Just In
- 18 min ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- 12 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 13 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 15 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ ಮಾರುತಿ ಆಲ್ಟೋ ಕೆ10 ಕಾರಿನ ವಿಶೇಷತೆಗಳು
ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತದಲ್ಲಿ ಹೊಸ ನವೀಕರಣಗಳೊಂದಿಗೆ ಆಲ್ಟೋ ಕೆ10 ಹ್ಯಾಚ್ಬ್ಯಾಕ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಹಿಂದೆ ಮಾರುತಿ ಸುಜಕಿ ಕಂಪನಿಯು ಸಾಮಾನ್ಯ ಆಲ್ಟೋದ ಮೂರು ರೂಪಾಂತರಗಳನ್ನು ಸ್ಥಗಿತಗೊಳಿಸಿತ್ತು.
ಇದೀಗ ಮಾರುತಿ ಸುಜುಕಿ ಕಂಪನಿಯು ಆಲ್ಟೋ ಕೆ10 ಭಾರತೀಯ ಮಾರುಕಟ್ಟೆಗೆ ಮರುಪರಿಚಯಿಸಲು ನಿರ್ಧರಿಸಲಾಗಿದೆ. ಮಾರುತಿ ಸುಜುಕಿ ನಿಯಮಿತ ಆಲ್ಟೋ ಸರಣಿಯನ್ನು ವಿಸ್ತರಿಸುತ್ತಿದೆ. ಆಲ್ಟೋ ಹ್ಯಾಚ್ಬ್ಯಾಕ್ನ ನ್ಯೂ ಜನರೇಷನ್ ಮಾದರಿಯು ಆಗಸ್ಟ್ 18 ರಂದು ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಹೊಸ ಮಾರುತಿ ಸುಜುಕಿ ಆಲ್ಟೋ ಕೆ10 ಬಿಡುಗಡೆಯಾಗುವ ಮುನ್ನ ಕಾರು ತಯಾರಕರು ರಿಫ್ರೆಶ್ ಮಾಡಲಾದ ಎಂಟ್ರಿ ಲೆವೆಲ್ ಹ್ಯಾಚ್ಬ್ಯಾಕ್ನ ಮೊದಲ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದರು.
ಹೊಸ ಮಾರುತಿ ಆಲ್ಟೋ ಕೆ10 ಹೊಸ ಹಾರ್ಟೆಕ್ಟ್ ಪ್ಲಾಟ್ಫಾರ್ಮ್ನಿಂದ ಆಧಾರವಾಗಿದೆ ಮತ್ತು ಪ್ರಸ್ತುತ ಆಲ್ಟೊ 800 ಜೊತೆಗೆ ಮಾರಾಟವಾಗುತ್ತದೆ. ಇದು ದೊಡ್ಡದಾಗಿರುತ್ತದೆ ಮತ್ತು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಬಾಹ್ಯ ಶೈಲಿಯನ್ನು ಸಹ ಪಡೆಯುತ್ತದೆ.
ವಿನ್ಯಾಸ
ಟೀಸರ್ ವೀಡಿಯೊವನ್ನು ಆಧರಿಸಿ, ಹೊಸ ಮಾರುತಿ ಆಲ್ಟೋ ಕೆ10 ಟಿಯರ್ಡ್ರಾಪ್-ಆಕಾರದ ಹ್ಯಾಲೊಜೆನ್ ಹೆಡ್ಲ್ಯಾಂಪ್ಗಳನ್ನು ಮತ್ತು ಬೃಹತ್ ಸಿಂಗಲ್-ಪೀಸ್ ಫ್ರಂಟ್ ಗ್ರಿಲ್ ಅನ್ನು ಹೊಂದಿರುತ್ತದೆ. ಫಾಗ್ ಲ್ಯಾಂಪ್ಗಳಿಗೆ ಮಿಸ್ ನೀಡಲಾಗಿದೆ ಮತ್ತು ಆಲ್ಟೋ ಕವರ್ಗಳೊಂದಿಗೆ ಸ್ಟೀಲ್ ವ್ಹೀಲ್ ಗಳನ್ನು ಹೊಂದಿವೆ. ಈ ಆಲ್ಟೋ ಕೆ10 ಕಾರಿನ ಹಿಂಭಾಗದಲ್ಲಿ, ಚೌಕಾಕಾರದ ಟೈಲ್ ಲ್ಯಾಂಪ್ಗಳು, ಕೆ10 ಬ್ಯಾಡ್ಜಿಂಗ್ ಮತ್ತು ಬಂಪರ್-ಮೌಂಟೆಡ್ ನಂಬರ್ ಪ್ಲೇಟ್ ರಿಸೆಸ್ನೊಂದಿಗೆ ಬಾಕ್ಸಿ ನಿಲುವು ಹೊಂದಿದೆ.
ಇಂಟಿರಿಯರ್
ಮಾರುತಿ ಸುಜುಕಿ ಕಾರಿನ ಒಳಗೆ, ಫ್ಲೋಟಿಂಗ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯಾನ್ಯುವಲ್ ಏರ್ ಕಂಡಿಷನರ್ ಮತ್ತು ಫ್ಯಾಬ್ರಿಕ್ ಅಪ್ಹೋಲ್ಸ್ಟರಿಯೊಂದಿಗೆ ಸಂಪೂರ್ಣ ಬ್ಲ್ಯಾಕ್ ಕ್ಯಾಬಿನ್ ಅನ್ನು ಹೊಂದಿರುತ್ತದೆ.
ಆಯಾಮಗಳು
ಇದಲ್ಲದೆ, ಆಲ್ಟೋ ಕೆ10 ನಾಲ್ಕು ರೂಪಾಂತರಗಳು ಮತ್ತು ಆರು ಬಾಹ್ಯ ಬಣ್ಣಗಳಲ್ಲಿ ನೀಡಲಾಗುವುದು. ಹೊಸ ಆಲ್ಟೋದ ಒಟ್ಟಾರೆ ಉದ್ದ, ಅಗಲ ಮತ್ತು ಎತ್ತರ ಕ್ರಮವಾಗಿ 353ಎಂಎಂ, 1490ಎಂಎಂ ಮತ್ತು 1520ಎಂಎಂ ಹೊಂದಿದೆ. ಅದರ ಅಗಲವು ಬದಲಾಗದೆ ಉಳಿದಿದ್ದರೂ, ಮಾದರಿಯು ಮೊದಲಿಗಿಂತ ಉದ್ದ ಮತ್ತು ಎತ್ತರವನ್ನು ಪಡೆಯುತ್ತದೆ. ಇದು 2380 ಎಂಎಂ ಉದ್ದದ ವೀಲ್ಬೇಸ್ ಅನ್ನು ಹೊಂದಿದೆ. ಇದು ಪ್ರಸ್ತುತ ಮಾದರಿಗಿಂತ 20ಎಂಎಂ ಉದ್ದವಾಗಿದೆ.
ಎಂಜಿನ್
ಎಂಜಿನ್ ಬಗ್ಗೆ ಹೇಳುವುದಾದರೆ, ಈ ಹ್ಯಾಚ್ಬ್ಯಾಕ್ 998 ಸಿಸಿ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 66 ಬಿಹೆಚ್ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ಬಾಕ್ಸ್ ಆಯ್ಕೆಗಳೊಂದಿಗೆ ನೀಡುತ್ತದೆ.
ನಿಯಮಿತ' ಆಲ್ಟೋ ಮತ್ತು ಎಸ್-ಪ್ರೆಸ್ಸೊ 2021/22 ಹಣಕಾಸು ವರ್ಷದಲ್ಲಿ ಸುಮಾರು 212,000 ಯುನಿಟ್ಗಳನ್ನು ಹೊಂದಿದೆ.ಆಲ್ಟೋ ಮಾರುತಿ ಸುಜುಕಿಯ ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಕಾರು. ಆಲ್ಟೋ ಮೊದಲ ಬಾರಿಗೆ 2000 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಕಾರಿನ ಮೊದಲ ತಲೆಮಾರಿನ ಕಾರು 2012 ರವರೆಗೆ ಇತ್ತು. ಆಲ್ಟೋದ ಎರಡನೇ ತಲೆಮಾರಿನ ನಂತರ ಸುಮಾರು ಮತ್ತು ಒಟ್ಟಾರೆಯಾಗಿ ಮಾರುತಿ 4.3 ಮಿಲಿಯನ್ (43 ಲಕ್ಷ) ಯುನಿಟ್ಗಳನ್ನು ಮಾರಾಟ ಮಾಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಹ್ಯಾಚ್ಬ್ಯಾಕ್. 2005 ರಿಂದ 2018 ರವರೆಗೆ, ಡಿಜೈರ್ ಸೆಡಾನ್ನಿಂದ ಹಿಂದಿಕ್ಕುವ ಮೊದಲು ಆಲ್ಟೋ ಭಾರತದ ಅತ್ಯಂತ ಜನಪ್ರಿಯ ಕಾರು ಮಾದರಿ ಎಂಬ ದಾಖಲೆಯನ್ನು ಹೊಂದಿತ್ತು. ಭಾರತದ ಎಂಟ್ರಿ ಲೆವೆಲ್ ಹ್ಯಾಚ್ಬ್ಯಾಕ್ ವಿಭಾಗದ ಬೇಡಿಕೆಯು ವರ್ಷಗಳಲ್ಲಿ ಕಡಿಮೆಯಾಗುತ್ತಿದೆ.
ಈ 2022ರ ಹಣಕಾಸು ವರ್ಷದಲ್ಲಿ, ಈ ವಿಭಾಗವು ಭಾರತದಲ್ಲಿನ ಎಲ್ಲಾ ಕಾರು ಮಾರಾಟಗಳಲ್ಲಿ ಕೇವಲ 7.8 ಪ್ರತಿಶತವನ್ನು ಹೊಂದಿದೆ. ಇದು ಆರ್ಥಿಕ ವರ್ಷ 2021 ಕ್ಕಿಂತ ಕಡಿಮೆಯಾಗಿದೆ, ಈ ವಿಭಾಗವು ದೇಶದಲ್ಲಿ ಮಾರಾಟವಾದ ಎಲ್ಲಾ ಕಾರುಗಳಲ್ಲಿ ಶೇಕಡಾ 9.8 ಮತ್ತು FY2020 ರಲ್ಲಿ ಶೇಕಡಾ 10.6 ರಷ್ಟಿತ್ತು. ಮಾರುತಿ ಸುಜುಕಿ ಇಂಡಿಯಾ 2022ರ ಜುಲೈ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 1,75,916 ಯುನಿಟ್ಗಳನ್ನು (ದೇಶೀಯ + ರಫ್ತು) ಮಾರಾಟ ಮಾಡಿದೆ.
2021ರ ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 1,62,462 ಯುನಿಟ್ಗಳನ್ನು ಮಾರಾಟ ಮಾಡಿದ್ದರಿಂದ ವಾಹನ ತಯಾರಕರು ವರ್ಷದಿಂದ ವರ್ಷಕ್ಕೆ ಶೇಕಡಾ 8.3 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದಾರೆ. ತಿಂಗಳ-ಮಾಸಿಕ ಮಾರಾಟಕ್ಕೆ ಸಂಬಂಧಿಸಿದಂತೆ, ಕಂಪನಿಯು 2022ರ ಜೂನ್ ತಿಂಗಳಿನಲ್ಲಿ 55,857 ಯುನಿಟ್ಗಳು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 12.9 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ,
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಕಟ್ಟುನಿಟ್ಟಾದ ಹೊರಸೂಸುವಿಕೆ ಮತ್ತು ಸುರಕ್ಷತಾ ಮಾನದಂಡಗಳ ಜೊತೆಗೆ ಎಂಟ್ರಿ ಲೆವೆಲ್ ಹ್ಯಾಚ್ಬ್ಯಾಕ್ ವಿಭಾಗದ ಸ್ಥಿರ ಕುಸಿತವು 2020 ರಲ್ಲಿ ಆಲ್ಟೋ ಕೆ10 ಅನ್ನು ಮಾರುಕಟ್ಟೆಯಿಂದ ತೆಗೆದುಹಾಕಲು ಒಂದು ಕಾರಣವಾಗಿದೆ. ಇದೀಗ ಮಾರುತಿ ಆಲ್ಟೋ ಹ್ಯಾಚ್ಬ್ಯಾಕ್ನ ನ್ಯೂ ಜನರೇಷನ್ ಮಾದರಿಯು ಆಗಸ್ಟ್ 18 ರಂದು ಬಿಡುಗಡೆಯಾಗಲಿದೆ