ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಚಾರ್ಜಿಂಗ್ ಸೌಲಭ್ಯವನ್ನು ಸಹ ಹೆಚ್ಚಿಸಲಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇವಿ ವಾಹನಗಳಿಗೆ ಭಾರೀ ಪ್ರಮಾಣದ ಚಾರ್ಜಿಂಗ್ ನಿಲ್ದಾಣಗಳಿಗೆ ಚಾಲನೆ ನೀಡಲಾಗದೆ.

Recommended Video

Kia EV6 ಎಸ್‌ಯುವಿ ಭಾರತದಲ್ಲಿ ಬಿಡುಗಡೆ | Price Rs 59.95 Lakh | Warranty, Deliveries, Variants #Launch

ದೇಶಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದ್ದು, ದೆಹಲಿಯಲ್ಲಿ ಮುಂದಿನ ಎರಡು ವರ್ಷದೊಳಗಾಗಿ ಹೆಚ್ಚಿನ ಪ್ರಮಾಣದ ಚಾರ್ಜಿಂಗ್ ನಿಲ್ದಾಣಗಳನ್ನು ತೆಯಲಾಗುತ್ತಿದೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಭಾರತವು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಲಿದ್ದು, ಕಳೆದ ಕೆಲ ವರ್ಷಗಳಲ್ಲಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಇವಿ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಭಾರೀ ಪ್ರಮಾಣದ ಉತ್ಪಾದನೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಹೆಚ್ಚುತ್ತಿರುವ ಇಂಧನ ದರಗಳು ಮತ್ತು ಮಾಲಿನ್ಯದ ಕಾರಣದಿಂದ ಹೊಸ ವಾಹನಗಳ ಖರೀದಿದಾರರು ಪರಿಸರ ಸ್ನೇಹಿಯಾಗಿರುವ ಮತ್ತು ಕಡಿಮೆ ವೆಚ್ಚದಾಯಕವಾಗಿರುವ ಇವಿ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳು ಹೆಚ್ಚುತ್ತಿರುವಂತೆ ಇವಿ ವಾಹನ ನೋಂದಣಿ ಸಂಖ್ಯೆ ಕೂಡಾ ಸಾಕಷ್ಟು ಸುಧಾರಣೆ ಕಾಣುತ್ತಿದೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಧನ ಆಧರಿತ ವಾಹನಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಇವಿ ವಾಹನಗಳ ಮಾರಾಟವು ಸಾಕಷ್ಟು ಕಡಿಮೆ ಪ್ರಮಾಣದಲ್ಲಿದ್ದರೂ ಇದರ ಪ್ರಮಾಣ ಮುಂಬರುವ ದಿನಗಳಲ್ಲಿ ವೇಗವಾಗಿ ಬದಲಾಗುವ ನೀರಿಕ್ಷೆಗಳಿದ್ದು, ಇದಕ್ಕಾಗಿ ಗ್ರಾಹಕರಲ್ಲಿ ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಚಾರ್ಜಿಂಗ್ ನಿಲ್ದಾಣಗಳ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತಿದೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಕೇಂದ್ರ ಸರ್ಕಾರದ ಹೊಸ ಯೋಜನೆಗಳ ಪರಿಣಾಮ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆಯನ್ನು ಆರಂಭಿಸುತ್ತಿವೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚಿನ ಮಟ್ಟದ ಪ್ರೊತ್ಸಾಹ ಯೋಜನೆಗಳ ಜೊತೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಮಹತ್ವದ ಯೋಜನೆ ರೂಪಿಸಿದೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ದೆಹಲಿಯಲ್ಲಿ ನಡೆದ ಇವಿ ಫೋರಂನಲ್ಲಿ ಮಾತನಾಡಿದ ಅವರು ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಮಾತನಾಡಿ ದೆಹಲಿಯಲ್ಲಿ ಈಗಾಗಲೇ 2 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಮುಂಬರುವ ಎರಡು ವರ್ಷಗಳಲ್ಲಿ ಪ್ರತಿ 3 ಕಿ.ಮೀ ವ್ಯಾಪ್ತಿಯೊಳಗೆ ಒಂದಂತೆ ನಗರಾದ್ಯಂತ ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಿಸುವ ಭರವಸೆ ನೀಡಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಇದರ ಜೊತೆಗೆ ಇವಿ ವಾಹನಗಳ ಅಳವಡಿಕೆ ಹಿಂದೇಂಟು ಹಾಕುತ್ತಿರುವ ಗ್ರಾಹಕರ ಅಭಿಪ್ರಾಯಗಳ ಬಗೆಗೆ ಮಾತನಾಡಿದ ಸಚಿವರು ಹೆಚ್ಚಿನ ರೇಂಜ್ ಇಲ್ಲದ ಇವಿ ವಾಹನಗಳಿಂದಾಗಿ ವೇಗವಾದ ಇವಿ ವಾಹನ ಅಳವಡಿಕೆಗೆ ಹಿನ್ನಡೆಯಾಗುತ್ತಿದೆ ಎಂದಿದ್ದು, ಜೊತೆಗೆ ಹೆದ್ದಾರಿಗಳಲ್ಲಿ ಸೂಕ್ತ ಚಾರ್ಜಿಂಗ್ ನಿಲ್ದಾಣಗಳ ಕೊರತೆ ಕೂಡಾ ಇವಿ ಅಳವಡಿಕೆ ಪ್ರಮಾಣವು ನಿಧಾನವಾಗಿದೆ ಎಂದರು.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಕೇವಲ ನಗರಗಳಲ್ಲಿ ಮಾತ್ರವಲ್ಲ ಹೆದ್ದಾರಿ ಪ್ರಯಾಣಗಳಿಗೂ ಇವಿ ಬಳಕೆಗೆ ಸಹಕಾರಿಯಾಗುವಂತೆ ಮುಂಬರುವ ಕೆಲವೇ ದಿನಗಳಲ್ಲಿ ವಿವಿಧ ಖಾಸಗಿ ಕಂಪನಿಗಳ ಜೊತೆಗೂಡಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಾಗುತ್ತಿದ್ದು, 2025ರ ವೇಳೆಗೆ ಶೇ. 25 ರಷ್ಟು ಇವಿ ವಾಹನಗಳ ನೋಂದಣಿ ಗುರಿಯೊಂದಿಗೆ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲಾಗುತ್ತಿದೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಮಾರಾಟ ದರವು ಹಾಗೆಯೇ ಮುಂದುವರಿದರೆ 2030ರಲ್ಲಿ ಶೇ.100 ರಷ್ಟು ದ್ವಿಚಕ್ರ ವಾಹನಗಳಲ್ಲಿ ಶೇ.78 ರಷ್ಟು ಇವಿ ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಸಂಚರಿಸಲಿವೆ ಎನ್ನಲಾಗಿದ್ದು, ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರಗಳು ಹೆಚ್ಚಿನ ಮಟ್ಟದ ಪ್ರೊತ್ಸಾಹ ಯೋಜನೆಗಳ ಜೊತೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕಿದೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರಗಳು ಹೆಚ್ಚಿನ ಮಟ್ಟದ ಪ್ರೊತ್ಸಾಹ ಯೋಜನೆಗಳ ಜೊತೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳು ಮತ್ತು ಹೆಚ್ಚಿನ ಶ್ರೇಣಿ ಹೊಂದಿರುವ ಇವಿ ಮಾದರಿಗಳು ಮಾರುಕಟ್ಟೆ ಪ್ರವೇಶಿಸುವುದು ಕೂಡಾ ಅವಶ್ಯವಿದೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ವರದಿಗಳ ಪ್ರಕಾರ, ಎಲೆಕ್ಟ್ರಿಕ್ ವಾಹನ ಅಳವಡಿಕೆ ದರವನ್ನು ಆಧರಿಸಿ 2030ರ ವೇಳೆಗೆ ದೇಶಾದ್ಯಂತ ಕನಿಷ್ಠ 46 ಸಾವಿರ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ಇವಿ ಚಾರ್ಜಿಂಗ್ ನಿಲ್ದಾಣಗಳ ಅವಶ್ಯಕತೆಯಿದೆ ಎನ್ನಲಾಗಿದೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತ ಚಾರ್ಜಿಂಗ್ ಮೂಲಸೌಕರ್ಯವನ್ನು ನಿರ್ಮಿಸದಿದ್ದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಯ ವೇಗವು ನೀರಿಕ್ಷೆಗಿಂತಲೂ ಸಾಕಷ್ಟು ನಿಧಾನವಾಗಬಹುದೆಂಬ ಸಲಹೆ ನೀಡಿದ್ದು, ಇವಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇವಿ ವಾಹನಗಳ ಆದ್ಯತೆ ಹೆಚ್ಚಿಸಲಿದೆ ಎಂದಿದೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ 3 ಕಿ.ಮೀ ಗೆ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಜೊತೆಗೆ ದೇಶಾದ್ಯಂತ ಇವಿ ವಾಹನಗಳ ಬಳಕೆಯು ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಸುಧಾರಿಸಿದ್ದು, ಇವಿ ದ್ವಿಚಕ್ರ ವಾಹನಗಳ ಅಳವಡಿಕೆಯು 2030ರ ಅಂತ್ಯಕ್ಕೆ ಶೇ. 78 ತಲುಪುವುದಾಗಿ ಅಧ್ಯಯನವೊಂದು ಮಹತ್ವ ಮಾಹಿತಿಯನ್ನು ಬಹಿರಂಗಪಡಿಸಿದೆ.

Most Read Articles

Kannada
English summary
Electric vehicle charging station in every 3 km by 2024 in dehli
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X