ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಮೇಕ್ ಇನ್ ಇಂಡಿಯಾ ಯೋಜನೆ ಆರಂಭದ ನಂತರ ವಿವಿಧ ಕಾರು ಉತ್ಪಾದನಾ ಕಂಪನಿಗಳು ಭಾರತದಲ್ಲಿ ವಿವಿಧ ವಾಹನಗಳ ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಮಾತ್ರ ವಿದೇಶಿ ಮಾರುಕಟ್ಟೆಗಳಿಗೂ ಭಾರತದಿಂದಲೇ ಪ್ರಮುಖ ಕಾರು ಮಾದರಿಗಳನ್ನು ರಫ್ತುಗೊಳಿಸುತ್ತಿವೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಭಾರತದಿಂದ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಪ್ರತಿ ವರ್ಷ ಸುಮಾರು 2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಫ್ತುಗೊಳ್ಳುತ್ತಿದ್ದು, ರಫ್ತುಗೊಳ್ಳುವ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹ್ಯುಂಡೈ ನಿರ್ಮಾಣದ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಅಗ್ರಸ್ಥಾನದಲ್ಲಿದೆ. ನ್ಯೂ ಜನರೇಷನ್ ಮಾದರಿಯೊಂದಿಗೆ ಬಿಡುಗಡೆಯ ನಂತರ ಕ್ರೆಟಾ ಕಾರಿನ ಬೇಡಿಕೆಯು ಸಾಕಷ್ಟು ಹೆಚ್ಚಳವಾಗಿದ್ದು, 2021ರ ಕಾರು ರಫ್ತು ಪ್ರಮಾಣದಲ್ಲಿ ಶೇ.26.1 ರಷ್ಟು ಬೆಳವಣಿಗೆಯೊಂದಿಗೆ 32,799 ಯುನಿಟ್ ಮಾರಾಟ ಮಾಡಿದೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಹ್ಯುಂಡೈ ಇಂಡಿಯಾ ಕಂಪನಿಯು 2021ರಲ್ಲಿ ಒಟ್ಟು 42,238 ಯುನಿಟ್ ಎಸ್‌ಯುವಿ ಮಾದರಿಗಳನ್ನು ರಫ್ತು ಮಾಡಿದ್ದು, 32,799 ಯುನಿಟ್ ರಫ್ತು ಪ್ರಮಾಣದೊಂದಿಗೆ ಕ್ರೆಟಾ ಅಗ್ರಸ್ಥಾನದಲ್ಲಿದ್ದರೆ 7,698 ಯುನಿಟ್ ರಫ್ತು ಪ್ರಮಾಣದೊಂದಿಗೆ ವೆನ್ಯೂ ಎರಡನೇ ಸ್ಥಾನ ಮತ್ತು 1,741 ಯುನಿಟ್ ರಫ್ತು ಪ್ರಮಾಣದೊಂದಿಗೆ ಮೂರನೇ ಸ್ಥಾನದಲ್ಲಿದೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಭಾರತದಿಂದ ರಫ್ತುಗೊಳ್ಳುವ ಎಸ್‌ಯುವಿ ವಿಭಾಗದಲ್ಲಿ ಹ್ಯುಂಡೈ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾದಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ಥಾನಪಡೆದಿದ್ದು, ಒಟ್ಟಾರೆ ಕಾರುಗಳ ರಫ್ತು ಪ್ರಮಾಣದಲ್ಲಿ ಮಾತ್ರ ಮಾರುತಿ ಸುಜುಕಿ ಅಗ್ರಸ್ಥಾನದಲ್ಲಿದ್ದರೆ ಹ್ಯುಂಡೈ ಕಂಪನಿಯು ಎರಡನೇ ಸ್ಥಾನದಲ್ಲಿದೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಹ್ಯುಂಡೈ ಕಂಪನಿಯು ಭಾರತದಿಂದ ಯುರೋಪಿನ ಪ್ರಮುಖ ರಾಷ್ಟ್ರಗಳ ಜೊತೆ ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಪ್ರಮುಖ ರಾಷ್ಟ್ರಗಳಿಗೆ ಕಾರು ರಫ್ತು ಮಾಡುತ್ತಿದ್ದು, ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಉನ್ನತೀಕರಣಗೊಂಡ ನಂತರ ಕ್ರೆಟಾ ಕಾರು ಮಾದರಿಯು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

2020ರ ಮಾರ್ಚ್ 16ರಂದು ನ್ಯೂ ಜನರೇಷನ್ ಕ್ರೆಟಾ ಕಾರು ಮಾದರಿಯನ್ನು ಭಾರೀ ಬದಲಾವಣೆಯೊಂದಿಗೆ ಬಿಡುಗಡೆಗೊಳಿಸಿದ್ದ ಹ್ಯುಂಡೈ ಕಂಪನಿಯು 22 ತಿಂಗಳ ಅವಧಿಯಲ್ಲಿ ಬರೋಬ್ಬರಿ 1.70 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟಗೊಳಿಸಿದ್ದು, ಹೊಸ ಕಾರು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಕ್ರೆಟಾ ಮಾದರಿಯನ್ನು ಭಾರತದಲ್ಲಿ ಮೊದಲ ಬಾರಿಗೆ 2016ರಲ್ಲಿ ಪರಿಚಯಿಸಿದ್ದ ಹ್ಯುಂಡೈ ಕಂಪನಿಯು 2020ರ ಮಾರ್ಚ್‌ನಲ್ಲಿ ನ್ಯೂ ಜನರೇಷನ್ ಮಾದರಿಯೊಂದಿಗೆ ಬಿಡುಗಡೆ ಮಾಡಿತ್ತು. ನ್ಯೂ ಜನರೇಷನ್ ಮಾದರಿಯೊಂದಿಗೆ ಹ್ಯುಂಡೈ ಕಂಪನಿಯು ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದ್ದು, ಭಾರತದಲ್ಲಿ ಬಿಡುಗಡೆಯಾದ ನಂತರ ಇದುವರೆಗೆ ಒಟ್ಟು 5 ಲಕ್ಷ ಯುನಿಟ್ ಮಾರಾಟಗೊಂಡಿದೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಕೈಗೆಟುಕುವ ಬೆಲೆ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಕ್ರೆಟಾ ಕಾರು ಕಾಲ ಕಾಲಕ್ಕೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳುತ್ತಾ ಗ್ರಾಹಕರ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಹ್ಯುಂಡೈ ಕಂಪನಿಯ ಇತರೆ ಕಾರುಗಳ ಮಾದರಿಗಳ ಪೈಕಿ ಕ್ರೆಟಾ ಮಾದರಿಯು ಭಾರೀ ಪ್ರಮಾಣದ ಆದಾಯ ತಂದುಕೊಟ್ಟಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳ ಮಾರಾಟದಲ್ಲಿ ಇತರೆ ಮಾದರಿಗಳಿಂತಲೂ ಹೆಚ್ಚು ದುಬಾರಿಯಾಗಿದ್ದರೂ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಹೊಸ ಕಾರು ಹಳೆಯ ತಲೆಮಾರಿನ ಆವೃತ್ತಿಗಿಂತಲೂ ಹೆಚ್ಚು ಬಲಿಷ್ಠ, ಪ್ರೀಮಿಯಂ ಫೀಚರ್ಸ್ ಮತ್ತು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಬಿಎಸ್-6 ಎಂಜಿನ್ ಜೋಡಣೆ ನಂತರ ಹೊಸ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಕ್ರೆಟಾ ಆವೃತ್ತಿಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದ್ದು, ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಯನ್ನು ಹಾಗೂ ಪರ್ಫಾಮೆನ್ಸ್ ಪ್ರಿಯರು 1.4-ಲೀಟರ್ ಟರ್ಬೋ ಪೆಟ್ರೋಲ್ ಖರೀದಿಸಬಹುದಾಗಿದೆ.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

1.5-ಲೀಟರ್ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಭಾರತದಿಂದ ಅತಿಹೆಚ್ಚು ರಫ್ತುಗೊಳ್ಳುವ ಎಸ್‌ಯುವಿ ಕಾರು ಪಟ್ಟಿಯಲ್ಲಿ ಕ್ರೆಟಾ ಮಾದರಿಗೆ ಅಗ್ರಸ್ಥಾನ!

ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.22 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.17.93 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಕೆಲವೇ ದಿನಗಳಲ್ಲಿ 2022ರ ಮಾದರಿಯೊಂದಿಗೆ ಮಾರುಕಟ್ಟೆ ಪ್ರವೇಶಿಸುವ ನೀರಿಕ್ಷೆಯಲ್ಲಿದೆ.

Article Published On: Wednesday, January 26, 2022, 12:21 [IST]
English summary
Hyundai creta compact suv is the most exported car from india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+