ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಹ್ಯುಂಡೈ ಇಂಡಿಯಾ(Hyundai India) ಕಂಪನಿಯು ತನ್ನ ಪ್ರೀಮಿಯಂ ಕಾರುಗಳ ಏಪ್ರಿಲ್ ಅವಧಿಗಾಗಿ ಹಲವು ಹೊಸ ಕೊಡುಗೆಗಳನ್ನು ಪ್ರಕಟಿಸಿದ್ದು, ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಕಂಪನಿಯು ಕಾರು ಮಾರಾಟ ಸ್ಥಿರತೆಗಾಗಿ ವಿವಿಧ ಆಫರ್ ಘೋಷಣೆ ಮಾಡಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಕೋವಿಡ್ ಮತ್ತು ಸೆಮಿಕಂಡಕ್ಟರ್ ಪರಿಣಾಮ ಕುಸಿತ ಕಂಡಿದ್ದ ಹೊಸ ವಾಹನ ಮಾರಾಟ ಇದೀಗ ಸಾಕಷ್ಟು ಸುಧಾರಿಸಿದ್ದು, ಪ್ರಮುಖ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಉತ್ತಮ ಬೇಡಿಕೆ ಪಡೆದುಕೊಂಡಿವೆ. ಹ್ಯುಂಡೈ ಕಂಪನಿಯು ಸಹ ವಿವಿಧ ಮಾದರಿಗಳೊಂದಿಗೆ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಾರು ಮಾರಾಟದಲ್ಲಿ ಸ್ಥಿರತೆಗಾಗಿ ಕಂಪನಿಯು ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಆಫರ್ ಘೋಷಣೆ ಮಾಡಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ವಿವಿಧ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ 2022ರ ಏಪ್ರಿಲ್ ಅವಧಿಗೆ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಕಾರು ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಹ್ಯುಂಡೈ ಕಂಪನಿಯು ಕೂಡಾ ಸ್ಯಾಂಟ್ರೋ, ಗ್ರಾಂಡ್ ಐ10 ನಿಯೋಸ್, ಐ20 ಮತ್ತು ಔರಾ ಕಾರುಗಳ ಮೇಲೆ ಉತ್ತಮ ಆಫರ್‌ಗಳನ್ನು ನೀಡುತ್ತಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಎಂಟ್ರಿ ಲೆವಲ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಗ್ರಾಂಡ್ ಐ10 ನಿಯೋಸ್ ಆವೃತ್ತಿಯ ಮೇಲೆ ಹ್ಯುಂಡೈ ಕಂಪನಿಯು ಗರಿಷ್ಠ ರೂ. 48 ಸಾವಿರ ತನಕ ಉಳಿತಾಯ ಅವಕಾಶ ನೀಡಿದ್ದು, ಎಕ್ಸ್‌ಚೆಂಜ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಒಳಗೊಂಡಿರಲಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಔರಾ ಕಂಪ್ಯಾಕ್ಟ್ ಸೆಡಾನ್ ಕಾರು ಮಾದರಿಯ ಮೇಲೂ ಹ್ಯುಂಡೈ ಕಂಪನಿಯು ರೂ. 48 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದ್ದು, ಔರಾ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎರಡು ವೆರಿಯೆಂಟ್‌ಗಳ ಮೇಲೂ ಗರಿಷ್ಠ ನಗದು ರಿಯಾಯ್ತಿ ಪಡೆದುಕೊಳ್ಳಬಹುದಾಗಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಜೊತೆಗೆ ಕಂಪನಿಯು ಔರಾ ಕಾರಿನ ಸಿಎನ್‌ಜಿ ಮಾದರಿಯ ಮೇಲೂ ಅತ್ಯುತ್ತಮ ಆಫರ್‌ಗಳನ್ನು ನೀಡುತ್ತಿದ್ದು, ನಿಗದಿತ ಅವಧಿಯ ಕಾರು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಡಿಸ್ಕೌಂಟ್ ಜೊತೆ ಹೆಚ್ಚುವರಿ ವಾರಂಟಿ ಆಫರ್ ನೀಡಲಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ತನ್ನ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಕಾರು ಖರೀದಿಯ ಮೇಲೆ ರೂ.28 ಸಾವಿರದಷ್ಟು ಎಕ್ಸ್‌ಚೆಂಜ್ ಆಫರ್ ಮತ್ತು ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದ್ದು, ಸ್ಯಾಂಟ್ರೊ ಕಾರಿನ ಪೆಟ್ರೋಲ್ ಮಾದರಿಯ ಜೊತೆಗೆ ಸಿಎನ್‌ಜಿ ಮಾದರಿಯು ಸಹ ಹೊಸ ಆಫರ್ ಒಳಗೊಂಡಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಹೊಸ ಆಫರ್‌ಗಳಲ್ಲಿ ಸ್ಯಾಂಟ್ರೋ, ಔರಾ, ಗ್ರಾಂಡ್ ಐ10 ನಿಯೋಸ್ ಮತ್ತು ಹೊರತುಪಡಿಸಿ ಐ20, ವೆನ್ಯೂ, ಕ್ರೆಟಾ, ವೆರ್ನಾ, ಅಲ್ಕಾಜರ್ ಮತ್ತು ಕೊನಾ ಇವಿ ಕಾರುಗಳ ಮೇಲೆ ಯಾವುದೇ ಆಫರ್ ನೀಡಲಾಗಿಲ್ಲ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಇನ್ನು ಹ್ಯುಂಡೈ ಕಂಪನಿಯು ಕೋವಿಡ್‌ನಿಂದಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಹೊಸ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಿದ್ದು, ಕೋವಿಡ್ ಪರಿಣಾಮ ತಗ್ಗಿರುವ ಏರಿಳಿತವಾಗುತ್ತಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಹೊಸ ಕೊಡುಗೆಗಳನ್ನು ಪ್ರಕಟಿಸುತ್ತಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಹೊಸ ಆಫರ್‌ಗಳ ನಡುವೆಯೂ ಕಂಪನಿಯು ಕಳೆದ ತಿಂಗಳು ತುುಸು ಹಿನ್ನಡೆ ಅನುಭವಿಸಿದ್ದು, ಳೆದ ತಿಂಗಳು ಹ್ಯುಂಡೈ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 44,600 ಯುನಿಟ್‌ಗಳನ್ನು ಮಾರಾಟಗೊಳಿಸಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಹಣಕಾಸು ವರ್ಷ 2022 ಮಾರಾಟಕ್ಕೆ ಬಂದರೆ, ಕಂಪನಿಯು ಶೇಕಡಾ 2.1 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು ಒಂದು ವರ್ಷದ ಹಿಂದಿನ ಅವಧಿಯಲ್ಲಿ ಮಾರಾಟವಾದ 4,71,535 ಯುನಿಟ್‌ಗಳಿಗೆ ಹೋಲಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ 4,81,500 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ 52,600 ಯುನಿಟ್‌ಗಳನ್ನು ಹ್ಯುಂಡೈ ಕಂಪನಿಯು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 15.20 ರಷ್ಟು ಕುಸಿತವನ್ನು ಕಂಡಿದೆ, ಕಂಪನಿಯು ಕಳೆದ ತಿಂಗಳು ಭಾರತದಿಂದ 10,687 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ ರಫ್ತು ಮಾಡಿದ 12,021 ಯುನಿಟ್‌ಗಳಾಗಿತ್ತು. ಇದನ್ನು ಕಳೆದ ತಿಂಗಳ ಕಂಪನಿಯ ರಫ್ತಿಗೆ ಹೋಲಿಸಿದರೆ ಶೇಕಡಾ 11.09 ರಷ್ಟು ಕಡಿಮೆಯಾಗಿದೆ.

ಏಪ್ರಿಲ್ ಅವಧಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ ಹ್ಯುಂಡೈ

ಸೆಮಿಕಂಡಕ್ಟರ್ ಚಿಪ್ ಕೊರತೆಯು ಭಾರತದಲ್ಲಿ ಆಟೋ ಉಕ್ಪಾದನಾ ಕಂಪನಿಗಳಿಗೆ ಹೆಚ್ಚಿನ ನಷ್ಟಕ್ಕೆ ಕಾರಣವಿದ್ದು, ಇದರಿಂದ ವಾಹನ ಉತ್ಪಾದನೆ ಮತ್ತು ಮಾರಾಟದ ಮೇಲೆ ಪರಿಣಾಮವನ್ನು ಬೀರುವುದನ್ನು ಮುಂದುವರೆದಿದೆ.

Article Published On: Wednesday, April 6, 2022, 17:37 [IST]
English summary
Hyundai india february 2022 car discount details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+