ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ(Hyundai) ತನ್ನ ಹೊಸ ಕ್ಯಾಸ್ಪರ್(Casper) ಮೈಕ್ರೋ ಎಸ್‍ಯುವಿಯನ್ನು ದಕ್ಷಿಣ ಕೊರಿಯಾದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಹುಂಡೈ ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯ ಖರೀದಿಗಾಗಿ ಬಿಡುಗಡೆಯಾದ ಒಂದೇ ದಿನದಲ್ಲಿ 12,000 ಬುಕ್ಕಿಂಗ್‌ಗಳನ್ನು ಪಡೆಡುಕೊಂಡಿತ್ತು.

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಇದೀಗ ಹ್ಯುಂಡೈ ಕಂಪನಿಯು ಕ್ಯಾಸ್ಪರ್ ವ್ಯಾನ್ ಆವೃತ್ತಿಯ ಸೇರ್ಪಡೆಯಿಂದ ಅದರ ಶ್ರೇಣಿಯನ್ನು ವಿಸ್ತರಿಸಿದೆ. ಸಾಮಾನ್ಯ ಸಣ್ಣ ಎಸ್‍ಯುವಿಯ ಎರಡು-ಸೀಟುಗಳ ಲೋಡ್-ಸಾಗಿಸುವ ಆವೃತ್ತಿಯನ್ನು ಹೊಂದಲು ಬಯಸುವ ಜನರನ್ನು ಇದು ಗುರಿಯಾಗಿಸುತ್ತದೆ. ಹೊರಭಾಗದಲ್ಲಿ, ಹ್ಯುಂಡೈ ಕ್ಯಾಸ್ಪರ್ ವ್ಯಾನ್ ಸ್ಟ್ಯಾಂಡರ್ಡ್ ಮಾದರಿಯಂತೆಯೇ ಕಾಣುತ್ತದೆ ಆದರೆ ಒಳಗಿನ ಬದಲಾವಣೆಗಳು ಹೆಚ್ಚು ಉಪಯುಕ್ತ ಸ್ಥಳವನ್ನು ನೀಡಲು ಸ್ಪಷ್ಟವಾಗಿದೆ. ಸಾಮರ್ಥ್ಯವು 940 ಲೀಟರ್‌ಗೆ ಹೆಚ್ಚಾದಂತೆ ಹೆಚ್ಚುವರಿ ಸರಕುಗಳಿಗೆ ಸ್ಥಳಾವಕಾಶ ಕಲ್ಪಿಸಲು ಹಿಂದಿನ ಸೀಟುಗಳನ್ನು ತೆಗೆದುಹಾಕಲಾಗಿದೆ.ಒಟ್ಟಾರೆ 3,595 ಮಿಮೀ ಉದ್ದವನ್ನು ಹೊಂದಿರುವ ಸಣ್ಣ ಕಾರಿಗೆ ಇದು ಸಾಕಷ್ಟು ಹೆಚ್ಚು.

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಹೆಚ್ಚುವರಿ ರಕ್ಷಣೆಯ ಹ್ಯುಂಡೈ ಹಿಂಭಾಗದ ವಿಂಡೋಗಳಲ್ಲಿ ಮೆಟಲ್ ಬಾರ್‌ಗಳನ್ನು ಸ್ಥಾಪಿಸಿದೆ ಮತ್ತು ಹಿಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಭಾಗಿಸಿದ ರೀತಿಯಲ್ಲಿ ಸಹ ಇದನ್ನು ಕಾಣಬಹುದು. ಬೆಲೆಗೆ ಸಂಬಂಧಿಸಿದಂತೆ, ಕ್ಯಾಸ್ಪರ್ ವ್ಯಾನ್ ವಾನ್ (ಅಂದಾಜು ರೂ.8.64 ಲಕ್ಷ) ರಿಂದ ಪ್ರಾರಂಭವಾಗುವುದರಿಂದ ಸಾಮಾನ್ಯ ಆವೃತ್ತಿಯ ಬೆಲೆಯನ್ನು ಹೋಲುತ್ತದೆ. ಇದನ್ನು ಎಂಟ್ರಿ ಲೆವೆಲ್ ಸ್ಮಾರ್ಟ್ ಟ್ರಿಮ್‌ನಲ್ಲಿ ಮಾತ್ರ ನೀಡಲಾಗುತ್ತದೆ.

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಮೂಲ ರೂಪಾಂತರದಲ್ಲಿ ಮಾತ್ರ ಮಾರಾಟವಾಗುವುದರಿಂದ, ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುವುದಿಲ್ಲ ಆದರೆ ಇತರ ಫೀಚರ್ಸ್ ಗಳನ್ನು ಹೊಂದಿದೆ. ಇದು 4.2-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಎರಡು-ಸ್ಪೀಕರ್ ಆಡಿಯೊ ಸಿಸ್ಟಮ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಬ್ಲೂಟೂತ್ ಸಂಪರ್ಕ, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿವೆ.

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಇನ್ನು ಮೆಟಲ್ ರೂಫ್ ರ್ಯಾಂಕ್ ಅನ್ನು ಅವರು ಅಗತ್ಯವಿದ್ದಲ್ಲಿ ಬಿಡಿಭಾಗಗಳಿಂದ ಆಯ್ಕೆ ಮಾಡಬಹುದು. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, 1.0-ಲೀಟರ್ ಮೂರು-ಸಿಲಿಂಡರ್ ನ್ಯಾಚುರಲ್ ಅಸ್ಪೈರಡ್ ಪೆಟ್ರೋಲ್ ಎಂಜಿನ್ 75 ಬಿಹೆಚ್‍ಪಿ ಪವರ್ ಅನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ನಾಲ್ಕು-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ, ಇದು ಮುಂಭಾಗದ ವ್ಹೀಲ್ ಗಳಿಗೆ ಮಾತ್ರ ಪವರ್ ಅನ್ನು ಕಳುಹಿಸುತ್ತದೆ.

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಕ್ಯಾಸ್ಪರ್ ಭಾರತಕ್ಕೆ ತುಂಬಾ ಚಿಕ್ಕದಾಗಿದೆ ಎಂದು ಪರಿಗಣಿಸಬಹುದಾದರೂ, ಸದ್ಯದಲ್ಲಿಯೇ ಪ್ರಸ್ತುತ ಟಾಟಾ ಪಂಚ್ ನೇತೃತ್ವದ ಮೈಕ್ರೋ ಎಸ್‌ಯುವಿಯನ್ನು ಪ್ರವೇಶಿಸಲು ಹುಂಡೈ ಪರಿಗಣಿಸಬಹುದು. ಮೈಕ್ರೋ ಎಸ್‍ಯುವಿ ಭಾರತದಲ್ಲಿ 2023 ರಲ್ಲಿ ಬಿಡುಗಡೆಯಾಗಲಿದೆ ಆದ್ದರಿಂದ ಈ ವರ್ಷದ ಅಂತ್ಯದ ವೇಳೆಗೆ ಈ ಮಾದರಿಯು ರೋಡ್ ಟೆಸ್ಟ್ ಅನ್ನು ಪ್ರಾರಂಭಿಸಬಹುದು.

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಇನ್ನು ಹೊಸ ಎಂಟ್ರಿ ಲೆವೆಲ್ ಮೈಕ್ರೋ ಎಸ್‍ಯುವಿಗೆ ಸದ್ಯಕ್ಕೆ Ai3 ಎಂಬ ಕೋಡ್ ನೇಮ್ ಅನ್ನು ನೀಡಲಾಗಿದೆ, ಹೊಸ ಹ್ಯುಂಡೈ ಮೈಕ್ರೋ ಎಸ್‍ಯುವಿ ಮಾದರಿಯು ಭಾರತದಲ್ಲಿ ಮಾರುತಿ ಸುಜುಕಿ ಇಗ್ನಿಸ್, ಇತ್ತೀಚೆಗೆ ಬಿಡುಗಡೆಯಾದ ಟಾಟಾ ಪಂಚ್ ಮತ್ತು ಮಹೀಂದ್ರಾ KUV100 ಮಾದರಿಗಳಿಗೆ ಪೈಪೋಟಿ ನೀಡುತ್ತದೆ. Ai3 ಮಾದರಿಯು ಬಹುಶಃ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆ ಮಾಡಲಾದ ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯ ಹೆಚ್ಚು ಸ್ಥಳೀಯ ಆವೃತ್ತಿಯಾಗಿದೆ.

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಸದ್ಯಕ್ಕೆ, ಹ್ಯುಂಡೈ Ai3 ಗಾಗಿ ಯಾವ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ ಎಂಬುದು ನಮಗೆ ತಿಳಿದಿಲ್ಲ. ಹ್ಯುಂಡೈ ಹೊಸ ಮೈಕ್ರೋ ಎಸ್‍ಯುವಿಗಾಗಿ ಭಾರತದಲ್ಲಿ ಬೇರೆ ಹೆಸರನ್ನು ಬಳಸಬಹುದು. ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಗೊಂಡ ಹ್ಯುಂಡೈ ಕ್ಯಾಸ್ಪರ್ ಸಣ್ಣ ಎಸ್‍ಯುವಿಯಲ್ಲಿರುವ ಅದೇ ಎರಡು ಎಂಜಿನ್ ಆಯ್ಕೆಯನ್ನು ನೀಡಬಹುದು,

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಈ ಹ್ಯುಂಡೈ ಮೈಕ್ರೋ ಎಸ್‍ಯುವಿಯು 3,595 ಎಂಎಂ ಉದ್ದ, 1,595 ಎಂಎಂ ಅಗಲ ಮತ್ತು 1,575 ಎಂಎಂ ಎತ್ತರವನ್ನು ಹೊಂದಿದೆ. ಇದು ಸ್ಯಾಂಟ್ರೊ ಹ್ಯಾಚ್‌ಬ್ಯಾಕ್‌ಗಿಂತ ಚಿಕ್ಕದಾಗಿದೆ. ಆದರೆ ಇದು ಕ್ಯಾಬಿನ್‌ನಲ್ಲಿ ಯೋಗ್ಯವಾದ ಜಾಗವನ್ನು ಹೊಂದಿದೆ. ಈ ಕ್ಯಾಸ್ಪರ್ ನಾಲ್ಕು ಸೀಟ್ ಮಾದರಿಯಾಗಿದೆ. ಆದರೆ ನಾಲ್ಕೂ ಸೀಟುಗಳು ಉತ್ತಮ ಸೌಕರ್ಯ ಮತ್ತು ಬೆಂಬಲವನ್ನು ನೀಡುತ್ತವೆ. ಭಾರತದ ಮಾದರಿಯಲ್ಲಿ ಸಣ್ಣ ಬದಲಾವಣೆ ನಡೆಸಬಹುದು ಎಂದು ನಿರೀಕ್ಷಿಸುತ್ತೇವೆ

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಕ್ಯಾಸ್ಪರ್ ಮಾದರಿಯಲ್ಲಿ ಎರಡೂ ಮುಂಭಾಗದ ಸೀಟುಗಳನ್ನು ಫ್ಲಾಟ್ ಆಗಿ ಮಡಚಬಹುದು, ಇದು ಪ್ರೊಡಕ್ಷನ್ ಕಾರ್‌ಗೆ ವಿಶ್ವದಲ್ಲೇ ಮೊದಲನೆಯದು. ಹೀಗಾಗಿ ಮೇಕ್-ಶಿಫ್ಟ್ ಕ್ಯಾಂಪಿಂಗ್ ಟೇಬಲ್‌ಗಳಾಗಿ ಕಾರ್ಯನಿರ್ವಹಿಸುತ್ತದೆ. ಹಿಂಭಾಗದ ಸೀಟುಗಳನ್ನು ಪ್ರತ್ಯೇಕವಾಗಿ 160 ಎಂಎಂ ಮುಂದಕ್ಕೆ ಮತ್ತು ಹಿಂದಕ್ಕೆ ಸ್ಲೈಡ್ ಮಾಡಬಹುದು. ಇನ್ನು 39 ಡಿಗ್ರಿಗಳವರೆಗೆ ಒರಗಬಹುದು, ಇದು ಹಿಂಭಾಗದ ಪ್ರಯಾಣಿಕರ ಉತ್ತಮ ಸೌಕರ್ಯ ಹೊಂದಿದೆ,

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಈ ಹೊಸ ಮೈಕ್ರೋ ಎಸ್‍ಯುವಿಯಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಪೂರ್ಣ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ (ಎರಡು-ಸ್ಪೋಕ್, ಫ್ಲಾಟ್-ಬಾಟಮ್ ವಿನ್ಯಾಸ), ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೀಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ, ವೆಂಟಿಲೇಟೆಡ್ ಡ್ರೈವರ್ ಸೀಟ್ ಮತ್ತು.ಮುಂತಾದ ಹಲವು ಫೀಚರ್ಸ್ ಗಳನ್ನು ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ. ಈ ಹೊಸ ಹುಂಡೈ ಪ್ರಾಜೆಕ್ಟ್ AX1 ನ ಉತ್ಪಾದನೆಯ ಆವೃತ್ತಿಯಾದ ಹ್ಯುಂಡೈ ಕ್ಯಾಸ್ಪರ್ ಸಿಟಿ ಮೂಲದ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳುತ್ತದೆ. ಹ್ಯುಂಡೈ ಐ10 ಗಾಗಿ ಬಳಸಿದ ಪ್ಲಾಟ್‌ಫಾರ್ಮ್ ಅನ್ನು ಕಾರು ಹಂಚಿಕೊಂಡಿದೆ,

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಅಂದರೆ ಕೋನಾ ಅಥವಾ ವೆನ್ಯೂ ಎಸ್‌ಯುವಿಗಳಿಗೆ ಹೋಲಿಸಿದರೆ ಇದು ಗಾತ್ರದಲ್ಲಿ ಚಿಕ್ಕದಾಗಿದೆ.ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯು ಆಕರ್ಷಕ ಬಾಕ್ಸಿ ವಿನ್ಯಾಸವನ್ನು ಹೊಂದಿದೆ. ಈ ಮಕ್ರೋ ಎಸ್‍ಯುವಿಯು ವೃತ್ತಾಕಾರದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸುತ್ತಿನ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿಸಿ, ದೊಡ್ಡ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳ ತೆಳುವಾದ ಸ್ಟ್ರಿಪ್ ಟರ್ನ್ ಇಂಡಿಕೇಟರ್‌ಗಳು, ಸ್ಪ್ಲಿಟ್ ಟೈಲ್ ಲ್ಯಾಂಪ್ಸ್, ರೂಫ್ ಮೇಲೆ ಜೋಡಿಸಲಾದ ಸ್ಪಾಯ್ಲರ್ ಜೊತೆಗೆ ಟೈಲ್ ಗೇಟ್ ಅನ್ನು ಒಳಗೊಂಡಿದೆ.

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಇನ್ನು ಈ ಮೈಕ್ರೋ ಎಸ್‍ಯುವಿಯಲ್ಲಿ 7-ಏರ್‌ಬ್ಯಾಗ್‌ಗಳು, TPMS, ಫಾರ್ವರ್ಡ್ ಕಾಲಿಷನ್ ಅವೈಡನ್ಸ್ ಅಸಿಸ್ಟ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಡ್ರೈವರ್ ಅಟೆಕ್ಷನ್ ಮಾನಿಟರ್, ಇತ್ಯಾದಿ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳು ಲಭ್ಯವಿದೆ. ಇನ್ನು ಈ ಪುಟ್ಟ ಎಸ್‍ಯುವಿಯಲ್ಲಿ ಸ್ನೋ, ಸ್ಯಾಂಡ್ ಮತ್ತು ಮಾಡ್ ಎಂಬ ಡ್ರೈವಿಂಗ್ ಮೋಡ್ ಗಳನ್ನು ಒಳಗೊಂಡಿದೆ. ಈ ಮೈಕ್ರೊ ಎಸ್‍ಯುವಿಯು ಬೋರ್ಗ್‌ವರ್ನರ್ ಇಂಟಿಗ್ರೇಟೆಡ್ ಡ್ರೈವ್ ಮಾಡ್ಯೂಲ್ (ಐಡಿಎಂ) ಅನ್ನು ಒಳಗೊಂಡಿರುತ್ತದೆ.

ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯನ್ನು ವ್ಯಾನ್ ವರ್ಷನ್‌ನಲ್ಲಿ ಪರಿಚಯಿಸಿದ ಹುಂಡೈ

ಹ್ಯುಂಡೈ ಕಂಪನಿಯು ಹಲವು ಜನಪ್ರಿಯ ಮಾದರಿಗಳು ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರೊಂದಿಗೆ ಹ್ಯುಂಡೈ ಕಂಪನಿಯು ಈ ವರ್ಷ ಭಾರತದಲ್ಲಿ ಹಲವು ಕಾರುಗಳನ್ನು ಬಿಡುಗಡೆಗೊಳಿಸಲಿವೆ. ಆದರೆ ಈ ಹೊಸ ಮೈಕ್ರೋ ಎಸ್‍ಯುವಿಯನ್ನು ಕೂಡ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

Article Published On: Saturday, February 5, 2022, 12:53 [IST]
English summary
Hyundai casper micro suv gets van version engine features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+