ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಹ್ಯುಂಡೈ
ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) 2022ರ ಫೆಬ್ರವರಿ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ವರದಿಗಳ ಪ್ರಕಾರ, ಕಳೆದ ತಿಂಗಳು ಹ್ಯುಂಡೈ ಕಂಪನಿಯು ಒಟ್ಟು 53,159 ಯುನಿಟ್ ಗಳನ್ನು ಮಾರಾಟಗೊಳಿಸಿವೆ.

ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು 61,800 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.14 ರಷ್ಟು ಕುಸಿತವನ್ನು ಕಂಡಿದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು 44,050 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ 51,600 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.14.6 ರಷ್ಟು ಕಡಿಮೆಯಾಗಿದೆ.

ರಫ್ತು ವಿಭಾಗದಲ್ಲಿ ಕಳೆದ ತಿಂಗಳು ಹ್ಯುಂಡೈ ಕಂಪನಿಯು 9,109 ಯುನಿಟ್‌ಗಳನ್ನು ರಫ್ತು ಮಾಡಿದೆ. ಇನ್ನು ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ 10,200 ಯುನಿಟ್‌ಗಳನ್ನು ಮಾರಾಟಗೊಳಿಸಿತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.10.7 ರಷ್ಟು ಕುಸಿತವಾಗಿದೆ.

ಇತರ ಕಾರು ಉತ್ಪಾದಕರಂತೆಯೇ, ಹ್ಯುಂಡೈ ಸೆಮಿಕಂಡಕ್ಟರ್ ಕೊರತೆಯ ಸಮಸೆಯಿಂದ ಕಾರು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಕಾರಿನ ವೈಟಿಂಗ್ ಪಿರೀಡ್ ಹೆಚ್ಚಾಗುತ್ತಿದೆ. ಇದರಿಂದ ಗ್ರಾಹಕರು ಇತರ ಕಡೆ ಹೋಗುತ್ತಾರೆ.

ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿದೆ, ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹಲವು ವಿಭಾಗದಲ್ಲಿ ತಮ್ಮ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಕೊರಿಯನ್ ಕಾರು ತಯಾರಕರ ಕಾರುಗಳು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್‌ಗಳಾದ ಸ್ಯಾಂಟ್ರೋ, ಗ್ರ್ಯಾಂಡ್ ಐ10 ಮತ್ತು ನಿಯೋಸ್ ಅನ್ನು ಮಾರಾಟ ಮಾಡುತ್ತಿದೆ, ಇನ್ನು ಹ್ಯುಂಡೈ ಕಂಪನಿಯ ಕ್ರೆಟಾ ಈಗ ಮಿಡ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಪಾರುಪತ್ಯ ಸಾದಿಸುತ್ತಿದೆ, ಹ್ಯುಂಡೈ ಕಂಪನಿಯು ಹಲವು ಜನಪ್ರಿಯ ಮಾದರಿಗಳು ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಹ್ಯುಂಡೈ ಕಂಪನಿಯು ತನ್ನ ಪೋರ್ಟ್‌ಫೋಲಿಯೊವನ್ನು ಬಲಪಡಿಸಲು ಈ ವರ್ಷದ ಅವಧಿಯಲ್ಲಿ ಹೊಸ ಮಾದರಿಗಳನ್ನು ತರುವ ಸಾಧ್ಯತೆಯಿದೆ .ಹುಂಡೈ ಮುಂಬರುವ ತಿಂಗಳುಗಳಲ್ಲಿ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಇಂಡೋನೇಷ್ಯಾದಲ್ಲಿ ಈಗಾಗಲೇ ಮಾರಾಟದಲ್ಲಿರುವ ಕ್ರೆಟಾ ಮಿಡ್ ಸೈಜ್ ಎಸ್‍ಯುವಿಯು ಹೆಚ್ಚು ನವೀಕರಿಸಿದ ಆವೃತ್ತಿಯನ್ನು ಅನುಸರಿಸಬಹುದು. ಮುಂಬರುವ ವೆನ್ಯೂ ಮತ್ತು ಕ್ರೆಟಾವು ಜಾಗತಿಕ ಟ್ಯೂಸಾನ್ ನಿಂದ ಸಾಕಷ್ಟು ಸ್ಫೂರ್ತಿಯನ್ನು ಪಡೆದುಕೊಳ್ಳುವ ಬ್ರ್ಯಾಂಡ್‌ನ ಇತ್ತೀಚಿನ ಸೆನ್ಸೌಸ್ ಸ್ಪೋರ್ಟಿನೆಸ್ ವಿನ್ಯಾಸದ ತತ್ವಕ್ಕೆ ಅಂಟಿಕೊಳ್ಳುತ್ತದೆ.

ಹ್ಯುಂಡೈ ಕ್ರೆಟಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ. ಹೊಸ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯನ್ನು 2021ರ ಗೈಕಿಂಡೋ ಇಂಡೋನೇಷ್ಯಾ ಇಂಟರ್‌ನ್ಯಾಶನಲ್ ಆಟೋ ಶೋ ನಲ್ಲಿ ಜಾಗತಿಕವಾಗಿ ಇತ್ತೀಚೆಗೆ ಹ್ಯುಂಡೈ ಕಂಪನಿಯು ಅನಾವರಣಗೊಳಿಸಿತ್ತು.

2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಈ ಕ್ಯಾಲೆಂಡರ್ ವರ್ಷದ ದ್ವಿತೀಯಾರ್ಧದಲ್ಲಿ ಕ್ರೆಟಾದ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೊಸ ನ್ಯೂ ಜನರೇಷನ್ ಟ್ಯೂಸಾನ್ ಮಾದರಿಯಂತೆ ಸ್ಪೋರ್ಟಿನೆಸ್ ವಿನ್ಯಾಸವನ್ನು ಕ್ರೆಟಾ ಫೇಸ್‌ಲಿಫ್ಟ್ ಪಡೆದುಕೊಂಡಿದೆ. ಹೆಚ್ಚು ಯುವ ಗ್ರಾಹಕರನ್ನು ಸೆಳೆಯುವಂತಿದೆ. ಅದರ ಮುಂಭಾಗವು ಹ್ಯುಂಡೈ ಕ್ರೆಟಾ ಗ್ರ್ಯಾಂಡ್ ಮಾದರಿಯಿಂದ ಎರವಲು ಪಡೆದುಕೊಂಡಿದೆ. 2022ರ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿ ಹೊಸ ಪ್ಯಾರಾಮೆಟ್ರಿಕ್ ಜ್ಯುವೆಲ್ ಪ್ಯಾಟರ್ನ್ ಗ್ರಿಲ್ ಅನ್ನು ಹೊಂದಿದ್ದು ಅದು ಎಲ್‌ಇಡಿ ಡಿಆರ್‌ಎಲ್ ಗಳನ್ನು ಸಂಯೋಜಿಸುತ್ತದೆ.

ಹ್ಯುಂಡೈ ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್(Hyundai Tucson) ಆವೃತ್ತಿಯ ವಿನ್ಯಾಸದಲ್ಲಿ ಹಲವಾರು ಅಪ್ದೇಟ್ ಗಳನ್ನು ಮಾಡಲಾಗಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತದಲ್ಲಿ ಕಾಣಿಸಿಕೊಂಡ ಸ್ಪೈ ಚಿತ್ರ ಇತ್ತೀಚೆಗೆ ಬಹಿರಂಗವಾಗಿತ್ತು. ವರದಿಗಳ ಪ್ರಕಾರ ಈಟ್ಯೂಸಾನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಟ್ಯೂಸಾನ್ ಎಸ್‍ಯುವಿಯ ಮುಂಭಾಗ ಆಕರ್ಷಕ ಲುಕ್ ಅನ್ನು ಹೊಂದಿದ, ಈ ಹೊಸ ಎಸ್‍ಯುವಿಯು ಸ್ಪೋರ್ಟಿ ಲುಕ್ ನಲ್ಲಿ ಕಾಣುವಂತೆ ಅಗ್ರೇಸಿವ್ ವಿನ್ಯಾಸವನ್ನು ಹೊಂದಿದೆ.

ಇನ್ನು ಹ್ಯುಂಡೈ ಕಂಪನಿಯು ಹಲವಾರು ಕಾರಣಗಳಿಂದ ಕಳೆದ ತಿಂಗಳ ಕಾರು ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಆದರೆ ಮುಂದಿನ ದಿನಗಳಲ್ಲಿ ಹ್ಯುಂಡೈ ಕಾರುಗಳ ಮಾರಾಟ ಹೆಚ್ಚಾಗಬಹುದು. ಅಲ್ಲದೇ ಹೊಸ ಮಾದರಿಗಳನ್ನು ಹ್ಯುಂಡೈ ಕಂಪನಿಯು ಬಿಡುಗಡೆಗೊಳಿಸಲಿದೆ. ಹೊಸ ಹ್ಯುಂಡೈ ಕಾರುಗಳು ಮಾರಾಟದಲ್ಲಿ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications