ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಸ್ಕಾರ್ಪಿಯೋ ಮಾದರಿಯನ್ನು ಸ್ಕಾರ್ಪಿಯೋ-ಎನ್ ಹೆಸರಿನಲ್ಲಿ ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನ ಮೂಡಿಸಿದೆ.

Recommended Video

Mahindra Scorpio Classic Launched | Price At Rs 11.99 Lakh | Scorpio Classic Vs Scorpio N In Kannada

ಹೊಸ ಕಾರು ಬಿಡುಗಡೆಯ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲಿಯೇ ಹೊಸ ಕಾರಿನ ವಿತರಣೆ ಚಾಲನೆ ನೀಡಲು ಸಿದ್ದವಾಗುತ್ತಿದೆ.

ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಹೊಸ ಸ್ಕಾರ್ಪಿಯೋ-ಎನ್ ಮಾದರಿಗೆ ಈಗಾಗಲೇ 1 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ಬುಕಿಂಗ್ ದಾಖಲಾಗಿದ್ದು, ಹೊಸ ಕಾರಿನ ವಿತರಣೆಯು ಮುಂದಿನ ತಿಂಗಳು ಸೆಪ್ಟೆಂಬರ್ 25ರ ನಂತರ ಆರಂಭವಾಗುವುದು ಬಹುತೇಕ ಖಚಿತವಾಗಿದೆ. ಹೊಸ ಕಾರಿನ ವಿತರಣೆ ಆರಂಭವಾಗುವುದಕ್ಕೂ ಮುನ್ನ ಕಂಪನಿಯು ಹೊಸ ಕಾರಿನ ಉತ್ಪಾದನೆಯನ್ನು ತೀವ್ರಗೊಳಿಸಿದೆ.

ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಪುಣೆಯಲ್ಲಿರುವ ಚಾಕನ್ ಕಾರು ಉತ್ಪಾದನಾ ಘಟಕದಲ್ಲಿ ಹೊಸ ಸ್ಕಾರ್ಪಿಯೋ-ಎನ್ ಉತ್ಪಾದನೆಗೆ ಚಾಲನೆ ನೀಡಲಾಗಿದ್ದು, ಉತ್ಪಾದನಾ ಪ್ರಕ್ರಿಯೆ ಕುರಿತಾದ ವಿಡಿಯೋ ಹಂಚಿಕೊಳ್ಳಲಾಗಿದೆ.

ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಹೊಸ ಕಾರು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಸ್ಕಾರ್ಪಿಯೋ-ಎನ್ ಮಾದರಿಯು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಎರಡು ಮಾದರಿಗಳಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳು ಖರೀದಿಗೆ ಲಭ್ಯವಿವೆ.

ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

2.0-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಮತ್ತು 2.2 ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಎರಡು ರೀತಿಯ ಪರ್ಫಾಮೆನ್ಸ್ ಆಯ್ಕೆಗಳನ್ನು ಹೊಂದಿದೆ.

ಹೊಸ ಸ್ಕಾರ್ಪಿಯೋ- ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಪೆಟ್ರೋಲ್ ಮ್ಯಾನುವಲ್ ಮಾದರಿಯು 203-ಬಿಎಚ್‌ಪಿ ಮತ್ತು 370-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಆಟೋಮ್ಯಾಟಿಕ್ ಮಾದರಿಯು 203-ಬಿಎಚ್‌ಪಿ ಮತ್ತು 380-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಹಾಗೆಯೇ ಡೀಸೆಲ್ ಆರಂಭಿಕ ಮಾದರಿಯು ಮ್ಯಾನುವಲ್ ಆಯ್ಕೆಯೊಂದಿಗೆ 132 ಬಿಎಚ್‌ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಹೈ ಎಂಡ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಯೊಂದಿಗೆ 175 ಬಿಎಚ್‌ಪಿ ಮತ್ತು 370 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಇದರೊಂದಿಗೆ ಮಹೀಂದ್ರಾ ಕಂಪನಿಯು ಹೊಸ ಕಾರು ಮಾದರಿಯನ್ನು ಈ ಹಿಂದಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಕಾರಿನ ಮುಂಭಾಗದಲ್ಲಿ ಮಹೀಂದ್ರಾ ಸಾಂಪ್ರದಾಯಿಕ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಸ್ಕಾರ್ಪಿಯನ್ ಟೈಲ್ ಶೇಪ್ ಹೊಂದಿರುವ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ನೀಡಲಾಗಿದೆ.

ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಹೊಸ ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಸಿ ಮತ್ತು ಡಿ-ಪಿಲ್ಲರ್ ಪ್ರದೇಶಗಳಲ್ಲಿ ವಿಂಡೋ ಕ್ರೋಮ್ ಫ್ರೇಮ್‌ನಲ್ಲಿ ಸ್ಕಾರ್ಪಿಯನ್ ಸ್ಟಿಂಗ್ ಅಂಶವನ್ನು ಸಹ ಹೊಂದಿದೆ. ಜೊತೆಗೆ ಹೊಸ ಸ್ಕಾರ್ಪಿಯೋ-ಎನ್‌ನಲ್ಲಿ ಹೊಸ ಡ್ಯುಯಲ್-ಟೋನ್ ಮಿಶ್ರಲೋಹದ 18 ಇಂಚಿನ ಚಕ್ರಗಳನ್ನು ನೀಡಲಾಗಿದ್ದು, ಲಂಬವಾಗಿ ಜೋಡಿಸಲಾದ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸ್ಪಾಯ್ಲರ್ ಅನ್ನು ಹೊಂದಿದೆ.

ಹೊಸ ಸ್ಕಾರ್ಪಿಯೋ- ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಸ್ಕಾರ್ಪಿಯೋ-ಎನ್ ಮಧ್ಯಂತರ ವೆರಿಯೆಂಟ್‌ ನಂತರದಲ್ಲಿ ಲಭ್ಯವಾಗುವಂತೆ ಸನ್‌ರೂಫ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್‌ಗಳು ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಒಳಗೊಂಡಿದ್ದು, ಹೊಸ ಕಾರಿನಲ್ಲಿ ಹೊರಭಾಗದಂತೆ ಒಳಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ.

ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಹೊಸ ಕಾರಿನ ಒಳಪ್ರವೇಶಸುತ್ತಿದ್ದಂತೆ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಮತ್ತು ಮೆಟಲ್-ಫಿನಿಶ್ಡ್ ಡ್ಯುಯಲ್ ರೈಲ್‌ಗಳೊಂದಿಗೆ ಆಕರ್ಷಕವಾದ ಸೆಂಟರ್ ಕನ್ಸೋಲ್‌ ಗಮನಸೆಳೆಯಲಿದ್ದು, ರಿಚ್ ಕಾಫಿ ಬ್ಲ್ಯಾಕ್ ಲೆದರ್ ಆಸನಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಆಸನಗಳನ್ನು ಸಹ ಒಳಗೊಂಡಿವೆ.

ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಇದರೊಂದಿಗೆ ಹೊಸ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 70ಕ್ಕೂ ಹೆಚ್ಚು ಕಾರ್ ಕನೆಕ್ಟ್ ಫೀಚರ್ಸ್, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ ವಾಯ್ಸ್ ಸರ್ಪೊಟ್, 3ಡಿ ಸೊನಿ ಸರೌಂಡ್ ಸೌಂಡ್ ಸಿಸ್ಟಂ ಮತ್ತು ವಾಯ್ಸ್ ಕಮಾಂಡ್ ಫೀಚರ್ಸ್ ಹೊಂದಿದೆ.

ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಜೊತೆಗೆ ಹೊಸ ಕಾರಿನಲ್ಲಿ ಡ್ಯುಯಲ್-ಜೋನ್ ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ಯಾಮೆರಾಗಳು ಮತ್ತು ಸ್ಮಾರ್ಟ್‌ಫೋನ್‌ಗಾಗಿ ವೈರ್‌ಲೆಸ್ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಹೊಸ ಸ್ಕಾರ್ಪಿಯೋ- ಎನ್ ಎಸ್‌ಯುವಿ ಉತ್ಪಾದನೆಯ ವಿಡಿಯೋ ಹಂಚಿಕೊಂಡ ಮಹೀಂದ್ರಾ

ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಇಎಸ್ಇ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಆಂಕರ್ ಪಾಯಿಂಟ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

Article Published On: Friday, August 26, 2022, 8:46 [IST]
English summary
Mahindra scorpio n suv production video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+