ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ700 ಮೂಲಕ ಎಸ್‌ಯುವಿ ಮಾರಾಟದಲ್ಲಿ ಹಲವು ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದು, ಹೊಸ ಕಾರಿನ ಬೇಡಿಕೆಯು ಹೆಚ್ಚಿರುವ ಸಂದರ್ಭದಲ್ಲಿಯೇ ಕಂಪನಿಗೆ ಸೆಮಿಕಂಡಕ್ಟರ್ ಕೊರತೆಯು ತೀವ್ರವಾಗಿ ಕಾಡುತ್ತಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಕೋವಿಡ್ ನಂತರ ಆರ್ಥಿಕ ಬೆಳವಣಿಗೆ ಸುಧಾರಿಸುತ್ತಿರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಚೀನಿ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವನ್ನು ಕಡಿತಗೊಳಿಸಿರುವುದರಿಂದ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ಕಂಪನಿಯು ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಎಲೆಕ್ಟ್ರಾನಿಕ್ ಚಿಪ್ ಇಲ್ಲದೆ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಸಾಧ್ಯವೇ ಇಲ್ಲ ಎನ್ನಬಹುದು. ಹೊಸ ಕಾರಿನಲ್ಲಿರುವ ಡಿಸ್ ಪ್ಲೇ, ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್ ಕಂಟ್ರೋಲ್, ಆಟೋ ಫೋಲ್ಡಿಂಗ್ ಒಆರ್‌ವಿಎಂ, ಡಿಜಿಟಲ್ ಕೀ ಮತ್ತು ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳು ಕಾರ್ಯನಿರ್ವಹಿಸಲು ಸೆಮಿ ಕಂಡಕ್ಟರ್ ಅವಶ್ಯವಾಗಿವೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಕೋವಿಡ್ ಪರಿಣಾಮ ಬಿಡಿಭಾಗಗಳ ಪೂರೈಕೆಯ ಸರಪಳಿಯಲ್ಲಿ ಆಗಿರುವ ಸಮಸ್ಯೆಯೇ ಎಲೆಕ್ಟ್ರಾನಿಕ್ ಚಿಪ್ ಕೊರತೆಗೆ ಪ್ರಮುಖ ಕಾರಣವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರೈಕೆಯಾಗಬೇಕಿದ್ದ ಹೆಚ್ಚಿನ ಪ್ರಮಾಣದ ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಲ್ಯಾಪ್‌ಟಾಪ್‌, ಮೊಬೈಲ್‌ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನ ಉತ್ಪಾದನೆಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಹೀಗಾಗಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವು ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳಿಗೆ ಹೊಡೆತ ನೀಡುತ್ತಿದ್ದು, ಭಾರತದಲ್ಲೂ ದಿನಂಪ್ರತಿ ಸಾವಿರಾರು ಕಾರುಗಳನ್ನು ಉತ್ಪಾದಿಸುವ ಪ್ರಮುಖ ಕಾರುಗಳ ಉತ್ಪಾದನೆ ಪ್ರಮಾಣದಲ್ಲಿ ಕಳೆದ ಒಂದು ವರ್ಷದಿಂದಲೂ ಸತತ ಸಮಸ್ಯೆ ಉಂಟುಮಾಡುತ್ತಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಎಲೆಕ್ಟ್ರಾನಿಕ್ ಚಿಪ್ ಅಗತ್ಯ ಪ್ರಮಾಣದ ಸ್ಟಾಕ್ ಇಲ್ಲದಿರುವ ಕಾರಣಕ್ಕೆ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕಗಳು ಕನಿಷ್ಠ ಉತ್ಪಾದನಾ ಪ್ರಕ್ರಿಯೆ ಕೈಗೊಳ್ಳುತ್ತಿದ್ದು, ಇದೇ ಕಾರಣಕ್ಕೆ ಮಹೀಂದ್ರಾ ಕಂಪನಿಯು ಕೂಡಾ ಎಕ್ಸ್‌ಯುವಿ700 ಉತ್ಪಾದನೆಯಲ್ಲಿ ಹಿನ್ನಡೆ ಅನುಭವಿಸುತ್ತಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಇದಕ್ಕಾಗಿ ಮಹತ್ವದ ನಿರ್ಧಾರ ಪ್ರಕಟಿಸಿರುವ ಮಹೀಂದ್ರಾ ಕಂಪನಿಯು ಚಿಪ್ ಕೊರತೆಯ ಕಾರಣಕ್ಕೆ ಉತ್ಪಾದನೆಯನ್ನು ಕಡಿಮೆ ಮಾಡದೆ ಹೊಸ ಕಾರಿನ ಕೆಲವು ಫೀಚರ್ಸ್‌ಗಳನ್ನು ಕೈಬಿಟ್ಟು ಹೊಸ ಕಾರನ್ನು ಮಾರಾಟವನ್ನು ಮುಂದುವರಿಸುತ್ತಿದ್ದು, ಕೈಬಿಡಲಾದ ಫೀಚರ್ಸ್‌ಗಳನ್ನು ಸೆಮಿಕಂಡಕ್ಟರ್ ಪೂರೈಕೆ ಸುಧಾರಿಸಿದ ನಂತರ ಉನ್ನತೀಕರಿಸುವುದಾಗಿ ಗ್ರಾಹಕರಲ್ಲಿ ಮನವಿ ಮಾಡಲಾಗುತ್ತಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಮಾಹಿತಿಗಳ ಪ್ರಕಾರ ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಎರಡನೇ ಕೀ ಆಯ್ಕೆಯನ್ನು ಮತ್ತು ಟರ್ನ್ ಇಂಡಿಕೇಟರ್‌ಗಳನ್ನು ತೆಗೆದುಹಾಕಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕೈಬಿಡಲಾದ ಫೀಚರ್ಸ್‌ಗಳನ್ನು ಅಪ್‌ಡೇಟ್ ಮಾಡುವುದಾಗಿ ಗ್ರಾಹಕರ ಮನವಿ ಮಾಡಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಇನ್ನು ಹೊಸ ಕಾರು ಬಿಡುಗಡೆಯ ನಂತರ ಇದುವರೆಗೆ ಬರೋಬ್ಬರಿ 1 ಲಕ್ಷ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದ್ದು, ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಬೆಲೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಬುಕ್ಕಿಂಗ್ ಪ್ರಮಾಣವು ಉತ್ಪಾದನೆಗಿಂತಲೂ ಹೆಚ್ಚಿರುವುದರಿಂದ ಹೊಸ ಕಾರಿನ ಉತ್ಪಾದನಾ ಸಾಮಾರ್ಥ್ಯದ ಆಧಾರದ ಮೇಲೆ ಹೊಸ ಕಾರಿನ ಕಾಯುವಿಕೆ ಅವಧಿಯನ್ನು ವಿವಿಧ ವೆರಿಯೆಂಟ್‌‌ಗಳಿಗೆ ಅನುಗುಣವಾಗಿ ಗರಿಷ್ಠ ಒಂದು ವರ್ಷದ ತನಕ ನಿಗದಿಪಡಿಸಲಾಗಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಹೊಸ ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯನ್ನು ರೂ. 22.89 ಲಕ್ಷ ಬೆಲೆ ಹೊಂದಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಮೊದಲ 25 ಸಾವಿರ ಯುನಿಟ್‌ಗೆ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಹಳೆಯ ಬೆಲೆಯಲ್ಲಿಯೇ ವಿತರಣೆ ಮಾಡುವುದಾಗಿ ಹೇಳಿಕೊಂಡಿರುವ ಮಹೀಂದ್ರಾ ಕಂಪನಿಯು 25 ಸಾವಿರ ಯುನಿಟ್ ನಂತರ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಅನ್ವಯಿಸುವಂತೆ ದರ ಏರಿಕೆ ಮಾಡಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಹೊಸ ದರಪಟ್ಟಿಯಲ್ಲಿ ಎಕ್ಸ್‌ಯುವಿ700 ಮಾದರಿಯು ಪೆಟ್ರೋಲ್ ಮಾದರಿಯಲ್ಲಿ ಗರಿಷ್ಠ ರೂ. 75 ಸಾವಿರ ಮತ್ತು ಡೀಸೆಲ್ ಮಾದರಿಗಳಲ್ಲಿ ಗರಿಷ್ಠ ರೂ. 81 ಸಾವಿರ ದರ ಹಚ್ಚಳ ಮಾಡಲಾಗಿದೆ. ಬೆಲೆ ಹೆಚ್ಚಳದ ನಂತರ ಹೊಸ ಎಕ್ಸ್‌ಯುವಿ700 ಮಾದರಿಯು ಇದೀಗ ಆರಂಭಿಕವಾಗಿ ರೂ. 12.95 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.80 ಲಕ್ಷ ಬೆಲೆ ಪಡೆದುಕೊಂಡಂತಾಗಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಸೆಮಿಕಂಡಕ್ಟರ್ ಕೊರತೆ: ಎಕ್ಸ್‌ಯುವಿ700 ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ!

ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ಎನ್ನುವ ವಿವಿಧ ವೆರಿಯೆಂಟ್‌ಗಳೊಂದಿಗೆ ಆಕರ್ಷಕ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿದ್ದು, ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.

Article Published On: Friday, March 11, 2022, 19:38 [IST]
English summary
Mahindra xuv700 some of features removed due to chip shortage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+