ಪ್ರತಿ ದಿನ 1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡಲಾಗುತ್ತಿರುವುದು ಇವಿ ವಾಹನಗಳತ್ತ ಗ್ರಾಹಕರ ಮುಖಮಾಡಿದ್ದಾರೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಇವಿ ವಾಹನ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಹೊಸ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸುತ್ತಿವೆ. ಗುರುಗ್ರಾಮ್ ಮೂಲದ ಅಲೆಕ್ಟ್ರಿಫೈ ಪ್ರೈವೇಟ್ ಲಿಮಿಟೆಡ್ ಕಂಪನಿಯು ಇವಿ ವಾಹನಗಳಿಗೆ ಪೂರಕವಾಗಿ ಬೃಹತ್ ಪ್ರಮಾಣದ ಚಾರ್ಜಿಂಗ್ ನಿಲ್ದಾಣಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಕಂಪನಿಯು ತನ್ನ ಎರಡನೇ ಚಾರ್ಜಿಂಗ್ ನಿಲ್ದಾಣವನ್ನು ಇದೀಗ ಅಧಿಕೃತವಾಗಿ ಆರಂಭಿಸಿದೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಕಳೆದ ತಿಂಗಳು ಗುರುಗ್ರಾಮ್‌ನ ಸೆಕ್ಟರ್ 52 ರಲ್ಲಿ ಒಂದೇ ಸ್ಥಳದಲ್ಲಿ ಸುಮಾರು ನೂರು ಇವಿ ವಾಹನಗಳನ್ನು ಏಕಕಾಲಕ್ಕೆ ಚಾರ್ಜಿಂಗ್ ಮಾಡಬಹುದಾದ ಬೃಹತ್ ಚಾರ್ಜಿಂಗ್ ನಿಲ್ದಾಣವನ್ನು ತೆರೆದಿದ್ದ ಅಲೆಕ್ಟ್ರಿಫೈ ಪ್ರೈವೇಟ್ ಲಿಮಿಟೆಡ್ ಕಂಪನಿಯು ಇದೀಗ ಸೆಕ್ಟರ್ 86 ರಲ್ಲಿ ಮತ್ತೊಂದು ಬೃಹತ್ ಪ್ರಮಾಣದ ಚಾರ್ಜಿಂಗ್ ನಿಲ್ದಾಣವನ್ನು ಆರಂಭಿಸಿದೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ದೆಹಲಿ-ಜೈಪುರ ಇ-ಹೆದ್ದಾರಿಯಲ್ಲಿ ನೆಲೆಗೊಂಡಿರುವ ಈ ಚಾರ್ಜಿಂಗ್ ನಿಲ್ದಾಣವು ಒಟ್ಟು 141 ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, 24 ಗಂಟೆಗಳಲ್ಲಿ ಕನಿಷ್ಠ 1 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಬಹುದಾಗಿದೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಈ ಚಾರ್ಜಿಂಗ್ ನಿಲ್ದಾಣದಲ್ಲಿ 75 ಎಸಿ ಸಾಮಾನ್ಯ ಚಾರ್ಜರ್‌ಗಳನ್ನು ಮತ್ತು 25 ಡಿಸಿ ಫಾಸ್ಟ್ ಚಾರ್ಜರ್‌ಗಳನ್ನು ಅಳವಡಿಸಲಾಗಿದ್ದು, ಎಸಿ ಚಾರ್ಜರ್‌ನಿಂದ 24 ಗಂಟೆಗಳಲ್ಲಿ 570 ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಬಹುದಾದರೆ ಡಿಸಿ ಚಾರ್ಜರ್ ಸಹಾಯದಿಂದ ದಿನಕ್ಕೆ 600ಕ್ಕೂ ಹೆಚ್ಚು ಕಾರುಗಳನ್ನು ಚಾರ್ಜ್ ಮಾಡಬಹುದು.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಹೊಸ ಚಾರ್ಜಿಂಗ್ ನಿಲ್ದಾಣದಲ್ಲಿ ಎರಡೂ ಮಾದರಿಯ ಚಾರ್ಜರ್‌ಗಳನ್ನು ಬಳಸಿಕೊಂಡು 24 ಗಂಟೆಗಳಲ್ಲಿ ಕನಿಷ್ಠ 1 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, 30 ದಿನಗಳ ದಾಖಲೆಯ ಸಮಯದಲ್ಲಿ ನಿರ್ಮಿಸಲಾದ ಕಂಪನಿಯ ಎರಡನೇ ಚಾರ್ಜಿಂಗ್ ನಿಲ್ದಾಣ ಇದಾಗಿದೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಅಲೆಕ್ಟ್ರಿಫೈ ಪ್ರೈವೇಟ್ ಲಿಮಿಟೆಡ್ ಕಂಪನಿಯು ಮುಂದಿನ ಮೂರು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 60 ಚಾರ್ಜಿಂಗ್ ನಿಲ್ದಾಣ ಸ್ಥಾಪಿಸಲು ಯೋಜನೆ ರೂಪಿಸಲಾಗಿದ್ದು, ಇದೇ ತಿಂಗಳಾಂತ್ಯಕ್ಕೆ 20ಕ್ಕೂ ನಿಲ್ದಾಣಗಳು ಕಾರ್ಯನಿರ್ವಹಣೆಗೆ ಸಿದ್ದವಾಗಿವೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಅಲೆಕ್ಟ್ರಿಫೈ ಪ್ರೈವೇಟ್ ಲಿಮಿಟೆಡ್ ನಿರ್ಮಾಣದ ಹೊಸ ಚಾರ್ಜಿಂಗ್ ನಿಲ್ದಾಣವು ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದಿಂದ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಸರ್ಕಾರವು ನಿಗದಿಪಡಿಸಿದ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿದ್ದು, ಇದು ಕೇಂದ್ರ ಸರ್ಕಾರದ ಫೇಮ್ 2 ಇವಿ ಯೋಜನ ಅಡಿಯಲ್ಲಿ ಸಬ್ಸಡಿಯೊಂದಿಗೆ ನಿರ್ಮಾಣಗೊಂಡಿದೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ರಾಷ್ಟ್ರ ರಾಜಧಾನಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೆಹಲಿ ಸರ್ಕಾರವು ಕಳೆದ ವರ್ಷ ಚಾರ್ಜಿಂಗ್ ನಿಲ್ದಾಣಗಳಿಗೆ ಸಬ್ಸಿಡಿ ಯೋಜನೆಯನ್ನು ಪ್ರಾರಂಭಿಸಿತ್ತು. ಇದರ ಅಡಿಯಲ್ಲಿ ದೆಹಲಿ ಸರ್ಕಾರವು ಯಾವುದೇ ಖಾಸಗಿ ಆಸ್ತಿ, ಮಾಲ್, ಆಸ್ಪತ್ರೆ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸಹಾಯಧನವನ್ನು ನೀಡುತ್ತಿದೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಈ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ಕೊನೆಯ ಮೈಲಿ ತನಕವೂ ಚಾರ್ಜಿಂಗ್ ಸೌಲಭ್ಯ ದೊರೆಯುವಂತೆ ಯೋಜನೆ ರೂಪಿಸಲಾಗುತ್ತಿದ್ದು, ಪ್ರಮುಖ ಪೆಟ್ರೋಲಿಯಂ ಕಂಪನಿಗಳು ಕೂಡಾ ಇವಿ ನಿಲ್ದಾಣಗಳನ್ನು ಹೆಚ್ಚಿಸಲು ಪೆಟ್ರೋಲ್ ಬಂಕ್‌ಗಳಲ್ಲಿಯೇ ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಾಣಕ್ಕೆ ಚಾಲನೆ ನೀಡಿವೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಸರ್ಕಾರಿ ಸ್ವಾಮ್ಯದ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (ಸಿಇಎಸ್ಎಲ್) ಸಂಸ್ಥೆಯು ದೇಶಾದ್ಯಂತ ಸಾವಿರಾರು ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸುತ್ತಿದ್ದು, ಹೊಸ ಯೋಜನೆಯಡಿ ಭಾರತ್ ಪೆಟ್ರೋಲಿಯಂ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಹಂತ-ಹಂತವಾಗಿ 7 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಯೋಜನೆ ಸಿದ್ದಪಡಿಸಿದೆ.

1 ಸಾವಿರ ಇವಿ ಕಾರುಗಳನ್ನು ಚಾರ್ಜ್ ಮಾಡಬಹುದಾದ ದೇಶದ ಅತಿದೊಡ್ಡ ಚಾರ್ಜಿಂಗ್ ನಿಲ್ದಾಣ ಆರಂಭ

ಭಾರತ್ ಪೆಟ್ರೋಲಿಯಂ ಕಂಪನಿಯ ಹೊಸ ಪ್ರಕಟನೆಯಲ್ಲಿ ಮುಂದಿನ ಅಕ್ಟೋಬರ್ ವೇಳೆಗೆ ದೇಶದ ಪ್ರಮುಖ ಕಡೆಗಳಲ್ಲಿ ಒಂದು ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ಹೊಂದಿರುವುದಾಗಿ ಭರವಸೆ ನೀಡಿದ್ದು, ಇಂಧನ ಚಾಲಿತ ಬದಲಾಗಿ ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸಲು ಎಲ್ಲಾ ಮೂಲಭೂತ ಸೌಕರ್ಯ ಒದಗಿಸುವುವಲ್ಲಿ ಕಂಪನಿಯು ಬದ್ದವಾಗಿದೆ ಎಂದಿದೆ.

Article Published On: Saturday, March 5, 2022, 9:00 [IST]
English summary
Indias largest ev charging station inaugurated in gurugram charge up 1000 cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+