ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ಹ್ಯುಂಡೈ ಕಂಪನಿಯು ಹೆಚ್ಚಾಗಿ ಎಸ್‍ಯುವಿ ಮಾದರಿಗಳನ್ನು ಮಾರಾಟಗೊಳಿಸುತ್ತಿದೆ. ಇದಿಗ ಹ್ಯುಂಡೈ ಕಂಪನಿಯು ಭಾರತದಲ್ಲಿ ಉಳಿದಿರುವ ಕೆಲವು ಎಕ್ಸಿಕ್ಯೂಟಿವ್ ಸೆಡಾನ್‌ಗಳಲ್ಲಿ ಒಂದಾದ ಎಲಾಂಟ್ರಾವನ್ನು ಭಾರತೀಯ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆಗಳಿದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ಹ್ಯುಂಡೈ ಇಂಡಿಯಾ ಕಂಪನಿಯು ಭಾರತದ ವೆಬ್‌ಸೈಟ್‌ನಿಂದ ಎಲಾಂಟ್ರಾ ಸೆಡಾನ್ ಅನ್ನು ತೆಗೆದುಹಾಕಲಾಗಿದೆ. ವರದಿಗಳ ಪ್ರಕಾರ, ಅನೇಕ ಹುಂಡೈ ಡೀಲರ್ ಎಲಾಂಟ್ರಾ ಕಾರು ಖರೀದಿಗೆ ಬುಕ್ಕಿಂಗ್ ಅನ್ನು ಸ್ವೀಕರಿಸುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಹುಂಡೈ ಎಲಾಂಟ್ರಾವನ್ನು ಸ್ಥಗಿತಗೊಳಿಸಿದ್ದರೆ, ಹ್ಯುಂಡೈ ಈ ಕಾರಿನ ಫಾರ್ಟ್ಸ್ ಕೊರತೆಯನ್ನು ಎದುರಿಸುತ್ತಿರುವ ಸಾಧ್ಯತೆಯಿದೆ ಮತ್ತು ತಾತ್ಕಾಲಿಕವಾಗಿ ಎಲಾಂಟ್ರಾ ಸೆಡಾನ್ ಕಾರನ್ನು ಸ್ಥಗಿತಗೊಳಿಸಿದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ಹ್ಯುಂಡೈ ಕಂಪನಿಯು ಭಾರತದಲ್ಲಿ ನ್ಯೂ ಜನರೇಷನ್ ಎಲಾಂಟ್ರಾವನ್ನು ಪ್ರಾರಂಭಿಸಲು ತಯಾರಾಗುತ್ತಿರುವ ಸಾಧ್ಯತೆಯಿದೆ. ಹಲವಾರು ಅಂತರಾಷ್ಟ್ರೀಯ ಮಾರುಕಟ್ಟೆಗಳು ಈಗಾಗಲೇ ನ್ಯೂ-ಜನರೇಷನ್ ಎಲಾಂಟ್ರಾ ಮಾದರಿಯು ಮಾರಾಟವಾಗುತ್ತಿವೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ಒಂದು ಕಾಲದಲ್ಲಿ, ಕಾರ್ಯನಿರ್ವಾಹಕ ಸಿ-ಸೆಗ್ಮೆಂಟ್ ಜಾಗವನ್ನು ಹೋಂಡಾ ಸಿವಿಕ್, ಟೊಯೊಟಾ ಕೊರೊಲ್ಲಾ, ಸ್ಕೋಡಾ ಆಕ್ಟೇವಿಯಾ ಮತ್ತು ಎಲಾಂಟ್ರಾ ಮುಂತಾದ ಆಕರ್ಷಕ ಮಾದರಿಗಳು ಪ್ರಾಬಲ್ಯ ಹೊಂದಿದ್ದವು. ಈಗ ಭಾರತದಲ್ಲಿ ಆಕ್ಟೇವಿಯಾ ಮಾತ್ರ ಮಾರಾಟದಲ್ಲಿದೆ. ಹ್ಯುಂಡೈ ಇಂಡಿಯಾ ಎಲಾಂಟ್ರಾವನ್ನು ಸ್ಥಗಿತಗೊಳಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಿಲ್ಲ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ಇಂಡಿಯಾ-ಸ್ಪೆಕ್ ಎಲಾಂಟ್ರಾ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬಂದಿತು. ಇದು 2.0-ಲೀಟರ್ ನ್ಯಾಚುರಲ್ ಆಕಾಂಕ್ಷೆಯ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ CRDi ಡೀಸೆಲ್ ಎಂಜಿನ್ ಆಗಿದೆ. ಇದರಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 192 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ 114 ಬಿಹೆಚ್‌ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.ಈ ಎರಡೂ ಎಂಜಿನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿವೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ನ್ಯೂ ಜನರೇಷನ್ ಹೊಸ ಹ್ಯುಂಡೈ ಎಲಾಂಟ್ರಾ ಕಾರನ್ನು ಹೊಸ ಕೆ3 ಪ್ಲಾಟ್‌ಫಾರಂನಲ್ಲಿ ತಯಾರಿಸಲಾಗಿದೆ. ಈ ಹೊಸ ಕಾರು ಹಳೆಯ ಕಾರಿಗಿಂತ 56 ಎಂಎಂ ಹೆಚ್ಚು ಅಗಲ ಹಾಗೂ 26 ಎಂಎಂ ಹೆಚ್ಚು ಎತ್ತರವನ್ನು ಹೊಂದಿದೆ. ಕಡಿಮೆ ತೂಕದ ಬಿಡಿ ಭಾಗಗಳನ್ನು ಅಳವಡಿಸಿರುವುದರಿಂದ ತೂಕವೂ ಸಹ ಕಡಿಮೆಯಾಗಿದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ಎಕ್ಸಿಕ್ಯೂಟಿವ್ ಸೆಡಾನ್ ಕಾರು ಸೆಗ್ ಮೆಂಟಿನಲ್ಲಿ ಹ್ಯುಂಡೈ ಕಂಪನಿಯ ಎಲಾಂಟ್ರಾ ಕಾರು ಪ್ರಪಂಚದಾದ್ಯಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಬಾನೆಟ್, ಗ್ರಿಲ್ ಸಿಸ್ಟಂ, ಬಂಪರ್ ಸಿಸ್ಟಂ, ಹಿಂಭಾಗದ ವಿನ್ಯಾಸಗಳಿಂದ ಈ ಕಾರು ಸಂಪೂರ್ಣವಾಗಿ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ. ಈ ಕಾರಿನಲ್ಲಿ ಎಲ್‌ಇಡಿ ಹೆಡ್‌ಲೈಟ್‌, ದೊಡ್ಡ ಗಾತ್ರದ ಗ್ರಿಲ್ ಸಿಸ್ಟಂ, 17 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಹಾಗೂ ಎಲ್‌ಇಡಿ ಲೈಟ್ ಬಾರ್ ಗಳನ್ನು ಅಳವಡಿಸಲಾಗಿದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ನ್ಯೂ ಜನರೇಷನ್ ಹ್ಯುಂಡೈ ಎಲಾಂಟ್ರಾ ಕಾರಿನ ಇಂಟಿರಿಯರ್ ಅನ್ನು ಹೆಚ್ಚಿಸಲಾಗಿದೆ. ಈ ಕಾರು ಡ್ಯಾಶ್‌ಬೋರ್ಡ್‌ನಲ್ಲಿ ಎರಡು 10.25 ಇಂಚಿನ ಸ್ಕ್ರೀನ್ ಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಟಚ್-ಸ್ಕ್ರೀನ್ ಇನ್ಫೋಟೈನ್ಮೆಂಟ್, ಆದರೆ ಮತ್ತೊಂದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಗಿದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ಈ ಕಾರಿನ ಪ್ರಮುಖವಾದ ಫೀಚರ್ ಗಳೆಂದರೆ 4-ಸ್ಪೋಕ್ ಸ್ಟೀಯರಿಂಗ್ ವ್ಹೀಲ್, ನಾಲ್ಕು ಎಸಿ ವೆಂಟ್ಸ್, ಡ್ರೈವರ್ ಸೀಟ್ ಹಾಗೂ ಫ್ರಂಟ್ ಸೀಟ್ ಪ್ಯಾಸೆಂಜರ್. ಈ ಕಾರಿನಲ್ಲಿ ಅಳವಡಿಸಿರುವ ಬಿಡಿಭಾಗಗಳು ಅತ್ಯುತ್ತಮ ಗುಣಮಟ್ಟವನ್ನು ಹೊಂದಿವೆ. ಈ ಹೊಸ ಹ್ಯುಂಡೈ ಕಾರಿನಲ್ಲಿ ಹಲವಾರು ಫೀಚರ್ ಗಳಿದ್ದು, ಇವುಗಳನ್ನು ಬ್ಲೂಲಿಂಕ್ ಪ್ರೊಸೆಸರ್ ಮೂಲಕ ಆಕ್ಸೆಸ್ ಮಾಡಬಹುದು. ಇನ್ನು ಈ ಸಿಸ್ಟಂ, ವಾಯ್ಸ್ ಕಮಾಂಡ್ ಫೀಚರ್ ಅನ್ನು ಹೊಂದಿದೆ. ಇದರಲ್ಲಿರುವ ಇನ್ಫೋಟೇನ್ ಮೆಂಟ್ ಸಿಸ್ಟಂ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳನ್ನು ಬೆಂಬಲಿಸುತ್ತದೆ. ಹೊಸ ಕಾರಿನಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್, ಆಂಬಿಯೆಂಟ್ ಲೈಟ್ ಸಿಸ್ಟಂ, ಡಿಜಿಟಲ್ ಕೀ ಸ್ಮಾರ್ಟ್‌ಫೋನ್ ಪ್ರೊಸೆಸರ್, 8 ಸ್ಪೀಕರ್‌ಗಳ ಸೌಂಡ್ ಸಿಸ್ಟಂ, ಎಲೆಕ್ಟ್ರಿಕ್ ಸನ್‌ರೂಫ್ ಗಳಿವೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ನ್ಯೂ ಜನರೇಷನ್ ಹ್ಯುಂಡೈ ಎಲಾಂಟ್ರಾದಲ್ಲಿ ಮೊದಲ ಬಾರಿಗೆ ಹೈಬ್ರಿಡ್ ಟೆಕ್ನಾಲಜಿಯನ್ನು ನೀಡಲಾಗುತ್ತಿದೆ. 1.6-ಲೀಟರ್ ಜಿಟಿಐ ಪೆಟ್ರೋಲ್ ಎಂಜಿನ್ ಅನ್ನು 32 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಎಲೆಕ್ಟ್ರಿಕ್ ಮೋಟರ್ 1.32 ಕಿ.ವ್ಯಾನ ಲಿಥಿಯಂ-ಐಯಾನ್ ಬ್ಯಾಟರಿಯಲ್ಲಿ ಚಲಿಸುತ್ತದೆ. ಈ ಹೈಬ್ರಿಡ್ ಮಾದರಿಯು 139 ಬಿಹೆಚ್‌ಪಿ ಪವರ್ ಹಾಗೂ 264 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡಿನ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಈ ಕಾರು ಎಲೆಕ್ಟ್ರಿಕ್ ಮೋಟರ್ ನಲ್ಲಿ ಕೆಲ ದೂರದವರೆಗೆ ಮಾತ್ರ ಚಲಿಸುತ್ತದೆ. ಭಾರತದಲ್ಲಿ ಬಿಡುಗಡೆಯಾಗುವಾಗ, ಕಿಯಾ ಸೆಲ್ಟೋಸ್ ಕಾರಿನಲ್ಲಿರುವ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಬಹುದು.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಲಾಂಟ್ರಾ ಕಾರಿನ ಹೆಸರು

ನ್ಯೂ ಜನರೇಷನ್ ಹ್ಯುಂಡೈ ಎಲಾಂಟ್ರಾ ಕಾರು ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಹ್ಯುಂಡೈ ಎಲಾಂಟ್ರಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಯಾದ ಬಳಿಕ ಹೊಂಡಾ ಸಿವಿಕ್, ಟೊಯೊಟಾ ಕೊರೊಲಾ ಹಾಗೂ ಅಟ್ಲೆಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Tuesday, March 1, 2022, 10:31 [IST]
English summary
Hyundai elantra removed from website find here all details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+