ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ಹ್ಯುಂಡೈ ಇಂಡಿಯಾ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ವೆನ್ಯೂ ಎನ್-ಲೈನ್ ಆವೃತ್ತಿಯನ್ನು ಪರಿಚಯಿಸುತ್ತಿದೆ.

Recommended Video

New Maruti Alto K10 KANNADA Review | What’s New On The Affordable Hatchback? Mileage & Comfort

ಸೆಪ್ಟೆಂಬರ್ 6ರಂದು ಹೊಸ ಕಾರು ಬಿಡುಗಡೆಯಾಗಲಿದ್ದು, ಹೊಸ ಕಾರಿನ ವೆರಿಯೆಂಟ್, ಬಣ್ಣಗಳ ಆಯ್ಕೆ ಮತ್ತು ತಾಂತ್ರಿಕ ಸೌಲಭ್ಯಗಳ ಮಾಹಿತಿ ಇಲ್ಲಿ ನೀಡಲಾಗಿದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ಹೊಸ ವೆನ್ಯೂ ಎನ್-ಲೈನ್ ಮಾದರಿಗಾಗಿ ಹ್ಯುಂಡೈ ಕಂಪನಿಯು ಈಗಾಗಲೇ ಬುಕಿಂಗ್ ಸಹ ಆರಂಭಿಸಿದೆ. ರೂ. 21 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಆವೃತ್ತಿಗಾಗಿ ಗ್ರಾಹಕರ ಆನ್‌ಲೈನ್ ಅಥವಾ ನೇರವಾಗಿ ಡೀಲರ್ಸ್‌ ಬಳಿಯಲ್ಲಿ ಮುಂಗಡ ಹಣ ಪಾವತಿ ಮಾಡಬಹುದಾಗಿದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ವೆನ್ಯೂ ಎನ್-ಲೈನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಅತ್ಯುತ್ತಮ ಫೀಚರ್ಸ ಮತ್ತು ಸ್ಪೋರ್ಟಿ ಡಿಸೈನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಫೀಚರ್ಸ್‌ಗಳಿಗೆ ಅನುಗುಣವಾಗಿ ಎನ್6 ಮತ್ತು ಎನ್8 ವೆರಿಯೆಂಟ್ ಹೊಂದಿರಲಿದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ಸ್ಟ್ಯಾಂಡರ್ಡ್ ವೆನ್ಯೂ ಮಾದರಿಗಳಿಗೆ ಹೋಲಿಸಿದರೆ ಎನ್-ಲೈನ್‌ನಲ್ಲಿ ಸಾಕಷ್ಟು ವಿನ್ಯಾಸ ಬದಲಾವಣೆಗಳಾಗಿದ್ದು, ಇದು ಡಾರ್ಕ್ ಕ್ರೋಮ್ ಫ್ರಂಟ್ ಗ್ರಿಲ್, ಸ್ಪೋರ್ಟಿ ಟೈಲ್‌ಗೇಟ್ ಸ್ಪಾಯ್ಲರ್, ಗ್ರಿಲ್‌ನಲ್ಲಿ ಎನ್-ಲೈನ್ ಬ್ಯಾಡ್ಜ್, ಸೈಡ್ ಫೆಂಡರ್‌ಗಳು ಮತ್ತು ಟೈಲ್‌ಗೇಟ್, 16-ಇಂಚಿನ ಮಿಶ್ರಲೋಹದ ಚಕ್ರಗಳು ಮತ್ತು ಎನ್ ಬ್ರ್ಯಾಂಡಿಂಗ್ ಹೊಂದಿರುತ್ತದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ಜೊತೆಗೆ ಸ್ಪೋರ್ಟಿ ಬಂಪರ್, ನವೀಕರಿಸಿದ ಫೆಂಡರ್‌ಗಳು, ಸೈಡ್ ಸಿಲ್ ಮತ್ತು ರೂಫ್ ರೈಲ್‌ಗಳು ಅಥ್ಲೆಟಿಕ್ ರೆಡ್ ಹೈಲೈಟ್‌ಗಳು, ಬ್ಲ್ಯಾಕ್ ಅಥ್ಲೆಟಿಕ್ ಸ್ಪೋರ್ಟಿ ವಿನ್ಯಾಸ ಪಡೆಯಲಿದ್ದು, ರೆಡ್ ಆಕ್ಸೆಂಟ್‌ನೊಂದಿಗೆ ಒಳಾಂಗಣ, ಮುಂಭಾಗದ ಬ್ರೇಕ್‌ನಲ್ಲಿ ರೆಡ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ಹಾಗೆಯೇ ಹೊಸ ಕಾರಿನ ವೈಶಿಷ್ಟ್ಯಗಳ ಬಗೆಗೆ ಹೇಳುವುದಾದರೆ ಹೊಸ ವೆನ್ಯೂ ಎನ್-ಲೈನ್ ಮಾದರಿಯಲ್ಲಿ ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್‌ಕ್ಯಾಮ್ ಅನ್ನು ಹೊಂದಿರುತ್ತದೆ. ಹಾಗೆಯೇ ಬ್ಲೂಲಿಂಕ್ ಸಂಪರ್ಕಿತ ತಂತ್ರಜ್ಞಾನದ ಅಡಿಯಲ್ಲಿ 60 ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳು ಇದರಲ್ಲಿದ್ದು, ಇದು ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್‌ನೊಂದಿಗೆ ಹೋಮ್ ಟು ಕಾರ್ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ಇದರೊಂದಿಗೆ ಪನೋರಮಿಕ್ ಸನ್‌ರೂಫ್, ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದ್ದು, ಇದು ಪೋಲಾರ್ ವೈಟ್ ಮತ್ತು ಶ್ಯಾಡೋ ಗ್ರೇ ಸೇರಿದಂತೆ ಮೂರು ಮೊನೊ ಟೋನ್‌ಗಳಲ್ಲಿ ಎರಡು ಮೊನೊ ಟೋನ್‌ಗಳಲ್ಲಿ ಲಭ್ಯವಾಗಲಿದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ಪೋಲಾರ್ ವೈಟ್ ಜೊತೆಗೆ ಪ್ಲಾಟಿನಿಯಂ ಬ್ಲ್ಯಾಕ್ ರೂಫ್, ಪೋಲಾರ್ ವೈಟ್ ಜೊತೆ ಫ್ಯಾಂಟಮ್ ಬ್ಲ್ಯಾಕ್ ರೂಫ್ ಮತ್ತು ಥಂಡರ್ ಬ್ಲೂ ಜೊತೆ ಶಾಡೋ ಬ್ಲ್ಯಾಕ್ ರೂಫ್ ಬಣ್ಣಗಳ ಆಯ್ಕೆ ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ಭಾರತದಲ್ಲಿ ಹ್ಯುಂಡೈ ಕಂಪನಿಯು ಈಗಾಗಲೇ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಎನ್-ಲೈನ್ ಆವೃತ್ತಿಯನ್ನು ಮಾರಾಟಗೊಳಿಸುತ್ತಿದ್ದು, ಈ ವರ್ಷಾಂತ್ಯದೊಳಗಾಗಿ ಮತ್ತೆರಡು ಹೊಸ ಕಾರು ಮಾದರಿಗಳಲ್ಲಿ ಹೊಸ ಪರ್ಫಾಮೆನ್ಸ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ವೆನ್ಯೂ ಜೊತೆಗೆ ಕ್ರೆಟಾ ಕಾರು ಮಾದರಿಯಲ್ಲೂ ಸಹ ಎನ್-ಲೈನ್ ಆವೃತ್ತಿಯನ್ನು ಪರಿಚಯಿಸಬಹುದಾದ ಸಾಧ್ಯತೆಗಳಿದ್ದು, ಎನ್-ಲೈನ್ ಆವೃತ್ತಿಗಳು ಹ್ಯುಂಡೈ ಪ್ರಮುಖ ಕಾರುಗಳ ಪರ್ಫಾಮೆನ್ಸ್ ಆವೃತ್ತಿಯಾಗಿದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ವೆನ್ಯೂ ಎನ್-ಲೈನ್‌ನಲ್ಲಿ ಹೈ ಎಂಡ್ ಮಾದರಿಯಲ್ಲಿರುವ 1.0-ಲೀಟರ್ ಮೂರು-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಜೋಡಿಸಬಹುದಾಗಿದ್ದು, ಸೆಮಿ ಆಟೋಮ್ಯಾಟಿಕ್ ಮಾದರಿಯಾದ ಐಎಂಟಿ ಗೇರ್‌ಬಾಕ್ಸ್ ಇಲ್ಲವೆ 7 ಸ್ಪೀಡ್ ಡಿಸಿಟಿ ಸ್ವಯಂಚಾಲಿತ ಗೇರ್‌ಬಾಕ್ಸ್ ನೀಡಲಿದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ಹಾಗೆಯೇ ಸ್ಪೋರ್ಟಿ ಲುಕ್ ಹೆಚ್ಚಿಸಲು ಹೊಸ ಕಾರಿನಲ್ಲಿ ಡ್ಯುಯಲ್-ಟಿಪ್ ಹೊಂದಿರುವ ಎಕ್ಸಾಸ್ಟ್ ಪೈಪ್ ಅನ್ನು ಬಳಸಲಾಗಿದ್ದು, ಎನ್-ಲೈನ್ ಮಾದರಿಗೆ ಕೆಲವು ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿದೆ. 'ಪ್ಯಾರಾಮೆಟ್ರಿಕ್' ಗ್ರಿಲ್ ವಿನ್ಯಾಸದೊಂದಿಗೆ ಹೊಸ ಮುಂಭಾಗದ ಶೈಲಿಯು ಹೊಸ ಕಾರಿಗೆ ಮತ್ತಷ್ಟು ಮೆರಗು ನೀಡಲಿದ್ದು, ಸ್ಪೋರ್ಟಿ ವಿನ್ಯಾದಸದ ಪರಿಷ್ಕೃತ ಹೆಡ್‌ಲೈಟ್ಸ್ ಮತ್ತು ಸ್ಲೀಕರ್ ಟೈಲ್-ಲೈಟ್‌ಗಳನ್ನು ವೆನ್ಯೂ ಎನ್-ಲೈನ್‌ನಲ್ಲಿ ಕಾಣಬಹುದು.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ಸದ್ಯ ಹ್ಯುಂಡೈ ಕಂಪನಿಯು ವೆನ್ಯೂ ಮಾದರಿಯನ್ನು ವಿವಿಧ ವೆರಿಯೆಂಟ್‌ಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು, ಹೊಸ ಮಾದರಿಯು ಸದ್ಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.53 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.72 ಲಕ್ಷ ಬೆಲೆ ಹೊಂದಿದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ವೆನ್ಯೂ ಎನ್-ಲೈನ್ ಮಾದರಿಯು ಸ್ಟ್ಯಾಂಡರ್ಡ್ ವೆನ್ಯೂ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದ್ದು, ಹ್ಯುಂಡೈ ಕಂಪನಿಯು ಸ್ಟ್ಯಾಂಡರ್ಸ್ ವೆನ್ಯೂ ಮಾದರಿಯನ್ನು ಈ ಹಿಂದಿನಂತೆ 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ಹ್ಯುಂಡೈ ವೆನ್ಯೂ ಎನ್-ಲೈನ್ ವಿಶೇಷತೆಗಳಿವು!

ಆದರೆ ವೆನ್ಯೂ ಎನ್-ಲೈನ್ ಮಾದರಿಯು ಪರ್ಫಾಮೆನ್ಸ್ ಆವೃತ್ತಿಯಾಗಿರುವುದರಿಂದ ಕಂಪನಿಯು ಕೇವಲ 1.-0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಹೊಸ ಮಾದರಿಯು ಸ್ಟ್ಯಾಂಡರ್ಡ್ ಮಾದರಿಯ ಹೈ ಎಂಡ್ ಆವೃತ್ತಿಗಿಂತ ರೂ. 70 ಸಾವಿರದಿಂದ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದೆ.

Article Published On: Friday, August 26, 2022, 21:11 [IST]
English summary
Hyundai venue n line variants colours option details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+