30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಇತ್ತೀಚಿನ ದಿನಗಳಲ್ಲಿ ಸಿಎನ್‌ಜಿ ಮತ್ತು ಪೆಟ್ರೋಲ್/ಡೀಸೆಲ್‌ಗಳ ನಡುವಿನ ಬೆಲೆಯ ಅಂತರ ಕಡಿಮೆಯಾಗಿದೆ, ಸಿಎನ್‌ಜಿ ಅಗ್ಗದ ಬೆಲೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಸಿಎನ್‌ಜಿ ವಾಹನಗಳ ಮೈಲೇಜ್ ಅವುಗಳ ಪೆಟ್ರೋಲ್ ಅಥವಾ ಡೀಸೆಲ್-ಚಾಲಿತ ಕೌಂಟರ್‌ಪಾರ್ಟ್‌ಗಳಿಗಿಂತ ಹೆಚ್ಚು. ಒಟ್ಟಾರೆ ಸಿಎನ್‌ಜಿ ಕಾರುಗಳ ಬಳಕೆದಾರರಿಗೆ ಉಳಿತಾಯ ಹೆಚ್ಚು.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ದೇಶಿಯ ಮಾರುಕಟ್ಟೆಯಲ್ಲಿ ಕಾರು ತಯಾರಕರು ಹೊಸ ಸಿಎನ್‌ಜಿ ಮಾದರಿಗಳನ್ನು ಪರಿಚಯಿಸುವುದನ್ನು ಮುಂದುವರೆಸಿದ್ದಾರೆ. ಇದೀಗ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಎನ್‌ಜಿ-ಚಾಲಿತ ಬಲೆನೊವನ್ನು ಬಿಡುಗಡೆ ಮಾಡಿದೆ, ಈ ಮಾರುತಿ ಸಿಎನ್‌ಜಿ ಕಾರಿಗೆ ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.8.28 ಲಕ್ಷದಿಂದ ರೂ.9.21 ಲಕ್ಷದವರೆ ಬೆಲೆಯನ್ನು ಹೊಂದಿದೆ. ಮಾರುತಿ ಬಲೆನೊ ತನ್ನ ವರ್ಗದ ಮೊದಲ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಫ್ಯಾಕ್ಟರಿಯಲ್ಲಿ ಅಳವಡಿಸಲಾಗಿರುವ ಸಿಎನ್‌ಜಿ ಕಿಟ್ ಅನ್ನು ನೀಡುತ್ತದೆ.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಮಾರುತಿ ಬಲೆನೊ ಪೆಟ್ರೋಲ್ ಮಾದರಿಗೆ ಬಲೆನೊ ಸಿಎನ್‌ಜಿ ಪ್ರತಿ ಅನುಗುಣವಾದ ಟ್ರಿಮ್‌ಗೆ ಹೋಲಿಸಿದರೆ ತುಸು ದುಬಾರಿಯಾಗಿದೆ. ಬಲೆನೊ ನೆಕ್ಸಾ (Nexa) ಡೀಲರ್ ಶಿಪ್ ಮೂಲಕ ಮಾರಾಟವಾಗುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಎಂಜಿನ್

ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ ಕಾರಿನಲ್ಲಿ ಅದೇ 1.2-ಲೀಟರ್, ನಾಲ್ಕು-ಸಿಲಿಂಡರ್, K12N ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಹ್ಯಾಚ್‌ಬ್ಯಾಕ್‌ನಂತೆ ಬಳಸುತ್ತದೆ, ಇದು 77.5 ಬಿಹೆಚ್‍ಪಿ ಪವರ್ ಮತ್ತು 98.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಬಲೆನೊ ಸಿಎನ್‌ಜಿ ಬೂಟ್‌ನಲ್ಲಿ 55-ಲೀಟರ್ ಸಿಎನ್‌ಜಿ ಟ್ಯಾಂಕ್ ಅನ್ನು ಪಡೆಯುತ್ತದೆ, ಇದರರ್ಥ ಅದರ ಪೆಟ್ರೋಲ್-ಕೌಂಟರ್‌ಪಾರ್ಟ್‌ಗೆ ಹೋಲಿಸಿದರೆ ಬೂಟ್ ಸಾಮರ್ಥ್ಯವು ಕಡಿಮೆಯಾಗಿದೆ. ಹೆಚ್ಚಿನ ಸಿಎನ್‌ಜಿ ಮಾದರಿಗಳಂತೆಯೇ, ಬಲೆನೊ ಸಿಎನ್‌ಜಿಯು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಮೈಲೇಜ್

ಬಲೆನೊ ಸಿಎನ್‌ಜಿ 30.61 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಮಾರುತಿ ಹೇಳಿಕೊಂಡಿದೆ. ಈ ಬಲೆನೊ ಸಿಎನ್‌ಜಿಯ ರೀತಿಯಲ್ಲೇ ಟೊಯೊಟಾ ಗ್ಲಾಂಝಾ ಕೂಡ ಬರಬಹುದು ಎಂದು ನಿರೀಕ್ಷಿಸುತ್ತೇವೆ. ಶೀಘ್ರದಲ್ಲೇ ಗ್ಲಾಂಝಾ ಸಿಎನ್‌ಜಿ ಕಾರಿನ ಬೆಲೆ ಪ್ರಕಟಣೆಯನ್ನು ಸಹ ನೋಡಬಹುದು.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ವಿನ್ಯಾಸ

ಈ ಹೊಸ ಬಲೆನೊ ಸಿಎನ್‌ಜಿ ಕಾರಿನಲ್ಲಿ ಸಿಎನ್‌ಜಿ ಕಿಟ್ ಅನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿಲ್ಲ. ಈ ಕಾರಿನ ಮುಂಭಾಗ ನೆಕ್ಸಾವೆವ್ ಹನಿಕೊಂಬ್ ಗ್ರಿಲ್, ಫ್ಲಾಟರ್ ಕ್ಲಾಮ್‌ಶೆಲ್ ಬಾನೆಟ್ ಮತ್ತು ಪರಿಷ್ಕೃತ ಮುಂಭಾಗದ ಬಂಪರ್ ಜೊತೆಗೆ ದೊಡ್ಡ ಫಾಗ್ ಲ್ಯಾಂಪ್ ಹೌಸಿಂಗ್‌ಗಳನ್ನು ಹೊಂದಿದೆ.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಈ ಮಾರುತಿ ಬಲೆನೊ ಕಾರಿನಲ್ಲಿ ಸೈಡ್ ಪ್ರೊಫೈಲ್ ಹಿಂದಿನ ಮಾದರಿಯಂತೆಯೇ ಕಂಡರೂ ಕ್ರೋಮ್ ಸ್ಟ್ರಿಪ್ ಅನ್ನು ಹೊರತುಪಡಿಸಿ ಈಗ ಕೆಳಗಿನ ವಿಂಡೋ ಲೈನ್‌ನಿಂದ ಹಿಂದಿನ ಕ್ವಾರ್ಟರ್ ಗ್ಲಾಸ್‌ಗೆ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಈ ಕಾರಿನ ಹಿಂಭಾಗದಲ್ಲಿ ಟೈಲ್‌ಗೇಟ್ ವಿನ್ಯಾಸ, ಹೊಸ ಸಿ-ಆಕಾರದ ಎಲ್‌ಇಡಿ ಟೈಲ್-ಲೈಟ್‌ಗಳು ಮತ್ತು ರಿಪ್ರೊಫೈಲ್ಡ್ ರಿಯರ್ ಬಂಪರ್ ಅನ್ನು ಹೊಂದಿದೆ. ಇನ್ನು ಸ್ಟ್ಯಾಂಡರ್ಡ್ ಬಲೆನೊ ಕಾರು ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರಾಂಡ್ಯೂರ್ ಗ್ರೇ, ಸೆಲೆಸ್ಟಿಯಲ್ ಬ್ಲೂ, ಓಪ್ಯುಲೆಂಟ್ ರೆಡ್ ಮತ್ತು ಲಕ್ಸ್ ಬೀಜ್ ಎನ್ನುವ ಆರು ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಸುರಕ್ಷತಾ ಫೀಚರ್ಸ್

ಮಾರುತಿ ಸುಜುಕಿ ಕಂಪನಿಯು ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ, ಸುರಕ್ಷತೆಗಾಗಿ ಏರ್‌ಬ್ಯಾಗ್ ಸೌಲಭ್ಯದ ಜೊತೆಗೆ ಹೊಸ ಬಲೆನೊದಲ್ಲಿ ಹೊಸ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಹಿಲ್ ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಎಬಿಎಸ್, ಕೀ ಲೆಸ್ ಎಂಟ್ರಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಇಎಸ್‌ಪಿ ಮತ್ತು ಇಬಿಡಿ ಸಹ ಸೇರ್ಪಡೆಯಾಗಲಿದ್ದು, ಸುಜುಕಿ ಕಾರ್ ಕನೆಕ್ಟ್ ತಂತ್ರಜ್ಞಾನದಲ್ಲೂ ಸಹ ಸುಧಾರಿತ ವೈಶಿಷ್ಟ್ಯತೆಗಳನ್ನು ಹೊಂದಿದೆ.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಇದರ ಜೊತೆಗೆ ತುರ್ತುಸೇವೆಗಳಿಗಾಗಿ ಸುಧಾರಿತ ಟೆಲಿಮ್ಯಾಟಿಕ್ಸ್ ಪರಿಹಾರಗಳನ್ನು ಒಳಗೊಂಡಿರಲಿದ್ದು, ಸುಜುಕಿ ಕಾರ್ ಕನೆಕ್ಟ್ ಫೀಚರ್ಸ್‍ಗಳನ್ನು ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಮೂಲಕ ಇಂಧನ ಲಭ್ಯತೆ, ಸಾಗಬಹುದಾದ ದೂರ, ಓಡೋಮೀಟರ್, ಕಾರ್ ಡಯಾಗ್ನೋಸಿಸ್, ಒಳಗೊಂಡಂತೆ ವಿವಿಧ ಮಾಹಿತಿಗಳ ಸಂಪೂರ್ಣ ಡೇಟಾ ಪಡೆದುಕೊಳ್ಳಬಹುದು.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಫೀಚರ್ಸ್

ಕನೆಕ್ಟೆಡ್ ಕಾರ್ ಟೆಕ್ ವೈಶಿಷ್ಟ್ಯದ ಜೊತೆಗೆ ಮಾರುತಿ ಕಂಪನಿಯು ಹೊಸ ಬಲೆನೊದಲ್ಲಿ 7-ಇಂಚಿನ ಡಿಜಿಟಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಈ ವಿಭಾಗದ ಮೊದಲ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಮಾರುತಿ ಸುಜುಕಿ ಕಂಪನಿಯು ಹೆಚ್ಚಿನ ನೆಕ್ಸಾ ಮಾದರಿಗಳು ಸಿಎನ್‌ಜಿ ಆವೃತ್ತಿಗಳಾಗಿ ನವೀಕರಿಸಲಾಗಿದೆ.ಫ್ಯಾಕ್ಟರಿ ಫಿಟೆಡ್ ಸಿಎನ್‌ಜಿ ಅನ್ನು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಪರಿಚಯಿಸಲಾಗುವುದು. ಈ ಸಿಎನ್‌ಜಿ ರೂಪಾಂತರದಲ್ಲಿ ಕಾರ್ಯಕ್ಷಮತೆಯ ಅಂಕಿಅಂಶಗಳು ಕಡಿಮೆಯಾಗಿದೆ.

30ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಮಾರುತಿ ಬಲೆನೊ ಸಿಎನ್‌ಜಿ ಕಾರಿನ ವಿಶೇಷತೆಗಳು

ಸ್ಟ್ಯಾಂಡರ್ಡ್ ಬಲೆನೊ ಹ್ಯಾಚ್‌ಬ್ಯಾಕ್ ಮಾದರಿಯ 2022ರ ಆವೃತ್ತಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದಾಖಲೆ ಮಟ್ಟದ ಬೇಡಿಕೆಯನ್ನು ಪಡೆದುಕೊಂಡಿದೆ. ಇದೀಗ ಬಲೆನೊ ಪ್ರೀಮಿಯಂ ಕಾರು ಸಿಎನ್‌ಜಿ ಆವೃತ್ತಿಯೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಯಲಿದೆ. ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20, ಟಾಟಾ ಆಲ್ಟ್ರೊಜ್ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Find here some top highlights of new maruti suzuki baleno cng details
Story first published: Thursday, November 3, 2022, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X