NCAP ಕ್ರ್ಯಾಷ್ ಟೆಸ್ಟ್‌ನಲ್ಲಿ ಗರಿಷ್ಟ ಸುರಕ್ಷತೆಯೊಂದಿಗೆ ಟಾಪ್ ರೇಟಿಂಗ್ ಪಡೆದ ಹೋಂಡಾ ಸಿವಿಕ್ e:HEV

ಹೋಂಡಾ ಸಿವಿಕ್ e:HEV ಕಾರಿಗಾಗಿ ಇತ್ತೀಚೆಗೆ ನಡೆಸಲಾದ ಯುರೋ NCAP ಸುರಕ್ಷತಾ ಪರೀಕ್ಷೆಗಳಲ್ಲಿ ಗರಿಷ್ಠ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ವಯಸ್ಕರ ಸುರಕ್ಷತೆಗಾಗಿ ಮುಂಭಾಗಕ್ಕೆ ನಡೆಸಿದ ಕ್ರಾಷ್‌ನಲ್ಲಿ Honda e:HEV ಒಟ್ಟು 16 ಅಂಕಗಳಲ್ಲಿ 13.6 ಅಂಕಗಳನ್ನು ಗಳಿಸಿದೆ. ಪಾರ್ಶ್ವದ ಕ್ರಾಷ್‌ನಲ್ಲಿ (In a lateral impact) 16 ಅಂಕಗಳ ಪೂರ್ಣ ಸ್ಕೋರ್ ಅನ್ನು ಗಳಿಸಿದೆ.

ವರದಿಗಳ ಪ್ರಕಾರ, ಸಿವಿಕ್‌ನ ಪ್ರಯಾಣಿಕರ ವಿಭಾಗವು ಮುಂಭಾಗದ ಆಫ್‌ಸೆಟ್ ಪರೀಕ್ಷೆಯಲ್ಲಿ ಸ್ಥಿರವಾಗಿತ್ತು. ಚಾಲಕನ ಎದೆಯ ರಕ್ಷಣೆಯ ವಿಷಯದಲ್ಲಿ ದುರ್ಬಲವೆಂದು ರೇಟ್ ಮಾಡಲಾಗಿದ್ದರೂ, ಚಾಲಕ ಮತ್ತು ಪ್ರಯಾಣಿಕರಿಬ್ಬರ ಮೊಣಕಾಲುಗಳು ಮತ್ತು ಎಲುಬುಗಳ ರಕ್ಷಣೆ ವಿಷಯದಲ್ಲಿ ಉತ್ತಮವಾಗಿದೆ ಎಂದು ರೇಟ್‌ ಮಾಡಲಾಗಿದೆ.

ಇದೀಗ ಪರೀಕ್ಷೆಗೆ ಒಳಪಡಿಸಲಾದ ಮಾದರಿಯು ಭಾರತದಲ್ಲಿ ಮಾರಾಟವಾಗುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈ ಕಾರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟವಾಗಲಿದೆ. ಸುರಕ್ಷತೆಯ ವಿಷಯದಲ್ಲಿ ಗರಿಷ್ಟ ಸುರಕ್ಷತೆಯನ್ನು ಪಡೆದ ಹೋಡಾ ಕಾರುಗಳಲ್ಲಿ ಒಂದಾಗಿ ಸಿವಿಕ್ e:HEV ಇದೀಗ ಗುರ್ತಿಸಿಕೊಂಡಿದೆ.

ಪರೀಕ್ಷೆಯಲ್ಲಿ ಬಳಸಲಾದ ಮಾದರಿಯು ಮುಂಭಾಗದ ಕ್ರ್ಯಾಷ್ ಟೆಸ್ಟ್ ಸಮಯದಲ್ಲಿ ಸಂಭವನೀಯ ಗಾಯಗಳನ್ನು ಕಡಿಮೆ ಮಾಡಲು, ಮುಂಭಾಗದ ಪ್ರಯಾಣಿಕರಿಗೆ ಮೊಣಕಾಲು ಏರ್‌ಬ್ಯಾಗ್‌ಗಳು ಮತ್ತು ಮುಂಭಾಗ, ಹಿಂಭಾಗವನ್ನು ರಕ್ಷಿಸಲು ಸೈಡ್ ಏರ್‌ಬ್ಯಾಗ್‌ಗಳು ಸೇರಿದಂತೆ ಒಟ್ಟು 11 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನೀಡಿದ್ದು, ಸಮಯಕ್ಕೆ ಸರಿಯಾಗಿ ತೆರೆದುಕೊಂಡಿವೆ.

ಆದರೆ ಭಾರತದಲ್ಲಿ ಮಾರಾಟವಾಗುವ ಸಿವಿಕ್ ಕೇವಲ 6 ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ. ಮುಂಭಾಗದ ಸೆಂಟರ್ ಏರ್‌ಬ್ಯಾಗ್ ಸಹ ಇದೆ, ಇದು ಮೊದಲ ಬಾರಿಗೆ ಅಡ್ಡ ಪರಿಣಾಮದ ಸಮಯದಲ್ಲಿ (During the side effect) ಚಾಲಕ ಮತ್ತು ಮುಂಭಾಗದ ಪ್ರಯಾಣಿಕರ ನಡುವೆ ಘರ್ಷಣೆಯನ್ನು ತಡೆಯುತ್ತದೆ.

11 ನೇ ತಲೆಮಾರಿನ ಸಿವಿಕ್ ಮುಂಭಾಗದ ಬಾಗಿಲಿನ ಸ್ಟಿಫ್ಫೆನರ್‌ಗಳು ಮತ್ತು ಹಿಂಭಾಗದ ವೀಲ್ ಆರ್ಚ್‌ಗಳ ಚೌಕಟ್ಟುಗಳನ್ನು ಸಹ ಪಡೆಯುತ್ತದೆ, ಅದು ಅಡ್ಡ ಪರಿಣಾಮದ ಕಾರ್ಯಕ್ಷಮತೆಯನ್ನು ಸುಧಾರಿಸುವ ಭರವಸೆ ನೀಡುತ್ತದೆ. ಈ ಮೂಲಕ ಕಾರಿನ ನಿರ್ಮಾಣ ಗುಣಮಟ್ಟವನ್ನು ನಾವು ಊಹಿಸಿಕೊಳ್ಳಬಹುದು.

ಇತ್ತೀಚಿನ ಯುರೋಪಿಯನ್ ಐ-ಸೈಜ್ ಮಾನದಂಡಗಳಿಗೆ ಅನುಗುಣವಾಗಿ ಸಂಯೋಜಿತ ISOFIX ಮೌಂಟಿಂಗ್ ಪಾಯಿಂಟ್‌ಗಳನ್ನು ನೀಡಲಾಗಿದೆ, ಮಕ್ಕಳ ಆಕ್ಯುಪೆಂಟ್ ಪ್ರೊಟೆಕ್ಷನ್ ವಿಭಾಗದಲ್ಲಿ ಮುಂಭಾಗದ ಪ್ರಭಾವದಲ್ಲಿ 16 ರಲ್ಲಿ 13 ಮತ್ತು ಲ್ಯಾಟರಲ್ ಪ್ರಭಾವದಲ್ಲಿ 16 ರಲ್ಲಿ 16 ಅಂಕಗಳನ್ನು ಗಳಿಸಿದೆ.

ಹೊಸ ಸಿವಿಕ್ ವಿಶಾಲವಾದ 100-ಡಿಗ್ರಿ ವ್ಯೂ ಕ್ಯಾಮೆರಾ ಮತ್ತು ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ. ಹೋಂಡಾ ಸಿವಿಕ್ ಯುರೋ ಎನ್‌ಸಿಎಪಿಯಿಂದ ಗರಿಷ್ಠ 5 ಸ್ಟಾರ್ ಸ್ಕೋರ್ ಪಡೆಯುವ ಮೂಲಕ ಸಿಆರ್-ವಿ ಮತ್ತು ಜಾಝ್ ಕುಟುಂಬವನ್ನು ಸೇರುತ್ತದೆ. ಹೋಂಡಾ ಕೂಡ ಇದೀಗ ತನ್ನ ಬಹುತೇಕ ಕಾರುಗಳಿಗೆ ಗರಿಷ್ಟ ಸುರಕ್ಷತೆಯನ್ನು ನೀಡುವ ಕಂಪನಿಯಾಗಿ ಹೊರಹೊಮ್ಮುತ್ತಿದೆ.

Most Read Articles

Kannada
Read more on ಹೋಂಡಾ honda
English summary
Honda civic e hev with maximum safety in euro ncap crash test
Story first published: Thursday, November 17, 2022, 13:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X