ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಮಹೀಂದ್ರಾ ಕಂಪನಿಯು ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದೆ.

Recommended Video

Mahindra Scorpio Classic Unveil Walkaround | ಹೊಸ ಅವತಾರದಲ್ಲಿ ಹಳೆಯ ಎಸ್‌ಯುವಿ | ಹೊಸ ಡೀಸೆಲ್ ಎಂಜಿನ್

ಹೊಸ ಕಾರು ಈ ಹಿಂದಿನಂತೆಯೇ ಎಸ್ ಮತ್ತು ಎಸ್11 ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷ ಬೆಲೆ ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯನ್ನು ಮಹೀಂದ್ರಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದ್ದು, ವಿವಿಧ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರಿನ ಎಸ್ ವೆರಿಯೆಂಟ್ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷ ಬೆಲೆ ಹೊಂದಿದ್ದರೆ ಎಸ್11 ಟಾಪ್ ಎಂಡ್ ಮಾದರಿಯು ರೂ. 15.49 ಲಕ್ಷ ಬೆಲೆ ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಕಾರು ಕೇವಲ ಎರಡು ವೆರಿಯೆಂಟ್‌ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಹಳೆಯ ಸ್ಕಾರ್ಪಿಯೋ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ವಿನ್ಯಾಸದಲ್ಲಿ ತುಸು ಹೊಸ ಬದಲಾವಣೆ ತರಲಾಗಿದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಕೆಲವು ಪ್ರೀಮಿಯಂ ಫೀಚರ್ಸ್ ಸಹ ಹೊಂದಿದ್ದು, ಸ್ಕಾರ್ಪಿಯೋ-ಎನ್ ಮಾದರಿಗಿಂತ ಇದು ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸ್ಕಾರ್ಪಿಯೋ-ಎನ್ ಮಾದರಿಯು ಸಂಪೂರ್ಣವಾಗಿ ಹೊಸ ಮಾದರಿಯಾಗಿದ್ದರೆ ಸ್ಕಾರ್ಪಿಯೋ-ಕ್ಲಾಸಿಕ್ ಮಾದರಿಯು ಈ ಹಿಂದಿನ ತಲೆಮಾರಿನ ವೈಶಿಷ್ಟ್ಯತೆಗಳಲ್ಲಿಯೇ ಕೆಲವು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯ ಮುಂಭಾಗದ ಡಿಸೈನ್ ಮತ್ತು ಕ್ಯಾಬಿನ್ ಒಳಾಂಗಣದಲ್ಲಿ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಬದಲಾವಣೆಯ ನಂತರ ನವೀಕೃತ ಮಾದರಿಯು ಹಳೆಯ ಮಾದರಿಯ ವಿನ್ಯಾಸವನ್ನೇ ನೆನಪಿಸುತ್ತದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹೊಸದಾಗಿ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಇದರಲ್ಲಿ ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಪೆಟ್ರೋಲ್ ಎಂಜಿನ್, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿಲ್ಲ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಹೊಸ ಕಾರಿನಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಇದು 132 ಬಿಎಚ್‌ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಹಳೆಯ ಮಾದರಿಯಲ್ಲಿನ ಎಂಜಿನ್‌ಗಿಂತಲೂ 55 ಕೆ.ಜಿ ಕಡಿಮೆ ತೂಕ ಹೊಂದಿದ್ದು, ಈ ಮೂಲಕ ಶೇ.14 ರಷ್ಟು ಉತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಇದರೊಂದಿಗೆ ಹೊಸ ಮಾದರಿಯು ಈ ಹಿಂದಿನಂತೆ ಹೊರನೋಟ ಹೊಂದಿದ್ದರು ಕೆಲವು ಹೊಸ ಫೀಚರ್ಸ್‌ಗಳು ಕಾರಿನ ನೋಟಕ್ಕೆ ಪ್ರಿಮಿಯಂ ಮೆರಗು ನೀಡಲಿದ್ದು, ಮರುವಿನ್ಯಾಸಗೊಳಿಸಲಾದ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಮತ್ತು ಬಂಪರ್ ಜೊತೆ ಹೊಸ ಲೊಗೊ ಸಾಕಷ್ಟು ಆಕರ್ಷಕವಾಗಿದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಮುಖ್ಯವಾಗಿ ಹೊಸ ಕಾರಿನಲ್ಲಿ ಈ ಬಾರಿ ಎಲ್ಇಡಿ ಐಬೋ ಜೊತೆಗೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ನೀಡಲಾಗಿದ್ದು, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ನೀಡಲಾಗಿದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಇದರೊಂದಿಗೆ ಹೊಸ ಕಾರಿನ ಮುಂಭಾಗದಲ್ಲಿ ಮತ್ತಷ್ಟು ಬದಲಾವಣೆಗಾಗಿ ಫಾಗ್ ಲ್ಯಾಂಪ್ ಹೌಸಿಂಗ್ ಸಹ ಬದಲಾವಣೆಗೊಳಿಸಲಾಗಿದ್ದು, ಡೈಮಂಡ್ ಕಟ್ ಹೊಂದಿರುವ 17 ಇಂಚಿನ ಅಲಾಯ್ ವ್ಹೀಲ್, ಡ್ಯುಯಲ್ ಟೋನ್ ಕ್ಲಾಡಿಂಗ್, ಹಿಂಬದಿಯಲ್ಲಿ ಸಿಗ್ನಿಚೆರ್ ಟವರ್ ವಿನ್ಯಾಸದ ಎಲ್‌ಇಡಿ ಟೈಲ್ ಲ್ಯಾಂಪ್ ನೀಡಲಾಗಿದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಹೊಸ ಕಾರು ಮಾದರಿಯ ಇಂಟಿರಿಯರ್ ವಿನ್ಯಾಸದ ಕುರಿತಾಗಿ ಮಾತನಾಡುವುದಾದರೇ ಸ್ಕಾರ್ಪಿಯೋ ಕ್ಲಾಸಿಕ್ ಹಳೆಯ ಮಾದರಿಗಿಂತ ಕೆಲವೇ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ವುಡ್ ಟ್ರಿಮ್ ಹೊಂದಿರುವ ಸುಧಾರಿತ ಡ್ಯಾಶ್‌ಬೋರ್ಡ್‌, 9 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟೀರಿಂಗ್ ವ್ಹೀಲ್, ಬ್ಲ್ಯಾಕ್ ಮತ್ತು ಬ್ರಿಝ್ ಇಂಟಿರಿಯರ್ ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ 7 ಸೀಟರ್ ಮತ್ತು 9 ಸೀಟರ್ ಸೌಲಭ್ಯದ ಆಯ್ಕೆ ನೀಡಲಾಗಿದ್ದು, ಮೂರನೇ ಸಾಲಿನಲ್ಲಿ ಬೆಂಚ್ ಆಸನ ಸೌಲಭ್ಯದೊಂದಿಗೆ 7 ಸೀಟರ್ ಮಾದರಿಯ ತುಸು ಹೆಚ್ಚಿನ ಸ್ಥಳವಾಕಾಶ ಹೊಂದಿದ್ದರೆ 9 ಸೀಟರ್ ಮಾದರಿಯ ಆಸನ ಸೌಲಭ್ಯವು ತುಸು ಇಕ್ಕಟ್ಟಾದ ಸ್ಥಳಾವಕಾಶ ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಹೊಸ ಮಾದರಿಯಲ್ಲಿ ಈ ಹಿಂದಿನ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ಹೊಸದಾಗಿ ಕ್ರೂಸ್ ಕಂಟ್ರೋಲ್, ಎರಡನೇ ಸಾಲಿನ ಆಸನಗಳಿಗೆ ರಿಯರ್ ಎಸಿ ವೆಂಟ್ಸ್ ಮತ್ತು ಸುರಕ್ಷತೆಗಾಗಿ ಎರಡು ಮಾದರಿಯಲ್ಲೂ ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯವನ್ನು ಸೇರಿಸಲಾಗಿದೆ.

ಆಕರ್ಷಕ ಬೆಲೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಡ್ಯುಯಲ್ ವಿಶ್ ಬೋನ್ ಸಸ್ಷೆಂಷನ್ ಹೊಂದಿರುವ ಹೊಸ ಲ್ಯಾಡರ್ ಫ್ರೇಮ್ ಚಾಸಿಸ್ ನೀಡಿರುವ ಕೂಡಾ ಕಾರಿನ ಬಾಡಿ ರೋಲ್ ಸಾಕಷ್ಟು ಸುಧಾರಿಸಿದ್ದು, ಹೈ ಸ್ಪೀಡ್‌ನಲ್ಲೂ ಕಾರನ್ನು ಅರಾಮವಾಗಿ ನಿಯಂತ್ರಿಸಬಹುದಾಗಿದೆ.

Article Published On: Friday, August 19, 2022, 20:39 [IST]
English summary
Mahindra scorpio classic suv launched at rs 11 99 lakh details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+