ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ವಾಣಿಜ್ಯ ವಾಹನಗಳ ವಿಭಾಗದಲ್ಲಿ ಇವಿ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನಗಳ ಅಳವಡಿಕೆಯು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಪ್ರಮುಖ ಲಾಜಿಸ್ಟಿಕ್ ಕಂಪನಿಗಳು ಹಂ-ಹಂತವಾಗಿ ಇವಿ ಮಾದರಿಗಳನ್ನು ಬಳಕೆಯನ್ನು ಹೆಚ್ಚಿಸುತ್ತಿವೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಕೊನೆಯ-ಮೈಲಿ ವಿತರಣೆ, ಇ-ಕಾಮರ್ಸ್, ಆಹಾರ ವಿತರಣೆ, ಫಾರ್ಮಾ ಮತ್ತು ಇತರೆ ಲಾಜಿಸ್ಟಿಕ್ಸ್ ಸೇವೆಗಳಿಗೆ ಪ್ರಮುಖ ಕಂಪನಿಗಳು ಇವಿ ತ್ರಿ ಚಕ್ರ ವಾಹನಗಳನ್ನು ಸೇರ್ಪಡೆಗೊಳಿಸುತ್ತಿದ್ದು, ಹೊಸ ಯೋಜನೆಗಾಗಿ ಬೆಂಗಳೂರು ಮೂಲದ ಅರ್ಬನ್ ಲಾಜಿಸ್ಟಿಕ್ಸ್ ಅಗ್ರಿಗೇಟರ್ ಲೆಟ್ಸ್‌ಟ್ರಾನ್ಸ್‌ಪೋರ್ಟ್‌ ಕಂಪನಿಯು ಯೂಲರ್ ಜೊತೆಗೂಡಿ ಇವಿ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಹೊಸ ಪಾಲದಾರಿಕೆ ಯೋಜನೆ ಅಡಿಯಲ್ಲಿ ಲೆಟ್ಸ್‌ಟ್ರಾನ್ಸ್‌ಪೋರ್ಟ್‌ ಕಂಪನಿಯು ಯೂಲರ್ ನಿರ್ಮಾಣದ ಸುಮಾರು 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ಲಾಜಿಸ್ಟಿಕ್ ಸೇವೆಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದು, ಈ ವರ್ಷಾಂತ್ಯಕ್ಕೆ ಒಟ್ಟು ಒಂದು ಸಾವಿರ ಇವಿ ತ್ರಿ-ಚಕ್ರ ವಾಹನಗಳು ರಸ್ತೆಗಿಳಿಯಲಿವೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಲೆಟ್ಸ್‌ಟ್ರಾನ್ಸ್‌ಪೋರ್ಟ್‌ ಕಂಪನಿಯು ಸದ್ಯ ಬೆಂಗಳೂರು, ಹೈದ್ರಾಬಾದ್, ದೆಹಲಿ-ಎನ್‌ಸಿಆರ್‌ನಲ್ಲಿ ಪ್ರಮುಖ ಕಂಪನಿಗಳ ಲಾಜಿಸ್ಟಿಕ್ ಸೇವೆಗಳ ಪಾಲುದಾರಿಕೆ ಹೊಂದಿದ್ದು, ಮುಂದಿನ 12 ತಿಂಗಳುಗಳಲ್ಲಿ ಭಾರತದಾದ್ಯಂತ ಹೊಸ ಇವಿ ವಾಹನಗಳನ್ನು ನಿಯೋಜನೆ ಮಾಡಲಿದೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಯೂಲರ್ ನಿರ್ಮಾಣದ ಹೊಸ ಇವಿ ತ್ರಿ-ಚಕ್ರ ವಾಹನಗಳು ಲಾಜಿಸ್ಟಿಕ್ಸ್ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಸಿದ್ದಗೊಂಡಿದ್ದು, ಪ್ರಮುಖ ಲಾಜಿಸ್ಟಿಕ್ ಕಂಪನಿಗಳು ಯೂಲರ್ ಇವಿ ವಾಹನಗಳ ಅಳವಡಿಕೆ ಆದ್ಯತೆ ನೀಡುತ್ತಿವೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಹೊಸ ಹೈಲೋಡ್(HiLoad) ವೈಶಿಷ್ಟ್ಯತೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಮುಖ ವಾಣಿಜ್ಯ ವಾಹನಗಳ ಫ್ಲೀಟ್ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸುತ್ತಿದ್ದು, ಫೇಮ್ 2 ಯೋಜನೆ ಅಡಿ ಸಬ್ಸಡಿ ಹೊಂದಿರುವ ಹೊಸ ವಾಹನ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.50 ಲಕ್ಷ ಬೆಲೆ ಹೊಂದಿದೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಹೊಸ ಇವಿ ವಾಣಿಜ್ಯ ವಾಹನದಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು ಗ್ರಾಹಕರ ಆಕರ್ಷಿಸುತ್ತಿದ್ದು, ಮುಂಬರುವ ದಿನಗಳಲ್ಲಿಹೊಸ ಇವಿ ತ್ರಿ ಚಕ್ರ ವಾಹನವು ಬೆಸ್ಟ್ ಇನ್ ಕ್ಲಾಸ್ ಪ್ಲೇ ಲೋಡ್ ಸಾಮರ್ಥ್ಯದೊಂದಿಗೆ(680 ಕೆ.ಜಿ) ಉತ್ತಮ ಮೈಲೇಜ್ ಹಿಂದಿರುಗಿಸಲಿದ್ದು, ಸಿಂಗಲ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 72V, 12.4kW ಲಿಕ್ವಿಡ್ ಕೂಲಿಂಗ್ ಬ್ಯಾಟರಿ ಪ್ಯಾಕ್ ಹೊಂದಿರಲಿದೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಹೈಲೋಡ್ ಮಾದರಿಯಲ್ಲಿ ಯೂಲರ್ ಮೋಟಾರ್ಸ್ ಕಂಪನಿಯು ತನ್ನ ವಿನೂತನ 'ಆರ್ಕ್ ರಿಯಾಕ್ಟರ್ 100' ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಸರಕು ಸಾಗಾಣಿಕೆಯ ವೇಳೆ ಒತ್ತಡದಲ್ಲೂ ಇವಿ ವಾಹನದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗಲಿದೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಹೊಸ ಹೈಲೋಡ್ ಇವಿ ವಾಹನವನ್ನು ಬಳಕೆದಾರರು ಸಾಮಾನ್ಯ ಬಳಕೆಯ ತ್ರಿ ಪಿನ್ ಸಾಕೆಟ್ ಮೂಲಕವು ಚಾರ್ಜ್ ಮಾಡಬಹುದು ಇಲ್ಲವೇ ಫಾಸ್ಟ್ ಡಿಸಿ ಚಾರ್ಜಿಂಗ್ ಸೌಲಭ್ಯವನ್ನು ಬಳಕೆ ಮಾಡಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕೆ ಎರಡು ಮಾದರಿಯ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಗೃಹ ಬಳಕೆಯ ಚಾರ್ಜಿಂಗ್ ಸೌಲಭ್ಯದೊಂದಿಗೆ ಶೇ.80 ರಷ್ಟು ಆಗಲು ಮೂರು ಗಂಟೆ ಸಮಯ ತೆಗೆದುಕೊಳ್ಳುವ ಹೊಸ ವಾಹನವು ಫ್ಲ್ಯಾಶ್ 6 ಮೂಲಕ ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಫ್ಲ್ಯಾಶ್ 27 ಮೂಲಕ ಕ್ವಿಕ್ ಚಾರ್ಜಿಂಗ್ ಮಾಡಬಹುದಾಗಿದ್ದು, ಫ್ಲ್ಯಾಶ್ 27 ಮೂಲಕ ಕೇವಲ 15 ನಿಮಿಷ ಚಾರ್ಜ್ ಮಾಡಿದರೂ ಕನಿಷ್ಠ 50 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಹೊಸ ಹೈಲೋಡ್ ಇವಿ ವಾಹನವು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್ ಮತ್ತು ಎಕ್ಸ್ಆರ್ ಎನ್ನುವ ವೆರಿಯೆಂಟ್‌ಗಳನ್ನು ಹೊಂದಿರಲಿದ್ದು, ಎಕ್ಸ್ ವೆರಿಯೆಂಟ್ 680 ಕೆಜಿ ಪ್ಲೇ ಲೋಡ್ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 129 ಕಿ.ಮೀ ಮೈಲೇಜ್ ನೀಡುತ್ತದೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಎಕ್ಸ್ಆರ್ ವೆರಿಯೆಂಟ್ ಕೂಡಾ ಎಕ್ಸ್ ಮಾದರಿಯಲ್ಲಿ ಪ್ರತಿ ಚಾರ್ಜ್‌ಗೆ 129 ಕಿ.ಮೀ ಮೈಲೇಜ್ ಹೊಂದಿದ್ದು, ಇದು 655 ಕೆಜಿ ಪ್ಲೇ ಲೋಡ್ ಸಾಮರ್ಥ್ಯ ಹೊಂದಿದೆ. ಎರಡು ಮಾದರಿಗಳು ಪ್ರತಿ ಗಂಟೆಗೆ 42 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, 9.1 ಬಿಎಚ್‌ಪಿ, 88.55 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಹೈಲೋಡ್ ಇವಿ ವಾಹನವು ಒಟ್ಟು 2,100 ಎಂಎಂ ಉದ್ದಳತೆಯೊಂದಿಗೆ 190 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಅತ್ಯುತ್ತಮ ಪ್ಲೇ ಲೋಡ್ ಕಂಟನೈರ್ ಅಳವಡಿಸಲಾಗಿದೆ. ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಹಾಫ್ ಲೋಡ್ ಬಾಡಿ, ಡೆಲಿವರಿ ವ್ಯಾನ್, ಹೈ ಡೆಕ್ ಕಂಟನೈರ್ ಮತ್ತು ಫ್ಲ್ಯಾಟ್ ಡೆಕ್ ಆಯ್ಕೆಗಳನ್ನು ನೀಡಲಾಗಿದೆ.

ಸಹಭಾಗಿತ್ವ ಯೋಜನೆ ಅಡಿ 1 ಸಾವಿರ ಇವಿ ತ್ರಿ ಚಕ್ರ ವಾಹನಗಳನ್ನು ನಿಯೋಜಿಸಿದ ಯೂಲರ್

ಜೊತೆಗೆ ಹೊಸ ವಾಹನದಲ್ಲಿ ಹಲವಾರು ಹೊಸ ಫೀಚರ್ಸ್ ನೀಡಲಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫ್ರಂಟ್ ಡಿಸ್ಕ್ ಬ್ರೇಕ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿಯಲ್ ಟೈಮ್ ಡೆಟಾ, ತಾಂತ್ರಿಕ ಅಂಶಗಳ ನಿಯಂತ್ರಣಕ್ಕಾಗಿ ಶೇಫರ್ಡ್ ಆ್ಯಪ್(ಜಿಯೋ ಫೆನ್ಸ್, ಜಿಪಿಎಸ್ ಟ್ರ್ಯಾಕಿಂಗ್) ಹೊಂದಿದೆ.

Article Published On: Thursday, June 16, 2022, 8:45 [IST]
English summary
Letstransport partners with euler motors to deploy 1000 e 3 wheeler soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+