ಪ್ರಮುಖ ಕಾರುಗಳ ಮಾದರಿಗಳ ಮೇಲೆ ಅಗಸ್ಟ್ ಆಫರ್ ಘೋಷಣೆ ಮಾಡಿದ ಹೋಂಡಾ
ಹೋಂಡಾ ಕಾರ್ಸ್ ಇಂಡಿಯಾ(Honda Cars India) ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಅಗಸ್ಟ್ ಅವಧಿಯ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಈ ತಿಂಗಳಾಂತ್ಯದ ತನಕ ಹೊಸ ಆಫರ್‌ಗಳು ಲಭ್ಯವಿರಲಿವೆ.

ಸೆಮಿಕಂಡಕ್ಟರ್ ಪರಿಣಾಮ ತಗ್ಗಿದ್ದ ವಾಹನ ಮಾರಾಟವು ಇದೀಗ ಸುಧಾರಿಸುತ್ತಿದ್ದು, ಹೋಂಡಾ ಕಾರ್ಸ್ ಕಂಪನಿಯು ಸಹ ಹೊಸ ಕಾರು ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಕಾರು ಬೇಡಿಕೆಯಲ್ಲಿನ ಸ್ಥಿರತೆಗಾಗಿ ಹೋಂಡಾ ತನ್ನ ಸಂಭಾವ್ಯ ಗ್ರಾಹಕರಿಗೆ ಹಲವು ಹೊಸ ಆಫರ್ ಘೋಷಣೆ ಮಾಡುತ್ತಿದ್ದು, ಈ ತಿಂಗಳಾಂತ್ಯದ ತನಕ ಆಫರ್ ಲಭ್ಯವಿರಲಿವೆ.

ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ಅಗಸ್ಟ್ ಅವಧಿಗಾಗಿ ಹಲವು ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ಹಲವಾರು ಉಳಿತಾಯ ಯೋಜನೆಗಳನ್ನು ಪ್ರಕಟಿಸಿದೆ.

ಹೋಂಡಾ ಕಾರು ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಅಮೇಜ್(Amaze), ಜಾಝ್(Jazz), ಡಬ್ಲ್ಯುಆರ್-ವಿ(WR-V), ಸಿಟಿ(City) ಸೇರಿದಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಪ್ರತಿ ಕಾರು ಮಾದರಿಯ ಮೇಲೂ ವಿವಿಧ ಆಫರ್ ಘೋಷಣೆ ಮಾಡಿದೆ.

ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಅಮೇಜ್ ಕಂಪ್ಯಾಕ್ಟ್ ಸೆಡಾನ್, ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್, ಸಿಟಿ ಸೆಡಾನ್ ಮತ್ತು ಡಬ್ಲ್ಯುಆರ್-ವಿ ಕಾರುಗಳ ಮೇಲೆ ಗರಿಷ್ಠ ರೂ.27 ಸಾವಿರ ತನಕ ಡಿಸ್ಕೌಂಟ್ ನೀಡುತ್ತಿದೆ.

ಹೊಸ ಆಫರ್‌ಗಳಲ್ಲಿ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ಹೋಂಡಾ ಕಂಪನಿಯು ಎಎಂಟಿ ವರ್ಷನ್ ಸೇರಿದಂತೆ ಎಲ್ಲಾ ಮಾದರಿಗಳ ಮೇಲೂ ರೂ. 8 ಸಾವಿರ ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಲಾಯಲ್ಟಿ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯ್ತಿ ಪಡೆದುಕೊಳ್ಳಬಹುದಾಗಿದೆ.

ಕ್ರಾಸ್ಒವರ್ ಎಸ್‌ಯುುವಿ ಕಾರು ಮಾದರಿಯಾದ ಡಬ್ಲ್ಯುಆರ್-ವಿ ಮಾದರಿಯ ಎಲ್ಲಾ ಪೆಟ್ರೋಲ್ ರೂಪಾಂತರಗಳ ಮೇಲೂ ಹೋಂಡಾ ಕಂಪನಿಯು ರೂ. 27 ಸಾವಿರ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಲಾಯಲ್ಟಿ ಬೋನಸ್ ನೀಡುತ್ತಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಜಾಝ್ ಮಾದರಿಯ ಎಲ್ಲಾ ರೂಪಾಂತರಗಳ ಮೇಲೂ ಹೋಂಡಾ ಕಂಪನಿಯಯು ಗ್ರಾಹಕರಿಗೆ ರೂ. 25 ಸಾವಿರ ತನಕ ಆಫರ್ ಘೋಷಣೆ ಮಾಡಿದ್ದು, ಇದರಲ್ಲಿ ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ, ಎಕ್ಸ್‌ಚೆಂಜ್, ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಸಹ ಲಭ್ಯವಿರಲಿದೆ.

ಇನ್ನುಳಿದಂತೆ ಹೋಂಡಾ ಹೊಸ ಆಫರ್ ಸಿಟಿ ಸೆಡಾನ್ ಆವೃತ್ತಿಯ ಮೇಲೂ ಹೋಂಡಾ ಕಂಪನಿಯು ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಸಿಟಿ ಕಾರಿನ ನ್ಯೂ ಜನರೇಷನ್ ಮೇಲೆ ರೂ. 27,496 ತನಕ ಆಫರ್ ಲಭ್ಯವಿವೆ.

ಸಿಟಿ ಸೆಡಾನ್ ಮಾದರಿಯಲ್ಲಿ ಹೋಂಡಾ ಕಂಪನಿಯು ನ್ಯೂ ಜನರೇಷನ್ ಮಾದರಿಯ ಮಾರಾಟದ ಜೊತೆಗೆ ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಕಾರಿನ ಮಾರಾಟವನ್ನು ಸಹ ಮುಂದುವರಿಸಿದ್ದು, ಹಳೆಯ ತಲೆಮಾರಿನ ಆವೃತ್ತಿಯು ರೂ. 5 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ.

ಇನ್ನು ಹೋಂಡಾ ಕಂಪನಿಯು ತನ್ನ ಪ್ರಮುು ಮೂರು ಕಾರು ಮಾದರಿಗಳಾದ ಜಾಝ್, ಡಬ್ಲ್ಯುಆರ್-ವಿ ಮತ್ತು ನಾಲ್ಕನೇ ತಲೆಮಾರಿನ ಸಿಟಿಯನ್ನು ಮುಂದಿನ ವರ್ಷ ಮಾರ್ಚ್ ವೇಳೆಗೆ ಭಾರತದಲ್ಲಿ ಸ್ಥಗಿತಗೊಳಿಸಲು ಯೋಜಿಸುತ್ತಿದ್ದು, ಹೋಂಡಾ ಕಂಪನಿಯು ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಆದರೆ ಭಾರತೀಯ ಮಾರುಕಟ್ಟೆಯಲ್ಲಿನ ನೆಲೆ ಬಲಪಡಿಸಲು ಹೆಣಗಾಡುತ್ತಿರುವ ಹೋಂಡಾ, ಡಿಸೆಂಬರ್ 2020 ರಲ್ಲಿ ತನ್ನ ಗ್ರೇಟರ್ ನೋಯ್ಡಾ ಸ್ಥಾವರವನ್ನು ಮುಚ್ಚುವುದರೊಂದಿಗೆ ಸಿವಿಕ್ ಮತ್ತು ಸಿಆರ್-ವಿ ಉತ್ಪಾದನೆಯನ್ನು ನಿಲ್ಲಿಸಬೇಕಾಯಿತು. ಜೊತೆಗೆ ಎಸ್‌ಯುವಿಗಳ ಪ್ರಭಾವ ಹೆಚ್ಚಾಗಿರುವುದರಿಂದ ಹೋಂಡಾ ತನ್ನ ಪ್ರಮುಖ ಸೆಡಾನ್‌ಗಳ ಸ್ಥಗಿತಕ್ಕೆ ಚಿಂತಿಸುತ್ತಿದ್ದು, ಅಮೇಜ್, ಐದನೇ ತಲೆಮಾರಿನ ಸಿಟಿ ಮತ್ತು ಸಿಟಿ ಇ:ಹೆಚ್ಇವಿ ಹೊರತುಪಡಿಸಿ ಇನ್ನುಳಿದ ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸಲು ಮುಂದಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಸೆಡಾನ್ ಕಾರುಗಳಿಂತಲೂ ಎಸ್‌ಯುವಿಗಳಿಗೆ ಹೆಚ್ಚಿನ ಬೇಡಿಕೆಯಿರುವ ಕಾರಣ ಈ ಬೇಡಿಕೆಯನ್ನು ಆಕರ್ಷಿಸುವ ರೀತಿಯಲ್ಲಿ ಕಂಪನಿಯ ಹೊಸ ಕಾರುಗಳು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಕಂಪನಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಹಾಗಾಗಿಯೇ ಈ ಮೂರು ಮಾದರಿಗಳನ್ನು ಹಂತಹಂತವಾಗಿ ತೆಗೆದುಹಾಕಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿರುವ ಹೋಂಡಾ ಕಾರ್ಸ್ ಇಂಡಿಯಾ "ಕಂಪನಿಯು ಮಾರುಕಟ್ಟೆಯ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ" ಎಂದು ಹೇಳಿದೆ.


Click it and Unblock the Notifications