ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ (Volkswagen) ಇಂಡಿಯಾ ತನ್ನ ಹೊಸ ಮಿಡ್ ಸೈಜ್ ಸೆಡಾನ್ ಅನ್ನು ದೇಶದಲ್ಲಿ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಲಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಮಿಡ್ ಸೈಜ್ ಸೆಡಾನ್ 2022ರ ಮಾರ್ಚ್ 8 ರಂದು ಅನಾವರಣವಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ವೆಬ್‌ಸೈಟ್‌ನಲ್ಲಿ ಹೊಸ ಮಿಡ್ ಸೈಜ್ ಸೆಡಾನ್ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಮುಂದಿನ ತಿಂಗಳು ಅನಾವರಣವಗಲಿರುವ ಹೊಸ ಮಿಡ್ ಸೈಜ್ ಸೆಡಾನ್ ಮಾದರಿಯು ಕರೆಯಲಾಗುವುದು ಎಂದು ಖಚಿತಪಡಿಸುತ್ತದೆ.ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಮಾರಾಟವಾಗಲಿದೆ. ಈ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಮೇ ತಿಂಗಳ ವೇಳೆಗೆ ದೇಶದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. . ಇದು ಮೂಲತಃ ದಕ್ಷಿಣ ಅಮೆರಿಕಾದಲ್ಲಿ ಈಗಾಗಲೇ ಮಾರಾಟದಲ್ಲಿರುವ ಸೆಡಾನ್‌ನ ಫೇಸ್‌ಲಿಫ್ಟ್ ಆಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಬಹಿರಂಗಪಡಿಸುವ ಬಹು ಟೀಸರ್ ಚಿತ್ರಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದನ್ನು ಪುಣೆಯ ಚಕನ್‌ನಲ್ಲಿರುವ ಕಂಪನಿಯ ಘಟಕದಲ್ಲಿ ತಯಾರಿಸಲಾಗುವುದು. ಅಂತರರಾಷ್ಟ್ರೀಯವಾಗಿ, ಹಿಂದಿನ ಫೋಕ್ಸ್‌ವ್ಯಾಗನ್ ವಿರ್ಟಸ್ ಬ್ರೆಜಿಲ್‌ನಲ್ಲಿ ಮಾತ್ರ ಮಾರಾಟದಲ್ಲಿದೆ, ವೆಂಟೊ ಮಾದರಿ ಬದಲಿಗೆ ಮತ್ತು ಮೂಲಭೂತವಾಗಿ ಆರನೇ ತಲೆಮಾರಿನ ಪೊಲೊ ಹ್ಯಾಚ್‌ಬ್ಯಾಕ್‌ನ ಸೆಡಾನ್ ಆವೃತ್ತಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಪ್ಲಾಟ್‌ಫಾರ್ಮ್

ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಮಿಡ್ ಸೆಡಾನ್ ಅನ್ನು ಎಂಕ್ಯೂಬಿ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿ ಪಡಿಸಲಾಗುತ್ತದೆ. ಜೊತೆಗೆ ಅದರ ಆಧಾರವನ್ನು ಸ್ಕೋಡಾ ಸ್ಲಾವಿಯಾದೊಂದಿಗೆ ಹಂಚಿಕೊಳ್ಳುತ್ತದೆ.ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ಸೆಡಾನ್ ಅನ್ನು ಸ್ಥಳಿಯವಾಗಿ ಅಭಿವೃದ್ದಿ ಪಡಿಸಬಹುದು ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಈ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಮಾದರಿಯು ಭಾರತದಲ್ಲಿ ಹಲವು ಬಾರಿ ಸ್ಫಾಟ್ ಟೆಸ್ಟ್ ಅನ್ನು ನಡೆಸುವಾಗ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಸ್ಕೋಡಾ-ಫೋಕ್ಸ್‌ವ್ಯಾಗನ್ ಇಂಡಿಯಾ 2.0 ಯೋಜನೆಯಡಿ ಎಂಕ್ಯೂಬಿ ಪ್ಲಾಟ್‌ಫಾರ್ಮ್ ಅನ್ನು ಎಂಕ್ಯೂಬಿ ಎಒ ಇನ್ ಎಂದು ಸ್ಥಳೀಕರಿಸಲಾಗುತ್ತದೆ. ಇದರ ಪರಿಣಾಮವಾಗಿ, ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಪ್ರತ್ಯೇಕವಾಗಿ ತಯಾರಿಸಲು ಮೂಲ ಮಾದರಿಯಾಗಿ ಬಳಸಲಾಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಎಂಜಿನ್

ಈ ಹೊಸ ಕಾಂಪ್ಯಾಕ್ಟ್ ಸೆಡಾನ್ ಮಾದರಿಗೆ ಯಾವ ಟಿಎಸ್‌ಐ ಎಂಜಿನ್ ಅನ್ನು ಅಳವಡಿಸಬಹುದು ಎಂದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ವಿಡಬ್ಲ್ಯೂ 1.5-ಲೀಟರ್ ಮತ್ತು 1.0-ಲೀಟರ್ ಎಂಜಿನ್ ಆಯ್ಕೆಗಳನ್ನು ನೀಡುವ ಸಾಧ್ಯತೆಗಳಿದೆ. ದೇಶದಲ್ಲಿ ಮಾರಾಟವಾಗುವ ಹಲವಾರು ಮಾದರಿಗಳಲ್ಲಿ ಈ ಎರಡು ಎಂಜಿನ್ ಗಳನ್ನು ನೀಡಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಇದರಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 5500 ಆರ್‌ಪಿಎಂನಲ್ಲಿ 108 ಬಿಹೆಚ್‍ಪಿ ಪವರ್ ಮತ್ತು 1750 ಆರ್‌ಪಿಎಂನಲ್ಲಿ 175 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 5000 ಆರ್‌ಪಿಎಂನಲ್ಲಿ 148 ಬಿಹೆಚ್‍ಪಿ ಪವರ್ ಮತ್ತು 1500 ಆರ್‌ಪಿಎಂನಲ್ಲಿ 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಫೀಚರ್ಸ್

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿರುವಂತೆ, ಎಲ್ಇಡಿ ಲೈಟಿಂಗ್, ಸ್ಟ್ರಾಂಗ್ ಹೆಲ್ಡರ್ ಲೈನ್, ಫ್ರಂಟ್ ಫ್ಯಾಸಿಯಾ ಮತ್ತು ಅಲಾಯ್ ವೀಲ್ಸ್ ಅನ್ನು ಇಂಡಿಯನ್-ಸ್ಪೆಕ್ ಕೂಡ ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಇನ್ನು ಈ ಹೊಸ ವಿರ್ಟಸ್ ಕಾಂಪ್ಯಾಕ್ಟ್ ಸೆಡಾನ್ ಇಂಟಿರಿಯರ್ ನಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ನ್ಸೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿರಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಅಯಾಮಗಳು

ಅಂತರರಾಷ್ಟ್ರೀಯ-ಸ್ಪೆಕ್ ಫೋಕ್ಸ್‌ವ್ಯಾಗನ್ ವಿರ್ಟಸ್ ಮಾದರಿಯನ್ನು ದೊಡ್ಡ ಬದಲಾವಣೆಗಳಿಲ್ಲದೇ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರಿನ ಆಯಾಮಗಳು ಜಾಗತಿಕ-ಸ್ಪೆಕ್ ವರ್ಚಸ್‌ನಂತೆಯೇ ಇರುತ್ತದೆ.ಇದು 4,482 ಎಂಂ ಉದ್ದ, 1,751 ಎಂಂ ಅಗಲ ಮತ್ತು 1,472 ಎಂಂ ಎತ್ತರವನ್ನು ಹೊಂದಿದೆ. ಇನ್ನು ಈ ಸೆಡಾನ್ 2,651 ಎಂಎಂ ವ್ಹೀಲ್‌ಬೇಸ್‌ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಇನ್ನು ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಟಿ-ಕ್ರಾಸ್‌ ಎಸ್‍ಯುವಿ ಮಾದರಿಯನ್ನು ಭಾರತದಲ್ಲಿ ಉತ್ಪಾದಿಸಿ ವಿದೇಶಕ್ಕೆ ರಫ್ತನ್ನು ಇತ್ತೀಚೆಗೆ ಪ್ರಾರಂಭಿಸಿದೆ. ಮಹಾರಾಷ್ಟ್ರದ ಪುಣೆ ಬಳಿಯ ಚಕನ್‌ನಲ್ಲಿರುವ ಬ್ರ್ಯಾಂಡ್‌ನ ಉತ್ಪಾದನಾ ಘಟಕದಿಂದ ಇದನ್ನು ಉತ್ಪಾದಿಸಲಾಗಿದೆ. ಮೊದಲ ಬ್ಯಾಚ್ ಟಿ-ಕ್ರಾಸ್‌ನ 1,232 ಯುನಿಟ್‌ಗಳನ್ನು ಒಳಗೊಂಡಿದೆ ಮತ್ತು ಮುಂಬೈ ಬಂದರಿನಿಂದ ದಕ್ಷಿಣ ಅಮೆರಿಕಾದ ಮೆಕ್ಸಿಕೋ ದೇಶಕ್ಕೆ ರವಾನೆಯಾಗುತ್ತದೆ. ಭಾರತದಲ್ಲಿ ಮಾರಾಟವಾಗುವ ಟೈಗನ್ ಮಿಡ್ ಸೈಜ್ ಎಸ್‍ಯುವಿಯೊಂದಿಗೆ ಭಾರತ-ನಿರ್ಮಿತ ಟಿ-ಕ್ರಾಸ್ ಸಾಕಷ್ಟು ಸಾಮಾನ್ಯವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಟಿ-ಕ್ರಾಸ್ ಅನ್ನು ಎಡ-ಕೈ-ಡ್ರೈವ್ ಕಾನ್ಫಿಗರೇಶನ್‌ನೊಂದಿಗೆ ಉತ್ಪಾದಿಸಲಾಗಿದೆ ಮತ್ತು ಇದು ಟೈಗನ್ ಬದಲಿಗೆ ಟಿ-ಕ್ರಾಸ್‌ ಬ್ಯಾಡ್ಜ್ ಅನ್ನು ಹೊಂದಿದೆ, ಇದು ಅತೀವವಾಗಿ ಸ್ಥಳೀಕರಿಸಿದ ಎಂಕ್ಯೂಬಿ A0 IN ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿದೆ. ಇದೇ ಪ್ಲಾಟ್‌ಫಾರ್ಮ್‌ ಅನ್ನು ಸ್ಕೋಡಾ ಕುಶಾಕ್ ಮತ್ತು ಮುಂಬರುವ ಸ್ಕಿಡಾ ಸ್ಲಾವಿಯಾ ಮಧ್ಯಮ ಗಾತ್ರದ ಸೆಡಾನ್‌ನಲ್ಲಿಯೂ ಕಾಣಬಹುದು. ಮೆಕ್ಸಿಕೋದ ಟಿ-ಕ್ರಾಸ್‌ ಯೂರೋಪ್ ನಲ್ಲಿರುವ ಟಿ-ಕ್ರಾಸ್ ಗಿಂತ ಭಿನ್ನವಾಗಿದೆ. ಇದನ್ನು ಭಾರತದಿಂದ ಬೇರೆಡೆಗೆ ರಫ್ತು ಮಾಡಲಾಗುತ್ತದೆ. ಈ ಹಿಂದೆ, ಇದನ್ನು ಬ್ರೆಜಿಲ್‌ನಲ್ಲಿರುವ ಜರ್ಮನ್ ತಯಾರಕರ ಉತ್ಪಾದನಾ ನೆಲೆಯಿಂದ ಆಮದು ಮಾಡಿಕೊಳ್ಳಲಾಯಿತು. ಟಿ-ಕ್ರಾಸ್ ಎಸ್‍ಯುವಿ ಮಾದರಿಯನ್ನು ಅನ್ನು ಹೆಚ್ಚು ಜಾಗತಿಕ ಮಾರುಕಟ್ಟೆಗಳಿಗೆ ಭಾರತದಿಂದ ರಫ್ತು ಮಾಡಲಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Volkswagen Virtus ಕಾರಿನ ವಿಶೇಷತೆಗಳು

ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮೇ ತಿಂಗಳಿನಲ್ಲಿ ಬಿದುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಮಿಡ್ ಸೈಜ್ ಸೆಡಾನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮತ್ತು ಮಾರುತಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Monday, February 21, 2022, 10:29 [IST]
English summary
Find here some top highlights about new volkswagen virtus details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+