ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಮಹೀಂದ್ರಾ ಕಂಪನಿಯು ತನ್ನ ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿ ವಿತರಣೆ ಆರಂಭಿಸಿದ್ದು, ಕಂಪನಿಯು ಹೊಸ ಕಾರು ಮಾದರಿಯ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಸ್ಕಾರ್ಪಿಯೋ-ಎನ್ ಮಾದರಿಯನ್ನು ಕಳೆದ ತಿಂಗಳು 26ರಿಂದ ವಿತರಣೆ ಆರಂಭಿಸಿರುವ ಮಹೀಂದ್ರಾ ಕಂಪನಿಯು ದೇಶಾದ್ಯಂತ ಇದುವರೆಗೆ ಸುಮಾರು 5 ಸಾವಿರಕ್ಕೂ ಯುನಿಟ್ ವಿತರಣೆ ಮಾಡಿದ್ದು, ಇತ್ತೀಚೆಗೆ ಹರಿಯಾಣದ ರೋಹ್ಟಕ್‌ ಮಹೀಂದ್ರಾ ಡೀಲರ್ ಒಬ್ಬರು ಒಂದೇ ದಿನದಲ್ಲಿ 100 ಸ್ಕಾರ್ಪಿಯೋ-ಎನ್ ಎಸ್‌ಯುವಿ ವಿತರಿಸಿ ಸುದ್ದಿಯಾಗಿದ್ದಾರೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ರೋಹ್ಟಕ್‌ನಲ್ಲಿರುವ ಲೊಹಚಾಬ್ ಗ್ರೂಪ್ ಮಹೀಂದ್ರಾ ಡೀಲರ್ ಒಂದೇ ದಿನದಲ್ಲಿ ಬರೋಬ್ಬರಿ 100 ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ್ದು, ಸ್ಕಾರ್ಪಿಯೋ-ಎನ್ ಜೊತೆಗೆ 30ಕ್ಕೂ ಹೆಚ್ಚು ಎಕ್ಸ್‌ಯುವಿ700 ಎಸ್‌ಯುವಿ ಕೂಡಾ ವಿತರಣೆ ಮಾಡಿದ್ದಾರೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ದಸರಾ ವಿಶೇಷತೆಗಾಗಿ ಬೃಹತ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದ ಮಹೀಂದ್ರಾ ಡೀಲರ್ ಮುಂಬರುವ ದೀಪಾವಳಿ ವೇಳೆಗೆ ಮತ್ತೊಂದು ಬೃಹತ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದು, ಹೊಸ ಸ್ಕಾರ್ಪಿಯೋ-ಎನ್ ಮಾರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ 4x4 ಡ್ರೈವ್ ಸೌಲಭ್ಯ ಹೊಂದಿರುವ ಟಾಪ್ ಎಂಡ್ ಮಾದರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿತರಣೆಯಾಗಿವೆ.

ಹೊಸ ಸ್ಕಾರ್ಪಿಯೋ-ಎನ್ ಮಾದರಿಗೆ ಈಗಾಗಲೇ 1 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ಬುಕಿಂಗ್ ದಾಖಲಾಗಿದ್ದು, ಹೊಸ ಕಾರು ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್ ವೆರಿಯೆಂಟ್‌ಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಸ್ಕಾರ್ಪಿಯೋ-ಎನ್ ಮಾದರಿಯು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಎರಡು ಮಾದರಿಗಳಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳು ಖರೀದಿಗೆ ಲಭ್ಯವಿವೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

2.0-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಮತ್ತು 2.2 ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಎರಡು ರೀತಿಯ ಪರ್ಫಾಮೆನ್ಸ್ ಆಯ್ಕೆಗಳನ್ನು ಹೊಂದಿದೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಪೆಟ್ರೋಲ್ ಮ್ಯಾನುವಲ್ ಮಾದರಿಯು 203-ಬಿಎಚ್‌ಪಿ ಮತ್ತು 370-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಆಟೋಮ್ಯಾಟಿಕ್ ಮಾದರಿಯು 203-ಬಿಎಚ್‌ಪಿ ಮತ್ತು 380-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಹಾಗೆಯೇ ಡೀಸೆಲ್ ಆರಂಭಿಕ ಮಾದರಿಯು ಮ್ಯಾನುವಲ್ ಆಯ್ಕೆಯೊಂದಿಗೆ 132 ಬಿಎಚ್‌ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಹೈ ಎಂಡ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಯೊಂದಿಗೆ 175 ಬಿಎಚ್‌ಪಿ ಮತ್ತು 370 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಇದರೊಂದಿಗೆ ಮಹೀಂದ್ರಾ ಕಂಪನಿಯು ಹೊಸ ಕಾರು ಮಾದರಿಯನ್ನು ಈ ಹಿಂದಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಕಾರಿನ ಮುಂಭಾಗದಲ್ಲಿ ಮಹೀಂದ್ರಾ ಸಾಂಪ್ರದಾಯಿಕ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಸ್ಕಾರ್ಪಿಯನ್ ಟೈಲ್ ಶೇಪ್ ಹೊಂದಿರುವ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ನೀಡಲಾಗಿದೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಹೊಸ ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಸಿ ಮತ್ತು ಡಿ-ಪಿಲ್ಲರ್ ಪ್ರದೇಶಗಳಲ್ಲಿ ವಿಂಡೋ ಕ್ರೋಮ್ ಫ್ರೇಮ್‌ನಲ್ಲಿ ಸ್ಕಾರ್ಪಿಯನ್ ಸ್ಟಿಂಗ್ ಅಂಶವನ್ನು ಸಹ ಹೊಂದಿದೆ. ಜೊತೆಗೆ ಹೊಸ ಸ್ಕಾರ್ಪಿಯೋ-ಎನ್‌ನಲ್ಲಿ ಹೊಸ ಡ್ಯುಯಲ್-ಟೋನ್ ಮಿಶ್ರಲೋಹದ 18 ಇಂಚಿನ ಚಕ್ರಗಳನ್ನು ನೀಡಲಾಗಿದ್ದು, ಲಂಬವಾಗಿ ಜೋಡಿಸಲಾದ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸ್ಪಾಯ್ಲರ್ ಅನ್ನು ಹೊಂದಿದೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಸ್ಕಾರ್ಪಿಯೋ-ಎನ್ ಮಧ್ಯಂತರ ವೆರಿಯೆಂಟ್‌ ನಂತರದಲ್ಲಿ ಲಭ್ಯವಾಗುವಂತೆ ಸನ್‌ರೂಫ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್‌ಗಳು ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಒಳಗೊಂಡಿದ್ದು, ಹೊಸ ಕಾರಿನಲ್ಲಿ ಹೊರಭಾಗದಂತೆ ಒಳಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಹೊಸ ಕಾರಿನ ಒಳಪ್ರವೇಶಸುತ್ತಿದ್ದಂತೆ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಮತ್ತು ಮೆಟಲ್-ಫಿನಿಶ್ಡ್ ಡ್ಯುಯಲ್ ರೈಲ್‌ಗಳೊಂದಿಗೆ ಆಕರ್ಷಕವಾದ ಸೆಂಟರ್ ಕನ್ಸೋಲ್‌ ಗಮನಸೆಳೆಯಲಿದ್ದು, ರಿಚ್ ಕಾಫಿ ಬ್ಲ್ಯಾಕ್ ಲೆದರ್ ಆಸನಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಆಸನಗಳನ್ನು ಸಹ ಒಳಗೊಂಡಿವೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಇದರೊಂದಿಗೆ ಹೊಸ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 70ಕ್ಕೂ ಹೆಚ್ಚು ಕಾರ್ ಕನೆಕ್ಟ್ ಫೀಚರ್ಸ್, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ ವಾಯ್ಸ್ ಸರ್ಪೊಟ್, 3ಡಿ ಸೊನಿ ಸರೌಂಡ್ ಸೌಂಡ್ ಸಿಸ್ಟಂ ಮತ್ತು ವಾಯ್ಸ್ ಕಮಾಂಡ್ ಫೀಚರ್ಸ್ ಹೊಂದಿದೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಜೊತೆಗೆ ಹೊಸ ಕಾರಿನಲ್ಲಿ ಡ್ಯುಯಲ್-ಜೋನ್ ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ಯಾಮೆರಾಗಳು ಮತ್ತು ಸ್ಮಾರ್ಟ್‌ಫೋನ್‌ಗಾಗಿ ವೈರ್‌ಲೆಸ್ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಒಂದೇ ದಿನದಲ್ಲಿ ನೂರು ಸ್ಕಾರ್ಪಿಯೋ-ಎನ್ ಕಾರುಗಳನ್ನು ವಿತರಿಸಿದ ಮಹೀಂದ್ರಾ ಡೀಲರ್

ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಇಎಸ್ಇ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಆಂಕರ್ ಪಾಯಿಂಟ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

More from DriveSpark

Article Published On: Wednesday, October 5, 2022, 11:21 [IST]
English summary
Mahindra dealer delivers over 100 scorpio n suvs in a single day details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+