ಬೆಲೆ ಹೆಚ್ಚಳ: ಹ್ಯುಂಡೈ ಎಸ್‌ಯುವಿ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿರುವುದಾಗಿ ಘೋಷಣೆ ಮಾಡಿದ್ದು, ಹೊಸ ಕಾರುಗಳ ದರ ಮೇ 1ರಿಂದ ಅನ್ವಯಿಸುವಂತೆ ಏರಿಕೆ ಮಾಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಬೆಲೆ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದು, ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ.

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ತಮ್ಮ ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಹೊಸ ದರ ಪಟ್ಟಿಯಲ್ಲಿ ಹ್ಯುಂಡೈ ಕಾರುಗಳ ಬೆಲೆಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ.0.50 ರಿಂದ ಶೇ. 1.50 ರಷ್ಟು ಹೆಚ್ಚಳ ಮಾಡಲಾಗಿದ್ದು, ಕೆಲವು ಕಾರು ಮಾದರಿಗಳ ಪ್ರಮುಖ ವೆರಿಯೆಂಟ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಮೇ 1ರಿಂದ ಬೆಲೆ ಅನ್ವಯವಾಗುವಂತೆ ಹೊಸ ದರ ಪಟ್ಟಿ ಪ್ರಕಟಿಸಿರುವ ಹ್ಯುಂಡೈ ಕಂಪನಿಯು ಕೊನಾ ಎಲೆಕ್ಟ್ರಿಕ್, ಟ್ಯುಸಾನ್ ಮತ್ತು ಎಲಾಂಟ್ರಾ ಕಾರು ಮಾದರಿಗಳನ್ನು ಹೊರತುಪಡಿಸಿ ಇನ್ನುಳಿದ ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಹೊಸ ದರ ಪಟ್ಟಿ ಪ್ರಕಾರ ಕ್ರೆಟಾ ಎಸ್‌ಯುವಿ ಮಾದರಿಯು ಹೆಚ್ಚಿನ ಮಟ್ಟದ ದರ ಏರಿಕೆ ಪಡೆದುಕೊಂಡರೆ ವೆರ್ನಾ ಸೆಡಾನ್ ಮಾದರಿಯಲ್ಲಿ ಅಲ್ಪ ಪ್ರಮಾಣದ ದರ ಏರಿಕೆ ಮಾಡಲಾಗಿದೆ. ಹೊಸ ದರಪಟ್ಟಿಯಲ್ಲಿ ಕ್ರೆಟಾ ಕಾರಿನ ಬೆಲೆಯು ವಿವಿಧ ವೆರಿಯೆಂಟ್‌ಗಳಲ್ಲಿ ಗರಿಷ್ಠ ರೂ.27 ಸಾವಿರ ಹೆಚ್ಚಳವಾಗಿದ್ದು, ವೆನ್ಯೂ ಮಾದರಿಯ ಬೆಲೆಯಲ್ಲಿ ಗರಿಷ್ಠ ರೂ. 12 ಸಾವಿರ ಮತ್ತು ಅಲ್ಕಾಜರ್ ಎಸ್‌ಯುವಿ ಬೆಲೆಯಲ್ಲಿ ಗರಿಷ್ಠ ರೂ.10,100 ತನಕ ಹೆಚ್ಚಳವಾಗಿದೆ.

ಗ್ರಾಂಡ್ ಐ10 ನಿಯೋಸ್ ಮತ್ತು ಔರಾ ಕಾರು ಮಾದರಿಗಳು ಸಹ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 5 ಸಾವಿರದಿಂದ ರೂ. 8 ತನಕ ಮತ್ತು ವೆರ್ನಾ ಕಾರು ಸೆಡಾನ್ ಕಾರು ಮಾದರಿಗಳು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 5 ಸಾವಿರದಿಂದ ರೂ.7 ಸಾವಿರ ತನಕ ಬೆಲೆ ಹೆಚ್ಚಳ ಪಡೆದುಕೊಂಡಿವೆ.

ಭಾರತದಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹತ್ತು ಕಾರು ಆವೃತ್ತಿಗಳ ಮಾರಾಟ ಮಾಡುತ್ತಿರುವ ಹ್ಯುಂಡೈ ಕಂಪನಿಯು ಶೇ. 18ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಸದ್ಯ ಹ್ಯುಂಡೈ ಕಂಪನಿಯು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

ಹ್ಯುಂಡೈ ಎಸ್‌ಯುವಿ ವಿಭಾಗದಲ್ಲಿ ಟ್ಯುಸಾನ್, ಕ್ರೆಟಾ, ಕೊನಾ ಎಲೆಕ್ಟ್ರಿಕ್, ವೆನ್ಯೂ ಮತ್ತು ಹೊಸ ಅಲ್ಕಾಜರ್ ಕಾರುಗಳಿದ್ದು, ಹ್ಯುಂಡೈ ಕಾರುಗಳ ಮಾರಾಟದಲ್ಲಿ ಎಸ್‌ಯುವಿ ಕಾರು ಮಾದರಿಯ ಪಾಲು ಹೆಚ್ಚಿದ್ದು, ಕಂಪನಿಯು ಇತ್ತೀಚೆಗೆ ಕ್ರೆಟಾ ಕಾರು ಮಾದರಿಯಲ್ಲಿ ನೈಟ್ ಎಡಿಷನ್ ಬಿಡುಗಡೆ ಮಾಡಿದೆ.

ಕ್ರೆಟಾ ಎರಡನೇ ತಲೆಮಾರಿನ ಆವೃತ್ತಿಯ ಮಾರಾಟದೊಂದಿಗೆ ಹಲವಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ಹ್ಯುಂಡೈ ಕಂಪನಿಯು ಕ್ರೆಟಾ ಪ್ರಿಯರಿಗಾಗಿ ಇದೀಗ ನೈಟ್ ಎಡಿಷನ್ ಪರಿಚಯಿಸಿದ್ದು, ಎಸ್ ಪ್ಲಸ್ ಮತ್ತು ಎಸ್ಎಕ್ಸ್(ಒ) ಮಾದರಿಯನ್ನು ಆಧರಿಸಿ ಬಿಡುಗಡೆಯಾಗಿರುವ ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.13.51 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.18.18 ಲಕ್ಷ ಬೆಲೆ ಹೊಂದಿದೆ.

ಕ್ರೆಟಾ ನೈಟ್ ಎಡಿಷನ್ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ ಎರಡು ಮತ್ತು ಡೀಸೆಲ್ ಮಾದರಿಯಲ್ಲಿ ಎರಡು ವೆರಿಯೆಂಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

ಹ್ಯುಂಡೈ ಕಂಪನಿಯು ಹೊಸ ಮಾದರಿಯನ್ನು ವಿಭಿನ್ನವಾಗಿ ಗುರುತಿಸಲು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹಲವಾರು ಹೊಸ ಬದಲಾವಣೆಗಳನ್ನು ನೀಡಿದ್ದು, ಬ್ಲ್ಯಾಕ್ ಔಟ್ ಗ್ರಿಲ್‌ನಲ್ಲಿ ರೆಡ್ ಆಕ್ಸೆಂಟ್ ವಿನ್ಯಾಸವು ಹೊಸ ಕಾರಿನ ಮುಂಭಾಗದ ನೋಟಕ್ಕೆ ಮತ್ತಷ್ಟು ಬಲಿಷ್ಠತೆ ನೀಡುತ್ತದೆ.

ಇದರೊಂದಿಗೆ ಗ್ಲಾಸ್ ಬ್ಲ್ಯಾಕ್ ಕಲರ್ ಆಯ್ಕೆ ಹೊಂದಿರುವ ಹೊಸ ಮಾದರಿಯು ಫ್ರಂಟ್ ಮತ್ತು ರಿಯರ್ ಸ್ಕೀಡ್ ಪ್ಲೇಟ್, ಸಿ ಪಿಲ್ಲರ್, ರೂಫ್ ರೈಲ್, ಔಟ್‌ಸೈಡ್ ರಿಯರ್ ವ್ಯೂ ಮಿರರ್, ಶಾರ್ಕ್ ಫಿನ್ ಮತ್ತು ಟೈಲ್‌ಲ್ಯಾಂಪ್‌ಗಳು ಕಡುಗಪ್ಪು ಬಣ್ಣದೊಂದಿಗೆ ಬೂಟ್ ಲಿಡ್ ಮತ್ತು ಸೈಡ್ ಶೋಲ್ಡರ್‌ಗಳ ಮೇಲೆ ಡಾರ್ಕ್ ನೈಟ್ ಬ್ಯಾಜ್ಡ್ ಹೊಂದಿದೆ.

ಹಾಗೆಯೇ ಹೊಸ ಆವೃತ್ತಿಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 16 ಇಂಚು ಮತ್ತು 17 ಇಂಚಿನ ಡಾರ್ಕ್ ಮೆಟಲ್ ಹೊಂದಿರುವ ಅಲಾಯ್ ವ್ಹೀಲ್ ಜೋಡಿಸಿದ್ದು, ಹೊಸ ಕಾರಿನ ಒಳಭಾಗವು ಕೂಡಾ ಸಂಪೂರ್ಣವಾಗಿ ಕಪ್ಪು ಬಣ್ಣದೊಂದಿಗೆ ಸಜ್ಜುಗೊಂಡಿದೆ.


Click it and Unblock the Notifications