ಮತ್ತೊಂದು ಬೃಹತ್ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾದ ಮಹೀಂದ್ರಾ: 10,000 ಕೋಟಿ ಹೂಡಿಕೆ

ದೇಶೀಯ ಮಾರುಕಟ್ಟೆಯಲ್ಲಿ ಸದ್ಯ ಎಲೆಕ್ಟ್ರಿಕ್ ಕಾರುಗಳು ಪಾರುಪತ್ಯ ಸಾಧಿಸಲು ಮುಂದಾಗುತ್ತಿವೆ. ಗ್ರಾಹಕರು ಸಹ ಇಂಧನ ಚಾಲಿತ ಕಾರುಗಳ ಬದಲು ಇವಿಗಳನ್ನೇ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ದೇಶದ ಪ್ರಸಿದ್ಧ ವಾಹನ ತಯಾರಿಕ ಕಂಪನಿ ಮಹೀಂದ್ರಾ, ತನ್ನ ಮುಂಬರುವ ಎಲೆಕ್ಟ್ರಿಕ್ ವಾಹನಗಳಿಗಾಗಿ ಬೃಹತ್ ಉತ್ಪಾದನಾ ಘಟಕ ಸ್ಥಾಪಿಸಲು ಸಜ್ಜಾಗಿದೆ.

ಈ ಅತ್ಯಾಧುನಿಕ ಇವಿ ಉತ್ಪಾದನಾ ಘಟಕವು ಪುಣೆಯಲ್ಲಿ ಇರಲಿದ್ದು, ಮಹೀಂದ್ರಾ ಕಂಪನಿ ಇದರ ಅಭಿವೃದ್ಧಿಗಾಗಿ 10,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಇದಕ್ಕೆ ಈಗಾಗಲೇ ಮಹಾರಾಷ್ಟ್ರ ಸರ್ಕಾರದಿಂದ ಅನುಮೋದನೆಯನ್ನು ಸಹ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಮಹೀಂದ್ರಾ ಆಟೋ ಮತ್ತು ಫಾರ್ಮ್ ವಲಯದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ರಾಜೇಶ್ ಜೆಜುರಿಕರ್ ಅವರು, ತಮ್ಮ ಕಂಪನಿಗೆ ನಿರಂತರ ಬೆಂಬಲ ನೀಡುತ್ತಿರುವ ಮಹಾರಾಷ್ಟ್ರ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.

ಮತ್ತೊಂದು ಬೃಹತ್ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾದ ಮಹೀಂದ್ರಾ: 10,000 ಕೋಟಿ ಹೂಡಿಕೆ

ಕಳೆದ 70 ವರ್ಷಗಳಿಂದಲ್ಲೂ ಮಹಾರಾಷ್ಟ್ರವು ಮಹೀಂದ್ರಾ ಕಂಪನಿಗೆ ತವರು ರಾಜ್ಯವಾಗಿದ್ದು, ಹೆಚ್ಚಿನ ಭಾರತೀಯ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಮಹಾರಾಷ್ಟ್ರವು ಭಾರತದ ಇವಿ ಹಬ್ ಆಗಲಿದೆ ಎಂದು ರಾಜೇಶ್ ಜೆಜುರಿಕರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ, ಮಹೀಂದ್ರಾ ತನ್ನ ಎರಡು ಎಲೆಕ್ಟ್ರಿಕ್ ಎಸ್‌ಯುವಿ ಬ್ರ್ಯಾಂಡ್‌ಗಳನ್ನು ಬಹಿರಂಗಪಡಿಸಿತ್ತು. ಅವುಗಳೆಂದರೇ BE ಮತ್ತು XUV. ಇವುಗಳ ಅಡಿ ಮಹೀಂದ್ರಾ ಐದು ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಎದುರು ನೋಡುತ್ತಿದ್ದು, ಇದು XUV.e8, XUV.e9, BE.05, BE.07, ಮತ್ತು BE.09 ಅನ್ನು ಒಳಗೊಂಡಿದೆ.

ಈ ಎಸ್‌ಯುವಿಗಳು ಎರಡು ವಿಭಿನ್ನ ಬ್ರಾಂಡ್‌ಗಳ ಅಡಿಯಲ್ಲಿ ಮಾರುಕಟ್ಟೆಗೆ ಬರುತ್ತವೆಯಾದರೂ, ಮುಂಬರುವ ಈ ಎಲ್ಲಾ ಎಲೆಕ್ಟ್ರಿಕ್ ವಾಹನಗಳು ಮಹೀಂದ್ರಾದ ಹೊಸ ಹಾರ್ಟ್‌ಕೋರ್ ವಿನ್ಯಾಸ ಮತ್ತು INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ ಎಂದು ಹೇಳಬಹುದು. ಮಹೀಂದ್ರಾ ಪ್ರಕಾರ, XUV.e8, XUV.e9, BE.05, ಮತ್ತು BE.07 ಅನ್ನು 2024 ಮತ್ತು 2026ರ ನಡುವೆ ಬಿಡುಗಡೆ ಮಾಡಲಾಗುತ್ತದೆ. ಆದರೆ, BE.09 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಯಾವ ವರ್ಷ ಬಿಡುಗಡೆ ಮಾಡಲಾಗುತ್ತದೆ ಎಂಬ ತಾತ್ಕಾಲಿಕ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಹೊಸ INGLO ಪ್ಲಾಟ್‌ಫಾರ್ಮ್ ಆಧರಿಸಿ ರೆಡಿಯಾಗುವ ಎಸ್‌ಯುವಿಗಳು, ಆಗ್ಮಎಂಟೆಡ್ ರಿಯಾಲಿಟಿ-ಎನೇಬಲ್ಡ್ ಹೆಡ್ಸ್-ಅಪ್ ಡಿಸ್ಪ್ಲೇಗಳು, 5G ನೆಟ್‌ವರ್ಕ್ ಹೊಂದಾಣಿಕೆ, ಕನೆಕ್ಟ್ದ್ ಕಾರ್ ಟೆಕ್, OTA ಅಪ್‌ಡೇಟ್‌ಗಳು ಮತ್ತು ಎಡ್ಜ್-ಟು-ಎಡ್ಜ್ ಸ್ಕ್ರೀನ್‌ಗಳಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದು ಈ ಕಾರು ಖರೀದಿಸುವ ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಹೇಳಬಹುದು. ಇಷ್ಟೇ ಅಲ್ಲದೆ, INGLO ಪ್ಲಾಟ್‌ಫಾರ್ಮ್ ಮಾಡ್ಯುಲರ್ ಮತ್ತು ಸ್ಕೇಲೆಬಲ್ ವಿನ್ಯಾಸದೊಂದಿಗೆ ಹೆಚ್ಚು ಆಪ್ಟಿಮೈಸ್ಡ್ ಆರ್ಕಿಟೆಕ್ಚರ್ ಆಗಿದೆ ಎಂದು ಮಹೀಂದ್ರಾ ಕಂಪನಿ ಹೇಳಿಕೊಂಡಿದೆ.

ಮಾರುಕಟ್ಟೆಗೆ ಬರಲಿರುವ ಈ ಎಸ್‌ಯುವಿಗಳು ಸೆಮಿ-ಆಕ್ಟಿವ್ ಸಸ್ಪೆನ್ಷನ್ ಸಿಸ್ಟಮ್, ಡ್ಯುಯಲ್-ಪಿನಿಯನ್ ಹೈ ಪವರ್ ಸ್ಟೀರಿಂಗ್ ಸಿಸ್ಟಮ್ ಮತ್ತು ಬ್ರೇಕ್-ಬೈ-ವೈರ್ ತಂತ್ರಜ್ಞಾನ ಹೊಂದುವ ಮೂಲಕ ಸಿದ್ಧವಾಗುತ್ತಿವೆ. INGLO ಪ್ಲಾಟ್‌ಫಾರ್ಮ್ 80 kWhವರೆಗೆ ಬ್ಯಾಟರಿ ಕ್ಯಾಪಾಸಿಟಿ ಅನ್ನು ಸಪೋರ್ಟ್ ಮಾಡುತ್ತದೆ. ಜೊತೆಗೆ 175 kWವರೆಗೆ ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮಹೀಂದ್ರಾ ಈ ಹಿಂದೆಯೇ ದೃಢಪಡಿಸಿತ್ತು. ಇದರಿಂದ ಮಾರುಕಟ್ಟೆಗೆ ಬರಲಿರುವ ಈ ಇವಿ ಎಸ್‌ಯುವಿಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಮಹೀಂದ್ರಾ ಹೇಳುವಂತೆ, INGLO ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಎಲೆಕ್ಟ್ರಿಕ್ ವಾಹನಗಳು ಕೇವಲ 30 ನಿಮಿಷಗಳಲ್ಲಿ ಶೇಕಡ 80 ರಷ್ಟು ಚಾರ್ಜ್ ಮಾಡಬಹುದು. ಎಲೆಕ್ಟ್ರಿಕ್ ಎಸ್‌ಯುವಿಗಳು ರೇರ್-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಲೇಔಟ್‌ಗಳನ್ನು ಒಳಗೊಂಡಿದೆ. ರೇರ್-ವೀಲ್ ಡ್ರೈವ್ ಮಾದರಿಗಳು 228 bhp ವರೆಗೆ ಪವರ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಹೆಚ್ಚು ಶಕ್ತಿಶಾಲಿಯಾಗಿರುವ ಆಲ್-ವೀಲ್-ಡ್ರೈವ್ (AWD) ಮಾದರಿಗಳು 335 bhp ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತದೆ.

ಮಹೀಂದ್ರಾದ ಎಲೆಕ್ಟ್ರಿಕ್ SUV ಉತ್ಪಾದನಾ ಘಟಕದ ಬಗ್ಗೆ ಆಲೋಚನೆಗಳು:
ಮಹೀಂದ್ರಾ ಸೇರಿದಂತೆ ಇತರೆ ಕಾರು ತಯಾರಕ ಕಂಪನಿಗಳು ಭಾರತದಲ್ಲಿ ಇವಿ ವಾಹನಗಳ ಅಭಿವೃದ್ಧಿಯಲ್ಲಿ ಹೆಚ್ಚು ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಇದು ದೇಶದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಇಂತಹ ಬದಲಾವಣೆಯಾದಾಗ ಹೊಸ ರೀತಿಯ ಉತ್ಪಾದನಾ ಘಟಕಗಳ ಅಗತ್ಯವಿರುತ್ತದೆ. ಪುಣೆಯಲ್ಲಿ ಮಹೀಂದ್ರಾದ EV ಘಟಕದಿಂದ ಭಾರತ ಮಾರುಕಟ್ಟೆಯಲ್ಲಿ EV ವಾಹನಗಳ ಕ್ರಾಂತಿಯೇ ಆರಂಭವಾಗಬಹುದು.

Article Published On: Thursday, December 15, 2022, 12:54 [IST]
English summary
Mahindra to set up another massive manufacturing unit
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+