ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಇವಿ ವಾಹನಗಳಿಗೆ ಪೂರಕವಾಗಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಚಾರ್ಜಿಂಗ್ ಸೌಲಭ್ಯವನ್ನು ಹೆಚ್ಚಿಸುವತ್ತ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇವಿ ವಾಹನಗಳಿಗಾಗಿ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಮತ್ತು ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳಿಗಾಗಿ ಲಾಗ್9 ಕಂಪನಿಯು ಬೃಹತ್ ಯೋಜನೆ ಜಾರಿಗೆ ತಂದಿದೆ.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ನಮ್ಮ ಬೆಂಗಳೂರಿನ ಲಾಗ್9(Log9) ಕಂಪನಿಯು ಇವಿ ವಾಹನಗಳಿಗೆ ಹೊಸ ಬ್ಯಾಟರಿ ಸೌಲಭ್ಯ ಅಳವಡಿಕೆ ಮಾಡಲಿದ್ದು, ನಿಗದಿತ ಬ್ಯಾಟರಿ ಅವಧಿಯ ಮುಗಿದಿರುವ ಇವಿ ವಾಹನಗಳು ಲಾಗ್9 ಕಂಪನಿಯ ಬ್ಯಾಟರಿ ಪ್ಯಾಕ್ ಜೊತೆ ಬದಲಾಯಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಸ್ಪೇರ್‌ಇಟ್(SpareIt) ಬಿಡಿಭಾಗಗಳ ಸೇವಾ ಕಂಪನಿಯೊಂದಿಗೆ ದೇಶಾದ್ಯಂತ ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಪರಿಚಯಿಸಿದೆ.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಸ್ಪೇರ್‌ಇಟ್ ಬಿಡಿಭಾಗಗಳ ಸೇವಾ ಕಂಪನಿಯು ವಿಶೇಷವಾಗಿ ಇವಿ ವಾಹನಗಳಿಗಾಗಿಯೇ ಸರ್ವಿಸ್ ಸೆಂಟರ್‌ಗಳನ್ನು ತೆರೆಯುತ್ತಿದ್ದು, ದೇಶಾದ್ಯಂತ ಪ್ರಮುಖ ಎಂಟು ರಾಜ್ಯಗಳಲ್ಲಿ 100ಕ್ಕೂ ಹೆಚ್ಚು ಸರ್ವಿಸ್ ಸೆಂಟರ್‌ಗಳನ್ನು ಹೊಂದಿದೆ.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಹೊಸ ಪಾಲುದಾರಿಕೆ ಯೋಜನೆ ಅಡಿ ಸ್ಪೇರ್‌ಇಟ್ ಬಿಡಿಭಾಗಗಳ ಕಂಪನಿಯು ಲಾಗ್9 ಕಂಪನಿ ನಿರ್ಮಾಣದ ಬ್ಯಾಟರಿ ಸೇವೆಗಳನ್ನು ಒದಗಿಸಲಿದ್ದು, ಲಾಗ್9 ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಬ್ಯಾಟರಿ ಪ್ಯಾಕ್‌ಗಳನ್ನು ಒದಗಿಸಲಿದೆ.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಇವಿ ವಾಹನಗಳ ಖರೀದಿ ನಂತರ ಬಳಕೆಯ ಆಧಾರದ ಮೇಲೆ ಬ್ಯಾಟರಿ ಪ್ಯಾಕ್ ಅವಧಿಯು ಮುಕ್ತಾಯಗೊಳ್ಳಲಿದ್ದು, ಬದಲಿ ಬ್ಯಾಟರಿ ಪ್ಯಾಕ್‌ಗಳನ್ನು ಆಯಾ ಬ್ರಾಂಡ್ ಕಂಪನಿಗಳಿಗೆ ಒದಗಿಸುವ ಭರವಸೆ ನೀಡಿದರು ಗ್ರಾಹಕರು ತಮ್ಮ ಬೇಡಿಕೆಗೆ ತಕ್ಕಂತೆ ಹೊಸ ಮಾದರಿಯ ಬ್ಯಾಟರಿ ಪ್ಯಾಕ್‌ಗಳನ್ನು ಬದಲಿಸಿಕೊಳ್ಳಬಹುದು.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಲಾಗ್9 ಕಂಪನಿಯು ರ‍್ಯಾಪಿಡ್ಎಕ್ಸ್ ಬ್ಯಾಟರಿ ತಂತ್ರಜ್ಞಾನ ಪರಿಚಯಿಸುವ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಲಾಗ್9 ಕಂಪನಿಯು ಬ್ಯಾಟರಿ ರಿಪ್ಲೇಸ್‌ಮೆಂಟ್ ಮತ್ತು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಜೋಡಣೆಗಾಗಿ ಪ್ರಮುಖ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಹೊಸ ಲಾಗ್9 ರ‍್ಯಾಪಿಡ್ಎಕ್ಸ್ ಬ್ಯಾಟರಿ ಪ್ಯಾಕ್ ಸೌಲಭ್ಯ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದ್ದು, ಕೇವಲ 15 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಆಗಲಿವೆ. ಈ ಬ್ಯಾಟರಿ ಪ್ಯಾಕ್‌ಗಳು ಸುಮಾರು 70 ಕಿಮೀ ವರೆಗೆ ವ್ಯಾಪ್ತಿಯನ್ನು ಸಹ ನೀಡಲಿದ್ದು, ಸಾಂಪ್ರದಾಯಿಕ ಬ್ಯಾಟರಿ ಪ್ಯಾಕ್‌ಗಿಂತಲೂ ಇವು ಒಂಬತ್ತು ಪಟ್ಟು ಹೆಚ್ಚು ಜೀವಿತಾವಧಿ ಹೊಂದಿವೆ.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಲಾಗ್9 ಕಂಪನಿಯು ಮುಖ್ಯವಾಗಿ ಕೊನೆಯ ಮೈಲಿ ತನಕ ಸರಕು ಸಾಗಿಸುವ ಲಾಜಿಸ್ಟಿಕ್ಸ್ ವಿಭಾಗವನ್ನು ಗುರಿಯಾಗಿಸಿಕೊಂಡಿದ್ದು, ಬ್ಯಾಟರಿ ರಿಪ್ಲೇಸ್‌ಮೆಂಟ್ ಜೊತೆಗೆ ಕಂಪನಿಯು ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಆನ್ ಸ್ಪಾಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಜೊತೆಗೆ ಲಾಗ್9 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಮೂಲಕವೇ ಲಾಗ್9 ಬ್ಯಾಟರಿ ಪ್ಯಾಕ್ ವಾಹನಗಳು ಅತಿ ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದ್ದು, ಇತ್ತೀಚೆಗೆ ಲಾಗ್9 ಜೊತೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಸಹ ಪಾಲುದಾರಿಕೆ ಪ್ರಕಟಿಸಿದೆ.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ಎಲೆಕ್ಟ್ರಿಕ್ ವಿವಿಧ ಸ್ಕೂಟರ್‌ಗಳಿಗೆ ಇಸ್ಟಾಚಾರ್ಜಿಂಗ್ ಬ್ಯಾಟರಿ ಪ್ಯಾಕ್‌ಗಳನ್ನು ಪೂರೈಸಲು ಒಪ್ಪಿಗೆ ಸೂಚಿಸಿದ್ದು, ರ‍್ಯಾಪಿಡ್ಎಕ್ಸ್ ಬ್ಯಾಟರಿ ಪ್ಯಾಕ್ ಸೌಲಭ್ಯವು -30° ನಿಂದ 60° ಸೆಲ್ಸಿಯಸ್ಸ್ ತನಕವು ಕಾರ್ಯಾಚರಣೆಯ ಉಷ್ಣತೆಯೊಂದಿಗೆ ತೀವ್ರತರವಾದ ಪರಿಸ್ಥಿತಿಗಳಲ್ಲೂ ಕಾರ್ಯನಿರ್ವಹಿಸಲು ಸಮರ್ಥವಾಗಿವೆ.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಲಾಗ್9 ಸ್ಟಾರ್ಟ್-ಅಪ್ ಕಂಪನಿಯು ಇವಿ ವಾಹನಗಳ ಮಾರಾಟ ನಂತರದ ಸೇವೆಗಳಿಗೆ ಪೂರ್ಣ ಪ್ರಮಾಣದ ಬಿಡಿಭಾಗಗಳು, ಬ್ಯಾಟರಿ ಪ್ಯಾಕ್ ಒದಗಿಸಲು ಸಾಮರ್ಥ್ಯ ಹೊಂದಿರುವ ಭಾರತದ ಏಕೈಕ ಕಂಪನಿಯಾಗಿದ್ದು, ಲಾಗ್9 ಜೊತೆಗೆ ಪ್ರಮುಖ ಇವಿ ಉತ್ಪಾದನಾ ಕಂಪನಿಗಳು ಪಾಲುದಾರಿಕೆ ಪ್ರಕಟಿಸುತ್ತಿದೆ.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಇನ್ನು ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.

ಬ್ಯಾಟರಿ ರಿಪ್ಲೇಸ್‌ಮೆಂಟ್ ಸೇವೆಗಳನ್ನು ಸುಲಭಗೊಳಿಸಿದ ಲಾಗ್9 ಕಂಪನಿಯ ಹೊಸ ಪಾಲುದಾರಿಕೆ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

More from DriveSpark

Article Published On: Thursday, February 3, 2022, 8:45 [IST]
English summary
Log9 collaborates with spareit partnership will spawn battery replacement details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+