ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಹೋಂಡಾ ಕಾರ್ಸ್ ಇಂಡಿಯಾ(Honda Cars India) ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಫೆಬ್ರವರಿ ಅವಧಿಗಾಗಿ ವಿವಿಧ ಆಫರ್ ಘೋಷಣೆ ಮಾಡಿದ್ದು, ಈ ತಿಂಗಳಾಂತ್ಯದ ತನಕ ಹೊಸ ಆಫರ್‌ಗಳು ಲಭ್ಯವಿರಲಿವೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಕೋವಿಡ್ ಪರಿಣಾಮ ಏರಿಳಿತ ಕಂಡಿರುವ ಹೊಸ ವಾಹನ ಮಾರಾಟ ಇದೀಗ ಸ್ಥಿರತೆ ಕಾಯ್ದುಕೊಂಡಿದ್ದು, ಪ್ರಮುಖ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಉತ್ತಮ ಬೇಡಿಕೆ ಪಡೆದುಕೊಂಡಿವೆ. ಹೋಂಡಾ ಕಾರ್ಸ್ ಕಂಪನಿಯು ಸಹ ಹೊಸ ಕಾರು ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಕಾರು ಮಾರಾಟದಲ್ಲಿ ಸ್ಥಿರತೆಗಾಗಿ ಕಂಪನಿಯು ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಕೊಡುಗೆಗಳನ್ನು ಪ್ರಕಟಿಸುತ್ತಿವೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ಫೆಬ್ರವರಿ ಅವಧಿಗಾಗಿ ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಧ್ಯಮ ಕ್ರಮಾಂಕದ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರು ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಅಮೇಜ್(Amaze), ಜಾಝ್(Jazz), ಡಬ್ಲ್ಯುಆರ್-ವಿ(WR-V), ಸಿಟಿ(City) ಸೇರಿದಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಎಲ್ಲಾ ಮಾದರಿಗಳ ಮೇಲೂ ವಿವಿಧ ಆಫರ್ ಘೋಷಣೆ ಮಾಡಿದೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಹೋಂಡಾ ಕಂಪನಿಯ ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಅಮೇಜ್ ಕಂಪ್ಯಾಕ್ಟ್ ಸೆಡಾನ್, ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಡಬ್ಲ್ಯುಆರ್-ವಿ ಕಾರುಗಳ ಮೇಲೆ ಗರಿಷ್ಠ ರೂ.35 ಸಾವಿರ ತನಕ ಡಿಸ್ಕೌಂಟ್ ನೀಡುತ್ತಿದೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ಹೋಂಡಾ ಕಂಪನಿಯು ಎಎಂಟಿ ವರ್ಷನ್ ಸೇರಿದಂತೆ ಎಲ್ಲಾ ಮಾದರಿಗಳ ಮೇಲೂ ರೂ. 15 ಸಾವಿರ ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್‌‌ಬ್ಯಾಕ್, ಎಕ್ಸ್‌ಚೆಂಜ್ ಸೇರಿದಂತೆ ಆಕ್ಸೆಸರಿಸ್ ಪ್ಯಾಕೇಜ್ ಪಡೆದುಕೊಳ್ಳಬಹುದಾಗಿದೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ಆಫರ್‌ಗಳಲ್ಲಿ ಕ್ರಾಸ್ಒವರ್ ಎಸ್‌ಯುುವಿ ಕಾರು ಮಾದರಿಯಾದ ಡಬ್ಲ್ಯುಆರ್-ವಿ ಮಾದರಿಯ ಎಲ್ಲಾ ಪೆಟ್ರೋಲ್ ರೂಪಾಂತರಗಳ ಮೇಲೂ ಹೋಂಡಾ ಕಂಪನಿಯು ರೂ. 26 ಸಾವಿರ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ಕ್ಯಾಶ್ ಬ್ಯಾಕ್ ಸೇರಿದಂತೆ ಉಚಿತ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಹೋಂಡಾ ಜಾಝ್ ಮಾದರಿಯ ಎಲ್ಲಾ ರೂಪಾಂತರಗಳ ಮೇಲೂ ಗ್ರಾಹಕರಿಗೆ ರೂ. 33,158 ತನಕ ಆಫರ್ ಲಭ್ಯವಿದ್ದು, ಇದರಲ್ಲಿ ರೂ. 10 ಸಾವಿರ ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ, ಎಕ್ಸ್‌ಚೆಂಜ್, ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಸಹ ಲಭ್ಯವಿರಲಿದೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನುಳಿದಂತೆ ಹೋಂಡಾ ಹೊಸ ಆಫರ್‌ ಸಿಟಿ ಸೆಡಾನ್ ಆವೃತ್ತಿಯ ಮೇಲೂ ಹೋಂಡಾ ಕಂಪನಿಯು ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಸಿಟಿ ಕಾರಿನ ನ್ಯೂ ಜನರೇಷನ್ ಮೇಲೆ ರೂ. 35,596 ತನಕ ಆಫರ್ ಲಭ್ಯವಿವೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಹೋಂಡಾ ಕಂಪನಿಯು ಸದ್ಯ ಸಿಟಿ ಸೆಡಾನ್ ಮಾದರಿಯಲ್ಲಿ ನ್ಯೂ ಜನರೇಷನ್ ಸಿಟಿ ಮಾರಾಟದ ಜೊತೆಗೆ ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಕಾರಿನ ಮಾರಾಟವನ್ನು ಸಹ ಮುಂದುವರಿಸಿದ್ದು, ಹಳೆಯ ತಲೆಮಾರಿನ ಆವೃತ್ತಿಯು ರೂ. 20 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಸದ್ಯ ಖರೀದಿಗೆ ಲಭ್ಯವಿರುವ ಹಳೆಯ ತಲೆಮಾರಿನ ಸಿಟಿ ಸೆಡಾನ್ ಮಾದರಿಯು ಕೆಲವೇ ಕೆಲವು ವೆರಿಯೆಂಟ್‌ಗಳನ್ನು ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ಸಿಟಿ ಕಾರು ಮಾದರಿಯು ಮಾತ್ರ ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಅತ್ಯುತ್ತಮ ಬೇಡಿಕೆ ಹೊಂದಿದೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನು ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಹೊಸ ವರ್ಷದಲ್ಲಿ ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿರುವುದಾಗಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಜನವರಿ 1ರಿಂದಲೇ ಅನ್ವಯಿಸುವಂತೆ ಹೊಸ ಕಾರುಗಳ ದರ ಏರಿಕೆ ಮಾಡಿರುವುದಾಗಿ ಘೋಷಣೆ ಮಾಡಿದೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಆಟೋ ಬಿಡಿಭಾಗಗಳ ವೆಚ್ಚವು ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಕಾರ್ ಆಫರ್: ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಹೋಂಡಾ ಕಾರ್ಸ್ ಕಂಪನಿಯು ಕೂಡಾ ಇದೀಗ ತನ್ನ ಪ್ರಮುಖ ಕಾರು ಮಾದರಿಯ ಬೆಲೆ ಹೆಚ್ಚಿಸಿದೆ. ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ.0.50 ರಿಂದ ಶೇ. 1 ರಷ್ಟು ಹೆಚ್ಚಳ ಮಾಡಲಾಗಿದ್ದು, ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕಾರು ಖರೀದಿಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.

Article Published On: Wednesday, February 2, 2022, 10:47 [IST]
English summary
Honda cars india february offers 2022 details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+