ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಗ್ರಾಂಡ್ ವಿಟಾರಾದೊಂದಿಗೆ ಸ್ಪರ್ಧಿಸಲಿರುವ ಎಸ್‌ಯುವಿಗಳಿವು!
ಇತ್ತೀಚೆಗೆ ಅನಾವರಣಗೊಂಡ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಕಂಪನಿಯ ಮೊದಲ ಮಧ್ಯಮ ಗಾತ್ರದ SUV ಆಗಿದ್ದು, ಕಂಪನಿಯು ಹ್ಯುಂಡೈ ಕ್ರೆಟಾ ಮೂಲಕ ದೊಡ್ಡ ಪ್ರಮಾಣದ ಮಾರಾಟವನ್ನು ಸ್ವಾಧೀನಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಎಸ್‌ಯುವಿ ವಿಭಾಗದಲ್ಲಿ ವಾಹನಗಳು ಸ್ಥಳಾವಕಾಶ, ಸೌಕರ್ಯ, ವೈಶಿಷ್ಟ್ಯಗಳು ಮತ್ತು ಬೆಲೆಗಳ ನಡುವೆ ಸಮತೋಲನವನ್ನು ಸಾಧಿಸುವ ಅಗತ್ಯವಿದೆ.

ಈ SUV ಗಳು ಪ್ರಸ್ತುತ ಮಾರುಕಟ್ಟೆಯ ಬೇಡಿಕೆಯಂತೆ ಮೊದಲು ಪ್ರಾಮುಖ್ಯತೆ ನೀಡಬೇಕಾದ ಅಂಶವೆಂದರೆ ಸ್ಥಳಾವಕಾಶ, ಏಕೆಂದರೆ ಈ ಎಸ್‌ಯುವಿಗಳು 4-ಮೀಟರ್ ಉದ್ದಕ್ಕೆ ಸೀಮಿತವಾಗಿರುವುದಿಲ್ಲ. ಹಾಗಾಗಿ ಕಾರು ತಯಾರಕರು ಹೆಚ್ಚು ಪ್ರಯಾಣಿಕರು ಪ್ರಯಾಣಿಸಲು ಅನುಕೂಲವಾಗುವಂತೆ ಸ್ಥಳಾವಕಾಶವನ್ನು ನೀಡಬೇಕಾಗುತ್ತದೆ. ಜೊತೆಗೆ ಸಾಮಾನು, ಸರಂಜಾಮುಗಳಿಗೂ ಹೆಚ್ಚಿನ ಸ್ಥಳಾವಕಾಶವನ್ನು ನೀಡಬೇಕಾಗುತ್ತದೆ.

ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ 5 ಪ್ರಯಾಣಿಕರನ್ನು ಆರಾಮದಾಯಕವಾಗಿ ಪ್ರಯಾಣಿಸುವಂತಿರಬೇಕು. ಈ ವಿಭಾಗವು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ನಿಸ್ಸಾನ್ ಕಿಕ್ಸ್, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್ ಮತ್ತು ಇತ್ತೀಚೆಗೆ ಅನಾವರಣಗೊಂಡ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾವನ್ನು ಒಳಗೊಂಡಿದೆ.

ಹೈರೈಡರ್ ಮತ್ತು ಗ್ರ್ಯಾಂಡ್ ವಿಟಾರಾ ಒಂದೇ ರೀತಿಯ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದರೂ ಪರಸ್ಪರ ಹೇಗೆ ಭಿನ್ನವಾಗಿವೆ ಎಂಬುದನ್ನು ನಾವು ನೋಡಿದ್ದೇವೆ. ಹಾಗೆಯೇ ಹ್ಯುಂಡೈ ಕ್ರೆಟಾ ವಿರುದ್ಧ ಗ್ರಾಂಡ್ ವಿಟಾರಾ ಮತ್ತು ಗ್ರಾಂಡ್ ವಿಟಾರಾ ವಿರುದ್ಧ ಸೆಲ್ಟೋಸ್ ನಡುವಿನ ಹೋಲಿಕೆಯನ್ನೂ ನಾವು ನೋಡಿದ್ದೇವೆ. ಈಗ ಈ ಎಲ್ಲಾ ಎಸ್‌ಯುವಿಗಳ ನಡುವಿನ ಉದ್ದ, ಅಗಲ, ಎತ್ತರ, ವೀಲ್‌ಬೇಸ್, ಗ್ರೌಂಡ್ ಕ್ಲಿಯರೆನ್ಸ್, ಬೂಟ್ ಸ್ಪೇಸ್ ನಡುವಿನ ವ್ಯತ್ಯಾಸಗಳನ್ನು ನೋಡೋಣ.

ಉದ್ದ
ಈ ವಿಭಾಗದಲ್ಲಿ ಅತಿ ಉದ್ದವಾದದ್ದು ನಿಸ್ಸಾನ್ ಕಿಕ್ಸ್, ಅಂದರೆ ಈ ಕಾರಿನಲ್ಲಿ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕಾಗಿ ನೀ ರೂಂ (ಮೊಣಕಾಲು) ಮತ್ತು ಲೆಗ್ ರೂಮ್‌ಗೆ ಹೆಚ್ಚು ಸ್ಥಳಾವಕಾಶ ನೀಡಲಾಗಿದೆ. ಈ ವಿಭಾಗದಲ್ಲಿ ಎರಡನೇ ಅತಿ ಉದ್ದವಾದ ಎಸ್‌ಯುವಿ ಎಂದರೆ ಟೊಯೊಟಾ ಹೈರೈಡರ್, ನಂತರದ ಸ್ಥಾನದಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಇದೆ.

ಅಗಲ
ಈ ವಿಭಾಗದಲ್ಲಿಯೂ ಮತ್ತೊಮ್ಮೆ ನಿಸ್ಸಾನ್ ಕಿಕ್ಸ್ ಇದ್ದು, ವಿಶಾಲವಾದ ಒಳಾಂಗಣವನ್ನು ಹೊಂದಿದೆ. ಪ್ರಯಾಣಿಕರಿಗೆ ಉತ್ತಮ ಸ್ಪೇಸ್ ಅನ್ನು ನೀಡುತ್ತದೆ. ಎರಡನೇ ಸ್ಥಾನದಲ್ಲಿ ಕಿಯಾ ಸೆಲ್ಟೋಸ್, ನಂತರ ಟೊಯೊಟಾ ಹೈರೈಡರ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ನಾಲ್ಕನೇ ಸ್ಥಾನದಲ್ಲಿದೆ.

ಎತ್ತರ
ಅತಿ ಎತ್ತರದ ವಾಹನ ಕೂಡ ನಿಸ್ಸಾನ್ ಕಿಕ್ಸ್ ಆಗಿದೆ, ಅಂದರೆ ಇದು ಅತ್ಯುತ್ತಮ ಹೆಡ್‌ರೂಮ್ ಅನ್ನು ನೀಡುತ್ತದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಎರಡನೇ ಸ್ಥಾನದಲ್ಲಿದ್ದು, ನಂತರ ಹ್ಯುಂಡೈ ಕ್ರೆಟಾ ಮತ್ತು ಟೊಯೊಟಾ ಹೈರೈಡರ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿವೆ.

ವೀಲ್‌ಬೇಸ್
ಅತಿ ಉದ್ದದ ವೀಲ್ ಬೇಸ್ ಹೊಂದಿರುವ ವಾಹನವೂ ನಿಸ್ಸಾನ್ ಕಿಕ್ಸ್ ಆಗಿದೆ. ಉದ್ದವಾದ ವೀಲ್‌ಬೇಸ್ ಸಾಮಾನ್ಯವಾಗಿ ಆರಾಮದಾಯಕ ಪ್ರಯಾಣಕ್ಕೆ ಅನುಕೂಲವಾಗಿರುತ್ತದೆ. ನಿಸ್ಸಾನ್ ಇದನ್ನು ಕೂಡ ಸ್ಕೂಪ್ ಮಾಡುತ್ತದೆ. ಸ್ಕೋಡಾ ಕುಶಾಕ್ ಮತ್ತು ವಿಡಬ್ಲ್ಯೂ ಟೈಗುನ್ ಎರಡೂ ಒಂದೇ ರೀತಿಯ ವೀಲ್‌ಬೇಸ್‌ನೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿವೆ. ಇನ್ನು ಟೊಯೊಟಾ ಹೈರೈಡರ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಡಿಮೆ ವೀಲ್‌ಬೇಸ್ ಅನ್ನು ಹೊಂದಿವೆ.

ಗ್ರೌಂಡ್ ಕ್ಲಿಯರೆನ್ಸ್
ಮತ್ತೊಮ್ಮೆ ನಿಸ್ಸಾನ್ ಕಿಕ್ಸ್ 210 ಮಿ.ಮೀ ಗ್ರೌಂಡ್ ಕ್ಲಿಯರನ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಸಹ 210 ಮಿ.ಮೀ ವೀಲ್‌ಬೇಸ್‌ನೊಂದಿಗೆ ಎರಡನೇ ಸ್ಥಾನದಲ್ಲಿವೆ. ಇಲ್ಲಿ ಗಮನಿಸಬೇಕಾದ ಒಂದು ಕುತೂಹಲಕಾರಿ ಅಂಶವೆಂದರೆ ಎಲ್ಲಾ ವಾಹನಗಳು ಗ್ರೌಂಡ್ ಕ್ಲಿಯರನ್ಸ್ ವಿಭಾಗದಲ್ಲಿ 180 mm ಗಿಂತ ಹೆಚ್ಚಿವೆ. ಇದು ಭಾರತೀಯ ರಸ್ತೆಗಳನ್ನು ನಿಭಾಯಿಸಲು ಹೆಚ್ಚು ಅನುಕೂಲಕರವಾಗಿವೆ.

ಬೂಟ್ ಸ್ಪೇಸ್
433 ಲೀಟರ್ ಬೂಟ್ ಸ್ಪೇಸ್ ಹೊಂದುವ ಮೂಲಕ ಅತಿ ದೊಡ್ಡ ವಾಹನಗಳಾಗಿ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಹೊರಹೊಮ್ಮಿವೆ. ನಿಸ್ಸಾನ್ ಕಿಕ್ಸ್ 400 ಲೀಟರ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಟೊಯೊಟಾ ಹೈರೈಡರ್ ಮತ್ತು ಮಾರುತಿ ಸುಜುಕಿ ವಿಟಾರಾ ತಮ್ಮ ಹೈಬ್ರಿಡ್ ವ್ಯವಸ್ಥೆಯಿಂದಾಗಿ ಕಡಿಮೆ ಬೂಟ್ ಜಾಗವನ್ನು ಹೊಂದಿದ್ದು, ಬ್ಯಾಟರಿಗಳು ಸ್ವಲ್ಪ ಲಗೇಜ್ ಜಾಗವನ್ನು ತೆಗೆದುಕೊಳ್ಳುತ್ತವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಎಸ್‌ಯುವಿಗಳು ಉದ್ದ, ಅಗಲ, ಎತ್ತರ, ವೀಲ್‌ಬೇಸ್, ಗ್ರೌಂಡ್ ಕ್ಲಿಯರೆನ್ಸ್, ಬೂಟ್ ಸ್ಪೇಸ್ ಅತಿ ಮುಖ್ಯವಾಗಿದ್ದು, ಗ್ರಾಹಕರು ಈ ಎಲ್ಲಾ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಇತ್ತೀಚೆಗೆ ಅನಾವರಣಗೊಂಡಿರುವ ಗ್ರಾಂಡ್ ವಿಟಾರಾ, ನಿಸ್ಸಾನ್ ಕಿಕ್ಸ್‌ಗಿಂತ ಉದ್ದಗಲದಲ್ಲಿ ತುಸು ಕಡಿಮೆಯಿದ್ದರೂ ಪರ್ಫಾಮೆನ್ಸ್ ಹಾಗೂ ಮೈಲೇಜ್ ವಿಷಯದಲ್ಲಿ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.


Click it and Unblock the Notifications