ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ

ದೇಶಿಯ ಮಾರುಕಟ್ಟೆ ಇವಿ ವಾಹನಗಳ ಅಳವಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಹಲವಾರು ಹೊಸ ಇವಿ ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ವಿವಿಧ ಇವಿ ವಾಹನ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ

ಯುನೈಟೆಡ್ ಸ್ಟೇಟ್ಸ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ಎಲೆಕ್ಟ್ರಾನ್ ಇವಿ(ElectronEV) ಕಂಪನಿಯು ಕೂಡಾ ತನ್ನ ಹೊಸ ಉತ್ಪನ್ನಗಳೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸುವುದಾಗಿ ಘೋಷಣೆ ಮಾಡಿದ್ದು, ಭಾರತದಲ್ಲಿ ಸಹಭಾಗಿತ್ವ ಸಂಸ್ಥೆಯೊಂದರ ಜೊತೆಗೂಡಿ ತನ್ನ ಇವಿ ವಾಣಿಜ್ಯ ವಾಹನಗಳ ಸರಣಿ ಪರಿಚಯಿಸಲಿದೆ.

ಭಾರತದಲ್ಲಿನ ಇತರ ಕಂಪನಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ವಿವಿಧ ವಾಣಿಜ್ಯ ವಾಹನವನ್ನು ಮಾರಾಟ ಮಾಡುವುದರ ಜೊತೆಗೆ ವೈಯಕ್ತಿಕ ಖರೀದಿದಾರರಿಗೆ ನೇರವಾಗಿ ವಾಹನ ಮಾರಾಟ ಮಾಡುವ ಯೋಜನೆ ಹೊಂದಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ

ಭಾರತವು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದ್ದು, ಇದರಿಂದ ನಮ್ಮ ಉತ್ಪನ್ನಗಳು ಭಾರತದಲ್ಲಿ ಬಿ ಟು ಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ಮತ್ತು ಬ್ಯುಸಿನೆಸ್ ಟು ಕಸ್ಟಮರ್ ವಿಭಾಗಗಳ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಹೊಸ ವಾಣಿಜ್ಯ ವಾಹನಗಳನ್ನು ನಿರ್ಮಾಣ ಮಾಡಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ

ಎಲೆಕ್ಟ್ರಿಕ್ ವಾಹನಗಳ ಮೂಲಕ ತನ್ನದೆ ಹಕ್ಕು ಸ್ವಾಮ್ಯದ ಇವಿ ತಂತ್ರಜ್ಞಾನವನ್ನು ಪರಿಚಯಿಸಲು ಯೋಜಿಸುತ್ತಿರುವ ಎಲೆಕ್ಟ್ರಾನ್ ಇವಿ ಕಂಪನಿಯು ಭಾರತ, ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ ಮತ್ತು ಯುರೋಪ್‌ನಂತಹ ಮಾರುಕಟ್ಟೆಗಳಿಗೆ ಎಂಡ್ ಟು ಎಂಡ್ ಮೊಬಿಲಿಟಿ ಪರಿಹಾರಗಳನ್ನು ನೀಡುತ್ತದೆ.

ಇವಿ ವಾಹನಗಳ ಉತ್ಪನ್ನಗಳ ಪೋರ್ಟ್‌ಫೋಲಿಯೊದಲ್ಲಿ ಕಂಪನಿಯು ಹಗುರವಾದ, ಮಧ್ಯಮ ಮತ್ತು ಭಾರೀ ತೂಕದ ವಾಣಿಜ್ಯ ವಾಹನಗಳನ್ನು ಪರಿಚಯಿಸುತ್ತಿದ್ದು, ಇದರಲ್ಲಿ ಡೆಲಿವರಿ ವ್ಯಾನ್‌ಗಳು, ಭಾರೀ ಗಾತ್ರದ ಟ್ರಕ್‌ಗಳು ಮತ್ತು ಇವಿ ಬಸ್‌ಗಳನ್ನು ಸಹ ಒಳಗೊಂಡಿರಲಿವೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ

ಜೊತೆಗೆ ಬ್ಯಾಟರಿ ತಂತ್ರಜ್ಞಾನ, ಚಾರ್ಜಿಂಗ್ ಮೂಲಸೌಕರ್ಯಗಳ ಲಭ್ಯತೆ ಮತ್ತು ಇಂಟೆಲಿಜೆಂಟ್ ವೆಹಿಕಲ್ ಚಾಸಿಸ್‌ನಂತಹ ಸವಾಲಿನ ಕ್ಷೇತ್ರಗಳನ್ನು ಗುರಿಯಾಗಿಸಲು ಯೋಜಿಸಿದ್ದು, ಗ್ರಾಹಕರ ಬೇಡಿಕೆಯನ್ನು ಅಧ್ಯಯನಗೊಳಿಸಿ ಹೊಸ ಯೋಜನೆಗಳ ಜಾರಿಗೆ ಸಿದ್ದವಾಗುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ

ಜೊತೆಗೆ ಭಾರತದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಉತ್ಪಾದನಾ ಘಟಕವನ್ನು ಸಹ ಸ್ಥಾಪಿಸುತ್ತಿದ್ದು, ಶೀಘ್ರದಲ್ಲಿಯೇ ಹೊಸ ವಾನಹಗಳ ತಂತ್ರಜ್ಞಾನ ಮತ್ತು ಹೂಡಿಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ

ಎಲೆಕ್ಟ್ರಾನ್ ಇವಿ ಕಂಪನಿಯು ಸದ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಚಾರ್ಜಿಂಗ್ ಸೌಲಭ್ಯ ಪೂರೈಕೆದಾರ ಕಂಪನಿಗಳಲ್ಲಿ ಮುಂಚೂಣಿಯಲ್ಲಿದ್ದು, ಇದು ವೈರ್‌ಲೆಸ್ ಚಾರ್ಜಿಂಗ್ ಪರಿಹಾರಗಳು ಮತ್ತು ಎಂಡ್-ಟು-ಎಂಡ್ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಮೂಲಸೌಕರ್ಯಗಳ ಪ್ರಮುಖ ಪೂರೈಕೆದಾರ ಕಂಪನಿಯಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ

ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಫ್ಲೀಟ್ ಆಪರೇಟರ್‌ಗಳಿಗೆ ಕಂಪನಿಯು ವೆಚ್ಚ ಪರಿಣಾಮಕಾರಿ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿ ಹೊಂದಿದ್ದು, ಫ್ಲೀಟ್ ಆಪರೇಟರ್‌ಗಳಿಗೆ ಕಾರ್ಯಾಚರಣೆಯ ಸಮಯವನ್ನು ಹೆಚ್ಚಿಸುವ ಮೂಲಕ ಇವಿ ವಾಹನ ಮಾಲೀಕತ್ವದ ಒಟ್ಟು ವೆಚ್ಚವನ್ನು ಕಡಿಮೆ ಮಾಡುವಲ್ಲಿ ಮುನ್ನಡೆ ಸಾಧಿಸುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ

ಚಾರ್ಜಿಂಗ್ ಪರಿಹಾರಗಳೊಂದಿಗೆ ಮೂಲಸೌಕರ್ಯ ಸ್ಥಾಪನೆಯಲ್ಲೂ ಹೂಡಿಕೆ ಮಾಡುತ್ತಿರುವ ಎಲೆಕ್ಟ್ರಾನ್ ಇವಿ ಕಂಪನಿಯು ಚಾರ್ಜಿಂಗ್ ಸೇವೆಗಳಿಗಾಗಿ ಹೂಡಿಕೆಯ ಹೊರೆ ಕಡಿಮೆ ಮಾಡಲು ಮಾಸಿಕ ಚಂದಾದಾರಿಕೆ ಶುಲ್ಕವನ್ನು ವಿಧಿಸುತ್ತದೆ. ಈ ಮೂಲಕ ನಗರಗಳಲ್ಲಿನ ಹಸಿರು ಚಲನಶೀಲತೆಯನ್ನು ಉತ್ತೇಜಿಸಲು ಸಹಕಾರಿಯಾಗುತ್ತಿರುವ ಎಲೆಕ್ಟ್ರಾನ್ ಇವಿ ಕಂಪನಿಯು ಇದೀಗ ಭಾರತದಲ್ಲೂ ಇವಿ ವಾಣಿಜ್ಯ ವಾಹನಗಳ ಜೊತೆ ಇವಿ ವಾಹನ ಕಾರ್ಯಾಚರಣೆ ಪರಿಹಾರಗಳನ್ನು ಸಹ ಪರಿಹರಿಸುವ ಯೋಜನೆಗಳನ್ನು ರೂಪಿಸುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ

ಇದರೊಂದಿಗೆ ಕಂಪನಿಯು ಯುರೋಪ್ ಮತ್ತು ಇಸ್ರೇಲ್‌ನ ಪ್ರಮುಖ ನಗರಗಳಲ್ಲಿನ ವಿದ್ಯುತ್ ರಸ್ತೆ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲೆಕ್ಟ್ರಿಕ್ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪ್ರತ್ಯೇಕ ಟ್ರ್ಯಾಕ್‌ಗಳನ್ನು ನಿರ್ಮಾಣ ಮಾಡುವ ಯೋಜನೆಯಲ್ಲಿ ತೊಡಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ

ಎಲೆಕ್ಟ್ರಿಕ್ ಟ್ರ್ಯಾಕ್‌ನಲ್ಲಿ ಚಲಿಸುವ ಇ-ವಾಹನಗಳಿಗೆ ಎಲೆಕ್ಟ್ರಿಕ್ ಬಳಕೆಗೆ ಬ್ಯಾಟರಿಗಳ ಅಗತ್ಯವಿರುವುದಿಲ್ಲ. ಈ ವಾಹನಗಳು ಎಲೆಕ್ಟ್ರಿಕ್ ಟ್ರ್ಯಾಕ್‌ನಿಂದ ವೈರ್‌ಲೆಸ್ ತಂತ್ರಜ್ಞಾನದ ಮೂಲಕ ಶಕ್ತಿಯನ್ನು ಪಡೆದುಕೊಂಡು ಚಾಲನೆಗೊಳ್ಳಲಿವೆ. ಇಂತಹ ಪ್ರಮುಖ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲೆಕ್ಟ್ರಾನ್ ಇವಿ ಕಂಪನಿಯು ಭಾರತದಲ್ಲಿ ತನ್ನ ಹೊಸ ಇವಿ ಉತ್ಪನ್ನಗಳ ಮೂಲಕ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

More from DriveSpark

Article Published On: Wednesday, August 17, 2022, 8:45 [IST]
English summary
Electronev to enter indian market for commercial ev segment details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+