Just In
- 10 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 13 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 13 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 15 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹೀಂದ್ರಾ ಸ್ಕಾರ್ಪಿಯೋ-ಎನ್ ಬುಕಿಂಗ್ ಆರಂಭ- ಕೇವಲ 30 ನಿಮಿಷಗಳಲ್ಲಿ ಬರೋಬ್ಬರಿ 1 ಲಕ್ಷ ಬುಕಿಂಗ್ ದಾಖಲು
ಮಹೀಂದ್ರಾ ಕಂಪನಿಯು ತನ್ನ ಹೊಸ ಸ್ಕಾರ್ಪಿಯೋ-ಎನ್ ಎಸ್ಯುವಿ ಮಾದರಿಗಾಗಿ ಇಂದು ಬೆಳಗ್ಗೆ 11 ಗಂಟೆಯಿಂದ ರೂ. 21 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿತ್ತು. ಬುಕಿಂಗ್ ಆರಂಭವಾದ ಮೊದಲ 1 ನಿಮಿಷದಲ್ಲಿ 25 ಸಾವಿರ ಗ್ರಾಹಕರು ಬುಕಿಂಗ್ ಸಲ್ಲಿಸಿದರೆ 30 ನಿಮಿಷದೊಳಗಾಗಿ ಒರೋಬ್ಬರಿ 1 ಲಕ್ಷ ಗ್ರಾಹಕರು ಬುಕಿಂಗ್ ಸಲ್ಲಿಸಿದ್ದಾರೆ.
ಹೊಸ ಸ್ಕಾರ್ಪಿಯೋ-ಎನ್ ಕಾರು ಖರೀದಿಗೆ ಅಧಿಕೃತ ವೆಬ್ಸೈಟ್ ಮೂಲಕ ಇಲ್ಲವೇ ನೇರವಾಗಿ ಡೀಲರ್ಸ್ಗಳಲ್ಲೂ ಬುಕಿಂಗ್ ದಾಖಲಿಸಬಹುದಾಗಿದ್ದು, ಸೆಪ್ಟೆಂಬರ್ 26 ರಿಂದ ಹೊಸ ಕಾರಿನ ವಿತರಣೆ ಆರಂಭವಾಗಲಿದೆ. ಹೊಸ ಕಾರು ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್ ವೆರಿಯೆಂಟ್ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ವಿವಿಧ ವೆರಿಯೆಂಟ್ಗಳಿಗೆ ಅನುಗುಣವಾಗಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದೆ.
ಹೊಸ ಕಾರಿನ ಮ್ಯಾನುವಲ್ ಮಾದರಿಗಳು ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಹೊಂದಿದ್ದರೆ ಆಟೋಮ್ಯಾಟಿಕ್ ಮಾದರಿಗಳು ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.45 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 21.45 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.
ಸ್ಕಾರ್ಪಿಯೋ-ಎನ್ ಖರೀದಿಗಾಗಿ ಕಂಪನಿಯು ಆಕರ್ಷಕ ಬಡ್ಡಿದರದಲ್ಲಿ ಸಾಲ-ಸೌಲಭ್ಯವನ್ನು ಸಹ ಘೋಷಣೆ ಮಾಡಿದ್ದು, ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಮಹೀಂದ್ರಾ ಫಿನ್ಎನ್ ಫೈನಾನ್ಸ್ ಮೂಲಕ ಗರಿಷ್ಠ 10 ವರ್ಷಗಳ ಮರುಪಾವತಿ ಅವಧಿಯೊಂದಿಗೆ ಶೇ. 6.99 ಬಡ್ಡಿದರದಲ್ಲಿ ಶೇ.100 ರಷ್ಟು ಆನ್ರೋಡ್ ದರದ ಮೇಲೆ ಸಾಲವನ್ನು ಸಹ ಒದಗಿಸಲಿದೆ.
ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ಹೊಂದಿದೆ.
2.0-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯನ್ನು ಮತ್ತು 2.2 ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ ಎರಡು ರೀತಿಯ ಪರ್ಫಾಮೆನ್ಸ್ ಆಯ್ಕೆಗಳನ್ನು ಹೊಂದಿದೆ.
ಪೆಟ್ರೋಲ್ ಮ್ಯಾನುವಲ್ ಮಾದರಿಯು 203-ಬಿಎಚ್ಪಿ ಮತ್ತು 370-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಆಟೋಮ್ಯಾಟಿಕ್ ಮಾದರಿಯು 203-ಬಿಎಚ್ಪಿ ಮತ್ತು 380-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಹಾಗೆಯೇ ಡೀಸೆಲ್ ಆರಂಭಿಕ ಮಾದರಿಯು ಮ್ಯಾನುವಲ್ ಆಯ್ಕೆಯೊಂದಿಗೆ 132 ಬಿಎಚ್ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಹೈ ಎಂಡ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಯೊಂದಿಗೆ 175 ಬಿಎಚ್ಪಿ ಮತ್ತು 370 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.
ಇದರೊಂದಿಗೆ ಮಹೀಂದ್ರಾ ಕಂಪನಿಯು ಹೊಸ ಕಾರು ಮಾದರಿಯನ್ನು ಈ ಹಿಂದಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಕಾರಿನ ಮುಂಭಾಗದಲ್ಲಿ ಮಹೀಂದ್ರಾ ಸಾಂಪ್ರದಾಯಿಕ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್, ಸ್ಕಾರ್ಪಿಯನ್ ಟೈಲ್ ಶೇಪ್ ಹೊಂದಿರುವ ಡಿಆರ್ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ನೀಡಲಾಗಿದೆ.
ಹೊಸ ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಸಿ ಮತ್ತು ಡಿ-ಪಿಲ್ಲರ್ ಪ್ರದೇಶಗಳಲ್ಲಿ ವಿಂಡೋ ಕ್ರೋಮ್ ಫ್ರೇಮ್ನಲ್ಲಿ ಸ್ಕಾರ್ಪಿಯನ್ ಸ್ಟಿಂಗ್ ಅಂಶವನ್ನು ಸಹ ಹೊಂದಿದೆ. ಜೊತೆಗೆ ಹೊಸ ಸ್ಕಾರ್ಪಿಯೋ-ಎನ್ನಲ್ಲಿ ಹೊಸ ಡ್ಯುಯಲ್-ಟೋನ್ ಮಿಶ್ರಲೋಹದ 18 ಇಂಚಿನ ಚಕ್ರಗಳನ್ನು ನೀಡಲಾಗಿದ್ದು, ಲಂಬವಾಗಿ ಜೋಡಿಸಲಾದ ಎಲ್ಇಡಿ ಟೈಲ್ಲೈಟ್ಗಳು ಮತ್ತು ಸ್ಪಾಯ್ಲರ್ ಅನ್ನು ಹೊಂದಿದೆ.
ಸ್ಕಾರ್ಪಿಯೋ-ಎನ್ ಮಧ್ಯಂತರ ವೆರಿಯೆಂಟ್ ನಂತರದಲ್ಲಿ ಲಭ್ಯವಾಗುವಂತೆ ಸನ್ರೂಫ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್ಗಳು ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಒಳಗೊಂಡಿದ್ದು, ಹೊಸ ಕಾರಿನಲ್ಲಿ ಹೊರಭಾಗದಂತೆ ಒಳಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ.
ಹೊಸ ಕಾರಿನ ಒಳಪ್ರವೇಶಸುತ್ತಿದ್ದಂತೆ ಡ್ಯುಯಲ್-ಟೋನ್ ಡ್ಯಾಶ್ಬೋರ್ಡ್ ಮತ್ತು ಮೆಟಲ್-ಫಿನಿಶ್ಡ್ ಡ್ಯುಯಲ್ ರೈಲ್ಗಳೊಂದಿಗೆ ಆಕರ್ಷಕವಾದ ಸೆಂಟರ್ ಕನ್ಸೋಲ್ ಗಮನಸೆಳೆಯಲಿದ್ದು, ರಿಚ್ ಕಾಫಿ ಬ್ಲ್ಯಾಕ್ ಲೆದರ್ ಆಸನಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಆಸನಗಳನ್ನು ಸಹ ಒಳಗೊಂಡಿವೆ.
ಇದರೊಂದಿಗೆ ಹೊಸ ಕಾರಿನಲ್ಲಿ 8-ಇಂಚಿನ ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, 70ಕ್ಕೂ ಹೆಚ್ಚು ಕಾರ್ ಕನೆಕ್ಟ್ ಫೀಚರ್ಸ್, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ಪ್ಲೇ, ಅಮೆಜಾನ್ ಅಲೆಕ್ಸಾ ವಾಯ್ಸ್ ಸರ್ಪೊಟ್, 3ಡಿ ಸೊನಿ ಸರೌಂಡ್ ಸೌಂಡ್ ಸಿಸ್ಟಂ ಮತ್ತು ವಾಯ್ಸ್ ಕಮಾಂಡ್ ಫೀಚರ್ಸ್ ಹೊಂದಿದೆ.
ಜೊತೆಗೆ ಹೊಸ ಕಾರಿನಲ್ಲಿ ಡ್ಯುಯಲ್-ಜೋನ್ ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ಯಾಮೆರಾಗಳು ಮತ್ತು ಸ್ಮಾರ್ಟ್ಫೋನ್ಗಾಗಿ ವೈರ್ಲೆಸ್ ಚಾರ್ಜರ್ನಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಸುರಕ್ಷತೆಗಾಗಿ 6 ಏರ್ಬ್ಯಾಗ್ಗಳು, ಇಬಿಡಿ ಜೊತೆಗೆ ಎಬಿಎಸ್, ಇಎಸ್ಇ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಆಂಕರ್ ಪಾಯಿಂಟ್ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವಾರು ಫೀಚರ್ಸ್ಗಳಿವೆ.