ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಪರಿಣಾಮವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡಲಾಗುತ್ತಿರುವುದು ಇವಿ ವಾಹನಗಳ ಬಳಕೆಗೆ ಸಾರ್ವಜನಿಕ ಆದ್ಯತೆ ನೀಡುತ್ತಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಇಂಧನ ಚಾಲಿತ ವಾಹನಗಳ ಬಳಕೆ ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಇವಿ ವಾಹನ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸುತ್ತಿವೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಇವಿ ವಾಹನಗಳಿಗೆ ಪೂರಕವಾಗಿ ಈಗಗಾಲೇ ನೂರಾರು ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಿರುವ ದೆಹಲಿ ಸರ್ಕಾರವು ಇದೀಗ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದು, ದೆಹಲಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯು ಇವಿ ವಾಹನ ಬಳಕೆಗೆ ಅನುಕೂಲವಾಗುವಂತೆ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಸ್ಥಳ ಲಭ್ಯತೆ ಆಧಾರಿಸಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಜೋಡಣೆ ಮಾಡಲಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಇದರ ಜೊತೆ ಇವಿ ವಾಹನಗಳಿಗೆ ಪೂರಕವಾಗಿ ಈಗಗಾಲೇ ನೂರಾರು ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಿರುವ ದೆಹಲಿ ಸರ್ಕಾರವು ಇದೀಗ ಗ್ರಾಹಕರ ಬೇಡಿಕೆಯೆಂತೆ ಖಾಸಗಿ ಬಳಕೆಯ ಇವಿ ಚಾರ್ಜಿಂಗ್ ನಿಲ್ದಾಣಗಳ ಜೋಡಣೆಗೆ ಚಾಲನೆ ನೀಡಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ದೆಹಲಿ ಸರ್ಕಾರವು ತನ್ನ ಸಿಂಗಲ್-ವಿಂಡೋ ಸೌಲಭ್ಯದ ಅಡಿಯಲ್ಲಿ ಖಾಸಗಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕವಾದ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುತ್ತಿದ್ದು, ಕಳೆದ ನವೆಂಬರ್‌ನಲ್ಲಿ ಪ್ರಾರಂಭವಾದ ಸಿಂಗಲ್-ವಿಂಡೋ ಸೌಲಭ್ಯದ ಮೂಲಕ ಖಾಸಗಿ ಮತ್ತು ಅರೆ-ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯೇಕವಾದ ಚಾರ್ಜಿಂಗ್ ಪಾಯಿಂಟ್‌ಗಳ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಖಾಸಗಿ ಚಾರ್ಜಿಂಗ್ ನಿಲ್ದಾಣವು ನಿಗದಿಪಡಿಸಿದ ಮಾಲೀಕರಿಗೆ ಮಾತ್ರ ಬಳಕೆ ಮಾಡಬಹುದಾಗಿದ್ದು, ಅರೆ ಸಾರ್ವಜನಿಕ ಸ್ಥಳಗಳಾದ ಅಪಾರ್ಟ್‌ಮೆಂಟ್‌ಗಳು, ಹೌಸಿಂಗ್ ಗ್ರೂಪ್ ಸೊಸೈಟಿಗಳು, ಆಸ್ಪತ್ರೆಗಳು, ಮಾಲ್‌ಗಳು ಮತ್ತು ಥಿಯೇಟರ್‌ಗಳಲ್ಲಿ ಒಂದು ನಿರ್ದಿಷ್ಟ ಮಟ್ಟದ ಗ್ರಾಹಕರು ಅಥವಾ ಜನರ ಗುಂಪಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ತ್ವರಿತವಾಗಿ ವಿಸ್ತರಿಸುವ ಯೋಜನೆ ಇದಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಸಿಂಗಲ್-ವಿಂಡೋ ಸೌಲಭ್ಯದ ಅಡಿಯಲ್ಲಿ ದೆಹಲಿ ವಿದ್ಯುತ್ ನಿಯಮ ಮಂಡಳಿಯು ವಾಹನ ಮಾಲೀಕರು ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ಸ್ಥಳ ಲಭ್ಯತೆ ಆಧಾರಿಸಿ ಫಾಸ್ಟ್ ಚಾರ್ಜಿಂಗ್ ನಿರ್ಮಿಸಿಕೊಡುತ್ತಿದ್ದು, ಖಾಸಗಿ ಮತ್ತು ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಇದಲ್ಲದೆ ರಾಷ್ಟ್ರ ರಾಜಧಾನಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೆಹಲಿ ಸರ್ಕಾರವು ಕಳೆದ ವರ್ಷ ಚಾರ್ಜಿಂಗ್ ನಿಲ್ದಾಣಗಳಿಗೆ ಸಬ್ಸಿಡಿ ಯೋಜನೆಯನ್ನು ಪ್ರಾರಂಭಿಸಿತ್ತು. ಇದರ ಅಡಿಯಲ್ಲಿ ದೆಹಲಿ ಸರ್ಕಾರವು ಯಾವುದೇ ಖಾಸಗಿ ಆಸ್ತಿ, ಮಾಲ್, ಆಸ್ಪತ್ರೆ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸಹಾಯಧನವನ್ನು ನೀಡುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಈ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ಕೊನೆಯ ಮೈಲಿ ತನಕವೂ ಚಾರ್ಜಿಂಗ್ ಸೌಲಭ್ಯ ದೊರೆಯುವಂತೆ ಯೋಜನೆ ರೂಪಿಸಲಾಗುತ್ತಿದ್ದು, ಪ್ರಮುಖ ಪೆಟ್ರೋಲಿಯಂ ಕಂಪನಿಗಳು ಕೂಡಾ ಇವಿ ನಿಲ್ದಾಣಗಳನ್ನು ಹೆಚ್ಚಿಸಲು ಪೆಟ್ರೋಲ್ ಬಂಕ್‌ಗಳಲ್ಲಿಯೇ ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಾಣಕ್ಕೆ ಚಾಲನೆ ನೀಡಿವೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಸರ್ಕಾರಿ ಸ್ವಾಮ್ಯದ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (ಸಿಇಎಸ್ಎಲ್) ಸಂಸ್ಥೆಯು ದೇಶಾದ್ಯಂತ ಸಾವಿರಾರು ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸುತ್ತಿದ್ದು, ಹೊಸ ಯೋಜನೆಯಡಿ ಭಾರತ್ ಪೆಟ್ರೋಲಿಯಂ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಹಂತ-ಹಂತವಾಗಿ 7 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಯೋಜನೆ ಸಿದ್ದಪಡಿಸಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಭಾರತ್ ಪೆಟ್ರೋಲಿಯಂ ಕಂಪನಿಯ ಹೊಸ ಪ್ರಕಟನೆಯಲ್ಲಿ ಮುಂದಿನ ಅಕ್ಟೋಬರ್ ವೇಳೆಗೆ ದೇಶದ ಪ್ರಮುಖ ಕಡೆಗಳಲ್ಲಿ ಒಂದು ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ಹೊಂದಿರುವುದಾಗಿ ಭರವಸೆ ನೀಡಿದ್ದು, ಇಂಧನ ಚಾಲಿತ ಬದಲಾಗಿ ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸಲು ಎಲ್ಲಾ ಮೂಲಭೂತ ಸೌಕರ್ಯ ಒದಗಿಸುವುವಲ್ಲಿ ಕಂಪನಿಯು ಬದ್ದವಾಗಿದೆ ಎಂದಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ನಿರ್ಧಾರ ಪ್ರಕಟಿಸಿದ ದೆಹಲಿ ಸರ್ಕಾರ

ಅತಿ ಕಡಿಮೆ ಅವಧಿಯ ಹೆಚ್ಚಿನ ಪ್ರಮಾಣದ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ಪರಿಚಯಿಸಲಾಗುತ್ತಿದ್ದು, ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲು ಸಹಕಾರಿಯಾಗುವಂತೆ ಹೊಸ ಯೋಜನೆ ರೂಪಿಸಲಾಗಿದೆ.

Most Read Articles

Kannada
English summary
Delhi government to install ev charging stations at all govt official premises
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X