ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಪ್ರೀಮಿಂಯ ಕಾರು ಮಾರಾಟ ಕಂಪನಿಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ(Honda Cars India) ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಜುಲೈ ಅವಧಿಯ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಈ ತಿಂಗಳಾಂತ್ಯದ ತನಕ ಹೊಸ ಆಫರ್‌ಗಳು ಲಭ್ಯವಿರಲಿವೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಸೆಮಿಕಂಡಕ್ಟರ್ ಪರಿಣಾಮ ಹೊಸ ವಾಹನ ಮಾರಾಟದಲ್ಲಿ ಕಳೆದ ಕೆಲ ತಿಂಗಳಿನಿಂದ ಏರಿಳಿತ ಕಾಣುತ್ತಿದ್ದು, ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ಪ್ರಮುಖ ಕಾರು ಕಂಪನಿಗಳು ಉತ್ತಮ ಬೇಡಿಕೆಯೊಂದಿಗೆ ಮಾರಾಟದಲ್ಲಿ ಮುನ್ನುಗ್ಗುತ್ತಿವೆ. ಹೋಂಡಾ ಕಾರ್ಸ್ ಕಂಪನಿಯು ಸಹ ಹೊಸ ಕಾರು ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಕಾರು ಬೇಡಿಕೆಯಲ್ಲಿನ ಸ್ಥಿರತೆಗಾಗಿ ತನ್ನ ಸಂಭಾವ್ಯ ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಕೊಡುಗೆಗಳನ್ನು ಪ್ರಕಟಿಸಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ಜುಲೈ ಅವಧಿಗಾಗಿ ಹೊಸ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರು ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಅಮೇಜ್(Amaze), ಜಾಝ್(Jazz), ಡಬ್ಲ್ಯುಆರ್-ವಿ(WR-V), ಸಿಟಿ(City) ಸೇರಿದಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಎಲ್ಲಾ ಮಾದರಿಗಳ ಮೇಲೂ ವಿವಿಧ ಆಫರ್ ಘೋಷಣೆ ಮಾಡಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಹೋಂಡಾ ಕಂಪನಿಯ ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಅಮೇಜ್ ಕಂಪ್ಯಾಕ್ಟ್ ಸೆಡಾನ್, ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಡಬ್ಲ್ಯುಆರ್-ವಿ ಕಾರುಗಳ ಮೇಲೆ ಗರಿಷ್ಠ ರೂ.27 ಸಾವಿರ ತನಕ ಡಿಸ್ಕೌಂಟ್ ನೀಡುತ್ತಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಹೊಸ ಆಫರ್‌ಗಳಲ್ಲಿ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ಹೋಂಡಾ ಕಂಪನಿಯು ಎಎಂಟಿ ವರ್ಷನ್ ಸೇರಿದಂತೆ ಎಲ್ಲಾ ಮಾದರಿಗಳ ಮೇಲೂ ರೂ. 8 ಸಾವಿರ ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಲಾಯಲ್ಟಿ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯ್ತಿ ಪಡೆದುಕೊಳ್ಳಬಹುದಾಗಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಕ್ರಾಸ್ಒವರ್ ಎಸ್‌ಯುುವಿ ಕಾರು ಮಾದರಿಯಾದ ಡಬ್ಲ್ಯುಆರ್-ವಿ ಮಾದರಿಯ ಎಲ್ಲಾ ಪೆಟ್ರೋಲ್ ರೂಪಾಂತರಗಳ ಮೇಲೂ ಹೋಂಡಾ ಕಂಪನಿಯು ರೂ. 27 ಸಾವಿರ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಲಾಯಲ್ಟಿ ಬೋನಸ್ ನೀಡುತ್ತಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಜಾಝ್ ಮಾದರಿಯ ಎಲ್ಲಾ ರೂಪಾಂತರಗಳ ಮೇಲೂ ಹೋಂಡಾ ಕಂಪನಿಯಯು ಗ್ರಾಹಕರಿಗೆ ರೂ. 25 ಸಾವಿರ ತನಕ ಆಫರ್ ಘೋಷಣೆ ಮಾಡಿದ್ದು, ಇದರಲ್ಲಿ ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ, ಎಕ್ಸ್‌ಚೆಂಜ್, ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಸಹ ಲಭ್ಯವಿರಲಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಇನ್ನುಳಿದಂತೆ ಹೋಂಡಾ ಹೊಸ ಆಫರ್‌ ಸಿಟಿ ಸೆಡಾನ್ ಆವೃತ್ತಿಯ ಮೇಲೂ ಹೋಂಡಾ ಕಂಪನಿಯು ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಸಿಟಿ ಕಾರಿನ ನ್ಯೂ ಜನರೇಷನ್ ಮೇಲೆ ರೂ. 27,396 ತನಕ ಆಫರ್ ಲಭ್ಯವಿವೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಸಿಟಿ ಸೆಡಾನ್ ಮಾದರಿಯಲ್ಲಿ ಹೋಂಡಾ ಕಂಪನಿಯು ನ್ಯೂ ಜನರೇಷನ್ ಮಾದರಿಯ ಮಾರಾಟದ ಜೊತೆಗೆ ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಕಾರಿನ ಮಾರಾಟವನ್ನು ಸಹ ಮುಂದುವರಿಸಿದ್ದು, ಹಳೆಯ ತಲೆಮಾರಿನ ಆವೃತ್ತಿಯು ರೂ. 5 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಸದ್ಯ ಖರೀದಿಗೆ ಲಭ್ಯವಿರುವ ಹಳೆಯ ತಲೆಮಾರಿನ ಸಿಟಿ ಸೆಡಾನ್ ಮಾದರಿಯಲ್ಲಿ ಕೆಲವೇ ಕೆಲವು ವೆರಿಯೆಂಟ್‌ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ಸಿಟಿ ಕಾರು ಮಾದರಿಯು ಮಾತ್ರ ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಅತ್ಯುತ್ತಮ ಬೇಡಿಕೆ ಹೊಂದಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಇನ್ನು ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ವಿವಿಧ ಆಫರ್‌ಗಳ ಮೂಲಕ ಕಾರು ಮಾರಾಟವನ್ನು ಸುಧಾರಿಸುತ್ತಿದ್ದು, ಕಳೆದ ತಿಂಗಳು ಕಂಪನಿಯು ಒಟ್ಟು 7,834 ಯುನಿಟ್‌ ಕಾರುಗಳನ್ನು ಮಾರಾಟಗೊಳಿಸಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಕಳೆದ ವರ್ಷ ಜೂನ್ ತಿಂಗಳಲ್ಲಿ ಮಾರಾಟವಾದ 4,767 ಯುನಿಟ್‌ಗಳಿಗಿಂತಲೂ ಈ ವರ್ಷದ ಜೂನ್ ತಿಂಗಳಿನಲ್ಲಿ ಶೇ.64 ರಷ್ಟು ಹೆಚ್ಚಾಗಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಸಿಟಿ ಹೈಬ್ರಿಡ್ ಉತ್ತಮ ಬೇಡಿಕೆ ಹೊಂದಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಹೊಸ ಸಿಟಿ ಇ:ಎಚ್‌ಇವಿ ಸೆಡಾನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.19.50 ಲಕ್ಷವಾಗಿದೆ. ಹೈಬ್ರಿಡ್ ಮಾದರಿಯು ಸಿಟಿ ಸೆಡಾನ್‌ನ ಟಾಪ್-ಸ್ಪೆಕ್ 'ZX' ಟ್ರಿಮ್ ಅನ್ನು ಆಧರಿಸಿದೆ.

ಹೋಂಡಾ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಜುಲೈ ಆಫರ್ ಘೋಷಣೆ

ಸಿಟಿ ಇ:ಎಚ್‌ಇವಿ ಹೈಬ್ರಿಡ್ 1.5 ಲೀಟರ್, ನಾಲ್ಕು-ಸಿಲಿಂಡರ್, ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ ಚಾಲಿತವಾಗಿದ್ದು, ಪೆಟ್ರೋಲ್ ಮಾದರಿಗಿಂತಲೂ 40 ಪ್ರತಿಶತ ಹೆಚ್ಚು ಇಂಧನ-ಸಮರ್ಥವಾಗಿದೆ ಮತ್ತು 26.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಹೋಂಡಾ ಹೇಳಿಕೊಂಡಿದೆ.

Article Published On: Tuesday, July 5, 2022, 17:11 [IST]
English summary
Honda cars offers in july 2022 upto rs 27000 details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+