ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಜನಪ್ರಿಯ ಮತ್ತು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‍ಯುವಿಯ ಮೇಲೆ ಹೊಸ ಆಫರ್ ಗಳನ್ನು ಘೋಷಿಸಿದೆ. ಹೊಸ ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‍ಯುವಿ ಖರೀದಿ ಮೇಲೆ ರೂ,46,000 ವರೆಗೆ ಪ್ರಯೋಜನಗಳನ್ನು ಪಡೆಯಬಹುದು.

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ಮಹೀಂದ್ರಾ ಎಕ್ಸ್‌ಯುವಿ300 ಮೇಲಿನ ಈ ಇತ್ತೀಚಿನ ಆಫರ್ ಭಾರತೀಯ ಮಾರುಕಟ್ಟೆಯಲ್ಲಿ ಸಬ್-4 ಮೀಟರ್ ಎಸ್‍ಯುವಿಯ ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಎಕ್ಸ್‌ಯುವಿ300 ಬೆಲೆಗಳನ್ನು ಕೆಲವು ತಿಂಗಳಗಳ ಹಿಂದೆ ಹೆಚ್ಚಿಸಲಾಗಿತ್ತು ಮತ್ತು ಪ್ರಸ್ತುತ ಎಕ್ಸ್‌ಯುವಿ300 ಎಸ್‍ಯುವಿಯ ಆರಂಭಿಕ ಬೆಲೆ ಈಗ ಪೆಟ್ರೋಲ್ ಎಂಜಿನ್ ಹೊಂದಿರುವ ಬೇಸ್ 'W4' ಟ್ರಿಮ್ ಮಾದರಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.41 ಲಕ್ಷದಿಂದ ಪ್ರಾರಂಭವಾಗುತ್ತದೆ.

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿಯು ಡೀಸೆಲ್ ಎಂಜಿನ್ ಮತ್ತು AMT ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಎಕ್ಸ್‌ಯುವಿ300 ಟಾಪ್-ಆಫ್-ಲೈನ್ 'W8 (O) ಡ್ಯುಯಲ್-ಟೋನ್' ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ,14.07 ಲಕ್ಷವಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ಮಹೀಂದ್ರಾ ಎಕ್ಸ್‌ಯುವಿ300 ಸಬ್-4 ಮೀಟರ್ ಎಸ್‍ಯುವಿಯು ಪ್ರಸ್ತುತ ಬಾರತದಲ್ಲಿ ಖರೀದಿಸಬಹುದಾದ ಸುರಕ್ಷಿತ ಸಬ್-4 ಮೀಟರ್ ಎಸ್‍ಯುವಿಗಳಲ್ಲಿ ಒಂದಾಗಿದೆ. ವಯಸ್ಕರ ರಕ್ಷಣೆಗಾಗಿ Global-NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಕೆಲವು ಸಮಯದ ಹಿಂದೆ, ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸ್ವಲ್ಪ ಹೆಚ್ಚು ಸಮಕಾಲೀನವಾಗಿಸಲು ಸಣ್ಣ ನವೀಕರಣಗಳನ್ನು ಪಡೆದುಕೊಂಡಿತ್ತು. ಫೇಸ್‌ಲಿಫ್ಟ್ ಕೇವಲ ಚಿಕ್ಕದಾಗಿದ್ದರೂ, SUV ಅನ್ನು 2019 ರಲ್ಲಿ ಬಿಡುಗಡೆ ಮಾಡಿದ್ದರಿಂದ ಇದು ಅತ್ಯಗತ್ಯವಾಗಿತ್ತು.

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ನವೀಕರಣದೊಂದಿಗೆ, ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿಯ ಟಾಪ್-ಎಂಡ್ W8 ಮತ್ತು W8(O) ರೂಪಾಂತರಗಳೊಂದಿಗೆ ನೀಡಲಾದ ಅಲಾಯ್ ವ್ಹೀಲ್ ಗಳ ಗಾತ್ರವನ್ನು ಕಡಿಮೆಗೊಳಿಸಿತು. ಇದರರ್ಥ ಮಹೀಂದ್ರಾ ಎಕ್ಸ್‌ಯುವಿ300ನ 2022ರ W8 ರೂಪಾಂತರವು 17-ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿಲ್ಲ.

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಅಲಾಯ್ ವ್ಹೀಲ್ ಗಳ ಗಾತ್ರವನ್ನು ಕಡಿಮೆ ಮಾಡುವುದರ ಜೊತೆಗೆ ಟೈರ್‌ಗಳ ಅಗಲವನ್ನು 215 ಎಂಎಂ ನಿಂದ 205 ಎಂಎಂಗೆ ಕಡಿಮೆ ಮಾಡಲಾಗಿದೆ. ಈ ಬದಲಾವಣೆಗಳು ಡೌನ್‌ಗ್ರೇಡ್‌ನಂತೆ ತೋರುತ್ತಿದ್ದರೂ, ನವೀಕರಿಸಿದ ಟೈರ್ ಗಾತ್ರವು ಭಾರತೀಯ ಚಾಲನಾ ಪರಿಸ್ಥಿತಿಗಳಿಗೆ ಉತ್ತಮವಾಗಿ ಸರಿಹೊಂದುತ್ತದೆ.

ಎಕ್ಸ್‌ಯುವಿ300 ಎಸ್ಯುವಿಯು ಅತಿ ಹೆಚ್ಚು ಅಂಕಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಬಜೆಟ್ ಕಾರು ಮಾದರಿಯಾಗಿದೆ. ಪ್ರತಿ ಹೊಸ ಕಾರು ಮಾದರಿಗಳಿಗೂ ಪ್ರಯಾಣಿಕರ ಸುರಕ್ಷಾ ವಿಚಾರವಾಗಿ ಜಾಗತಿಕ ಪ್ರಮಾಣ ಪತ್ರದ ಅವಶ್ಯಕತೆಯಿದೆ.

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಈ ಮಹೀಂದ್ರಾ ಎಕ್ಸ್‌ಯುವಿ300 ಪಡೆದುಕೊಳ್ಳುತ್ತಿರುವ ಉತ್ತಮ ರೇಟಿಂಗ್‌ನಿಂದಾಗಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುವುದು ಖಾತ್ರಿಯಾಗಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ಈ ಮೊದಲು ಟಾಟಾ ನೆಕ್ಸಾನ್ ನಂತರ ಎಕ್ಸ್‌ಯುವಿ300 ಕೂಡಾ ಗರಿಷ್ಠ ರೇಟಿಂಗ್ ಪಡೆದುಕೊಳ್ಳುವ ಮೂಲಕ ಗರಿಷ್ಠ ಸುರಕ್ಷತಾ ಕಾರು ಮಾದರಿಯಾಗಿ ಗ್ರಾಹಕರ ಗಮನಸೆಳೆಯುತ್ತಿದೆ.

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

#SAFERCARSFORINDIA ಅಭಿಯಾನದಡಿ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಮಹೀಂದ್ರಾ ಎಕ್ಸ್‌ಯುವಿ300 ಕಾರು ಮಾದರಿಗೆ ಗರಿಷ್ಠ ರೇಟಿಂಗ್ ಅನ್ನು ನೀಡಿದೆ. ಈ ಎಕ್ಸ್‌ಯುವಿ300 ಮಾದರಿಯು ಗುಣಮಟ್ಟದ ಬಿಡಿಭಾಗಗಳೊಂದಿಗೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟಾಪ್ ಎಂಡ್ ಮಾದರಿಯಲ್ಲಿ 7 ಏರ್‌ಬ್ಯಾಗ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಹೊಂದಿದ್ದು, ಹಲವಾರು ಸೆಗ್ಮೆಂಟ್ ಫಸ್ಟ್ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಹೀಂದ್ರಾ ಎಕ್ಸ್‌ಯುವಿ 300 ಎಸ್‍ಯುವಿ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 200 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5 ಲೀಟರ್ ಆಯಿಲ್ ಬರ್ನರ್ ಎಂಜಿನ್ 117 ಬಿಹೆಚ್‍ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಆಫರ್ ಅನ್ನು ನೀಡಿರುವುದರಿಂದ ಮಾರಾಟವನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಮಹೀಂದ್ರಾ ಎಕ್ಸ್‌ಯುವಿ300 ಜನಪ್ರಿಯ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ, ಮಹೀಂದ್ರಾ ಎಕ್ಸ್‌ಯುವಿ300 ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Mahindra offers up to rs 46000 on xuv300 find here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X