ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಇವೆರೆ(EVRE) ಕಂಪನಿಯು ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಪ್ರಮುಖ ಇವಿ ಕಂಪನಿಗಳೊಂದಿಗೆ ಪಾಲುದಾರಿಕೆ ಪ್ರಕಟಿಸುತ್ತಿದ್ದು, ಹೊಸ ಪಾಲುದಾರಿಕೆ ಯೋಜನೆ ಅಡಿ ಮುಂಬರುವ ಐದು ವರ್ಷಗಳಲ್ಲಿ 10 ಸಾವಿರಕ್ಕೂ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯುವ ಯೋಜನೆ ಹೊಂದಿದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಇವಿ ವಾಹನಗಳಿಗೆ ಪೂರಕವಾಗಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಇವಿ ಚಾರ್ಜಿಂಗ್ ಸೌಲಭ್ಯವನ್ನು ಹೆಚ್ಚಿಸುವತ್ತ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ನಮ್ಮ ಬೆಂಗಳೂರು ಮೂಲದ ಇವೆರೆ ಕಂಪನಿಯು ಕೂಡಾ ದೇಶಾದ್ಯಂತ ಪ್ರಮುಖ ನೂರು ನಗರಗಳಲ್ಲಿ ವಿವಿಧ ಕಂಪನಿಗಳ ಸಹಯೋಗದೊಂದಿಗೆ ಬೃಹತ್ ಇವಿ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ಹೆಚ್ಚಿಸುತ್ತಿದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಭಾರತದಲ್ಲಿ ಹೆಚ್ಚುತ್ತಿರುವ ಇವಿ ವಾಹನಗಳಿಗೆ ಪೂರಕವಾಗಿ ವಿವಿಧ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಇವಿ ವಾಹನಗಳ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಪ್ರಕ್ರಿಯೆಯನ್ನು ಹೆಚ್ಚಿಸಿದ್ದು, ಚಾರ್ಜಿಂಗ್ ಕೇಂದ್ರಗಳ ಹೆಚ್ಚಳಕ್ಕೆ ಪ್ರಮುಖ ಕಂಪನಿಗಳು ವಿಶೇಷ ಆಸಕ್ತಿ ವಹಿಸಿರುವ ಹೊಸ ಬೆಳವಣಿಗೆಗೆ ಕಾರಣವಾಗಿದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಇವೆರೆ ಕಂಪನಿಯು ಈಗಾಗಲೇ ಇವಿ ವಾಹನಗಳಿಗಾಗಿ ಸಣ್ಣ ಪ್ರಮಾಣದ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯವನ್ನು ಒದಗಿಸುತ್ತಿದ್ದು, ಕಂಪನಿಯು ಇದೀಗ ಸಾಮಾನ್ಯ ಇವಿ ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ನಿರ್ಮಾಣ ಮಾಡುತ್ತಿದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಇತ್ತೀಚೆಗೆ ಕಂಪನಿಯು ದೆಹಲಿ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಸಿಗ್ನೇಚರ್ ಗ್ಲೋಬಲ್ ಜೊತೆಗೆ ಹೊಸ ಪಾಲುದಾರಿಕೆ ಪ್ರಕಟಿಸಿದ್ದು, ಹೊಸ ಪಾಲುದಾರಿಕೆ ಯೋಜನೆ ಅಡಿ ದೆಹಲಿ ಎನ್‌ಸಿಆರ್‌ನಲ್ಲಿರುವ ಸಿಗ್ನೇಚರ್ ಗ್ಲೋಬಲ್ ಒಡೆತನದ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಇವೆರೆ ಕಂಪನಿಯು ತನ್ನ ತಂತ್ರಜ್ಞಾನ ಪ್ರೇರಿತ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಿದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಇವೆರೆ ಕಂಪನಿಯು ಅಗತ್ಯತೆ ಮತ್ತು ಸ್ಥಳ ಲಭ್ಯತೆ ಆಧಾರದ ಮೇಲೆ ರಿಯಲ್ ಎಸ್ಟೇಟ್ ಡೆವಲಪರ್‌ ಕಂಪನಿಯ ಕಟ್ಟಡಗಳಲ್ಲಿ ಎಸಿ ಮತ್ತು ಡಿಸಿ ಫಾಸ್ಟ್ ಚಾರ್ಜರ್‌ಗಳನ್ನು ಒದಗಿಸಲಿದ್ದು, ಪ್ರಾಥಮಿಕವಾಗಿ ಗುರುಗ್ರಾಮ್‌ನಲ್ಲಿರುವ ಎಂಟು ಸಿಗ್ನೇಚರ್ ಗ್ಲೋಬಲ್ ರೆಸಿಡೆನ್ಶಿಯಲ್ ಪ್ರಾಪರ್ಟಿಗಳಲ್ಲಿ ಚಾರ್ಜರ್‌ಗಳನ್ನು ಸ್ಥಾಪಿಸಲಿದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಹಾಗೆಯೇ ವೈಶಾಲಿ ಹಾಗೂ ಗಾಜಿಯಾಬಾದ್‌ನಲ್ಲಿರುವ ಸಿಗ್ನೇಚರ್ ಗ್ಲೋಬಲ್ ಮಾಲ್‌ಗಳಲ್ಲೂ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪಿಸುವುದರ ಜೊತೆಗೆ ಇವೆರೆ ಕಂಪನಿಯೇ ಚಾರ್ಜರ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಸಹ ಕೈಗೊಳ್ಳುತ್ತದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಸುರಕ್ಷತೆಯ ದೃಷ್ಟಿಯಿಂದ ಇವೆರೆ ಚಾರ್ಜಿಂಗ್ ನಿಲ್ದಾಣದ ರಿಯಲ್ ಟೈಮ್ ಮೇಲ್ವಿಚಾರಣೆ ಮತ್ತು ಡೈನಾಮಿಕ್ ಲೋಡ್ ನಿರ್ವಹಣೆಯಂತಹ ತಂತ್ರಜ್ಞಾನವನ್ನು ಹೊಂದಿದ್ದು, ಎಲೆಕ್ಟ್ರಿಕ್ ವಾಹನ ಮಾಲೀಕರು ತಮ್ಮ ಕಾರುಗಳನ್ನು ಚಾರ್ಜ್ ಮಾಡಲು ಮತ್ತು ಅವರ ಚಲನೆಯನ್ನು ಟ್ರ್ಯಾಕ್ ಮಾಡಲು ಇವೆರೆ ಅಪ್ಲಿಕೇಶನ್ ಸಹಕಾರಿಯಾಗಿದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಎರಡು ಕಂಪನಿಗಳ ನಡುವಿನ ಪಾಲುದಾರಿಕೆಯ ಅಡಿಯಲ್ಲಿ ಮುಂದಿನ ಹತ್ತು ವರ್ಷಗಳವರೆಗೆ ರಿಯಲ್ ಎಸ್ಟೇಟ್ ಡೆವಲಪರ್‌ಗಾಗಿ ಇವರೆ ಕಂಪನಿಯು ವಿಶೇಷ ಇವಿ ಚಾರ್ಜಿಂಗ್ ಸೇವೆಯನ್ನು ಪೂರೈಸಲಿದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ದೇಶಾದ್ಯಂತ ಈಗಾಗಲೇ ಪ್ರಮುಖ ನಗರಗಳಲ್ಲಿ ಇವೆರೆ ಕಂಪನಿಯು ಸುಮಾರು 100ಕ್ಕೂ ಹೆಚ್ಚು ಚಾರ್ಜಿಂಗ್ ನಿಲ್ದಾಣಗಳೊಂದಿಗೆ ಗ್ರಾಹಕರ ಸೇವೆಗಳನ್ನು ಒದಗಿಸುತ್ತಿದ್ದು, ಕಾರ್ಯನಿರ್ವಹಣೆಯಲ್ಲಿರುವ ಎಲ್ಲಾ ಚಾರ್ಜಿಂಗ್ ನಿಲ್ದಾಣಗಳಲ್ಲೂ ಇದೀಗ ಎಸಿ ಚಾರ್ಜರ್ (3.3 kW ಇಂಡಸ್ಟ್ರಿಯಲ್/ಡೊಮೆಸ್ಟಿಕ್ 3-ಪಿನ್ ಸಾಕೆಟ್ ಮತ್ತು 7 kW ಟೈಪ್-II) ಮತ್ತು ಇವಿ ಫ್ಲೀಟ್ ಮತ್ತು ಚಿಲ್ಲರೆ ಗ್ರಾಹಕರನ್ನು ಒಳಗೊಂಡಂತೆ ಅದರ ಎಲ್ಲಾ ಗ್ರಾಹಕರಿಗೆ ವೇಗದ ಡಿಸಿ ಚಾರ್ಜರ್ (GB/T ಮತ್ತು CCS) ನೊಂದಿಗೆ ಚಾರ್ಜಿಂಗ್ ಹಬ್ ಆಗಿ ಪರಿವರ್ತಿಸಿದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಚಾರ್ಜಿಂಗ್ ಹಬ್‌ಗಳಲ್ಲಿ ಏಕಕಾಲಕ್ಕೆ 80 ವಾಹನಗಳನ್ನು ಚಾರ್ಜ್ ಮಾಡಬಹುದಾಗಿದ್ದು, ಚಾರ್ಜಿಂಗ್ ಹಬ್‌ಗಳಲ್ಲಿ ವಿವಿಧ ವಾಹನ ಮಾದರಿಗಳಿಗೆ ಅನುಗುಣವಾಗಿ ಸಾಮಾನ್ಯ ಇಲ್ಲವೇ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಇವೆರೆ ಹೊಸ ಚಾರ್ಜಿಂಗ್ ಹಬ್‌ಗಳಲ್ಲಿ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ OTP ಅಥವಾ QR ಕೋಡ್ ಸ್ಕ್ಯಾನಿಂಗ್ ಮೂಲಕ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಟಚ್-ಫ್ರೀ ಸೇವೆಗಳನ್ನು ಒದಗಿಸುವ ವಿಶ್ವದ ಏಕೈಕ ಇವಿ ಚಾರ್ಜಿಂಗ್ ಕಂಪನಿಯಾಗಿದ್ದು, ಪ್ರಮುಖ ಇವಿ ವಾಹನ ಫ್ಲಿಟ್ ಆಪರೇಟ್ ಸಂಸ್ಥೆಗಳು ತಮ್ಮ ಇವಿ ವಾಹನಗಳಿಗೆ ಪ್ರತ್ಯೇಕ ಚಾರ್ಜಿಂಗ್ ಸೌಲಭ್ಯಕ್ಕೂ ಇವೆರೆ ಜೊತೆ ಪಾಲುದಾರಿಕೆ ಪಡೆದುಕೊಂಡಿದೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಹೊಸ ಇವೆರೆ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಇಂಟೆಲಿಜೆಂಟ್ ಫ್ರೇಮ್‌ವರ್ಕ್ ಅಡಿ ಅಭಿವೃದ್ದಿಗೊಳಿಸಲಾಗಿದ್ದು, ಇವು ಪ್ರತಿ ಇವಿ ವಾಹನ ಬಳಕೆದಾರರಿಗೆ ತಡೆರಹಿತ ಚಾರ್ಜಿಂಗ್ ಅನುಭವವನ್ನು ಖಚಿತಪಡಿಸಲಿವೆ.

ವಸತಿ ಸಮುಚ್ಚಯಗಳಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲು ಇವೆರೆ ಹೊಸ ಪಾಲುದಾರಿಕೆ ಪ್ರಕಟ

ಇವೆರೆ ಅಪ್ಲಿಕೇಶನ್ ಮೂಲಕ ಎಲ್ಲಾ ಸೇವೆಗಳಿಗೂ ಏಕ-ವಿಂಡೋ ಪ್ರವೇಶವನ್ನು ಒದಗಿಸಲಾಗಿದ್ದು, ಇವೆರೆ ಚಾರ್ಜಿಂಗ್ ನಿಲ್ದಾಣಗಳ ಮಾಹಿತಿಯನ್ನು ಕ್ಲೌಡ್-ಆಧಾರಿತ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನ ಬಳಕೆದಾರರ ಎಲ್ಲಾ ಅಗತ್ಯಗಳಿಗೆ ಒಂದೇ ಸೂರಿನಡಿಯಲ್ಲಿ ಪರಿಹಾರವನ್ನು ಒದಗಿಸಲಿದೆ.

Article Published On: Tuesday, April 12, 2022, 10:37 [IST]
English summary
Evre and signature global to setup ev charging stations in details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+