ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯು ಸೆಪ್ಟೆಂಬರ್ 6ರಂದು ವೆನ್ಯೂ ಎನ್-ಲೈನ್ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಂಪನಿಯು ವೆನ್ಯೂ ಎನ್-ಲೈನ್ ಮಾದರಿಯನ್ನು ಮೆಟಾವರ್ಸ್‌ನಲ್ಲಿ ಪ್ರದರ್ಶನಗೊಳಿಸುತ್ತಿದೆ.

Recommended Video

590 ಕಿ.ಮೀ ಮೈಲೇಜ್ ನೀಡುವ BMW i4 ಬಿಡುಗಡೆ | 340bhp, 430Nm, 0-100 In 5.7 Seconds & More

ಮೆಟಾವರ್ಸ್‌ ಪ್ಲ್ಯಾಟ್‌ಫಾರ್ಮ್‌ನಲ್ಲಿ ಹೊಸ ಕಾರನ್ನು ವಾಸ್ತವವಾಗಿ ಬಿಡುಗಡೆ ಮಾಡದೆ ಕೇವಲ ಪ್ರದರ್ಶನ ಮಾಡಲಾಗುತ್ತಿದ್ದು, ಬಿಡುಗಡೆ ಸಮಾರಂಭದಲ್ಲಿ ಹೊಸ ಕಾರಿನ ಬೆಲೆ ಮಾಹಿತಿಯನ್ನು ಬಹಿರಂಗಪಡಿಸಲಾಗುತ್ತದೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಆಸಕ್ತರು ಭಾರತದಲ್ಲಿ ಹ್ಯುಂಡೈ ವೆನ್ಯೂ ಎನ್-ಲೈನ್‌ ಮಾದರಿಯ ಬಿಡುಗಡೆಯನ್ನು ರೋಬ್ಲಾಕ್ಸ್ ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳ ಮೂಲಕ ನೋಡಬಹುದಾಗಿದ್ದು, ರೋಬ್ಲಾಕ್ಸ್‌ನಲ್ಲಿ ಲಭ್ಯವಿರುವ ಹುಂಡೈ ಮೊಬಿಲಿಟಿ ಸಾಹಸ ಅನುಭವದ ಮೆಟಾವರ್ಸ್‌ನಲ್ಲಿ ಈವೆಂಟ್ ಅನ್ನು ಆಯೋಜಿಸಲಾಗುತ್ತದೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಹುಂಡೈ ವೆನ್ಯೂ ಎನ್-ಲೈನ್‌ನ ವರ್ಚುವಲ್ ಬಿಡುಗಡೆಯನ್ನು ವೀಕ್ಷಿಸಲು ವೀಕ್ಷಕರು ಗೂಗಲ್ ಪ್ಲೇ ಸ್ಟೋರ್ ಮೂಲಕ ರೋಬ್ಲಾಕ್ಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಮೆಟಾವರ್ಸ್ ವರ್ಚುವಲ್ ಈವೆಂಟ್ ಬಳಕೆದಾರರಿಗೆ ಕಂಪನಿಯು ಟೆಸ್ಟ್ ಡ್ರೈವ್ ಟ್ರ್ಯಾಕ್‌ಗಳು, ವೆನ್ಯೂ ಎನ್-ಲೈನ್ ವಲಯಗಳು, ವರ್ಚುವಲ್ ಶೋರೂಮ್‌ಗಳು ಮತ್ತು ಸೇವಾ ಕೇಂದ್ರಗಳಂತಹ ಹೊಸ ಅನುಭವಗಳನ್ನು ಸಹ ಪ್ರದರ್ಶಿಸಲಿದ್ದು, ಸಂದರ್ಶಕರು ಮಿನಿ ಗೇಮ್‌ಗಳು, ಟ್ರೆಸರ್ ಹಂಟ್‌ಗಳು, ಎನ್ ಲೈನ್ ಮರ್ಚಂಡೈಸ್, ಫೋಟೋ ಬೂತ್‌ಗಳು ಮತ್ತು ಹೆಚ್ಚಿನದನ್ನು ಸಹ ಕಾಣಬಹುದು.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಆದಾಗ್ಯೂ ಕಂಪನಿಯು ಸದ್ಯಕ್ಕೆ ಬಿಡುಗಡೆಯ ಬಗ್ಗೆ ಸೀಮಿತ ಮಾಹಿತಿಯನ್ನು ಮಾತ್ರ ಹಂಚಿಕೊಂಡಿದ್ದು, ಸೆಪ್ಟೆಂಬರ್ 6 ರಂದು ಹೊಸ ಕಾರಿನ ಸಂಪೂರ್ಣ ಮಾಹಿತಿ ಹಂಚಿಕೊಳ್ಳಲಿದೆ. ಹೊಸ ಕಾರು ಮಾದರಿಯು ಸ್ಪೋರ್ಟಿ ವಿನ್ಯಾಸ ಮತ್ತು ಹೆಚ್ಚಿನ ಪರ್ಫಾಮೆನ್ಸ್ ಬಯಸುವ ಗ್ರಾಹಕರ ಆಯ್ಕೆಗೆ ಸಹಕಾರಿಯಾಗಲಿದ್ದು, ಸ್ಟ್ಯಾಂಡರ್ಡ್ ಮಾದರಿಗಳಿಂತಲೂ ತುಸು ಹೆಚ್ಚುವರಿ ಎಂಜಿನ್ ಪರ್ಫಾಮೆನ್ಸ್ ಜೊತೆಗೆ ಪ್ರಮುಖ ತಾಂತ್ರಿಕ ಸೌಲಭ್ಯಗಳೊಂದಿಗೆ ಸ್ಪೋರ್ಟಿ ಮಾದರಿಯಾಗಿ ಗುರುತಿಸಿಕೊಳ್ಳುತ್ತವೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಭಾರತದಲ್ಲಿ ಹ್ಯುಂಡೈ ಕಂಪನಿಯು ಈಗಾಗಲೇ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಎನ್-ಲೈನ್ ಮಾರಾಟಗೊಳಿಸುತ್ತಿದ್ದು, ಈ ವರ್ಷಾಂತ್ಯಕ್ಕೆ ಮತ್ತೆರಡು ಹೊಸ ಕಾರು ಮಾದರಿಗಳಲ್ಲಿ ಹೊಸ ಪರ್ಫಾಮೆನ್ಸ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ವೆನ್ಯೂ ಜೊತೆಗೆ ಕ್ರೆಟಾ ಕಾರು ಮಾದರಿಯು ಸಹ ಎನ್-ಲೈನ್ ಆವೃತ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಎನ್-ಲೈನ್ ಆವೃತ್ತಿಗಳು ಹ್ಯುಂಡೈ ಪ್ರಮುಖ ಕಾರುಗಳ ಪರ್ಫಾಮೆನ್ಸ್ ಆವೃತ್ತಿಯಾಗಿದೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ವೆನ್ಯೂ ಎನ್-ಲೈನ್ ಮಾದರಿಯು ಐ20 ಎನ್-ಲೈನ್ ಮಾದರಿಯೆಂತೆ ಎನ್6 ಮತ್ತು ಎನ್8 ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಬಹುದಾಗಿದ್ದು, ಹೈ ಎಂಡ್ ಮಾದರಿಯಲ್ಲಿರುವ 1.0-ಲೀಟರ್ ಮೂರು-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಜೋಡಿಸಬಹುದಾಗಿದೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಹೊಸ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ವೆನ್ಯೂ ಎನ್-ಲೈನ್ ಕಾರು ಮಾದರಿಯು ಸೆಮಿ ಆಟೋಮ್ಯಾಟಿಕ್ ಮಾದರಿಯಾದ ಐಎಂಟಿ ಗೇರ್‌ಬಾಕ್ಸ್ ಇಲ್ಲವೆ 7 ಸ್ಪೀಡ್ ಡಿಸಿಟಿ ಸ್ವಯಂಚಾಲಿತ ಗೇರ್‌ಬಾಕ್ಸ್ ನೀಡಲಿದೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಇದಲ್ಲದೆ ಹೊಸ ಕಾರಿನಲ್ಲಿ ಹ್ಯುಂಡೈ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಸೇರಿಸಲಿದ್ದು, ಮುಂಭಾಗದ ಫೆಂಡರ್‌ಗಳಲ್ಲಿ ಎನ್-ಲೈನ್ ಬ್ಯಾಡ್ಜಿಂಗ್, ಕಾರಿನ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಕೆಂಪು ಆಕ್ಸೆಂಟ್, ಛಾವಣಿಯ ಹಳಿಗಳ ಮೇಲೆ ರೆಡ್ ಇನ್ಸರ್ಟ್ ಮತ್ತು ಹೊಸದಾದ ಮಿಶ್ರಲೋಹದ ಚಕ್ರಗಳನ್ನು ನೀಡಬಹುದು.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಹಾಗೆಯೇ ಸ್ಪೋರ್ಟಿ ಲುಕ್ ಹೆಚ್ಚಿಸಲು ಹೊಸ ಕಾರಿನಲ್ಲಿ ಡ್ಯುಯಲ್-ಟಿಪ್ ಹೊಂದಿರುವ ಎಕ್ಸಾಸ್ಟ್ ಪೈಪ್ ಅನ್ನು ಬಳಸಲಾಗಿದ್ದು, ಎನ್-ಲೈನ್ ಮಾದರಿಗೆ ಕೆಲವು ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿದೆ. 'ಪ್ಯಾರಾಮೆಟ್ರಿಕ್' ಗ್ರಿಲ್ ವಿನ್ಯಾಸದೊಂದಿಗೆ ಹೊಸ ಮುಂಭಾಗದ ಶೈಲಿಯು ಹೊಸ ಕಾರಿಗೆ ಮತ್ತಷ್ಟು ಮೆರಗು ನೀಡಲಿದ್ದು, ಸ್ಪೋರ್ಟಿ ವಿನ್ಯಾದಸದ ಪರಿಷ್ಕೃತ ಹೆಡ್‌ಲೈಟ್ಸ್ ಮತ್ತು ಸ್ಲೀಕರ್ ಟೈಲ್-ಲೈಟ್‌ಗಳನ್ನು ವೆನ್ಯೂ ಎನ್-ಲೈನ್‌ನಲ್ಲಿ ಕಾಣಬಹುದು.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಸದ್ಯ ಹ್ಯುಂಡೈ ಕಂಪನಿಯು ವೆನ್ಯೂ ಮಾದರಿಯನ್ನು ವಿವಿಧ ವೆರಿಯೆಂಟ್‌ಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು, ಹೊಸ ಮಾದರಿಯು ಸದ್ಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.53 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.72 ಲಕ್ಷ ಬೆಲೆ ಹೊಂದಿದೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ವೆನ್ಯೂ ಎನ್-ಲೈನ್ ಮಾದರಿಯು ಸ್ಟ್ಯಾಂಡರ್ಡ್ ವೆನ್ಯೂ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದ್ದು, ಹ್ಯುಂಡೈ ಕಂಪನಿಯು ಸ್ಟ್ಯಾಂಡರ್ಸ್ ವೆನ್ಯೂ ಮಾದರಿಯನ್ನು ಈ ಹಿಂದಿನಂತೆ 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಆದರೆ ವೆನ್ಯೂ ಎನ್-ಲೈನ್ ಮಾದರಿಯು ಪರ್ಫಾಮೆನ್ಸ್ ಆವೃತ್ತಿಯಾಗಿರುವುದರಿಂದ ಕಂಪನಿಯು ಕೇವಲ 1.-0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಹೊಸ ಮಾದರಿಯು ಸ್ಟ್ಯಾಂಡರ್ಡ್ ಮಾದರಿಯ ಹೈ ಎಂಡ್ ಆವೃತ್ತಿಗಿಂತ ರೂ. 70 ಸಾವಿರದಿಂದ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಇನ್ನು ವೆನ್ಯೂ 2022ರ ಮಾದರಿಯು ಈ ಬಾರಿ ಹಲವಾರು ನವೀಕೃತ ವಿನ್ಯಾಸಗಳೊಂದಿಗೆ ಮಧ್ಯಮ ಕ್ರಮಾಂಕದ ಐಷಾರಾಮಿ ಎಸ್‌ಯುವಿ ಟ್ಯೂಸಾನ್ ಮಾದರಿಯಿಂದಲೂ ಪ್ರೇರಣೆ ಹೊಂದಿದ್ದು, 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌, ಎಲ್ಇಡಿ ಟೈಲ್‌ಲೈಲ್, ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಜೊತೆಗೆ ಸ್ಕೂಪ್-ಔಟ್‌ನೊಂದಿಗೆ ನವೀಕೃತಗೊಂಡಿದೆ.

ವೆನ್ಯೂ ಎನ್-ಲೈನ್ ಬಿಡುಗಡೆಗೂ ಮುನ್ನ ಮೆಟಾವರ್ಸ್‌ನಲ್ಲಿ ಹೊಸ ಕಾರು ಅನಾವರಣಗೊಳಿಸಿದ ಹ್ಯುಂಡೈ

ಹೊಸ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಗೆ ಬೆಂಬಲ ನೀಡುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಹೊಸ ಡಿಜಿಟಲ್ ಡ್ರೈವರ್‌ ಸೈಡ್ ಡಿಸ್ಪ್ಲೇ ನೀಡಲಾಗಿದ್ದು, ಬ್ಲೂಲಿಂಕ್ ಸಂಪರ್ಕಿತ ಕಾರ್ ಸೂಟ್ ಮೂಲಕ 60ಕ್ಕೂ ಹೆಚ್ಚು ಸಂಪರ್ಕಿತ ಕಾರ್ ವೈಶಿಷ್ಟ್ಯಗಳನ್ನು ನೀಡಿದೆ.

Article Published On: Wednesday, August 24, 2022, 21:02 [IST]
English summary
Hyundai venue n line to launch in metaverse ahead of the launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+