತ್ತರ ಹೊಂದಿದ್ದು, 570 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದುಕೊಂಡಿದೆ.

ಹಾಗೆಯೇ ಸ್ಪೋರ್ಟಿ ವಿನ್ಯಾಸದೊಂದಿಗೆ ಹೊಸ ಇ6 ಎಂಪಿವಿ ಕಾರಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಕ್ರೋಮ್ ಬಾರ್ ಒಳಗೊಂಡ ಬಿವೈಡಿ ಲೊಗೊ, ಆಕರ್ಷಕ ಸ್ಪಾಯ್ಲರ್, ಸ್ಲಿಕ್ ಎಲ್ಇಡಿ ಟೈಲ್‌ಲೈಟ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿದೆ.

ಹೊಸ ಕಾರಿನಲ್ಲಿ ಹೊರಭಾಗದಲ್ಲಿರುವಂತೆ ಒಳಭಾಗದಲ್ಲಿರುವ ಫೀಚರ್ಸ್‌ಗಳು ಕೂಡಾ ಆಕರ್ಷಕವಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್‌ನೊಂದಿಗೆ 10 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಲೆದರ್ ಸೀಟ್‌ಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಮತ್ತು ಫ್ರಂಟ್ ಪ್ಯಾಸೆಂಜರ್ ಸೀಟ್‌ಗಳು ಮತ್ತು ಏರ್ ಫಿಲ್ಟರ್ ಸಿಸ್ಟಂ ಹೊಂದಿದೆ.
ಬಿವೈಡಿ ಇವಿ ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 29.15 ಲಕ್ಷ ಬೆಲೆ ಹೊಂದಿದ್ದು,ಹೊಸ ಕಾರಿನ ಖರೀದಿ ಮೇಲೆ ಕಂಪನಿಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಜೊತೆ ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷಗಳ ಕಾಲ ವಾರಂಟಿ ನೀಡಿದೆ.