ದಕ್ಷಿಣ ಆಫ್ರಿಕಾದಲ್ಲಿ ಮೇಡ್-ಇನ್-ಇಂಡಿಯಾ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅನಾವರಣ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಬಹುನಿರೀಕ್ಷಿತ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಅನಾವರಣಗೊಳಿಸಿದೆ.

Recommended Video

Alto K10 vs Renault Kwid | Detailed Comparison | Specs Features And Design

ಈ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಸುಜುಕಿ ತನ್ನ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದೆ ಮತ್ತು ವಿನ್ಯಾಸಗೊಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅನಾವರಣ

ಮೇಡ್-ಇನ್-ಇಂಡಿಯಾ ಸುಜುಕಿ ಗ್ರಾಂಡ್ ವಿಟಾರಾವನ್ನು ಈಗ ದಕ್ಷಿಣ ಆಫ್ರಿಕಾದ ಸಾರ್ವಜನಿಕರಿಗೆ ಪ್ರದರ್ಶಿಸಲಾಗಿದೆ. ಇದನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಗೊಳಿಸಲಾಗುವುದು. ಗ್ರ್ಯಾಂಡ್ ವಿಟಾರಾ ದಕ್ಷಿಣ ಆಫ್ರಿಕಾದಲ್ಲಿ ಸುಜುಕಿಯ ಪ್ರಮುಖ ಮಾದರಿಯಾಗಿದೆ. ಆಗಸ್ಟ್ 26-28 ರಂದು ನಡೆದ ಕಯಾಲಾಮಿಯಲ್ಲಿ ಮೋಟಾರಿಂಗ್ ಉತ್ಸವದಲ್ಲಿ ಎಸ್‌ಯುವಿಯನ್ನು ಪ್ರದರ್ಶಿಸಿದರು. ಈ ಹೊಸ ಮಾರುತಿ ಗ್ರಾಂಡ್ ವಿಟಾರಾವನ್ನು 3 ಗೇರ್‌ಬಾಕ್ಸ್ ಸಂಯೋಜನೆಯೊಂದಿಗೆ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅನಾವರಣ

ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಈಗ ಅದರ ವಿಭಾಗದಲ್ಲಿ ಹೆಚ್ಚು ಇಂಧನ-ಸಮರ್ಥ ಮಾದರಿಯಾಗಿದೆ, ಕಂಪನಿಯು ಹೊಸ ಗ್ರ್ಯಾಂಡ್ ವಿಟಾರಾ ಬ್ರೋಷರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ, ಇದು ವಿಭಿನ್ನ-ವಾರು ವೈಶಿಷ್ಟ್ಯಗಳು, ಆಯಾಮಗಳು ಮತ್ತು ವಿಶೇಷಣಗಳ ಮಾಹಿತಿಗಳು ಬಹಿರಂಗವಾಗಿವೆ.

ದಕ್ಷಿಣ ಆಫ್ರಿಕಾದಲ್ಲಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅನಾವರಣ

ಮಾರುತಿ ಗ್ರ್ಯಾಂಡ್ ವಿಟಾರಾ ಸ್ಮಾರ್ಟ್ ಹೈಬ್ರಿಡ್ ಸಿಸ್ಟಂನೊಂದಿಗೆ ಹೊಸ ಗ್ರಾಂಡ್ ವಿಟಾರಾ ಪೆಟ್ರೋಲ್ ಆವೃತ್ತಿಯು 4 ರೂಪಾಂತರಗಳಲ್ಲಿ ಲಭ್ಯವಿದೆ. ಇದು ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಆಗಿದೆ. ಈ ಎಲೆಕ್ಟ್ರಿಕ್ ಹೈಬ್ರಿಡ್ ಆವೃತ್ತಿಯು Zeta+ ಮತ್ತು Alpha ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ. ಈ ಹೊಸ ಎಸ್‌ಯುವಿಯನ್ನು ಸುಜುಕಿಯ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್‌ ಅಢಿಯಲ್ಲಿ ಅಭಿವೃದ್ಧಿಪಡಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅನಾವರಣ

ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿರುವ ಹೊಸ ಜನರೇಷನ್ ಎಸ್-ಕ್ರಾಸ್‌ಗೆ ಆಧಾರವಾಗಿದೆ. ಅನುಪಾತದಲ್ಲಿ, ಹೊಸ ಗ್ರಾಂಡ್ ವಿಟಾರಾ 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಈ 5-ಸೀಟರ್ ಎಸ್‍ಯುವಿಯು 45-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿರುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅನಾವರಣ

ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು 1.5-ಲೀಟರ್, 4-ಸಿಲಿಂಡರ್ ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ನೊಂಇದ್ಗೆ ಬರುತ್ತದೆ. ಈ ಎಂಜಿನ್ 103 ಬಿಹೆಚ್€‌ಪಿ ಪವರ್ ಮತ್ತು 136.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿಯು AWD (ಆಲ್-ವೀಲ್-ಡ್ರೈವ್) ಸಿಸ್ಟಂನೊಂದಿಗೆ ಬರುತ್ತದೆ,

ದಕ್ಷಿಣ ಆಫ್ರಿಕಾದಲ್ಲಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅನಾವರಣ

ಇದು ಸುಜುಕಿಯ AllGrip AWD ಯುನಿಟ್ ಆಗಿದೆ. ಇದು 4 ಡ್ರೈವಿಂಗ್ ಮೋಡ್‌ಗಳನ್ನು ನೀಡುತ್ತದೆ. ಇದು ಆಟೋ, ಸ್ಯಾಂಡ್, ಸ್ನೋ ಮತ್ತು ಲಾಕ್.ಆಗಿದೆ. ಆಟೋ ಮೋಡ್‌ನಲ್ಲಿ AWD ಸಿಸ್ಟಂ ಬುದ್ಧಿವಂತಿಕೆಯಿಂದ ಭೂಪ್ರದೇಶವನ್ನು ಗ್ರಹಿಸುತ್ತದೆ ಮತ್ತು ಬೇಡಿಕೆಯ ಮೇಲೆ ಚಕ್ರಗಳಿಗೆ ಟಾರ್ಕ್ ಬದಲಾಗುತ್ತದೆ.ಹೈಬ್ರಿಡ್ ಆವೃತ್ತಿಯು ಟೊಯೊಟಾ ಮೂಲದ 1.5 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಸಿಂಕ್ರೊನಸ್ ಎಸಿ ಮೋಟಾರ್‌ಗೆ ಜೋಡಿಸಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅನಾವರಣ

ಈ ಅಟ್ಕಿನ್ಸನ್ ಸೈಕಲ್ ಎಂಜಿನ್ 92.45 ಬಿಹೆಚ್‍ಪಿ ಪವರ್ ಮತ್ತು 122 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಗ್ರಾಂಡ್ ವಿಟಾರಾ ಹೈಬ್ರಿಡ್ ಎಸ್‍ಯುವಿಯು ARAI ಪ್ರಕಾರ, 27.97 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ. ಮತ್ತೊಂದೆಡೆ, 1.5 ಲೀಟರ್ ಪೆಟ್ರೋಲ್ ಮ್ಯಾನುವಲ್ 21.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಆಟೋಮ್ಯಾಟಿಕ್ ಮಾದರಿಯು 20.58 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಮತ್ತು ಆಟೋಮ್ಯಾಟಿಕ್ AWD ಯುನಿಟ್ 19.38 ಕಿ,ಮೀ ಮೈಲೇಜ್ ಅನ್ನು ಒದಗಿಸುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅನಾವರಣ

ಬಿಡುಗಡೆಯಾಗಲಿರುವ ಮಾರುತಿ ಎಸ್‍ಯುವಿಯನ್ನು 6 ಮೊನೊಟೋನ್ ಮತ್ತು 3 ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುವುದು. ಮೊನೊಟೋನ್ ಬಣ್ಣ ಆಯ್ಕೆಗಳಲ್ಲಿ ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರ್ಯಾಂಡ್ಯೂರ್ ಗ್ರೇ, ಚೆಸ್ಟ್ನಟ್ ಬ್ರೌನ್ (ಸಿಗ್ಮಾದಲ್ಲಿ ನೀಡಲಾಗಿಲ್ಲ) ಮತ್ತು ಒಪ್ಯುಲೆಂಟ್ ರೆಡ್ (ಡೆಲ್ಟಾ ಮತ್ತು ಝೀಟಾ ಮಾತ್ರ) ಸೇರಿವೆ. ಡ್ಯುಯಲ್-ಟೋನ್ ಆಯ್ಕೆಗಳಲ್ಲಿ ಆರ್ಕ್ಟಿಕ್ ವೈಟ್ + ಕಪ್ಪು (ಝೀಟಾ+/ಆಲ್ಫಾ/ಆಲ್ಫಾ+), ಸ್ಪ್ಲೆಂಡಿಡ್ ಸಿಲ್ವರ್ + ಬ್ಲ್ಯಾಕ್ (ಝೀಟಾ+/ಆಲ್ಫಾ/ಆಲ್ಫಾ+) ಮತ್ತು ಒಪ್ಯುಲೆಂಟ್ ರೆಡ್ + ಬ್ಲ್ಯಾಕ್ (ಝೀಟಾ+/ಆಲ್ಫಾ/ಆಲ್ಫಾ+) ಒಳಗೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅನಾವರಣ

ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯಲ್ಲಿ ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿದೆ. ಇದರಲ್ಲಿ 6 ಏರ್ ಬ್ಯಾಗ್ ಗಳು, 360 ಕ್ಯಾಮೆರಾ ವ್ಯೂ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, 3-ಪಾಯಿಂಟ್ ELR ಸೀಟ್ ಬೆಲ್ಟ್‌ಗಳು ಮತ್ತು ಇಂಜಿನ್ ಇಮೊಬಿಲೈಸರ್ ನಂತಹ ರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

ದಕ್ಷಿಣ ಆಫ್ರಿಕಾದಲ್ಲಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅನಾವರಣ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬಿಡುಗಡೆಯಾಗಲಿರುವ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಅಧಿಕ ಮೈಲೇಜ್, ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಇನ್ನು ಮಾರುತಿ ಸುಜುಕಿ ಕಂಪನಿಯ ಹೊಸ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇನ್ನು ಈ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Made in india suzuki grand vitara suv unveiled in south africa details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X