ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಹೆಚ್ಚುತ್ತಿರುವ ಬಿಡಿಭಾಗಗಳ ನಿರ್ವಹಣಾ ವೆಚ್ಚ ಸರಿದೂಗಿಸಲು ಪ್ರಮುಖ ಕಾರು ಕಂಪನಿಗಳು ತಮ್ಮ ಪ್ರಮುಖ ವಾಹನಗಳ ಬೆಲೆ ಹೆಚ್ಚಿಸುತ್ತಿದ್ದು, ಮಹೀಂದ್ರಾ ಕಂಪನಿಯು ಸಹ ತನ್ನ ಹೊಸ ಕಾರುಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಮಹೀಂದ್ರಾ ಕಂಪನಿಯು ಸಹ ಇದೀಗ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಮಹೀಂದ್ರಾ ಪ್ರಮುಖ ಕಾರುಗಳ ವಿವಿಧ ವೆರಿಯೆಂಟ್‌ಗಳ ಬೆಲೆಯಲ್ಲಿ ಶೇ.1 ರಿಂದ ಶೇ. 2.50 ರಷ್ಟು ಹೆಚ್ಚಳ ಮಾಡಲಾಗಿದ್ದು, 2022ರಲ್ಲಿ ಇದು ಎರಡನೇ ಬಾರಿ ದರ ಹೆಚ್ಚಳವಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಹೊಸ ದರಪಟ್ಟಿಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.10 ಸಾವಿರದಿಂದ ರೂ.63 ಸಾವಿರದಷ್ಟು ದರ ಹೆಚ್ಚಿಸಲಾಗಿದ್ದು, ಎಸ್‌ಯುವಿ ಕಾರುಗಳ ಬೆಲೆಯಲ್ಲಿ ಹೆಚ್ಚಿನ ದರ ಏರಿಕೆ ಮಾಡಲಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಏಪ್ರಿಲ್ 1ರಿಂದ ಅನ್ವಯಿಸುವಂತೆ ಎರಡನೇ ಹಂತದ ಬೆಲೆ ಏರಿಕೆ ಘೋಷಣೆ ಮಾಡಲಾಗಿದ್ದು, ಮಹೀಂದ್ರಾ ಪ್ರಮುಖ ಕಾರುಗಳಾದ ಎಕ್ಸ್‌ಯುವಿ300, ಎಕ್ಸ್‌ಯುವಿ700, ಥಾರ್, ಬಲೆನೊ, ಸ್ಕಾರ್ಪಿಯೋ ಮತ್ತು ಮರಾಜೋ ಕಾರುಗಳ ಬೆಲೆಗಳು ಸಾಕಷ್ಟು ಏರಿಕೆಯಾಗಿವೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಇನ್ನು ಕೋವಿಡ್‌ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, 2021ರಲ್ಲಿ ಬಹುತೇಕ ವಾಹನ ತಯಾರಿಕಾ ಕಂಪನಿಗಳು ಮೂರರಿಂದ ನಾಲ್ಕು ಬಾರಿ ದರ ಹೆಚ್ಚಿಸಿವೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿರುವುದರಿಂದ ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿ ರೂ. 40 ಸಾವಿರದಿಂದ ರೂ.1 ಲಕ್ಷದಷ್ಟು ಮತ್ತು ಮಧ್ಯಮ ಕ್ರಮಾಂಕದ ಕಾರುಗಳು ರೂ. 50 ಸಾವಿರದಿಂದ ರೂ. 1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಹಾಗೆಯೇ ಕಳೆದ ವರ್ಷದಲ್ಲಿ ಐಷಾರಾಮಿ ಕಾರುಗಳ ಬೆಲೆಯು ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 1.50 ಲಕ್ಷದಿಂದ ರೂ. 4 ಲಕ್ಷದ ತನಕ ದರ ಹೆಚ್ಚಳವಾಗಿದ್ದು, 2022ರಲ್ಲಿ ಇದೀಗ ವಾಹನಗಳ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗುತ್ತಿವೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ವಿದೇಶಿ ಮಾರುಕಟ್ಟೆಗಳಿಂದ ಪ್ರಮುಖವಾಗಿ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮವೇ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾರಿನ ಬೆಲೆ ಹೆಚ್ಚಳಕ್ಕೆ ಕಾರಣವಾಗಿರುವುದಲ್ಲದೆ ವಿತರಣೆ ಅವಧಿಯಲ್ಲೂ ಹೆಚ್ಚಳಕ್ಕೆ ಕಾರಣವಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಹೊಸ ವಾಹನಗಳ ಬೇಡಿಕೆ ಹೆಚ್ಚಿದ್ದರೂ ಕೂಡಾ ಬಿಡಿಭಾಗಗಳ ಕೊರತೆ ಹಿನ್ನಲೆಯಲ್ಲಿ ವಾಹನ ಮಾರಾಟದಲ್ಲಿ ಪ್ರಮುಖ ಕಾರು ಕಂಪನಿಗಳು ಹಿನ್ನಡೆ ಅನುಭವಿಸುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ಸಂಕಷ್ಟಕ್ಕಿಡು ಮಾಡಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಹೊಸ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ಉತ್ಪಾದನೆಯನ್ನು ತೀವ್ರಗೊಳಿಸಲು ಅಗತ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾಡುತ್ತಿದ್ದು, ಸೆಮಿ ಕಂಡಕ್ಟರ್‌ಗಳಿಗಾಗಿ ಭಾರತೀಯ ಆಟೋ ಉದ್ಯಮವು ಸಂಪೂರ್ಣವಾಗಿ ವಿದೇಶಿ ಕಂಪನಿಗಳನ್ನೇ ಅವಲಂಬಿಸಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.

ಬೆಲೆ ಹೆಚ್ಚಳ: ಮಹೀಂದ್ರಾ ಕಾರುಗಳ ಬೆಲೆಯಲ್ಲಿ ಮತ್ತಷ್ಟು ದುಬಾರಿ

ಕಳೆದ ವರ್ಷದ ಕೋವಿಡ್ ಅವಧಿಯಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಾಹನ ಬಿಡಿಭಾಗಗಳ ಪೂರೈಕೆ ಸರಪಳಿಯಲ್ಲಿ ಆದ ಅಸ್ತವ್ಯಸ್ತವೇ ಇದೀಗ ಹೊಸ ವಾಹನಗಳ ಉತ್ಪಾದನೆ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದ್ದು, ಸೆಮಿ ಕಂಡಕ್ಟರ್‌ ಪೂರೈಕೆಯ ಸರಿಗೊಳ್ಳುವ ತನಕ ಬೆಲೆ ಇನ್ನಷ್ಟು ಹೆಚ್ಚಳ ಸಾಧ್ಯತೆಗಳಿವೆ.

Article Published On: Thursday, April 14, 2022, 19:15 [IST]
English summary
Mahindra announces price hiked up to rs 63 000 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+