ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಹೋಂಡಾ ಕಾರ್ಸ್ ಇಂಡಿಯಾ(Honda Cars India) ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಜೂನ್ ಅವಧಿಯ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಈ ತಿಂಗಳಾಂತ್ಯದ ತನಕ ಹೊಸ ಆಫರ್‌ಗಳು ಲಭ್ಯವಿರಲಿವೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಸೆಮಿಕಂಡಕ್ಟರ್ ಪರಿಣಾಮ ಹೊಸ ವಾಹನ ಮಾರಾಟವು ಏರಿಳಿತ ಕಾಣುತ್ತಿದ್ದು, ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ಪ್ರಮುಖ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಉತ್ತಮ ಬೇಡಿಕೆ ಪಡೆದುಕೊಂಡಿವೆ. ಹೋಂಡಾ ಕಾರ್ಸ್ ಕಂಪನಿಯು ಸಹ ಹೊಸ ಕಾರು ಮಾರಾಟದಲ್ಲಿ ಏಳಿತ ಅನುಭವಿಸುತ್ತಿದ್ದು, ಬೇಡಿಕೆಯಲ್ಲಿ ಸ್ಥಿರತೆಗಾಗಿ ತನ್ನ ಸಂಭಾವ್ಯ ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಕೊಡುಗೆಗಳನ್ನು ಪ್ರಕಟಿಸುತ್ತಿವೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ಮೇ ಅವಧಿಗಾಗಿ ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಮಧ್ಯಮ ಕ್ರಮಾಂಕದ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರು ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಅಮೇಜ್(Amaze), ಜಾಝ್(Jazz), ಡಬ್ಲ್ಯುಆರ್-ವಿ(WR-V), ಸಿಟಿ(City) ಸೇರಿದಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಎಲ್ಲಾ ಮಾದರಿಗಳ ಮೇಲೂ ವಿವಿಧ ಆಫರ್ ಘೋಷಣೆ ಮಾಡಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಹೋಂಡಾ ಕಂಪನಿಯ ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಅಮೇಜ್ ಕಂಪ್ಯಾಕ್ಟ್ ಸೆಡಾನ್, ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಡಬ್ಲ್ಯುಆರ್-ವಿ ಕಾರುಗಳ ಮೇಲೆ ಗರಿಷ್ಠ ರೂ.27 ಸಾವಿರ ತನಕ ಡಿಸ್ಕೌಂಟ್ ನೀಡುತ್ತಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಹೊಸ ಆಫರ್‌ಗಳಲ್ಲಿ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ಹೋಂಡಾ ಕಂಪನಿಯು ಎಎಂಟಿ ವರ್ಷನ್ ಸೇರಿದಂತೆ ಎಲ್ಲಾ ಮಾದರಿಗಳ ಮೇಲೂ ರೂ. 8 ಸಾವಿರ ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಲಾಯಲ್ಟಿ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯ್ತಿ ಪಡೆದುಕೊಳ್ಳಬಹುದಾಗಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಹೊಸ ಆಫರ್‌ಗಳಲ್ಲಿ ಕ್ರಾಸ್ಒವರ್ ಎಸ್‌ಯುುವಿ ಕಾರು ಮಾದರಿಯಾದ ಡಬ್ಲ್ಯುಆರ್-ವಿ ಮಾದರಿಯ ಎಲ್ಲಾ ಪೆಟ್ರೋಲ್ ರೂಪಾಂತರಗಳ ಮೇಲೂ ಹೋಂಡಾ ಕಂಪನಿಯು ರೂ. 27 ಸಾವಿರ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಲಾಯಲ್ಟಿ ಬೋನಸ್ ನೀಡುತ್ತಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಹೋಂಡಾ ಜಾಝ್ ಮಾದರಿಯ ಎಲ್ಲಾ ರೂಪಾಂತರಗಳ ಮೇಲೂ ಗ್ರಾಹಕರಿಗೆ ರೂ. 25947 ತನಕ ಆಫರ್ ಲಭ್ಯವಿದ್ದು, ಇದರಲ್ಲಿ ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ, ಎಕ್ಸ್‌ಚೆಂಜ್, ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಸಹ ಲಭ್ಯವಿರಲಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಇನ್ನುಳಿದಂತೆ ಹೋಂಡಾ ಹೊಸ ಆಫರ್‌ ಸಿಟಿ ಸೆಡಾನ್ ಆವೃತ್ತಿಯ ಮೇಲೂ ಹೋಂಡಾ ಕಂಪನಿಯು ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಸಿಟಿ ಕಾರಿನ ನ್ಯೂ ಜನರೇಷನ್ ಮೇಲೆ ರೂ. 27,396 ತನಕ ಆಫರ್ ಲಭ್ಯವಿವೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಹೋಂಡಾ ಕಂಪನಿಯು ಸದ್ಯ ಸಿಟಿ ಸೆಡಾನ್ ಮಾದರಿಯಲ್ಲಿ ನ್ಯೂ ಜನರೇಷನ್ ಸಿಟಿ ಮಾರಾಟದ ಜೊತೆಗೆ ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಕಾರಿನ ಮಾರಾಟವನ್ನು ಸಹ ಮುಂದುವರಿಸಿದ್ದು, ಹಳೆಯ ತಲೆಮಾರಿನ ಆವೃತ್ತಿಯು ರೂ. 20 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಸದ್ಯ ಖರೀದಿಗೆ ಲಭ್ಯವಿರುವ ಹಳೆಯ ತಲೆಮಾರಿನ ಸಿಟಿ ಸೆಡಾನ್ ಮಾದರಿಯಲ್ಲಿ ಕೆಲವೇ ಕೆಲವು ವೆರಿಯೆಂಟ್‌ಗಳನ್ನು ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ಸಿಟಿ ಕಾರು ಮಾದರಿಯು ಮಾತ್ರ ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಅತ್ಯುತ್ತಮ ಬೇಡಿಕೆ ಹೊಂದಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಇನ್ನು ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ವಿವಿಧ ಆಫರ್‌ಗಳ ಮೂಲಕ ಕಾರು ಮಾರಾಟವನ್ನು ಸುಧಾರಿಸುತ್ತಿದ್ದು, ಕಳೆದ ತಿಂಗಳು ಕಂಪನಿಯು ಒಟ್ಟು 8,188 ಯುನಿಟ್‌ ಕಾರುಗಳನ್ನು ಮಾರಾಟಗೊಳಿಸಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಕಳೆದ ವರ್ಷ ಮೇ ತಿಂಗಳಲ್ಲಿ ಮಾರಾಟವಾದ 2,032 ಯುನಿಟ್‌ಗಳಿಗಿಂತಲೂ ಈ ವರ್ಷದ ಮೇ ತಿಂಗಳಿನಲ್ಲಿ ಶೇ. 302.9 ರಷ್ಟು ಹೆಚ್ಚಾಗಿದ್ದು, ಮೇ 2022ರಲ್ಲಿ 1,997 ಯುನಿಟ್‌ಗಳನ್ನು ರಫ್ತು ಮಾಡುವುದರೊಂದಿಗೆ ಹೋಂಡಾ ಶೇ. 418.7 ಬೆಳವಣಿಗೆಯನ್ನು ದಾಖಲಿಸಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಸೆಮಿಕಂಡಕ್ಟರ್ ಚಿಪ್‌ಗಳ ನಿರಂತರ ಕೊರತೆಯು ವಾಹನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದಿರುವ ಹೋಂಡಾ ಕಂಪನಿಯು ಶೀಘ್ರದಲ್ಲಿಯೇ ಸೆಮಿಕಂಡಕ್ಟರ್ ಕೊರತೆಗೆ ಪರಿಹಾರ ಸಿಗಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದು, ಹೊಸ ಸಿಟಿ ಹೈಬ್ರಿಡ್ ಮಾದರಿಯು ಹೋಂಡಾ ಕಂಪನಿಯ ಕಾರು ಮಾರಾಟದಲ್ಲಿ ಪ್ರಮುಖ ಆಕರ್ಷಣೆಯಾಗುತ್ತಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಹೊಸ ಸಿಟಿ ಇ:ಎಚ್‌ಇವಿ ಸೆಡಾನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.19.50 ಲಕ್ಷವಾಗಿದೆ. ಹೈಬ್ರಿಡ್ ಮಾದರಿಯು ಸಿಟಿ ಸೆಡಾನ್‌ನ ಟಾಪ್-ಸ್ಪೆಕ್ 'ZX' ಟ್ರಿಮ್ ಅನ್ನು ಆಧರಿಸಿದೆ.

ಮೇ ಅವಧಿಗಾಗಿ ಪ್ರಮುಖ ಕಾರುಗಳ ಮಾದರಿಗಳ ಮೇಲೆ ಆಫರ್ ಘೋಷಿಸಿದ ಹೋಂಡಾ

ಸಿಟಿ ಇ:ಎಚ್‌ಇವಿ ಹೈಬ್ರಿಡ್ 1.5 ಲೀಟರ್, ನಾಲ್ಕು-ಸಿಲಿಂಡರ್, ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ ಚಾಲಿತವಾಗಿದ್ದು, ಪೆಟ್ರೋಲ್ ಮಾದರಿಗಿಂತಲೂ 40 ಪ್ರತಿಶತ ಹೆಚ್ಚು ಇಂಧನ-ಸಮರ್ಥವಾಗಿದೆ ಮತ್ತು 26.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಹೋಂಡಾ ಹೇಳಿಕೊಂಡಿದೆ.

Most Read Articles

Kannada
Read more on ಹೋಂಡಾ honda
English summary
Honda cars offers in june 2022 upto rs 27000
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X