ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಹ್ಯುಂಡೈ ಕಾರುಗಳು

ಜನಪ್ರಿಯ ಮತ್ತು ದೇಶದ ಎರಡನೇ ಕಾರು ತಯಾರಕ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾ 2023ರ ಜನವರಿ ತಿಂಗಳಿನಿಂದ ತನ್ನ ಪ್ರಯಾಣಿಕ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದರಿಂದ ಹೊಸ ವರ್ಷದಿಂದ ಜನಪ್ರಿಯ ಹ್ಯುಂಡೈ ಕಾರುಗಳು ತುಸು ದುಬಾರಿಯಾಗಲಿದೆ.

ಹ್ಯುಂಡೈ 2023ರ ಆರಂಭದಿಂದ ಬೆಲೆ ಏರಿಕೆಯನ್ನು ಘೋಷಿಸುವ ಮೂಲಕ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಆಡಿ, ಕಿಯಾ, ಮರ್ಸಿಡಿಸ್-ಬೆಂಝ್, ಎಂಜಿ ಮೋಟಾರ್ ಮತ್ತು ರೆನಾಲ್ಟ್‌ನಂತಹ ಇತರ ಕಾರು ತಯಾರಕರೊಂದಿಗೆ ಸೇರಿಕೊಳ್ಳುತ್ತದೆ. ಮುಂಬರುವ ಬೆಲೆ ನವೀಕರಣವು ಕಂಪನಿಯ ಪ್ರಸ್ತುತ ಉತ್ಪನ್ನ ಪೋರ್ಟ್ಫೋಲಿಯೊ ಅಡಿಯಲ್ಲಿ ಅದರ ಎಲ್ಲಾ ಮಾದರಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹುಂಡೈ ಮೋಟಾರ್ ಇಂಡಿಯಾ ಹೇಳಿದೆ. ಅದಕ್ಕೆ ಪೂರಕವಾಗಿ, ಇತ್ತೀಚಿನ ಇನ್‌ಪುಟ್ ವೆಚ್ಚದ ಏರಿಕೆಯು ಬೆಲೆ ಏರಿಕೆಗೆ ಒಂದು ಕಾರಣ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಹೇಳಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ಹ್ಯುಂಡೈ ಕಾರುಗಳು

ಮುಂಬರುವ ಬೆಲೆ ಏರಿಕೆಯೊಂದಿಗೆ, ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಗ್ರಾಹಕರಿಗೆ 2023ರ ಆರಂಭದಿಂದ ಇನ್‌ಪುಟ್ ವೆಚ್ಚಗಳ ಹೆಚ್ಚಳವನ್ನು ರವಾನಿಸುತ್ತದೆ. ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಮುಂಬರುವ ಬೆಲೆ ಏರಿಕೆಯ ಕುರಿತು ಯಾವುದೇ ಹೆಚ್ಚಿನ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ, ಅದು 2023ರ ಜನವರಿ ತಿಂಗಳಿನಿಂದ ಜಾರಿಗೆ ಬರಲಿದೆ. ಇದಲ್ಲದೆ, ದಕ್ಷಿಣ ಕೊರಿಯಾದ ವಾಹನ ತಯಾರಕರು ಈ ತಿಂಗಳ ಕೊನೆಯಲ್ಲಿ ಬೆಲೆ ಏರಿಕೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ.

ಹುಂಡೈ ಮೋಟಾರ್ ಇಂಡಿಯಾ ಕುರಿತು ಮಾತನಾಡುತ್ತಾ, ದಕ್ಷಿಣ ಕೊರಿಯಾದ ವಾಹನ ತಯಾರಕರು ಮಾರುತಿ ಸುಜುಕಿ ನಂತರ ಭಾರತದಲ್ಲಿ ಎರಡನೇ ಅತಿದೊಡ್ಡ ಕಾರು ತಯಾರಕರಾಗಿದ್ದಾರೆ. ಇದಲ್ಲದೆ, ಹ್ಯುಂಡೈ ಕ್ರೆಟಾ ಎಸ್‍ಯುಇ ದಕ್ಷಿಣ ಕೊರಿಯಾದ ವಾಹನ ತಯಾರಕರ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಯಾಗಿ ಮುಂದುವರೆದಿದೆ, ಇನ್ನು ಹ್ಯುಂಡೈ ವೆನ್ಯೂ ಸಬ್-4 ಮೀಟರ್ ಎಸ್‍ಯುವಿ ಕೂಡ ಉತ್ತಮವಾಗಿ ಮಾರಾಟವಾಗುತ್ತಿದೆ. ಇನ್ನು ಹುಂಡೈ ಮೋಟಾರ್ ಇಂಡಿಯಾ ತನ್ನ 2022ರ ನವೆಂಬರ್ ತಿಂಗಳಿನ ಕಾರು ಮಾರಾಟ ವರದಿಯನ್ನು ಬಹಿರಂಗಪಡಿಸಿದೆ.

ಈ ಕಾರು ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳಿನಲ್ಲಿ ಕೊರಿಯನ್ ವಾಹನ ತಯಾರಕ ಹ್ಯುಂಡೈ ಒಟ್ಟು 64,004 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಹ್ಯುಂಡೈ ಇಂಡಿಯಾ ಕಂಪನಿಯು ಒಟ್ಟು 46,910 ಯುನಿಟ್ ಗಳನ್ನು ಮಾರಾಟ ಮಾಡಿತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 36.4 ರಷ್ಟು ಬೆಳವಣಿಗೆಯನ್ನು ಕಂಡಿದೆ. ಇನ್ನು ಹುಂಡೈ ಮೋಟಾರ್ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 48,003 ಯುನಿಟ್‌ ಗಳನ್ನು ಮಾರಾಟಗೊಳಿಸಿದೆ.

ಇನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 37,001 ಯುನಿಟ್‌ ಗಳನ್ನು ಮಾರಾಟಗೊಳಿಸಿತು. ಇದನ್ನು ಕಳೆದ ವರ್ಷದ ನವೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ, 29.7 ರಷ್ಟು ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಹ್ಯುಂಡೈ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ 16,001 ಯುನಿಟ್‌ ಗಳನ್ನು ರಫ್ತು ಮಾಡಿದೆ, ಇನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 9,909 ಯುನಿಟ್‌ ಗಳನ್ನು ರಫ್ತು ಮಾಡಿದೆ. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಹ್ಯುಂಡೈ ಇಂಡಿಯಾ ಕಂಪನಿಯು ರಫ್ತಿನಲ್ಲಿ ಶೇಕಡಾ 36.4 ರಷ್ಟು ಬೆಳವಣಿಗೆಯಾಗಿದೆ.

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಕಂಪನಿಯ ಸೇಲ್ಸ್, ಮಾರ್ಕೆಟಿಂಗ್ ಮತ್ತು ಸರ್ವಿಸ್ ವಿಭಾಗದ ನಿರ್ದೇಶಕರಾದ ತರುಣ್ ಗಾರ್ಗ್ ಅವರು ಮಾತನಾಡಿ, ಈ ವರ್ಷ ನಾವು ನಮ್ಮ ಅತ್ಯಂತ ಪ್ರಿಯವಾದ ಹ್ಯುಂಡೈ ಕಾರುಗಳಿಗೆ ನಿರಂತರ ಚೇತರಿಕೆ ಮತ್ತು ಬೇಡಿಕೆಯಲ್ಲಿ ಬೆಳವಣಿಗೆಯನ್ನು ಕಂಡಿದ್ದೇವೆ. ಬಲವಾದ ಹಬ್ಬದ ಸೀಸನ್ ಹಿನ್ನಲೆಯಲ್ಲಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಳೆದ ಎರಡು ತಿಂಗಳುಗಳಲ್ಲಿ ನಾವು ದೇಶೀಯ ಮಾರಾಟದಲ್ಲಿ ಹೆಚ್ಚಿನ ಎರಡಂಕಿಯ ಬೆಳವಣಿಗೆಯನ್ನು ಸಾಧಿಸಿದ್ದೇವೆ.

ಅವರು ಮಾತನ್ನು ಮುಂದುವರೆಸಿ, 2022ರಲ್ಲಿ ಮೂರು ಹೊಸ ಬ್ಲಾಕ್‌ಬಸ್ಟರ್ ಎಸ್‌ಯುವಿಗಳನ್ನು ಬಿಡುಗಡೆ ಮಾಡುವುದರೊಂದಿಗೆ ಮತ್ತು ಕ್ರೆಟಾ, ವೆನ್ಯೂ, ಗ್ರ್ಯಾಂಡ್ ಐ10 ನಿಯೋಸ್, ವೆರ್ನಾ ಮತ್ತು ಔರಾದಂತಹ ಜನಪ್ರಿಯ ಮಾದರಿಗಳಿಗೆ ಬಲವಾದ ಬೇಡಿಕೆಯೊಂದಿಗೆ, ನಾವು ಭಾರತದಲ್ಲಿ ನಮ್ಮ ಪ್ರಾರಂಭದಿಂದಲೂ 2022 ರಲ್ಲಿ ಅತ್ಯಧಿಕ ದೇಶೀಯ ಮಾರಾಟವನ್ನು ಸಾಧಿಸಲು ಸಿದ್ಧರಾಗಿದ್ದೇವೆ. ಹ್ಯುಂಡೈ ಕಂಪನಿಯ ಮೇಲಿನ ನಿರಂತರ ಪ್ರೀತಿ ಮತ್ತು ವಿಶ್ವಾಸಕ್ಕಾಗಿ ನಾವು ನಮ್ಮ ಗ್ರಾಹಕರಿಗೆ ಧನ್ಯವಾದ ಹೇಳಲು ಬಯಸುತ್ತೇವೆ ಎಂದು ಹೇಳಿದರು.

Article Published On: Friday, December 16, 2022, 10:57 [IST]
English summary
Hyundai to hike prices from january 1 2023 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+