ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಆಟೋ ಮಾರುಕಟ್ಟೆಯಲ್ಲಿ ಸದ್ಯ ದಿನಕ್ಕೊಂದು ಹೊಸ ಬಗೆಯ ಕಾರು ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಪ್ರಮುಖ ಕಾರು ಮಾದರಿಗಳು ಅತಿ ಕಡಿಮೆ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿವಾಗಿವೆ. ಯಶಸ್ವಿ ಕಾರು ಮಾದರಿಗಳಲ್ಲಿ ಕಿಯಾ ಹೊಸ ಕಾರೆನ್ಸ್ ಕೂಡಾ ಒಂದಾಗಿದ್ದು, ಬಹು ಉಪಯೋಗಿ ವೈಶಿಷ್ಟ್ಯತೆಯ ಹೊಸ ಕಾರು ಮಾದರಿಯಲ್ಲಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಹೊಸ ಕಾರೆನ್ಸ್ ಕಾರು ತನ್ನ ವಿಭಾಗದಲ್ಲಿನ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮವಾದ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಆಕರ್ಷಕ ಬೆಲೆಯಲ್ಲಿ ವಿವಿಧ ಎಂಜಿನ್ ಆಯ್ಕೆಯೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಬರೋಬ್ಬರಿ 80 ಸಾವಿರಕ್ಕೂ ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಕಳೆದ ಫೆಬ್ರವರಿ ಮಧ್ಯಂತರದಲ್ಲಿ ಬಿಡುಗಡೆಯಾಗಿದ್ದ ಹೊಸ ಕಾರೆನ್ಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.60 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.70 ಲಕ್ಷ ಬೆಲೆ ಹೊಂದಿದ್ದು, ವಿವಿಧ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯಲ್ಲಿ ಭರ್ಜರಿ ಮುಂಚೂಣಿ ಸಾಧಿಸುತ್ತಿದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ವೆರಿಯೆಂಟ್‌ಗಳು

ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮಧ್ಯಮ ಕ್ರಮಾಂಕದ ಎಂಪಿವಿ ಮತ್ತು ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಹೊಸ ಕಾರು ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಹೊಸ ಕಾರು ಖರೀದಿಗೆ ಲಭ್ಯವಿದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಎಂಜಿನ್ ಮತ್ತು ಇಂಧನ ದಕ್ಷತೆ

ಕಿಯಾ ಕಂಪನಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯುವಂತೆಯೇ ಹೊಸ ಕಾರೆನ್ಸ್ ಕಾರಿನಲ್ಲೂ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಈ ವಿಭಾಗದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡುವ ಮಾದರಿ ಇದಾಗಿದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ವಿವಿಧ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದ್ದು, 1.5-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.4-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 140-ಬಿಎಚ್‌ಪಿ, 242-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚು ಮೈಲೇಜ್ ನೀಡುತ್ತದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಕಾರೆನ್ಸ್ ಕಾರಿನ 1.5 ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 15.7 ಕಿ.ಮೀ ಮೈಲೇಜ್ ನೀಡಿದ್ದಲ್ಲಿ 1.4 ಲೀಟರ್ ಟರ್ಬೊ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 16.2 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 16.5 ಕಿ.ಮೀ ಮೈಲೇಜ್ ನೀಡುತ್ತದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಹಾಗೆಯೇ 1.5 ಲೀಟರ್ ಡೀಸೆಲ್ ಮಾದರಿಯಲ್ಲಿನ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 21.3 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಆಟೋಮ್ಯಾಟಿಕ್ ಮಾದರಿಯು ಪ್ರತಿ ಲೀಟರ್‌ಗೆ 18.3 ಕಿ.ಮೀ ಮೈಲೇಜ್ ನೀಡಲಿದೆ. ಹೊಸ ಕಾರು ಸೆಲ್ಟೊಸ್ ಮಾದರಿಗಿಂತಲೂ ಹೆಚ್ಚಿನ ಮೈಲೇಜ್ ನೀಡಲಿದ್ದು, ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಉದ್ದಳತೆ

ಜೊತೆಗೆ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಸ್ಥಳಾವಕಾಶದೊಂದಿಗೆ 4,540 ಎಂಎಂ ಉದ್ದ, 1,800 ಎಂಎಂ ಅಗಲ, 1,700 ಎಂಎಂ ಎತ್ತರ, 2,780 ಎಂಎಂ ವ್ಹೀಲ್ ಬೆಸ್ ಮತ್ತು 195 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಇದರೊಂದಿಗೆ ಆಕರ್ಷಕವಾದ ಡಿಸೈನ್ ಮತ್ತು ಗುಣಮಟ್ಟದ ಫೀಚರ್ಸ್ ಹೊಂದಿರುವುದು ಗ್ರಾಹಕರ ಆಯ್ಕೆಗೆ ಪ್ರಮುಖ ಆಕರ್ಷಣೆಯಾಗಿದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಸುರಕ್ಷಾ ಸೌಲಭ್ಯಗಳು

ಹೊಸ ಕಾರೆನ್ಸ್ ಕಾರಿನಲ್ಲಿ ಕಿಯಾ ಕಂಪನಿಯು ಬೆಸ್ ವೆರಿಯೆಂಟ್‌ನಲ್ಲೂ ಲಭ್ಯವಾಗುವಂತೆ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಮತ್ತು ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೋಡಿಸಿದ್ದು, ಇನ್ನುಳಿದಂತೆ ವಿವಿಧ ವೆರಿಯೆಂಟ್‌ಗಳಿಗೆ ಅನ್ವಯಿಸುವಂತೆ ಎಬಿಎಸ್ ಜೊತೆ ಇಬಿಡಿ, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಬಣ್ಣಗಳ ಆಯ್ಕೆ

ಇನ್ನು ಹೊಸ ಕಾರು ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್, ಮಾಸ್ ಬ್ರೌನ್, ಸ್ಪಾರ್ಕ್ಲಿಂಗ್ ಸಿಲ್ವರ್, ಅರೋರಾ ಬ್ಲ್ಯಾಕ್ ಪರ್ಲ್, ಗ್ರಾವಿಟಿ ಗ್ರೇ ಮತ್ತು ಗ್ಲೇಸಿಯರ್ ವೈಟ್ ಪರ್ಲ್ ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಸರ್ವಿಸ್ ಸೌಲಭ್ಯಗಳು

ಕಿಯಾ ಇಂಡಿಯಾ ಕಂಪನಿಯು ಕಾರೆನ್ಸ್ ಹೊಸ ಮಾದರಿಯ ಮಾಲೀಕರಿಗೆ ಕಂಪನಿಯು ಮಾರಾಟ ನಂತರದ ಪ್ರಮುಖ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ನೀಡುವ ಉದ್ದೇಶದಿಂದ 'ಮೈ ಕನ್ವೀನಿಯನ್ಸ್ ಪ್ಯಾಕೇಜ್' ಅನ್ನು ಪರಿಚಯಿಸಿದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಮೈ ಕನ್ವೀನಿಯನ್ಸ್ ಪ್ಯಾಕೇಜ್‌ನಲ್ಲಿ ಗ್ರಾಹಕರು ನಿಯಮಿತ ನಿರ್ವಹಣೆ, ವಿಸ್ತೃತ ವಾರಂಟಿ, ಟೈರ್, ಅಪಘಾತ ದುರಸ್ತಿ ಮತ್ತು ರಸ್ತೆ ಬದಿಯ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಮೈ ಕನ್ವೀನಿಯನ್ಸ್ ಪ್ಯಾಕೇಜ್ ಅನ್ನು ಗ್ರಾಹಕರು ಪ್ರೀಮಿಯಂ ಮತ್ತು ಐಷಾರಾಮಿ ಮಾದರಿಯಲ್ಲಿ ಖರೀದಿಸಬಹುದಾಗಿದ್ದು, ಇದು ನಾಲ್ಕು ಮತ್ತು ಐದು ವರ್ಷಗಳವರೆಗೆ ಕಾರಿಗೆ ಕವರೇಜ್ ನೀಡುತ್ತದೆ.

ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಕಿಯಾ ಕಾರೆನ್ಸ್‌ನಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳಿವು!

ಈ ಮೂಲಕ ಕಿಯಾ ಕಂಪನಿಯು ಮಾರುತಿ ಎರ್ಟಿಗಾ, ಮಹೀಂದ್ರಾ ಮರಾಜೋ, ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಇನೋವಾ ಕ್ರಿಸ್ಟಾ ಆರಂಭಿಕ ಮಾದರಿಗಳಿಗೂ ಪೈಪೋಟಿ ನೀಡುತ್ತಿದೆ.

More from DriveSpark

Article Published On: Wednesday, September 14, 2022, 18:43 [IST]
English summary
Kia carens muv best features and others details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+