ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

ಮಾರುತಿ ಸುಜುಕಿ ತನ್ನ ಗ್ರಾಹಕರನ್ನು ಮತ್ತು ಭಾರತೀಯ ವಾಹನ ಮಾರುಕಟ್ಟೆಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಕ್ರಿಯೆಯಲ್ಲಿದೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಮಾರುತಿ-ಟೊಯೊಟಾ ಪಾಲುದಾರಿಕೆಯಲ್ಲಿ ಇತ್ತೀಚೆಗೆ ಅಭಿವೃದ್ಧಿಪಡಿಸಿದ ಗ್ರಾಂಡ್ ವಿಟಾರಾ ಹೈಬ್ರಿಡ್ ಕಾರನ್ನು ಬಿಡುಗಡೆ ಮಾಡಿದೆ.

Recommended Video

Alto K10 vs Renault Kwid | Detailed Comparison | Specs Features And Design

ಈ ಕಾರಿಗೆ ಬುಕ್ಕಿಂಗ್‌ಗಳು ಗರಿಗೆದರುತ್ತಿವೆ. ಮುಂಬರುವ ದಿನಗಳಲ್ಲಿ ಈ ಕಾರು ಭಾರೀ ಬೇಡಿಕೆ ಪಡೆದುಕೊಳ್ಳಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದೊಂದೆ ಅಲ್ಲದೇ ಭಾರತೀಯರ ಗಮನ ಸೆಳೆಯುವ ಸಲುವಾಗಿ ಸ್ವಿಫ್ಟ್ ಕಾರು ಮಾದರಿಯಲ್ಲಿ ಹೊಸ ಸಿಎನ್ ಜಿ ಆಯ್ಕೆಯನ್ನು ಸಹ ಮಾರುತಿ ಕಂಪನಿ ಪರಿಚಯಿಸಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

ಇವೆಲ್ಲವೂ ಒಂದೆಡೆಯಾದರೆ ಇದೀಗ 2022 ಮಾರುತಿ ಸುಜುಕಿ ಆಲ್ಟೊ ಕೆ10 ಅನ್ನು ಭಾರತದಲ್ಲಿ ನಿನ್ನೆ (ಆಗಸ್ಟ್ 19) ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ನಿರಂತರವಾಗಿ ಹೊಸ ವಾಹನಗಳ ಮೂಲಕ ದೇಶದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಸಾಗುತ್ತಿದೆ. ಈ ಹೊಸ ಮಾರುತಿ ಸುಜುಕಿ ಆಲ್ಟೊ ಕೆ10ಗೆ ಭಾರತದಲ್ಲಿ ಉತ್ತಮ ಸ್ವಾಗತ ಸಿಗಲಾರಂಭಿಸಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

ಮಾರುತಿ ಕಾರು ಪ್ರಿಯರಿಗಾಗಿ ಇದೀಗ ಬಿಡುಗಡೆಯಾದ 2022 ಆಲ್ಟೊ ಕೆ 10 ಕಾರಿನ ರೂಪಾಂತರದ ವಿವರಗಳನ್ನು ಮತ್ತು ಆಲ್ಟೊ ಕೆ 10 ಕಾರು ರೂಪಾಂತರದಲ್ಲಿ ಮಾರುತಿ ಸುಜುಕಿ ಒದಗಿಸಿದ ವಿಶೇಷ ಸೌಲಭ್ಯಗಳನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಬಹುದು.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

ವೇರಿಯೆಂಟ್ ವಿವರಗಳು:

ಮಾರುತಿ ಸುಜುಕಿ ಆಲ್ಟೊ ಒಟ್ಟು ಆರು ರೂಪಾಂತರಗಳಲ್ಲಿ ಲಭ್ಯವಿದೆ. ಇದು STD, LXI, VXI, VXI AGS, VXI Plus ಮತ್ತು VXI Plus (AGS) ರೂಪಾಂತರಗಳಲ್ಲಿ ಲಭ್ಯವಿದೆ. STD, LXI, VXI ಮತ್ತು VXI ಪ್ಲಸ್ ರೂಪಾಂತರಗಳಲ್ಲಿ ನೀಡಲಾದ ವೈಶಿಷ್ಟ್ಯಗಳ ಕುರಿತ ಮಾಹಿತಿಯನ್ನು ಕೆಳಗೆ ನೋಡೋಣ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

STD ರೂಪಾಂತರ:

ಮಾರುತಿ ಸುಜುಕಿ ಆಲ್ಟೊ K10 STD ರೂಪಾಂತರವನ್ನು 13-ಇಂಚಿನ ವೀಲ್ ಹಾಗೂ ಸೆಂಟರ್ ಕ್ಯಾಪ್‌ಗಳೊಂದಿಗೆ ನೀಡಿದೆ. ಕಾರಿನ ಒಳಭಾಗದಲ್ಲಿ ಬಾಟಲ್ ಹೋಲ್ಡರ್‌ಗಳು, ಸನ್ ವೈಸರ್‌ಗಳು, ಕ್ಯಾಬಿನ್ ಏರ್ ಫಿಲ್ಟರ್, ರಿಮೋಟ್ ಫ್ಯೂಯಲ್ ಲಿಡ್ ಓಪನರ್, ರಿಮೋಟ್ ಬೂಟ್ ಓಪನರ್, ಡಿಜಿಟಲ್ ಸ್ಪೀಡೋಮೀಟರ್ ಇತ್ಯಾದಿಗಳನ್ನು ಅಳವಡಿಸಲಾಗಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಹಿಂಭಾಗದ ಚೈಲ್ಡ್ ಲಾಕ್, ಪ್ರಿ-ಟೆನ್ಷನರ್ ಹೊಂದಿರುವ ಮುಂಭಾಗದ ಸೀಟ್ ಬೆಲ್ಟ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಸೀಟ್ ಬೆಲ್ಟ್ ರಿಮೈಂಡರ್, ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಹೈ ಸ್ಪೀಡ್ ಅಲರ್ಟ್ ಸೇರಿವೆ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

LXI ರೂಪಾಂತರ:

LXI ರೂಪಾಂತರವು ಮೇಲೆ ನೋಡಿದ STD ರೂಪಾಂತರಕ್ಕಿಂತ ಸ್ವಲ್ಪ ಹೆಚ್ಚು ವೈಶಿಷ್ಟ್ಯ-ಭರಿತ ಆಯ್ಕೆಯಾಗಿದೆ. ಈ ಆಯ್ಕೆಯಲ್ಲಿ ಬಣ್ಣದ ಬಂಪರ್ ಅನ್ನು ಬಳಸಲಾಗುತ್ತದೆ. ಹೆಚ್ಚುವರಿ ಸೌಕರ್ಯಗಳಲ್ಲಿ ಹೀಟರ್, ಪವರ್ ಸ್ಟೀರಿಂಗ್ ವೀಲ್ ಜೊತೆಗೆ ಎಸಿ ಸೇರಿವೆ. STD ರೂಪಾಂತರದಲ್ಲಿ ನೀಡಲಾದ ಎಲ್ಲಾ ವೈಶಿಷ್ಟ್ಯಗಳು LXI ರೂಪಾಂತರದಲ್ಲಿಯೂ ಇರುತ್ತವೆ ಎಂಬುದು ಗಮನಿಸಬೇಕಾದ ಸಂಗತಿ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

VXI ರೂಪಾಂತರ:

ಬಣ್ಣದ ಡೋರ್ ಹ್ಯಾಂಡಲ್‌ಗಳು, ರೂಫ್ ಆಂಟೆನಾ, ಮುಂಭಾಗದಲ್ಲಿ ಪವರ್ ವಿಂಡೋಗಳು, ಆಕ್ಸೆಸರಿ ಸಾಕೆಟ್, ಆಂತರಿಕವಾಗಿ ಹೊಂದಾಣಿಕೆ ಮಾಡಬಹುದಾದ ORVM, ಬ್ಲೂಟೂತ್ ಸಂಪರ್ಕದೊಂದಿಗೆ 2-ಡಿನ್ ಸ್ಮಾರ್ಟ್ ಪ್ಲೇ ಆಡಿಯೋ ಸಿಸ್ಟಮ್, ಮಲ್ಟಿ ಇನ್‌ಫರ್ಮೇಷನ್ ಸ್ಕ್ರೀನ್, ಡ್ಯುಯಲ್ ಸ್ಪೀಕರ್‌ಗಳನ್ನು VXI ರೂಪಾಂತರದಲ್ಲಿ ಒದಗಿಸಲಾಗಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

ಇತರ ಕೆಳಮಟ್ಟದ ರೂಪಾಂತರಗಳಲ್ಲಿ ಸ್ಪೀಡ್ ಸೆನ್ಸಿಂಗ್ ಆಟೋ ಟೂರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಟೂರ್ ಅನ್‌ಲಾಕ್, ಎಂಜಿನ್ ಇಮೊಬಿಲೈಸರ್, ಸೆಂಟ್ರಲ್ ಡೋರ್ ಲಾಕಿಂಗ್ ಫೀಚರ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

VXI ಪ್ಲಸ್:

VXI Plus ಆಯ್ಕೆಯು ಮೇಲೆ ನೋಡಿದ ಆಲ್ಟೊ K10 ನ ಎಲ್ಲಾ ರೂಪಾಂತರಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಮೇಲೆ ನೋಡಿದ ಎಲ್ಲಾ ರೂಪಾಂತರಗಳಲ್ಲಿ ಕಂಡುಬರುವ ವೈಶಿಷ್ಟ್ಯಗಳ ಜೊತೆಗೆ VXI Plus ಅನೇಕ ಹೊಸ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

ಹೆಚ್ಚುವರಿ ವೈಶಿಷ್ಟ್ಯಗಳೆಂದರೆ ಡೋರ್ ಹ್ಯಾಂಡಲ್, ಸೆಂಟರ್ ಕಾರ್ನಿಸ್, ಸೈಡ್ ಲೋವರ್‌ಗಳು ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ಕಾರಿನ ಒಳಭಾಗದಲ್ಲಿ ಸಿಲ್ವರ್ ಆಕ್ಸೆಂಟ್‌ಗಳ ಜೊತೆಗೆ ರಿಮೋಟ್ ಕೀ, 17.78-ಇಂಚಿನ ಸ್ಮಾರ್ಟ್ ಪ್ಲೇ ಸ್ಕ್ರೀನ್ (ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ), ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಹಿಂಭಾಗದ ಪಾರ್ಸೆಲ್ ಟ್ರೇ, 4 ಸ್ಪೀಕರ್‌ಗಳು ಮತ್ತು USB ಪೋರ್ಟ್ ಅನ್ನು ಹೊಂದಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

ಇದಲ್ಲದೆ, ಸೀಟ್ ಬೆಲ್ಟ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್‌ನಂತಹ ವಿವಿಧ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಈ ರೂಪಾಂತರಗಳು ವೈಶಿಷ್ಟ್ಯಗಳು ಮತ್ತು ಸ್ಟೈಲಿಂಗ್ ವಿಷಯದಲ್ಲಿ ಭಿನ್ನವಾಗಿದ್ದರೂ ಎಂಜಿನ್ ವಿಷಯದಲ್ಲಿ ಒಂದೇ ಆಗಿರುತ್ತವೆ. ಈ ಕಾರಿನಲ್ಲಿ 1.0 ಲೀಟರ್ 3 ಸಿಲಿಂಡರ್ ಕೆ10ಸಿ ಪೆಟ್ರೋಲ್ ಎಂಜಿನ್ ಬಳಸಲಾಗಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

ಇದು 67 ಎಚ್‌ಪಿ ಪವರ್ ಮತ್ತು 89 ಎನ್‌ಎಂ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಪ್ರತಿ ಲೀಟರ್ ಪೆಟ್ರೋಲ್ ಗೆ 24.39 kmpl ನಿಂದ ಗರಿಷ್ಠ 24.90 kmpl ಮೈಲೇಜ್ ನೀಡುತ್ತವೆ. ಮಾರುತಿ ಕಂಪನಿಯು ತನ್ನ ಜನಪ್ರಯ ಆಲ್ಟೋ ಮಾದರಿಯನ್ನು ಮುಂದಿನ ಕೆಲ ದಶಕಗಳ ಕಾಲ ಮುಂದುವರೆಸಲು ಯೋಜಿಸಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿ ಗೊಂದಲವೇ? ಎಲ್ಲಾ ವೇರಿಯಂಟ್‌ಗಳ ಮಾಹಿತಿ ಇಲ್ಲಿದೆ...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಟ್ಟುನಿಟ್ಟಾದ ಹೊರಸೂಸುವಿಕೆ ಮತ್ತು ಸುರಕ್ಷತಾ ಮಾನದಂಡಗಳ ಜೊತೆಗೆ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ವಿಭಾಗದ ಸ್ಥಿರ ಕುಸಿತವು 2020 ರಲ್ಲಿ ಆಲ್ಟೋ ಕೆ10 ಅನ್ನು ಮಾರುಕಟ್ಟೆಯಿಂದ ತೆಗೆದುಹಾಕಲು ಒಂದು ಕಾರಣವಾಗಿತ್ತು, ಇದೀಗ ಮಾರುತಿ ಸುಜುಕಿ ಕಂಪನಿಯು ಆಲ್ಟೋ ಕೆ10 ಕಾರನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಿದೆ.

Most Read Articles

Kannada
English summary
Is buying Maruti Suzuki Alto K10 confusing Here are the details of all the variants
Story first published: Saturday, August 20, 2022, 15:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X