Just In
- 38 min ago
ಎಸ್ಬಿಐ ಜೊತೆಗೂಡಿ ಇವಿ ಕಾರುಗಳಿಗಾಗಿ ವಿಶೇಷ ಸಾಲ ಸೌಲಭ್ಯ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- 14 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 15 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 15 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
Don't Miss!
- News
ವೆಂಟಿಲೇಟರ್ನಲ್ಲಿರುವ ಸಲ್ಮಾನ್ ರಶ್ದಿ, ದೃಷ್ಟಿ ಕಳೆದುಕೊಳ್ಳುವ ಅಪಾಯ!
- Lifestyle
ಕಿಡ್ನಿಗೆ ಅಪಾಯವಿದೆ ಎಂದು ಸೂಚಿಸುವ ಲಕ್ಷಣಗಳಿವು!
- Sports
Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಮೇ ತಿಂಗಳಿನಲ್ಲಿ 8 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಹೋಂಡಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ತನ್ನ 2022ರ ಮೇ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು, ಹೋಂಡಾ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 8,188 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಹೋಂಡಾ ಕಂಪನಿಯು 2,032 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮರಾಟಕ್ಕೆ ಹೋಲಿಸಿದರೆ ಶೇಕಡಾ 302.95 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು ಕಳೆದ ವರ್ಷದ ಮೇ ತಿಂಗಳಿನಲ್ಲಿ ಭಾರತದಲ್ಲಿ ಕೊರೋನ ಸೋಂಕು ಹೆಚ್ಚು ಇದ್ದ ಕಾರಣ ಮಾರಾಟದ ಮೇಲೆ ಪರಿಣಾಮವನ್ನು ಬೀರಿತು ಎಂಬುದನ್ನು ಗಮನಿಸಬೇಕು. ಆದರೂ ಹೋಂಡಾ ಕಂಪನಿಯ ಕಾರುಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸುತ್ತಿತ್ತು.

ಇನ್ನು ರಫ್ತಿನಲ್ಲಿ ಕಳೆದ ವರ್ಷದ ಮೇ ತಿಂಗಳಿನಲ್ಲಿ ಹೋಂಡಾ ಕಂಪನಿಯು 1,997 ಯೂನಿಟ್‌ಗಳನ್ನು ರವಾನಿಸಿದ್ದರಿಂದ ರಫ್ತುಗಳು ಗಣನೀಯವಾಗಿ ಬೆಳೆದವು, ಮೇ 2021 ರಲ್ಲಿ 385 ಯುನಿಟ್ ರಫ್ತುಗಳೊಂದಿಗೆ ಶೇಕಡಾ 418.7 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಮಾರಾಟದ ನಿರ್ದೇಶಕ ಯುಯಿಚಿ ಮುರಾಟಾ ಮಾತನಾಡಿ, ಮಾರುಕಟ್ಟೆಯಲ್ಲಿ ಸಕಾರಾತ್ಮಕ ಭಾವನೆಗಳು ಚಾಲ್ತಿಯಲ್ಲಿರುವಂತೆ ಹೋಂಡಾ ಕಾರುಗಳ ಬೇಡಿಕೆಯು ಬಲವಾಗಿ ಮುಂದುವರಿಯಿತು ಆದರೆ ದೀರ್ಘಕಾಲದ ಸೆಮಿಕಂಡಕ್ಟರ್ ಚಿಪ್ ಸಂಬಂಧಿಸಿದ ಸಮಸ್ಯೆಗಳು ಇನ್ನೂ ಅಡಚಣೆಯಾಗಿ ಉಳಿದಿವೆ ಮತ್ತು ಬೇಡಿಕೆಯನ್ನು ಪರಿಣಾಮಕಾರಿಯಾಗಿ ಪೂರೈಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಏಪ್ರಿಲ್ 2022 ರಲ್ಲಿ, ಹೋಂಡಾ ಕಂಪನಿಯು 7,874 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 9,072 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 13.21 ರಷ್ಟು ಮಾರಾಟ ಕುಸಿತವನ್ನು ದಾಖಲಿಸಿದೆ.

ಇನ್ನು ಜಪಾನಿನ ಕಾರು ತಯಾರಕರಾದ ಹೋಂಡಾ ಕಳೆದ ವರ್ಷ ಇದೇ ತಿಂಗಳಲ್ಲಿ ರಫ್ತು ಮಾಡಿದ 970 ಯುನಿಟ್‌ಗಳಿಗೆ ಹೋಲಿಸಿದರೆ ಏಪ್ರಿಲ್ 2022 ರಲ್ಲಿ 2,042 ಯುನಿಟ್‌ಗಳನ್ನು ರಫ್ತು ಮಾಡುವಲ್ಲಿ ಎರಡು ಪಟ್ಟು ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದ್ದಾರೆ.

ಇನ್ನು ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯ ಅಧಿಕಾರಿಗಳು ಇತ್ತೀಚೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸಚಿವರು ಅಧಿಕಾರಿಗಳನ್ನು ಭೇಟಿ ಮಾಡುವುದರ ಹೊರತಾಗಿ ಕಂಪನಿಯ ಇತ್ತೀಚಿನ ಬಿಡುಗಡೆಯಾದ ಹೊಸ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಅನ್ನು ಪರಿಶೀಲಿಸಿದ್ದಾರೆ ಎಂದು ಕಂಪನಿಯು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ. ಕಂಪನಿಯು ಟ್ವೀಟ್‌ನಲ್ಲಿ,

ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ, ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ತಮ್ಮ ಬಿಡುವಿಲ್ಲದ ಸಮಯದ ನಡುವೆ ಇದಕ್ಕೆ ಸಮಯ ಮೀಸಲಿಟ್ಟು ಹೋಂಡಾ ಸಿಟಿ ಹೈಬ್ರಿಡ್ ಅನ್ನು ಪರಿಶೀಲಿಸಿದರು ಎಂದು ತಿಳಿಸಿದೆ.

ಚಿತ್ರದಲ್ಲಿ ಬಿಳಿ ಬಣ್ಣದ ಹೋಂಡಾ ಸಿಟಿ ಇ:ಹೆಚ್‌ಇವಿ ಅನ್ನು ನಾವು ನೋಡಬಹುದು. ಹೊಸ ಹೋಂಡಾ ಸಿಟಿಯು ಪೆಟ್ರೋಲ್ ವೇರಿಯಂಟ್‌ನಂತೆಯೇ ಕಾಣುತ್ತಿದೆಯಾದರೂ, ಸ್ಟ್ಯಾಂಡರ್ಡ್ ಮಾಡೆಲ್‌ಗೆ ಹೋಲಿಸಿದರೆ ಸ್ಪೋರ್ಟಿಯರ್ ಆಗಿ ಕಾಣುವ ಕೆಲವು ಸೂಕ್ಷ್ಮ ಬದಲಾವಣೆಗಳಿವೆ.

ಹೋಂಡಾ ಕಾರ್ಸ್ ಇಂಡಿಯಾ ತನ್ನ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಸೆಡಾನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.19.50 ಲಕ್ಷವಾಗಿದೆ. ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಸೆಡಾನ್ ತನ್ನ ಹೋಂಡಾ ಸೆನ್ಸಿಂಗ್ ತಂತ್ರಜ್ಞಾನ ಅಥವಾ ADAS ವೈಶಿಷ್ಟ್ಯಗಳನ್ನು ಭಾರತಕ್ಕೆ ತಂದ ಮೊದಲ ಹೋಂಡಾ ಕಾರು. ಈ ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಹೈಬ್ರಿಡ್ ಸೆಡಾನ್ ಅನ್ನು ಭಾರತದಲ್ಲಿ ರಾಜಸ್ಥಾನದಲ್ಲಿರುವ ಹೋಂಡಾದ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುವುದು. ಹೈಬ್ರಿಡ್ ಮಾದರಿಯು ಸಿಟಿ ಸೆಡಾನ್‌ನ ಟಾಪ್-ಸ್ಪೆಕ್ 'ZX' ಟ್ರಿಮ್ ಅನ್ನು ಆಧರಿಸಿದೆ.

ಇನ್ನು ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಸರಣಿಯಲ್ಲಿ ಯಾವುದೇ ಎಸ್‍ಯುವಿಯನ್ನು ಹೊಂದಿಲ್ಲ ಮತ್ತು ಕಳೆದ ವರ್ಷ ಹೋಂಡಾ ಸರಣಿಯಿಂದ ಸಿಆರ್-ವಿ ಮಾದರಿಯನ್ನು ಸ್ಥಗಿತಗೊಳಿಸಲಾಗಿತ್ತು. ಹೋಂಡಾ ಕಂಪನಿಯು ಭಾರತದಲ್ಲಿ ಎಸ್‍ಯುವಿ ಮಾದರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತಿಲ್ಲ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ, ಇದರಿಂದ ಹೋಂಡಾ ಕಂಪನಿಯು ಹೊಸ ಎಸ್‍ಯುವಿ ಮಾದರಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಳಿದೆ.

ಸೆಮಿಕಂಡಕ್ಟರ್ ಪರಿಣಾಮ ಹೊಸ ವಾಹನ ಮಾರಾಟವು ಏರಿಳಿತ ಕಾಣುತ್ತಿದ್ದು, ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ಪ್ರಮುಖ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಉತ್ತಮ ಬೇಡಿಕೆ ಪಡೆದುಕೊಂಡಿವೆ. ಹೋಂಡಾ ಕಾರ್ಸ್ ಕಂಪನಿಯು ಸಹ ಹೊಸ ಕಾರು ಮಾರಾಟದಲ್ಲಿ ಏಳಿತ ಅನುಭವಿಸುತ್ತಿದೆ.