ಅಧಿಕ ಮೈಲೇಜ್, ಹೆಚ್ಚಿನ ಭದ್ರತೆಯೊಂದಿಗೆ ಬಿಡುಗಡೆಗೆ ಸಜ್ಜಾದ ಹೋಂಡಾ ಸಿಟಿ ಹೈಬ್ರಿಡ್
ಜನಪ್ರಿಯ ಕಾರು ತಯಾರಕ ಹೋಂಡಾ ಇಂಡಿಯಾ ತನ್ನ ಅತ್ಯಂತ ಜನಪ್ರಿಯ ಮಾದರಿಯಾದ ಸಿಟಿ ಸೆಡಾನ್‌ನ ಹೈಬ್ರಿಡ್ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಾರಿನ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲವಾದರೂ, ಮುಂಬರುವ ತಿಂಗಳುಗಳಲ್ಲಿ ಈ ಮಾದರಿ ರಸ್ತೆಗೆ ಬರಲಿದೆ ಎಂದು ವರದಿಯಾಗಿದೆ.

ಒಂದು ವರ್ಷದ ಹಿಂದೆ ವಾಹನವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದರೂ, ಕೋವಿಡ್-19 ಸಂಬಂಧಿತ ಲಾಕ್‌ಡೌನ್‌ಗಳು ಮತ್ತು ಉತ್ಪಾದನೆಯ ವಿಳಂಬದಿಂದಾಗಿ ಕಾರಿನ ಪಾದಾರ್ಪಣೆ ವಿಳಂಬವಾಯಿತು. ಇದೀಗ ಬಿಡುಗಡೆಗೆ ಸಿದ್ದವಾಗಿರುವ ಹೊಸ ಹೋಂಡಾ ಸಿಟಿ ಹೈಬ್ರಿಡ್ ಸೆನ್ಸಿಂಗ್ ಸೂಟ್ ಅನ್ನು ಹೊಂದಿದೆ, ಇದು ಹಲವಾರು ಚಾಲಕ ಸಹಾಯ ಮತ್ತು ಘರ್ಷಣೆ ತಪ್ಪಿಸುವ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಹೋಂಡಾ ಪೂರ್ಣ ಹೈಬ್ರಿಡ್ ಎಂಜಿನ್ ಜೊತೆಗೆ ಸಿಟಿ ಹೈಬ್ರಿಡ್‌ನಲ್ಲಿ ಸೆನ್ಸಿಂಗ್ ತಂತ್ರಜ್ಞಾನವನ್ನು ಬಿಡುಗಡೆ ಮಾಡಲಿದೆ. ಹೋಂಡಾ ಸೆನ್ಸಿಂಗ್ ತಂತ್ರಜ್ಞಾನವು ಭಾರತದಲ್ಲಿ ಹೋಂಡಾ ಕಾರು ಮತ್ತು ಎಸ್‌ಯುವಿಯಲ್ಲಿ ಪ್ರಸ್ತುತ ಲಭ್ಯವಿಲ್ಲದ ಅನೇಕ ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವ್ಯವಸ್ಥೆಗಳನ್ನು ಒಳಗೊಂಡಿರುವುದಾಗಿ ಕಂಪನಿ ತಿಳಿಸಿದೆ.

ಈ ವೈಶಿಷ್ಟ್ಯಗಳು ಕೆಲವು ವಿದೇಶಗಳಲ್ಲಿ ಈಗಾಗಲೇ ಹೋಂಡಾ ಕಾರುಗಳು ಮತ್ತು ಎಸ್‌ಯುವಿಗಳಲ್ಲಿ ಲಭ್ಯವಿದೆ. ಹಾಗಾಗಿ ಸಿಟಿ ಹೈಬ್ರಿಡ್ ಲೇನ್ ಡಿಪಾರ್ಚರ್ ವಾರ್ನಿಂಗ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಆಟೋ ಹೈ ಬೀಮ್ ಅಸಿಸ್ಟ್ ನಂತಹ ಹೋಂಡಾ ಸೆನ್ಸಿಂಗ್ ವೈಶಿಷ್ಟ್ಯಗಳೊಂದಿಗೆ ಭಾರತಕ್ಕೆ ಬರಲಿದೆ.

ಇದಲ್ಲದೆ, ಮುಂಬರುವ ಹೋಂಡಾ ಸಿಟಿ, ಹೈಬ್ರಿಡ್ ಸ್ಟ್ಯಾಂಡರ್ಡ್ ಸಿಟಿಯಲ್ಲಿ ಕಂಡುಬರುವ ಬಹುತೇಕ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ, ಇದರಲ್ಲಿ ತುರ್ತು ಬ್ರೇಕಿಂಗ್, ಫ್ರಂಟ್ ಕೊಲಿಷನ್ ಎಚ್ಚರಿಕೆ ವ್ಯವಸ್ಥೆ, ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ ಮತ್ತು ಎಬಿಎಸ್ ಸೇರಿವೆ.

ಭಾರತದಲ್ಲಿ ಹೋಂಡಾದ ಅತ್ಯಂತ ಹಳೆಯ ಮತ್ತು ಅಷ್ಟೇ ಜನಪ್ರಿಯ ಸಿಟಿ ಪ್ರೀಮಿಯಂ ಸೆಡಾನ್ ದೇಶದ ಅತ್ಯಂತ ಜನಪ್ರಿಯ ಮಾದರಿಯಾಗಿದೆ. ಹೋಂಡಾ ಇತ್ತೀಚೆಗೆ ಸಿಟಿಯ ಎಲ್‌ಎಚ್‌ಡಿ ಆವೃತ್ತಿಯನ್ನು ಮೆಕ್ಸಿಕೊ ಮತ್ತು ಟರ್ಕಿಯಂತಹ ದೇಶಗಳಿಗೆ ರಫ್ತು ಮಾಡಲು ಪ್ರಾರಂಭಿಸಿತ್ತು.

ಭಾರತದಲ್ಲಿ ಸಿಟಿ ಲೈನ್-ಅಪ್‌ಗೆ ಹೈಬ್ರಿಡ್ ವೇರಿಯಂಟ್ ಅನ್ನು ಸೇರಿಸುವುದರಿಂದ ಹೋಂಡಾ ಈ ವಿಭಾಗದಲ್ಲಿ ತನ್ನ ಪ್ರತಿಸ್ಪರ್ಧಿಗಳ ಮುಂದೆ ಪೈಪೋಟಿ ನೀಡಲು ಸಹಕಾರಿಯಾಗಲಿದೆ, ಆದರೆ ಇದು ಸುರಕ್ಷತೆಯನ್ನು ಬಯಸುವ ಗ್ರಾಹಕರನ್ನು ಈ ಮಾದರಿ ಆಕರ್ಷಿಸಲು ಸಹಾಯ ಮಾಡುತ್ತದೆ. ಹೋಂಡಾ ಸೇಫ್ಟಿ ಸೆನ್ಸ್ ಸೇರ್ಪಡೆ ಮೂಲಕ ಕಂಪನಿಯು ಭಾರತದಲ್ಲಿ ಹೊಸ ಆಯಾಮಗಳನ್ನು ಹುಡುಕುತ್ತಿದೆ.

ಸಿಟಿ ಹೈಬ್ರಿಡ್ ಹೋಂಡಾದ ಐ-ಎಂಎಂಡಿ ಮತ್ತು ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಪರಿಚಯಿಸಲಾಗುವುದು. ಇದನ್ನು ಕಂಪನಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಆರ್-ವಿ ಹೈಬ್ರಿಡ್‌ನಲ್ಲಿ ಮತ್ತು ವಿದೇಶದಲ್ಲಿ ಮಾರಾಟವಾಗುವ ಹೊಸ ಪೀಳಿಗೆಯ ಜಾಜ್‌ನಲ್ಲಿ ಬಳಸುತ್ತಿದೆ. ಹೊಸ ಸಿಟಿ ಐ-ಎಂಎಂಡಿ ಹೈಬ್ರಿಡ್ ಸೆಟಪ್ ಎರಡು ಎಲೆಕ್ಟ್ರಿಕ್ ಮೋಟರ್‌ಗಳು ಮತ್ತು ಆಂತರಿಕ ಎಂಜಿನ್‌ನಿಂದ ಮಾಡಲ್ಪಟ್ಟಿದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೋಂಡಾ ಜಾಜ್ ಇಎಚ್‌ಇವಿ ಆವೃತ್ತಿಯನ್ನು ಬಲಪಡಿಸುವ ತಂತ್ರಜ್ಞಾನವಾಗಿದೆ.

1.5 ಲೀಟರ್, ನಾಲ್ಕು ಸಿಲಿಂಡರ್, ಸ್ವಾಭಾವಿಕ ಆಸ್ಪಿರೇಟೆಡ್ ಅಟ್ಕಿನ್ಸನ್ ಪೆಟ್ರೋಲ್ ಎಂಜಿನ್, ಹೊಸ ಸಿಟಿಯಲ್ಲಿ ಗರಿಷ್ಠ 98 ಬಿಎಚ್‌ಪಿ ಸಾಮರ್ಥ್ಯದೊಂದಿಗೆ 127 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಎಂಜಿನ್‌ನಲ್ಲಿ ಸಂಯೋಜಿಸಲಾದ ಮೊದಲ ಎಲೆಕ್ಟ್ರಿಕ್ ಮೋಟರ್ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ಐಎಸ್‌ಜಿ) ಆಗಿಯೂ ಕಾರ್ಯನಿರ್ವಹಿಸುತ್ತದೆ.

ಎರಡನೇ ಮೋಟರ್ 109 ಬಿಎಚ್‌ಪಿ ಪವರ್ ಮತ್ತು 253 ಎನ್‌ಎಂ ಟಾರ್ಕ್ ಅನ್ನು ಒದಗಿಸುತ್ತದೆ. ಫ್ರಂಟ್ ವೀಲ್ ಡ್ರೈವ್ ಆಗಿರುವ ಈ ವಾಹನವನ್ನು ಸ್ಥಿರ-ಗೇರ್ ಅನುಪಾತದ ಮೂಲಕ ಸ್ಪೋಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೈಬ್ರಿಡ್ ಸೆಟಪ್ ಎಲ್ಲಾ ಮೂರು ಡ್ರೈವ್ ಮೋಡ್‌ಗಳನ್ನು ಸಕ್ರಿಯಗೊಳಿಸುವ ಸಾಧ್ಯತೆಯಿದೆ.

ಮೊದಲನೆಯದು ವಿದ್ಯುತ್ ಮೋಟರ್ ಮಾತ್ರ ಬಳಸುವ ಮೋಡ್ ಆಗಿರುತ್ತದೆ. ಎರಡನೆಯದು ಪೆಟ್ರೋಲ್ ಎಂಜಿನ್ ಅನ್ನು ಮಾತ್ರ ಚಲಿಸುವ ಮತ್ತು ಮೂರನೆಯದನ್ನು ಈ ಎರಡು ಮೋಡ್‌ಗಳೊಂದಿಗೆ ಸಂಯೋಜಿಸಲಾಗುತ್ತದೆ. ಇವೆಲ್ಲವೂ ಕಾರು ವಿವಿಧ ಪರಿಸರಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಸಿಟಿ ಹೈಬ್ರಿಡ್ ಭಾರತದಲ್ಲಿ ಮಾರಾಟ ಮಾಡಲಿರುವ 'ಸಾಮೂಹಿಕ ಮಾರುಕಟ್ಟೆ' ಹೈಬ್ರಿಡ್ ವಾಹನವಾಗಲಿದೆ. ಹೋಂಡಾ ಸಿಟಿ ಹೈಬ್ರಿಡ್ ಮಲೇಷ್ಯಾದ ಪರೀಕ್ಷಾ ಹಂತದಲ್ಲಿ 27.7 ಕಿ.ಮೀ ಮೈಲೇಜ್ ಅನ್ನು ಒದಗಿಸುತ್ತಿದೆ. ಹಾಗಾಗಿ ಸದ್ಯ ಈ ಎರಡು ಪರೀಕ್ಷಾ ವೀಲ್‌ಗಳು ಇದನ್ನೇ ಹೋಲುತ್ತಿರುವುದರಿಂದ ಭಾರತದಲ್ಲೂ ಇದೇ ಮಾದರಿಯ ಅಂಕಿಅಂಶಗಳನ್ನು ನಿರೀಕ್ಷಿಸಲಾಗಿದೆ.

ನೈಜ ರಸ್ತೆಗಳಲ್ಲಿ ಪ್ರಸ್ತುತ ಹೋಂಡಾ ಸಿಟಿ 1.5 ಪೆಟ್ರೋಲ್ ಸಿವಿಟಿ 12 ಕಿ.ಮೀ ಇಂಧನ ದಕ್ಷತೆಯನ್ನು ನೀಡುತ್ತದೆ. ಆದ್ದರಿಂದ ಸಿಟಿ ಹೈಬ್ರಿಡ್ ಮತ್ತು ಪ್ರಮಾಣಿತ ಸಿಟಿ ಹೈಬ್ರಿಡ್ಅನ್ನು ಹೋಲಿಸಿಕೊಂಡರೆ, ಗ್ರಾಹಕರು ಸಿಟಿ ಹೈಬ್ರಿಡ್‌ನಿಂದ 17 ರಿಂದ 19ರ ನಡುವೆ ಮೈಲೇಜ್ ಪಡೆಯಬಹುದು. ಇದು ಮುಂಬರುವ ಸಿಟಿ ಹೈಬ್ರಿಡ್ ಅನ್ನು ಭಾರತದ ಅತ್ಯಂತ ದಕ್ಷ ಕಾರುಗಳಲ್ಲಿ ಒಂದನ್ನಾಗಿ ಮಾಡಲಿದೆ. ಹೋಂಡಾ ಪ್ರತಿ ತಿಂಗಳು ಸುಮಾರು 250-300 ಯುನಿಟ್ ಸಿಟಿ ಹೈಬ್ರಿಡ್ ಅನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಇದು ನಿಯಮಿತ ಮಾದರಿಯ ಸರಾಸರಿ ಮಾಸಿಕ ಮಾರಾಟದ ಅಂಕಿಅಂಶದ ಶೇಕಡಾ 10 ರಷ್ಟಿದೆ. ಹೈಬ್ರಿಡ್ ಕೂಡ ಪೆಟ್ರೋಲ್ ಸೆಡಾನ್ ಗಿಂತ 2 ಲಕ್ಷ ದಿಂದ 2.50 ಲಕ್ಷ ರೂ.ಗಳ ವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅದೇ ರೀತಿ, ಸಿಟಿ ಹೈಬ್ರಿಡ್‌ನ ಟಾಪ್ ಎಂಡ್ ವೇರಿಯಂಟ್‌ಗೆ ಸುಮಾರು 20 ಲಕ್ಷ ರೂ.ಗಳ ಬೆಲೆ ನಿರೀಕ್ಷಿಸಲಾಗಿದೆ.


Click it and Unblock the Notifications